ಜಿಯೋ, ಏರ್‌ಟೆಲ್, ವಿ ಟೆಲಿಕಾಂನಲ್ಲಿ 56 ದಿನಗಳ ವ್ಯಾಲಿಡಿಟಿಗೆ ಈ ಪ್ಲ್ಯಾನ್‌ಗಳು ಸೂಕ್ತ!
ಪ್ರಸ್ತುತ ದಿನಗಳಲ್ಲಿ ಟೆಲಿಕಾಂ ವಲಯ ಸಾಕಷ್ಟು ಪೈಪೋಟಿಯಿಂದ ಕೂಡಿದೆ. ಟೆಲಿಕಾಂ ಸಂಸ್ಥೆಗಳು ತಮ್ಮ ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಸೆಳೆದಿವೆ. ಸದ್ಯ ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್-ಐಡಿಯಾ ಸಂಸ್ಥೆಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಪರಸ್ಪರ ತಮ್ಮ ಚಂದಾದಾರಿಗೆ ಅತ್ಯಾಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿ ಪೈಪೋಟಿ ನಡೆಸಿವೆ. ಅವುಗಳಲ್ಲಿ ಅಧಿಕ ಡೇಟಾ, ಅನಿಯಮಿತ ವಾಯಿಸ್ ಕರೆ ಪ್ರಯೋಜನಗಳು ಮತ್ತು ದೀರ್ಘಾವಧಿಯ ವ್ಯಾಲಿಡಿಟಿ ಪ್ರಯೋಜನಗಳನ್ನು ಒಳಗೊಂಡಿರುವ ಪ್ಲ್ಯಾನ್‌ಗಳನ್ನು ಹೆಚ್ಚು, ಹೆಚ್ಚು ಪರಿಚಯಿಸುತ್ತಾ ಬಂದಿವೆ.

ಹೌದು, ಇಂದಿನ ದಿನಗಳಲ್ಲಿ ಏರ್‌ಟೆಲ್, ಜಿಯೋ ಮತ್ತು ವಿ ಟೆಲಿಕಾಂ ಟೆಲಿಕಾಂಗಳು ಪ್ರತಿದಿನ ಅಧಿಕ ಡೇಟಾ ಸೌಲಭ್ಯದ ಜೊತೆಗೆ ಹೆಚ್ಚಿನ ವ್ಯಾಲಿಡಿಟಿ ಇರುವ ಕೆಲವು ಯೋಜನೆಗಳನ್ನು ಹೊಂದಿವೆ. ಈ ಪ್ಲ್ಯಾನ್‌ಗಳಲ್ಲಿ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಹಾಗೂ ಹೆಚ್ಚಿನ ಡೇಟಾ ಸೌಲಭ್ಯ ಹೊಂದಿರುವ ಪ್ಲ್ಯಾನ್‌ಗಳು ಕೂಡ ಸೇರಿವೆ. ಇವುಗಳಲ್ಲಿ 56 ದಿನಗಳ ವ್ಯಾಲಿಡಿಟಿ ಸೌಲಭ್ಯದ ಪ್ರೀಪೇಯ್ಡ್ ಪ್ಲ್ಯಾನ್‌ಗಳು ಕೂಡ ಗ್ರಾಹಕರನ್ನು ಆಕರ್ಷಸಿವೆ. ಏರ್‌ಟೆಲ್, ಜಿಯೋ ಮತ್ತು ವಿ ಟೆಲಿಕಾಂಗಳ 56 ದಿನಗಳ ವ್ಯಾಲಿಡಿಟಿಯೊಂದಿಗೆ ಡೈಲಿ 4GB ಡೇಟಾ ಸೌಲಭ್ಯ ನೀಡುವ ಪ್ರಿಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ವೊಡಾಫೋನ್ ಐಡಿಯಾ 449ರೂ. ಪ್ರಿಪೇಯ್ಡ್ ಪ್ಲ್ಯಾನ್
ಪ್ರಸ್ತುತ, ವಿ (ವೊಡಾಫೋನ್ ಐಡಿಯಾ) ಏರ್‌ಟೆಲ್ ಮತ್ತು ಜಿಯೋಗೆ ಹೋಲಿಸಿದರೆ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ. ವೊಡಾಫೋನ್-ಐಡಿಯಾ 449 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಹೆಚ್ಚು ಆಕರ್ಷಕ ವಾಗಿದೆ. ಇದು ಅನಿಯಮಿತ ಕರೆ ಪ್ರಯೋಜನ, ದಿನಕ್ಕೆ 2GB ಡೇಟಾ ಮತ್ತು 100 ದೈನಂದಿನ ಎಸ್‌ಎಂಎಸ್ ಪ್ರಯೋಜನವನ್ನು ನೀಡಲಿದೆ. ಆದರೆ ಇದು ಡಬಲ್ ಡಾಟಾ ಆಫರ್‌ನೊಂದಿಗೆ ಬರುವುದರಿಂದ ನೀವು ಮೂಲತಃ ಡೈಲಿ 4GB ಡೇಟಾವನ್ನು ಪಡೆದುಕೊಳ್ಳಹುದು. ಇದು 56 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ.

ಏರ್‌ಟೆಲ್ 558 ರೂ. ಪ್ರಿಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಸಂಸ್ಥೆಯ 558 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆ 56 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಟ್ರೂಲಿ ಅನ್‌ಲಿಮಿಟೆಡ್ ಕರೆಗಳು, 3GB ದೈನಂದಿನ ಡೇಟಾ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೇರಿವೆ. ಇದು ಕೂಡ 56 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು ಪ್ರಸ್ತುತ 56 ದಿನಗಳ ಮಾನ್ಯತೆ ಹೊಂದಿರುವ ಕಂಪನಿಯಿಂದ ನೀಡಲಾಗಿರುವ ಅಗ್ಗದ 3GB ಯೋಜನೆಯಾಗಿದೆ.

ಜಿಯೋ 444ರೂ. ಪ್ರಿಪೇಯ್ಡ್ ಯೋಜನೆ
ಜಿಯೋಗೆ ಸಮಂಜಸವಾದ 4GB ಪ್ರಿಪೇಯ್ಡ್ ಡೇಟಾ ಯೋಜನೆ ಇಲ್ಲ, ಆದರೆ ನಿಮಗೆ 3GB ಡೇಟಾ ಯೋಜನೆಗಳಿಗೆ ಆಯ್ಕೆಗಳಿವೆ. ಆದಾಗ್ಯೂ, ಆಯ್ಕೆಗಳು ಕೇವಲ 28 ದಿನಗಳು ಮತ್ತು 84 ದಿನಗಳ ವ್ಯಾಲಿಡಿಟಿಗೆ ಲಭ್ಯವಿದೆ. ನೀವು 2GB ದೈನಂದಿನ ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮತ್ತು 56 ದಿನಗಳವರೆಗೆ ದಿನಕ್ಕೆ 100 ಎಸ್‌ಎಂಎಸ್ ಹೊಂದಿರುವ 444 ರೂ ಜಿಯೋ ರೀಚಾರ್ಜ್ ಪ್ಯಾಕ್ ಅನ್ನು ಖರೀದಿಸಬಹುದು. ಅಲ್ಲದೆ ನೀವು 2GBಗಿಂತ ಹೆಚ್ಚಿನ ಡೇಟಾವನ್ನು ಬಯಸಿದರೆ ನೀವು ರೂ 349 ಯೋಜನೆಯನ್ನು ಖರೀದಿಸಬಹುದು. ಇದು 3GB ದೈನಂದಿನ ಡೇಟಾ, ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್ ಪ್ಯಾಕ್ ಮಾಡುತ್ತದೆ. ಆದರೆ, ಈ ಯೋಜನೆಯು ಕೇವಲ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.


Click it and Unblock the Notifications








