'ಜಿಯೋ ಫೈಬರ್' ಇಂದು ಲಾಂಚ್!..ಮತ್ತೆ ಮೂರು ತಿಂಗಳ ಉಚಿತ ಸೇವೆ?!
ಉಚಿತ ಡೇಟಾ ಹಾಗೂ ಕರೆಗಳನ್ನು ನೀಡುವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಠಿಸಿದ್ದ ಜಿಯೋ, ಇಂದು ಮತ್ತೊಂದು ಹೊಸ ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ. ಇಂದು ನಡೆಯಲಿರುವ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ವಾರ್ಷಿಕ ಸಭೆಯಲ್ಲಿ ಜೀಯೋ ಫೈಬರ್ ಸೇವೆ ಆರಂಭವಾಗಲಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಹೌದು, ಎಕನಾಮಿಕ್ ಟೈಮ್ಸ್ ವರದಿ ಮಾಡಿರುವ ಪ್ರಕಾರ, ಜಿಯೋ ತನ್ನ ಹೊಸ ಬ್ರಾಡ್‌ಬ್ಯಾಂಡ್ ಸೇವೆಯನ್ನು ಇಂದು ಆರಂಭಿಸುವ ಸಾಧ್ಯತೆಯಿದೆ. ಈಗಾಗಲೇ ಈ ಯೋಜನೆ ಬಗ್ಗೆ ಚರ್ಚೆ ನಡೆಸಲಾಗಿದ್ದು ಇಂದೇ ಅಧೀಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಹಾಗಾಗಿ, ಗ್ರಾಹಕರು ಬಹುದಿನಗಳಿಂದ ಕಾಯುತ್ತಿದ್ದ ಸೇವೆ ಶೀಘ್ರವೇ ಮಾರುಕಟ್ಟೆಗೆ ಕಾಲಿಡುತ್ತಿದೆ.

ನೂತನ ಜಿಯೋ ಫೈಬರ್ ಅನ್ನು ''ಫೈಬರ್ ಟು ದಿ ಹೋಮ್'' ಎಂಬ ಹೆಸರಿನಲ್ಲಿ ಬ್ರಾಡ್‌ಬ್ಯಾಂಡ್ ಸೇವೆಯನ್ನು ಆರಂಭಿಸಲಿದೆ ಮತ್ತು ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಮೂಲಕ ಕೂಡ ಕಡಿಮೆ ದರದಲ್ಲಿ ಸೇವೆ ಒದಗಿಸಲಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಹೇಳಿದೆ.ಹಾಗಾದರೆ, ಜಿಯೋ ಫೈಬರ್ ಸೇವೆ ಹೇಗಿರಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.!

1 GBPS ವೇಗದ ಸೇವೆ?
ಜಿಯೋ ಫೈಬರ್ ಟು ದಿ ಹೋಮ್ ಸೇವೆ 1 GBPS ವೇಗದ ಇಂಟರ್‌ನೆಟ್ ಹೊಂದಿರಲಿದೆ ಎಂದು ಹೇಳಲಾಗಿದೆ. ಸದ್ಯ ಪುಣೆ ಮತ್ತು ಮುಂಬೈನಲ್ಲಿ ನಡೆಯುತ್ತಿರುವ ಪರೀಕ್ಷಾರ್ಥ ಸೇವೆಯಲ್ಲಿ 1 GBPS ವೇಗದವೇಗದಲ್ಲಿ ಇಂಟರ್‌ನೆಟ್ ಅನ್ನು ಜಿಯೋ ನೀಡುತ್ತಿರುವ ಬಗ್ಗೆ ಮಾಹಿತಿ ಇದೆ. ಭಾರತದಲ್ಲಿ ಆಕ್ಟ್ ಫೈಬರ್‌ನೆಟ್ ಮಾತ್ರ ಇಷ್ಟು ವೇಗದ ಡೇಟಾವನ್ನು ಒದಗಿಸುತ್ತಿದೆ.

100GB ಡೇಟಾಗೆ 500 ರೂ.!
ಜಿಯೋ ಫೈಬರ್ ಉಚಿತ ಸೇವೆ ಕೊನೆಯಾದ ನಂತರದ ಆಫರ್ ಬಗ್ಗೆಯೂ ಸಹ ರೂಮರ್ಸ್ ಹೊರಬಿದ್ದಿದೆ. 1500 ರೂ ಡೆಪಾಸಿಟ್ ಪಾಡಿ ಜಿಯೋ ಫೈಬರ್ ಡಿವೈಸ್ ಅನ್ನು ಖರಿದಿಸಬೇಕಿದೆ. ನಂತರ 100GB ಡೇಟಾಗೆ 500 ರೂಪಾಯಿಯಿಂದ ಜಿಯೋ ಬ್ರಾಡ್‌ಬ್ಯಾಂಡ್ ಸೇವೆ ಆರಂಭವಾಗಲಿದೆ ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.!

ಮಾಸಿಕ 1000-1500 ರೂ?
ಜಿಯೋ ತನ್ನ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಕೂಡ ಅನ್‌ಲಿಮಿಟೆಡ್ ಆಗಿ ನೀಡಬಹುದು ಎಂದು ಎಕನಾಮಿಕ್ಸ್ ಟೈಮ್ಸ್ ಹೇಳಿದೆ. ಮಾಸಿಕ 1000-1500 ರು. ಅನಿಯಮಿತ ಇಂಟರ್‍ನೆಟ್ ಹಾಗೂ ವಾಯ್ಸ್ ಕಾಲ್ ಸೌಲಭ್ಯ ನೀಡಲಿದ್ದು, ಈ ಮೂಲಕ ಕೂಡ ಕಡಿಮೆ ದರದಲ್ಲಿ ಸೇವೆ ಒದಗಿಸಲಿದೆ ಎನ್ನಲಾಗಿದೆ.!

4K ಗುಣಮಟ್ಟದಲ್ಲಿ ಬ್ರಾಡ್‌ಬ್ಯಾಂಡ್!!
ಜಿಯೋ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಯು 4K ಗುಣಮಟ್ಟದಲ್ಲಿ ದೊರೆಯಲಿದೆ ಎನ್ನಲಾಗಿದೆ. ಈಗ ಲಭ್ಯವಿರುವ ಎಲ್ಲಾ ಬ್ರಾಡ್ ಬ್ಯಾಂಡ್ ಸೇವೆಗಳಿಗಿಂತ ಅತ್ಯುತ್ತಮ ಗುಣಮಟ್ಟದಲ್ಲಿ ಜಿಯೋ ಫೈಬರ್ ಟು ದಿ ಹೋಮ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ

3 ತಿಂಗಳ ಉಚಿತ ಸೇವೆ?
ಜಿಯೋಫೈಬರ್ ಕಡಿಮೆ ವೆಚ್ಚದ ಫೈಬರ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಇದಾಗಿರುವುದರಿಂದ ಜಿಯೋ ಇಲ್ಲಿಯೂ ಕೆಲ ತಿಂಗಳೂ ಉಚಿತ ಸೇವೆಯನ್ನು ನೀಡಲಿದೆ ಎಂದು ಹೇಳಲಾಗಿದೆ. ಈ ಸೇವೆಯನ್ನು ಪ್ರಾರಂಭಿಸುವ ಮೂಲಕ ಮೊದಲ ಕೆಲವು ತಿಂಗಳು ಉಚಿತ ಇಂಟರ್ನೆಟ್ ಸೇವೆಗಳನ್ನು ಹೆಚ್ಚಿನ ವೇಗದಲ್ಲಿ ಪೂರೈಸಲು ಜಿಯೋ ತಯಾರಿಯನ್ನು ನಡೆಸಿದೆಯಂತೆ.

ಮಾರುಕಟ್ಟೆ ತಲ್ಲಣ!
ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಏಕಸ್ವಾಮ್ಯದತ್ತ ಹೆಜ್ಜೆ ಹಾಕುತ್ತಿದ್ದು, ಇದೀಗ ಬ್ರಾಡ್ ಬ್ಯಾಂಡ್ ಸೇವೆ ಮಾರುಕಟ್ಟೆಯಲ್ಲಿ ತಲ್ಲಣ ಉಂಟುಮಾಡಲಿದೆ! ಗ್ರಾಹಕರು ಇಂಟರ್ನೆಟ್ ಸೇವೆ, ಕರೆ, ವಿಡಿಯೋ ಕಾಲಿಂಗ್ ಜೊತೆ ಟಿವಿಯನ್ನು ಕೂಡ ನೋಡಬಹುದಾದ ಈ ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಬಂದರೆ ಭಾರತದ ಇಂಟರ್‌ನೆಟ್ ಕ್ಷೇತ್ರ ಮತ್ತೆ ಬದಲಾಗಲಿದೆ.


Click it and Unblock the Notifications








