Home
ಸುದ್ದಿಜಾಲ

ಬೆಲೆ ಏರಿಕೆಯ ಬಿಸಿಯಲ್ಲಿ ಜಿಯೋ ಫೈಬರ್‌ ಗ್ರಾಹಕರಿಗೆ ಸಿಹಿ ಸುದ್ದಿ..!

By Gizbot Bureau

ಕಳೆದ ಒಂದಿಷ್ಟು ದಿನಗಳಿಂದ ಟೆಲಿಕಾಂ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಮಾತು ಸಾಮಾನ್ಯವಾಗಿದೆ. ಈ ದರ ಏರಿಕೆ ಮುಂದೆ ಬ್ರಾಡ್‌ಬ್ಯಾಂಡ್‌ ವಿಭಾಗಕ್ಕೂ ಕಾಲಿಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ದೇಶದ ಇಂಟರ್‌ನೆಟ್ ಸೇವಾ ಪೂರೈಕೆದಾರ ಕಂಪನಿಗಳು ಈ ನಿಟ್ಟಿನಲ್ಲಿ ಯೋಚನೆ ಆರಂಭಿಸಿವೆ. ಆದರೆ, ಬೆಲೆ ಏರಿಕೆಗೂ ಮುನ್ನ ರಿಲಾಯನ್ಸ್‌ ಜಿಯೋ ತನ್ನ ಬ್ರಾಡ್‌ಬ್ಯಾಂಡ್‌ ಗ್ರಾಹಕರಿಗೆ ಒಳ್ಳೆ ಸುದ್ದಿಯೊಂದನ್ನು ನೀಡಿದೆ.

7 ದಿನಗಳ ಪ್ಲಾನ್‌

7 ದಿನಗಳ ಪ್ಲಾನ್‌

ಜಿಯೋ ತನ್ನ ಬ್ರಾಡ್‌ಬ್ಯಾಂಡ್‌ ಗ್ರಾಹಕರಿಗೆ ನೀಡಿದ ಒಳ್ಳೆ ಸುದ್ದಿ ಏನೆಂದರೆ, ಕೇವಲ 7 ದಿನಗಳ ವ್ಯಾಲಿಡಿಟಿಯ ಪ್ಲಾನ್‌ ಒಂದನ್ನು ಪರಿಚಯಿಸಿದೆ. ರೂ.199ಕ್ಕೆ ದೊರೆಯುವ ಜಿಯೋ ಫೈಬರ್‌ ಕಾಂಬೊ ಪ್ಲಾನ್‌ ಬಹಳ ಕಡಿಮೆ ವ್ಯಾಲಿಡಿಟಿ ಹೊಂದಿದ ಪ್ಲಾನ್‌ ಆಗಿದೆ. ಡ್ರೀಮ್‌ಡಿಟಿಎಚ್‌ನ ವರದಿಯ ಪ್ರಕಾರ, ರೂ.199 ಕಾಂಬೊ ಪ್ಯಾಕ್ ಈ ಮುಂಚೆ ಪೋಷಕ ಪ್ಯಾಕ್‌ನಂತೆ ಕಾರ್ಯನಿರ್ವಹಿಸುತ್ತಿತ್ತು. ಮುಖ್ಯ ಯೋಜನೆಯಲ್ಲಿರುವ ಎಲ್ಲಾ ಡೇಟಾ ಬಳಸಿದ ನಂತರ ಈ ಪ್ಯಾಕ್‌ನ ಡೇಟಾ ಬಳಸಬಹುದಾಗಿತ್ತು. ಆದರೆ, ಈಗ ಇದು ಸ್ವತಂತ್ರ ಪ್ಯಾಕ್‌ ಆಗಿ ಕಾರ್ಯನಿರ್ವಹಿಸುತ್ತಿದೆ.

1000 GB ಡೇಟಾ..!

1000 GB ಡೇಟಾ..!

ಈ ಹಿಂದೆ 100 Mbps ವೇಗದಲ್ಲಿ 100 GB ಡೇಟಾವನ್ನು ಅನಿಯಮಿತ ಉಚಿತ ಕರೆಗಳೊಂದಿಗೆ 199 ರೂ. ಪ್ಲಾನ್‌ನಲ್ಲಿ ನೀಡಲಾಗುತ್ತಿತ್ತು. ಆದರೆ, ಈಗ 7 ದಿನಗಳ ವ್ಯಾಲಿಡಿಟಿಯಲ್ಲಿ 1000 GB ಡೇಟಾ ಮತ್ತು ಅನಿಯಮಿತ ಉಚಿತ ಕರೆಗಳನ್ನು ನೀಡುತ್ತಿದೆ.

ಎಲ್ಲಿ ಖರೀದಿಸಬಹುದು..?

ಎಲ್ಲಿ ಖರೀದಿಸಬಹುದು..?

ಜಿಯೋ ಫೈಬರ್‌ ರೂ.199 ಕಾಂಬೋ ಪ್ಲಾನ್‌ನ್ನು ಗ್ರಾಹಕರು ಜಿಯೋ ಅಧಿಕೃತ ವೆಬ್‌ಸೈಟ್‌ ಅಥವಾ ಮೈ ಜಿಯೋ ಅಪ್ಲಿಕೇಷನ್‌ನಲ್ಲಿ ಖರೀದಿಸಬಹುದು. ಆದರೆ, 199 ರೂ. ಪ್ಲಾನ್‌ನ ಬೆಲೆ ಗ್ರಾಹಕರಿಗೆ ಜಿಎಸ್‌ಟಿ ಸೇರಿ 234.82 ರೂ. ಗಳಿಗೆ ಖರೀದಿಗೆ ದೊರೆಯುತ್ತದೆ.

ಶೇ.40 ರಷ್ಟು ಬೆಲೆ ಹೆಚ್ಚಳ

ಶೇ.40 ರಷ್ಟು ಬೆಲೆ ಹೆಚ್ಚಳ

ರಿಲಾಯನ್ಸ್‌ ಜಿಯೋ ತನ್ನ ಚಲನಶೀಲ ಯೋಜನೆಗಳ ಬೆಲೆಗಳನ್ನು ಶೇ.40 ರಷ್ಟು ಹೆಚ್ಚಿಸಿದ್ದು, ಹೊಸ ರೀಚಾರ್ಜ್ ಯೋಜನೆಗಳು ಗ್ರಾಹಕರಿಗೆ ಶೇ.300 ರಷ್ಟು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಎಂದು ಕಂಪನಿ ಹೇಳಿದೆ. ಜಿಯೋ ತನ್ನ ಹೊಸ ಆಲ್ ಇನ್ ಒನ್ ಪ್ಲಾನ್‌ ಅಡಿಯಲ್ಲಿ ಮಾಸಿಕ, ದ್ವೈಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಎಂಬ ನಾಲ್ಕು ಯೋಜನೆಗಳನ್ನು ತಂದಿದೆ. ಈ ಯೋಜನೆಗಳು 199 ರೂ.ಯಿಂದ ಪ್ರಾರಂಭವಾಗಿ ವಾರ್ಷಿಕ 2,199 ರೂ.ವರೆಗೂ ಬೆಲೆ ಹೊಂದಿದೆ.

ಬಿಲ್ಲಿಂಗ್‌ ಪ್ರಾರಂಭ

ಬಿಲ್ಲಿಂಗ್‌ ಪ್ರಾರಂಭ

ರಿಲಾಯನ್ಸ್‌ ಜಿಯೋ ಇತ್ತೀಚೆಗೆ ತನ್ನ ಜಿಯೋ ಫೈಬರ್ ಗ್ರಾಹಕರಿಗೆ ಬಿಲ್ಲಿಂಗ್ ಪ್ರಾರಂಭಿಸಿದೆ. ಆರಂಭಿಕ ಯೋಜನೆಯಾಗಿ ಉಚಿತ ಹೋಮ್ ಬ್ರಾಡ್‌ಬ್ಯಾಂಡ್ ಸೇವೆ ಆನಂದಿಸುತ್ತಿದ್ದ ಬಳಕೆದಾರರಿಗೆ ಈಗ ಹೋಮ್‌ ಪ್ಲಾನ್‌ನ್ನು ಆಯ್ಕೆ ಮಾಡಲು ಕೇಳಿಕೊಳ್ಳಲಾಗಿದ್ದು, ಪ್ಲಾನ್‌ಗೆ ತಕ್ಕಂತೆ ಶುಲ್ಕ ವಿಧಿಸಲಾಗುತ್ತದೆ. ಹೊಸ ಬಿಲ್ಲಿಂಗ್ ವ್ಯವಸ್ಥೆ ಸ್ಥಾಪನೆಗೆಎ ಸಮಯ ಬೇಕಾಗಿದ್ದರಿಂದ ಬಿಲ್ಲಿಂಗ್‌ ವಿಧಿಸುವ ಕಾರ್ಯ ಸುಮಾರು ಎರಡು ತಿಂಗಳು ಸ್ಥಗಿತಗೊಂಡಿತ್ತು. ಜಿಯೋ ಫೈಬರ್ ಬಳಕೆದಾರರು ಸೇವೆಗಾಗಿ 2500 ರೂ. ಪಾವತಿಸಬೇಕಾಗಿದೆ, ಇದರಲ್ಲಿ 1,500 ರೂ ಮರುಪಾವತಿಸಬಹುದಾದ ಭದ್ರತಾ ಠೇವಣಿಯಾದರೆ, 1,000 ರೂ. ಸ್ಥಾಪನಾ ಶುಲ್ಕವಾಗಿದೆ.

Best Mobiles in India

English summary
JioFiber Rs. 199 Plan Now Offers 1TB Data With Unlimited Voice Calls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+