1Gbps ಬ್ರಾಡ್‌ಬ್ಯಾಂಡ್ ವೇಗ ಬಯಸೋರಿಗೆ ಈ ಪ್ಲಾನ್‌ಗಳು ಬೆಸ್ಟ್‌!

|

ಪ್ರಸ್ತುತ ದಿನಗಳಲ್ಲಿ ತಡೆರಹಿತ ಇಂಟರ್‌ನೆಟ್‌ ಬಳಕೆಗಾಗಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಬಳಸಲು ಮುಂದಾಗುತ್ತಿದ್ದಾರೆ. ಇದೇ ಕಾರಣಕ್ಕೆ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ವೇಗದ ಇಂಟರ್‌ನೆಟ್‌ ಜತೆಗೆ ವಿಭಿನ್ನ ಅವಶ್ಯಕತೆಗಳನ್ನು ಪೂರೈಸುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಎಲ್ಲರ ಗಮನ ಸೆಳೆದಿವೆ. ಹೆಚ್ಚಿನ ಬ್ರಾಡ್‌ಬ್ಯಾಂಡ್ ಯೋಜನೆಗಳು 300 Mbps ವರೆಗಿನ ವೇಗವನ್ನು ನೀಡುತ್ತವೆ. ಏಕೆಂದರೆ ಈ ಯೋಜನೆಗಳು ಕೈಗೆಟುಕುವ ಬೆಲೆಯನ್ನು ಹೊಂದಿದ್ದು, ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ.

ಬ್ರಾಡ್‌ಬ್ಯಾಂಡ್‌

ಹೌದು, ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಇಂದಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿವೆ. ಅಗ್ಗದ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಪ್ಲಾನ್‌ಗಳು ಕೂಡ ಲಭ್ಯವಿವೆ. ಹೆಚ್ಚಿನ ಪ್ಲಾನ್‌ಗಳು 300 Mbps ವೇಗ ನೀಡಿದರೆ, ಕೆಲವು ಪ್ಲಾನ್‌ಗಳು 1Gbps ಬ್ರಾಡ್‌ಬ್ಯಾಂಡ್ ವೇಗವನ್ನು ನೀಡುತ್ತವೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ಜಿಯೋಫೈಬರ್ ಪರಿಚಯಿಸಿರುವ ತಿಂಗಳಿಗೆ 3999ರೂ ಬೆಲೆಯ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು 1Gbps ವೇಗೆ ನೀಡುತ್ತವೆ. ಹಾಗಾದ್ರೆ 1Gbps ವೇಗವನ್ನು ನೀಡುವ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು ಯಾವುವು ಅವುಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 3999ರೂ ಬ್ರಾಡ್‌ಬ್ಯಾಂಡ್ ಪ್ಲಾನ್‌

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 3999ರೂ ಬ್ರಾಡ್‌ಬ್ಯಾಂಡ್ ಪ್ಲಾನ್‌

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 3,999ರೂ ವಿಐಪಿ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹೊಂದಿದೆ. ಈ ಪ್ಲಾನ್‌ ಇದೀಗ 4X4 ರೂಟರ್‌ನೊಂದಿಗೆ ಬರುತ್ತದೆ, ಅದು ಬಳಕೆದಾರರಿಗೆ ಸಣ್ಣ ಮನೆಗಳು ಮತ್ತು ಕಚೇರಿಗಳಲ್ಲಿ 1Gbps ಕವರೇಜ್‌ನೊಂದಿಗೆ ವೈಫೈ ಕವರೇಜ್ ನೀಡುತ್ತದೆ. ಇದು 1 Gbps ವೇಗ, ಅನಿಯಮಿತ ಡೇಟಾವನ್ನು ತಿಂಗಳಿಗೆ 3.3TB ಅಥವಾ 3300GB ಮತ್ತು ತನ್ನ ಲ್ಯಾಂಡ್‌ಲೈನ್ ಸೇವೆಯ ಮೂಲಕ ಅನಿಯಮಿತ ವಾಯಿಸ್‌ ಕರೆಗಳನ್ನು ನೀಡುತ್ತದೆ. ಈ ಯೋಜನೆ ನೀಡುವ ಒಟಿಟಿ ಚಂದಾದಾರಿಕೆಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಪ್ರೀಮಿಯಂ ಮತ್ತು ವಿಂಕ್ ಮ್ಯೂಸಿಕ್ ಚಂದಾದಾರಿಕೆ ಸೇರಿವೆ. ಹಾಗೆಯೇ ಆಂಡ್ರಾಯ್ಡ್ ಟಿವಿ ಆಧಾರಿತ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಯ್ಕೆ ಮಾಡುವ ಆಯ್ಕೆಯನ್ನು ಗ್ರಾಹಕರು ಪಡೆಯುತ್ತಾರೆ. ಎಕ್ಸ್‌ಸ್ಟ್ರೀಮ್ ಬಾಕ್ಸ್‌ನೊಂದಿಗೆ, ಬಳಕೆದಾರರು ಉಚಿತ ZEE5 ಪ್ರೀಮಿಯಂ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಗಳನ್ನು ಪಡೆಯುತ್ತಾರೆ.

JioFiber  3999ರೂ ಬ್ರಾಡ್‌ಬ್ಯಾಂಡ್ ಪ್ಲಾನ್‌

JioFiber 3999ರೂ ಬ್ರಾಡ್‌ಬ್ಯಾಂಡ್ ಪ್ಲಾನ್‌

ಜಿಯೋ ಫೈಬರ್ 3,999ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ 1Gbps ಇಂಟರ್ನೆಟ್ ವೇಗವನ್ನು ಹೊಂದಿದೆ. ಈ ಯೋಜನೆಯು ಅನಿಯಮಿತ ಡೇಟಾ ಸೌಲಭ್ಯ ಪಡೆದಿದೆ (3.3 ಟಿಬಿ ಎಫ್‌ಯುಪಿ ಡೇಟಾ). ಇದರೊಂದಿಗೆ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್), ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಜೀ 5, ಸೋನಿ ಲಿವ್, ಸನ್‌ನೆಕ್ಸ್ಟ್‌, ವೂಟ್, ಎಎಲ್‌ಟಿ ಬಾಲಾಜಿ, ಹೊಯ್ಚೊಯ್, ಶೆಮರೂ ಮಿ, ಲಯನ್ಸ್ ಗೇಟ್ ಪ್ಲೇ, ಜಿಯೋ ಸಿನೆಮಾ ಮತ್ತು ಜಿಯೋಸಾವ್ನ್ OTT ಪ್ರಯೋಜನಗಳು ಲಭ್ಯವಾಗಲಿವೆ.

ಟಾಟಾ ಸ್ಕೈ 3600ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ಟಾಟಾ ಸ್ಕೈ 3600ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ಟಾಟಾ ಸ್ಕೈ 3600ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌ 1Gbps ಇಂಟರ್‌ನೆಟ್‌ ವೇಗವನ್ನು ನೀಡಲಿದೆ. ಇದು ಒಂದು ತಿಂಗಳು, ಮೂರು ತಿಂಗಳು, ಆರು ತಿಂಗಳು ಮತ್ತು ಒಂದು ವರ್ಷದ ಅವಧಿಗೆ ಬರುತ್ತದೆ. ಒಂದು ತಿಂಗಳ ಯೋಜನೆಯು 3600ರೂ.ಬೆಲೆ ಹೊಂದಿದ್ದರೆ, ಮೂರು ತಿಂಗಳ ಪ್ಲಾನ್‌ 10,800ರೂ.ಬೆಲೆ ಹೊಂದಿದೆ. ಆರು ತಿಂಗಳ ಪ್ಲಾನ್‌ 19,800ರೂ ಬೆಲೆ ಹೊಂದಿದೆ. ಹಾಗೆಯೇ ವಾರ್ಷಿಕ ಯೋಜನೆ 36,000ರೂ.ಬೆಲೆ ಹೊಂದಿದೆ. ಈ ಪ್ಲಾನ್‌ಗಳಲ್ಲಿ ಯಾವುದೇ ಒಟಿಟಿ ಪ್ರಯೋಜನಗಳಿಲ್ಲ, ಆದರೆ ಬಳಕೆದಾರರು 3.3 ಟಿಬಿ ಅಥವಾ 3,300 ಜಿಬಿ ಡೇಟಾವನ್ನು ಅನಿಯಮಿತ ವಾಯಿಸ್‌ ಕರೆಗಳೊಂದಿಗೆ ಪಡೆಯುತ್ತಾರೆ.

MTNL 2990ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

MTNL 2990ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

MTNL ಸಂಸ್ಥೆ ದೆಹಲಿ ವಲಯದಲ್ಲಿ ಎರಡು 1Gbps ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಹೊಂದಿದೆ. MTNL ನ FTTH 2990 ಬ್ರಾಡ್‌ಬ್ಯಾಂಡ್ ಯೋಜನೆಯು 1Gbps ಅನ್ನು 3000GB ವರೆಗೆ ನೀಡುತ್ತದೆ. ಇದು ಒಂದು ತಿಂಗಳು, ಮೂರು ತಿಂಗಳು ಮತ್ತು ಒಂದು ವರ್ಷದವರೆಗೆ ಚಂದಾದಾರರಾಗಬಹುದು. ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯು 2900ರೂ, 7970ರೂ, ಮತ್ತು 29,900ರೂ ಬೆಲೆಯನ್ನು ಹೊಂದಿದೆ. ಇದು ಆರು ತಿಂಗಳವರೆಗೆ 1000GB ಉಚಿತ ಬಳಕೆಯನ್ನು ನೀಡುತ್ತದೆ.

ACT 5999ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ACT 5999ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ACT ಬ್ರಾಡ್‌ಬ್ಯಾಂಡ್ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ಕೆಲವು ನಗರಗಳಲ್ಲಿ 1Gbps ಯೋಜನೆಯನ್ನು ನೀಡುತ್ತದೆ. ಈ ಯೋಜನೆಯು ತಿಂಗಳಿಗೆ 5,999 ರೂಪಾಯಿ ವೆಚ್ಚವಾಗುತ್ತದೆ. ಅಲ್ಲದೆ ತಿಂಗಳಿಗೆ 2,500GB ಡೇಟಾವನ್ನು ಬಂಡಲ್ ಮಾಡುತ್ತದೆ. ಇದು 5500GB ಯ FUP ಮಿತಿಯನ್ನು ಹೊಂದಿದೆ.

ಸ್ಪೆಕ್ಟ್ರಾ 1549ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ಸ್ಪೆಕ್ಟ್ರಾ 1549ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌

ಸ್ಪೆಕ್ಟ್ರಾ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳಲ್ಲಿ 1Gbps ವೇಗ ಮತ್ತು ತಿಂಗಳಿಗೆ 500GB ಡೇಟಾವನ್ನು ನೀಡುತ್ತದೆ.ಇದರಲ್ಲಿ ಬಳಕೆದಾರರು ಅರೆ-ವಾರ್ಷಿಕ ಮತ್ತು ವಾರ್ಷಿಕ ಯೋಜನೆಗಳಿಗೆ ಪಾವತಿಸಲು ಆಯ್ಕೆ ಮಾಡಿದರೆ ಅನಿಯಮಿತ ಡೇಟಾವನ್ನು ಪಡೆಯಬಹುದು. ಆಯ್ದ ಪ್ರದೇಶಗಳಲ್ಲಿ ಸ್ಪೆಕ್ಟ್ರಾ ಕೂಡ ಲಭ್ಯವಿದೆ.

Best Mobiles in India

English summary
JioFiber vs Airtel Xstream vs MTNL vs ACT broadband plans with 1Gbps speed.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X