ನೋಕಿಯಾದೊಂದಿಗೆ ಕೆಲಸ ಮಾಡುತ್ತಿರುವುದೇಕೆ ಜಿಯೋ! ಏನಿದು ಹೊಸ ಅಚ್ಚರಿ: ವರದಿ
ಭಾರತದಲ್ಲಿ ಜಿಯೋಭಾರತ್ ಫೋನ್‌ಗಳ ಮೂಲಕ ಹೊಸ ಅಲೆ ಎಬ್ಬಿಸಿರುವ ಜಿಯೋ ಇದೀಗ ಮತ್ತೊಂದು ಕ್ರಾಂತಿಗೆ ಮುಂದಾಗಿದೆ. ಭಾರತದ ಪ್ರತಿಯೊಬ್ಬರೂ ಕೂಡ 4G ಫೋನ್‌ಗಳನ್ನು ಬಳಸಬೇಕೆಂಬ ತನ್ನ ಉದೇಶ ಸಾಧನೆಗೆ ಜಿಯೋ ಹೊಸ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಐಟೆಲ್, ಲಾವಾ ಮತ್ತು ನೋಕಿಯಾ ಕಂಪೆನಿಗಳೊಂದಿಗೆ ಕೆಲಸ ಮಾಡುತ್ತಿದೆ.
ಹೌದು, ಜಿಯೋ ಕಂಪೆನಿ ಜಿಯೋಭಾರತ್ 4G ಹ್ಯಾಂಡ್‌ಸೆಟ್‌ಗಳ ಹೊಸ ಆವೃತ್ತಿಗಳನ್ನು ಪರಿಚಯಿಸಲು ಮುಂದಾಗಿದೆ. ಇದಕ್ಕಾಗಿ ಟ್ರಾನ್ಸ್‌ಷನ್ ಗ್ರೂಪ್‌ನ Itel, Lava ಮತ್ತು Nokia ಸೇರಿದಂತೆ ಹಲವಾರು ಫೀಚರ್ ಫೋನ್ ತಯಾರಕರೊಂದಿಗೆ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಈ ಮೂಲಕ ಸರಿಸುಮಾರು 250 ಮಿಲಿಯನ್ 2G ಬಳಕೆದಾರರನ್ನು 4Gಗೆ ಬದಲಾಯಿಸುವ ಗುರಿ ಹೊಂದಿದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಜಿಯೋ ನಡೆಯಿಂದ 4G ಮೊಬೈಲ್‌ಗಳಲ್ಲಿ ಆಗಬಹುದಾದ ಬದಲಾವಣೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಸಂಸ್ಥೆ ಮುಂಬರುವ ಜಿಯೋಭಾರತ್ 4G ಫೀಚರ್ ಫೋನ್‌ಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡುವ ಸೂಚನೆ ನೀಡಿದೆ. ಏಕೆಂದರೆ ಈ ಫೋನ್‌ಗಳ ತಯಾರಿಕೆಗಾಗಿ ಐಟೆಲ್, ಲಾವಾ ಮತ್ತು ನೋಕಿಯಾದೊಂದಿಗೆ ಕೈ ಜೋಡಿಸಿದೆ ಎಂದು ಹೇಳಲಾಗಿದೆ. ಈ ಮೂಲಕ ದೇಶದಲ್ಲಿ 2G ಬಳಕೆದಾರರು 4G ಆವೃತ್ತಿಗೆ ಬದಲಾಗಲು ಸಾಧ್ಯವಾಗಲಿದೆ ಎನ್ನಲಾಗಿದೆ. ಇನ್ನು ಈ ಫೋನ್ ಯುಪಿಐ ಪಾವತಿ ಹಾಗೂ ವಾಟ್ಸಾಪ್ ಮತ್ತು ಲೈವ್‌ಟಿವಿ ಸ್ಟ್ರೀಮಿಂಗ್‌ಗೆ ಬೆಂಬಲಿಸಲಿದೆ. ಇದರ ಬೆಲೆ ಕೇವಲ 999ರೂ ಇರಲಿದೆ ಎಂದು ವರದಿಯಾಗಿದೆ.
ನಾವು ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮತ್ತು ಗ್ರಾಹಕರ ಮನಸ್ಸಿನಲ್ಲಿ ಸ್ಥಾಪಿಸಲು ಬಯಸಿದ್ದೇವೆ. ಇದಕ್ಕಾಗಿ ನಾವು ಇತರರೊಂದಿಗೆ ಕೂಡ ಸಂಯೋಜಿಸುವುದಕ್ಕೆ ಮುಂದಾಗಿದ್ದೇವೆ. ಇಂದು, Itel, Lava ಅಥವಾ Nokia ಆಗಿರಲಿ, ಎಲ್ಲಾ ಬ್ರ್ಯಾಂಡ್‌ಗಳು ನಮ್ಮೊಂದಿಗೆ ಸಂಪರ್ಕದಲ್ಲಿವೆ ಎಂದು ರಿಲಯನ್ಸ್ ಜಿಯೋ ಪ್ರೆಸಿಡೆಂಟ್ ಸುನಿಲ್ ದತ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಜಿಯೋಭಾರತ್‌ನ ನಾಲ್ಕು ಮಾದರಿಗಳ ಜೊತೆಗೆ, ಕಂಪನಿಯು ಈ ವರ್ಷದ ಕೊನೆಯಲ್ಲಿ ಹೊಸ ಮಾದರಿಯ ಜಿಯೋಭಾರತ್‌ನ ಮಾಡೆಲ್‌ಗಳನ್ನು ಪ್ರಾರಂಭಿಸುವುದಕ್ಕೆ ಜಿಯೋ ಪ್ಲಾನ್ ರೂಪಿಸಿದೆ ಎಂದು ಹೇಳಲಾಗಿದೆ.

ಇದಲ್ಲದೆ, 5G ಹ್ಯಾಂಡ್‌ಸೆಟ್ಗಳು 10,000ರೂ ಗಿಂತ ಕಡಿಮೆ ಇರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಕೆಲವು ಬ್ರ್ಯಾಂಡ್‌ಗಳು ಕಡಿಮೆ ಬೆಲೆಯಲ್ಲಿ 5G ಫೋನ್ ನೀಡಿದರು ಸಹ ವ್ಯವಹರಿಸಲು ವಿಭಿನ್ನ ಸಮಸ್ಯೆಗಳನ್ನು ಹೊಂದಿವೆ. ಆದರೆ ಜನರು ಉತ್ತಮ 5G ಅನುಭವಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಮುಖ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ರಿಲಯನ್ಸ್ ಜಿಯೋ ಪ್ರೆಸಿಡೆಂಟ್ ಸುನಿಲ್ ದತ್ ಹೇಳಿದ್ದಾರೆ.
ಇನ್ನು ಜಿಯೋ ಕಂಪೆನಿ ಪ್ರಸ್ತುತ ಜಿಯೋಭಾರತ್ ಸರಣಿಯಲ್ಲಿ ಜಿಯೋಭಾರತ್ V2, ಜಿಯೋಭಾರತ್ K1 ಕಾರ್ಬನ್ ಮತ್ತು ಜಿಯೋಭಾರತ್ B1 ಫೀಚರ್ ಫೋನ್‌ಗಳನ್ನು ಹೊಂದಿದೆ. ಇವುಗಳು ಬೆಲೆ ಕ್ರಮವಾಗಿ 999ರೂ, 999ರೂ ಮತ್ತು 1,299ರೂ.ಆಗಿದೆ.

ಇತ್ತೀಚಿಗೆ ಜಿಯೋ ಪರಿಚಯಿಸಿರುವ ಜಿಯೋ ಭಾರತ್ B1 ಫೋನ್ ಅತ್ಯಾಕರ್ಷಕವಾಗಿದೆ. ಈ ಫೀಚರ್ ಫೋನ್ 2.4 ಇಂಚಿನ ಸ್ಕ್ರೀನ್ ಹೊಂದಿದ್ದು, ಇದರೊಂದಿಗೆ 2000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನ ಹೊಂದಿರುವ ಪ್ಲಸ್ ಪಾಯಿಂಟ್ ಎನಿಸಿದೆ. ಅಂದಹಾಗೆ ಇದು ಜಿಯೋದ ಮತ್ತೊಂದು ಬಜೆಟ್ ಫೋನ್ ಆಗಿದ್ದು, ಈ ಫೋನ್ ಅನ್ನು ಸ್ವಲ್ಪ ಉತ್ತಮವಾದ ವಿಭಾಗದಲ್ಲಿ ಕಾಣಿಸಿಕೊಂಡಿದೆ. ಜಿಯೋ ಭಾರತ್ B1 ಫೋನ್ ಈ ಹಿಂದಿನ ವೇರಿಯಂಟ್‌ಗಳಿಗೆ ಹೋಲಿಸಿದರೆ ಅದರ ಸ್ಕ್ರೀನ್ ಮತ್ತು ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯದಲ್ಲಿ ಕೆಲವು ಚಿಕ್ಕ ಪುಟ್ಟ ಅಪ್‌ಡೇಟ್‌ಗಳನ್ನು ಮಾತ್ರ ನೀಡುತ್ತದೆ.


Click it and Unblock the Notifications








