ಹೊಸ ವರ್ಷಕ್ಕೆ ಜಿಯೋದಿಂದ ಬಂಪರ್ ಆಫರ್..! 100 GB ಜಾಗದಲ್ಲಿ 1000 GB ಡೇಟಾ..!
ಕೆಲವು ದಿನಗಳ ಹಿಂದೆಯಷ್ಟೇ ರಿಲಾಯನ್ಸ್ ಜಿಯೋ ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗಾಗಿ 199 ರೂ.ಗಳ ಹೊಸ ಪ್ರಿಪೇಯ್ಡ್ ಬ್ರಾಡ್‌ಬ್ಯಾಂಡ್ ಪ್ಲಾನ್‌ನ್ನು ಪರಿಚಯಿಸಿತ್ತು. ಆರಂಭದಲ್ಲಿ ಈ ಪ್ಲಾನ್ 7 ದಿನಗಳ ವ್ಯಾಲಿಡಿಟಿಯಲ್ಲಿ 100 Mbps ವೇಗದಲ್ಲಿ 100 GB ಡೇಟಾವನ್ನು ನೀಡುತ್ತಿತ್ತು, ಆದರೆ, ಜಿಯೋ ಈಗ ಯೋಜನೆಯನ್ನು ಪರಿಷ್ಕರಿಸಿದ್ದು, ಅದೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ.

1000 GB ಡೇಟಾ
ಹೊಸ 199 ರೂ. ಟಾಪ್-ಅಪ್ ಪ್ಲಾನ್ 1000 GB ಡೇಟಾವನ್ನು ಹೈಸ್ಪೀಡ್ ಕ್ಯಾಪಿಂಗ್‌ನೊಂದಿಗೆ ಅನಿಯಮಿತವಾಗಿ ನೀಡುತ್ತದೆ. ನಿಗದಿತ ಬಳಕೆಯ ನಂತರ ವೇಗ 1 Mbpsಗೆ ಇಳಿಸಲಾಗುತ್ತದೆ. ಇದು 7 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಎಲ್ಲಾ ತೆರಿಗೆಗಳನ್ನು ಒಳಗೊಂಡು ಈ ಪ್ಲಾನ್ 234.82 ರೂ.ಗೆ ದೊರೆಯುತ್ತದೆ.

ಸಕ್ರಿಯ ಪ್ಲಾನ್‌ನಂತೆ ಕಾರ್ಯ
ಸಕ್ರಿಯ ಯೋಜನೆಯ ಡೇಟಾ ಮುಗಿದ ನಂತರ ಈ ಪ್ಲಾನ್ ಅಸ್ತಿತ್ವದಲ್ಲಿರುವ ಮಾಸಿಕ ಡೇಟಾ ಯೋಜನೆಯ ಮೇಲ್ಭಾಗದಲ್ಲಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಈ ನಿರ್ದಿಷ್ಟ ಪ್ಲಾನ್‌ನೊಂದಿಗೆ ಬಳಕೆದಾರರು ಎಷ್ಟು ಬಾರಿ ರೀಚಾರ್ಜ್ ಮಾಡಬಹುದು ಎಂಬುದರ ಕುರಿತು ಕಂಪನಿ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಎಲ್ಲಿ ರೀಚಾರ್ಜ್..?
ಈ ಪ್ಲಾನ್‌ನ್ನು ಗ್ರಾಹಕರು ಮೈಜಿಯೋ ಅಪ್ಲಿಕೇಶನ್ ಅಥವಾ ಮೈಜಿಯೋ ವೆಬ್‌ಸೈಟ್‌ನಲ್ಲಿ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ರೀಚಾರ್ಜ್ ವಿಭಾಗದಲ್ಲಿನ ‘ಕಾಂಬೊ' ಆಯ್ಕೆಯ ಅಡಿಯಲ್ಲಿ ಈ ಪ್ಲಾನ್‌ನ್ನು ಕಾಣಬಹುದು. ಇನ್ನು, ಜಿಯೋಫೈಬರ್ ಬಳಕೆದಾರರು 30 ದಿನಗಳ ಮಾನ್ಯತೆಯೊಂದಿಗೆ ಬರುವ ಆರು ಪ್ರಿಪೇಯ್ಡ್ ಮಾಸಿಕ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು 100Mbps ನಿಂದ 1Gbps ವರೆಗೆ ಇಂಟರ್‌ನೆಟ್ ವೇಗವನ್ನು ನೀಡುತ್ತದೆ.

6 ಮಾಸಿಕ ಪ್ಲಾನ್
ಜಿಯೋಫೈಬರ್ ಬಳಕೆದಾರರು 30 ದಿನಗಳ ಮಾನ್ಯತೆಯೊಂದಿಗೆ ಕಂಚು, ಬೆಳ್ಳಿ, ಚಿನ್ನ, ವಜ್ರ, ಪ್ಲಾಟಿನಂ ಮತ್ತು ಟೈಟಾನಿಯಂ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅವುಗಳ ಬೆಲೆ ಕ್ರಮವಾಗಿ 699 ರೂ., 849 ರೂ., 1,299 ರೂ., 2,499 ರೂ. ಮತ್ತು 8,499 ರೂ. ಆಗಿದೆ. ಇದರೊಂದಿಗೆ ಬಳಕೆದಾರರು ಉಚಿತ ಧ್ವನಿ ಕರೆಗಳು, ಟಿವಿ ವಿಡಿಯೋ ಕಾಲಿಂಗ್ ಫೀಚರ್, ಸೆಟಪ್ ಬಾಕ್ಸ್, ಒಟಿಟಿ ಚಂದಾದಾರಿಕೆ ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಾರೆ.

ಹ್ಯಾಪಿ ನ್ಯೂ ಇಯರ್ 2020
ರಿಲಾಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಹ್ಯಾಪಿ ನ್ಯೂ ಇಯರ್ 2020 ಕೊಡುಗೆಯನ್ನು ಪರಿಚಯಿಸಿದೆ, ಇದು ಒಂದು ವರ್ಷದ ಅನಿಯಮಿತ ಸೇವೆಗಳನ್ನು 2,020 ರೂ.ಗೆ ನೀಡುತ್ತದೆ. ಈ ಪ್ಲಾನ್‌ನಲ್ಲಿ 1.5 ಜಿಬಿ ದೈನಂದಿನ ಡೇಟಾ, ಅನಿಯಮಿತ ಕರೆ, ಎಸ್‌ಎಂಎಸ್ ಮತ್ತು ಇತರ ಜಿಯೋ ಸೇವೆಗಳನ್ನು ಒಳಗೊಂಡಿದೆ. ಮತ್ತೊಂದೆಡೆ, ಜಿಯೋಫೋನ್ ಗ್ರಾಹಕರು 0.5 ಜಿಬಿ ದೈನಂದಿನ ಡೇಟಾ, ಎಸ್‌ಎಂಎಸ್ ಮತ್ತು ಇತರ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಮತ್ತು ಹೊಸ ಜಿಯೋಫೋನ್ ಪಡೆಯುತ್ತಾರೆ.


Click it and Unblock the Notifications








