Home
ಸುದ್ದಿಜಾಲ

ಜಿಯೋ ಧಮಾಕ ಪ್ರಿವ್ಯೂ ಆಫರ್: ಮೂರು ತಿಂಗಳು ಉಚಿತ - 100GB ಹೈಸ್ವೀಡ್

By Srinidhi

ದೇಶಿಯ ಮಾರುಕಟ್ಟೆಯಲ್ಲಿ ಜಿಯೋ ಮತ್ತೊಮ್ಮೆ ಅಬ್ಬರ ಜೋರಾಗುವ ಲಕ್ಷಣಗಳು ಕಾಣುತ್ತಿದೆ. ಈಗಾಗಲೇ ಟೆಲಿಕಾಂ ಲೋಕದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿ ತನ್ನದೇ ನೂತನ ಹಾದಿಯನ್ನು ಸೃಷ್ಠಿಸಿಕೊಂಡಿದ್ದು, ಇದೇ ಮಾದರಿಯಲ್ಲಿ ಬಹು ದಿನಗಳಿಂದ ಸತಾಯಿಸುತ್ತದ್ದ ಜಿಯೋ ಫೈಬರ್ ಸೇವೆಗೆ ಶೀಘ್ರವೇ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಯಶಸ್ವಿ ಪರೀಕ್ಷೆಯನ್ನು ಮುಗಿಸಿ, ಸೇವೆ ಲಾಂಚ್ ಮಾಡಲು ಕೊನೆತ ತಯಾರಿಕೆಯಲ್ಲಿದೆ.

ಜಿಯೋ ಧಮಾಕ ಪ್ರಿವ್ಯೂ ಆಫರ್: ಮೂರು ತಿಂಗಳು ಉಚಿತ - 100GB ಹೈಸ್ವೀಡ್

ಅತೀ ಕಡಿಮೆ ವೆಚ್ಚದಲ್ಲಿ ಜಿಯೋ ಫೈಬರ್ ಸೇವೆಯನ್ನು ನೀಡಲಿದ್ದು, ಟೆಲಿಕಾಂ ಮಾರುಕಟ್ಟೆಯಲ್ಲಿ 4G ಸೇವೆಯನ್ನು ಜನ ಸಾಮಾನ್ಯರು ಹೊರೆಯಾಗದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಂತೆ ಮಾಡಿದ ರೀತಿಯಲ್ಲಿ ಪ್ರತಿಯೊಬ್ಬರು ಅತೀ ಕಡಿಮೆ ವೆಚ್ಚದಲ್ಲಿ ಅತೀ ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯಲಿ ಎನ್ನುವ ಕಾರಣಕ್ಕೆ ಹೊಸ ಪ್ರಯತ್ನವೊಂದಕ್ಕೆ ಜಿಯೋ ಮುಂದಾಗಿದೆ.

10 ನಗರಗಳಲ್ಲಿ ಪರೀಕ್ಷೆ

10 ನಗರಗಳಲ್ಲಿ ಪರೀಕ್ಷೆ

ಈಗಾಗಲೇ ಜಿಯೋ ತನ್ನ ಫೈಬರ್ ಸೇವೆಯನ್ನು ದೇಶದ 10 ಪ್ರಮುಖ ನಗರಗಳಲ್ಲಿ ಪರೀಕ್ಷೆಯನ್ನು ನಡೆಸಿದೆ ಎನ್ನಲಾಗಿದೆ. ಮುಂಬೈ, ದೆಹಲಿ, ಅಹಮದಾಬಾದ್, ಜಮ್ ನಗರ್, ಸುರತ್, ವೊಡೊದರ ಮತ್ತು ಹೈದ್ರಾಬಾದ್ ನಗರದಲ್ಲಿ ಪ್ರಯೋಗಿಕವಾಗಿ ಪರೀಕ್ಷೆ ನಡೆಸಿದ್ದು, ಇಲ್ಲಿ ಬಳಕೆದಾರರು ಅತೀ ವೇಗದ ಇಂಟರ್ನೆಟ್ ಸೇವೆಯನ್ನು ಪಡೆದುಕೊಂಡಿದ್ದಾರೆ.

ಜಿಯೋ ಫೈಬರ್ ಪ್ರಿವ್ಯೂ ಆಫರ್

ಜಿಯೋ ಫೈಬರ್ ಪ್ರಿವ್ಯೂ ಆಫರ್

ಜಿಯೋ ಫೈಬರ್ ಸೇವೆಯನ್ನು ಪರಿಚಯಿಸುವ ಸಲುವಾಗಿ ಜಿಯೋ ಫೈಬರ್ ಪ್ರಿವ್ಯೂ ಆಫರ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಇದರಲ್ಲಿ ಬಳಕೆದಾರರು ಪ್ರತಿ ತಿಂಗಳು 100 GB ಡೇಟಾವನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಮೂರು ತಿಂಗಳು ಉಚಿತ:

ಮೂರು ತಿಂಗಳು ಉಚಿತ:

ಮೊದಲ ಮೂರು ತಿಂಗಳು ಗ್ರಾಹಕರು ಜಿಯೋ ಫೈಬರ್ ಸೇವೆಯನ್ನು ಉಚಿತ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದಾದ ನಂತರದಲ್ಲಿ ಪ್ಲಾನ್ ಗಳನ್ನು ಪಡೆಯಬಹದಾಗಿದೆ.

Jio-Fi ಪಾಸ್‌ವರ್ಡ್ ಬದಲಾಯಿಸುವುದು ಹೇಗೆ,,?
ಮೊದಲ ಪ್ಯಾಕ್‌ಗಳು

ಮೊದಲ ಪ್ಯಾಕ್‌ಗಳು

ಈಗಾಗಲೇ ಜಿಯೋ ಫೈಬರ್ ಪ್ಲಾನ್ ಗಳ ಕುರಿತ ಮಾಹಿತಿಯೂ ಲೀಕ್ ಆಗಿದ್ದು, ರೂ.500 ಪಾವತಿ ಮಾಡಿದರೆ 600GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಬಹುದಾಗಿದೆ.

ಹೈ-ಸ್ಪೀಡ್ ಆಫರ್:

ಹೈ-ಸ್ಪೀಡ್ ಆಫರ್:

ಅಲ್ಲದೇ ರೂ.2000 ಪಾವತಿ ಮಾಡಿದರೆ 1000GB ಡೇಟಾವನ್ನು 100MBPS ವೇಗದಲ್ಲಿ ಪಡೆಯಬಹುದಾಗಿದೆ. ಇದರಲ್ಲಿ ವೇಗದ ಡೇಟಾ ಬಳಕೆಗೆ ದೊರೆಯಲಿದೆ.

ಇದಲ್ಲದೇ ಜಿಯೋ ಇಂಟರ್ನೆಟ್ ಟಿವಿ

ಇದಲ್ಲದೇ ಜಿಯೋ ಇಂಟರ್ನೆಟ್ ಟಿವಿ

ಜಿಯೋ ತನ್ನ DTH ಸೇವೆಯನ್ನು ಲಾಂಚ್ ಮಾಡುವ ಮುನ್ನವೇ ಫೈಬರ್ ಸೇವೆಯೊಂದಿಗೆ ಇಂಟರ್ನೆಟ್ ಟಿವಿ ಸೇವೆಯನ್ನು ಬಳಕೆದಾರರಿಗೆ ಮುಕ್ತಗೊಳಿಸಲಿದೆ. ಇದಾದ ನಂತರದಲ್ಲಿ DTH ಸೇವೆಯನ್ನು ಬಳಕೆದಾರರಿಗೆ ಒದಗಿಸಲಿದೆ ಎನ್ನುವ ಮಾಹಿತಿಯೂ ಸದ್ಯ ಲಭ್ಯವಾಗಿದೆ.

ಇನ್ನು ಹಲವು ಸೇವೆಗಳಿದೆ

ಇನ್ನು ಹಲವು ಸೇವೆಗಳಿದೆ

ಜಿಯೋ ಫೈಬರ್ ನೊಂದಿಗೆ ಲಾಂಡ್ ಲೈನ್, ಬ್ರಾಡ್ ಬ್ಯಾಂಡ್, ಇಂಟರ್ನೆಟ್ ಟಿವಿ ದೊರೆಯಲಿದ್ದು. ಒಂದೇ ಸೇವೆಯನ್ನು ಪಡೆಯುವ ಮೂಲಕ ಹಲವು ಲಾಭಗಳನ್ನು ಬಳಕೆದಾರರು ಪಡೆಯಬಹುದಾಗಿದೆ.

ಜಿಯೋ ಫೈಬರ್ ಉಪಯೋಗ:

ಜಿಯೋ ಫೈಬರ್ ಉಪಯೋಗ:

ಜಿಯೋ ಫೈಬರ್ ನಿಂದ ನೀವು ನಿಮ್ಮ ಮನೆಯ ಹೋಮ್ ಆಟೋ ಮೋಷನ್, ಸಿಸಿಟಿವಿ ಸರ್ವಲೆನ್ಸ್, ಗೇಮಿಂಗ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ವೇಗ ಮತ್ತು ಡೇಟಾ ಇದಕ್ಕೆ ಕಾರಣವಾಗಲಿದೆ.

Best Mobiles in India

English summary
JioFiber Expected to Offer Free Broadband Services With 100 Mbps Speed Initially. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+