JioHotstar ಚಂದಾದಾರರಿಗೆ ಬಿಗ್‌ಶಾಕ್!..ಶೀಘ್ರದಲ್ಲೇ ಭಾರೀ ಬೆಲೆ ಏರಿಕೆ ಸಾಧ್ಯತೆ!
ಭಾರತದ ಪ್ರಸ್ತುತ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ JioHotstar ಈಗ 300 ಮಿಲಿಯನ್ ಪೇಯ್ಡ್ ಸಬ್ಸ್ಕ್ರೈಬರ್‌ಗಳನ್ನು ಹೊಂದಿದೆ. ಕಡಿಮೆ ಬೆಲೆಯಲ್ಲಿ ಮನರಂಜನೆ ನೀಡುವ ಈ ಪ್ಲಾಟ್‌ಫಾರ್ಮ್ ಈಗ ತನ್ನ ಪ್ರೀಮಿಯಂ Ad-Free ಪ್ಲಾನ್‌ಗೆ ದರ ಏರಿಕೆ ಮಾಡುವುದಾಗಿ ಇತ್ತೀಚಿನ ವರದಿಗಳು ಸೂಚಿಸುತ್ತಿವೆ. ಈ ಬದಲಾವಣೆಯು ಪ್ರೀಮಿಯಂ JioHotstar ಗ್ರಾಹಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.! ಹಾಗಾದರೆ, ಏನಿದು ಬೆಲೆ ಏರಿಕೆಯ ಸುದ್ದಿ ಎಂಬುದನ್ನು ನೋಡೋಣ ಬನ್ನಿ.
ಜನಪ್ರಿಯ ಟೆಕ್ ಟಿಪ್‌ಸ್ಟಾರ್ ಅಭಿಷೇಕ್ ಯಾದವ್ ಅವರು Reddit ನಲ್ಲಿ ಹಂಚಿದ ಹೊಸ ಸ್ಕ್ರೀನ್‌ಶಾಟ್ ಪ್ರಕಾರ, JioHotstar ಶೀಘ್ರದಲ್ಲೇ ತನ್ನ ಪ್ರೀಮಿಯಂ Ad-Free ಪ್ಲಾನ್‌ನ ದರವನ್ನು ಹೆಚ್ಚಿಸಬಹುದು. ಪ್ರಸ್ತುತ ಪ್ರೀಮಿಯಂ Ad-Free ಮೂರು ತಿಂಗಳ ಪ್ಲಾನ್ ₹499 ಬೆಲೆ ಹೊಂದಿದೆ. ಇದರ ಬೆಲೆ ಹೊಸದಾಗಿ ₹799 ಆಗಬಹುದು. ಹಾಗೆಯೇ, ಒಂದು ವರ್ಷದ ಪ್ಲಾನ್ ಪ್ರಸ್ತುತ ₹1,499 ಕ್ಕೆ ಹೊರೆಯುತ್ತಿದ್ದು, ಇದು ಹೊಸದಾಗಿ ₹2,499 ಆಗುವ ಸಾಧ್ಯತೆ. ಇದನ್ನೇ ಹಲವಾರು ವರದಿಗಳು ಸಹ ಹೇಳಿವೆ.
ಈ ಗಣನೀಯ ಬೆಲೆ ಏರಿಕೆ ಬದಲಾವಣೆಯ ಬಳಿಕವೂ JioHotstar ಪ್ರೀಮಿಯಂ Ad-Free ಪ್ಲಾನ್‌ನ ಲಾಭಗಳಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಲಾಗಿದೆ. ಪ್ರಸ್ತುತದಂತೆ ಬಳಕೆದಾರರು ಮೊಬೈಲ್, ವೆಬ್, ಮತ್ತು ಸ್ಮಾರ್ಟ್ ಟಿವಿ ಸೇರಿದಂತೆ ವಿವಿಧ ಸಾಧನಗಳಲ್ಲಿ ಒಂದೇ ಖಾತೆಯಿಂದ ನಾಲ್ಕು ಸಾಧನಗಳಲ್ಲಿ ವೀಕ್ಷಿಸಲು ಮುಂದುವರಿಸಬಹುದು. ಆದರೆ, ಲೈವ್ ಕ್ರಿಕೆಟ್ ಅಥವಾ ಇತರೆ ಲೈವ್ ಶೋಗಳಲ್ಲಿ ಜಾಹೀರಾತುಗಳು ಮುಂದುವರಿಯುತ್ತವೆ ಎಂದು ಹೇಳಲಾಗಿದೆ.
ಕಡಿಮೆ ಬೆಲೆಯ ಜಾಹಿರಾತು ಪ್ಲಾನ್‌ಗಳು ಹಳೆಯ ಬೆಲೆಯಲ್ಲೇ ಮುಂದುವರಿಯುತ್ತವೆಯೇ?
JioHotstar ಇತರ Ad-Supported ಪ್ಲಾನ್‌ಗಳನ್ನು ಸಹ ನೀಡುತ್ತಿದೆ.
ಮೊಬೈಲ್ ಪ್ಲಾನ್: ₹149 (3 ತಿಂಗಳು) / ₹499 (1 ವರ್ಷ) ಒಂದು ಮೊಬೈಲ್ ಸಾಧನದಲ್ಲಿ ಮಾತ್ರ ಸ್ಟ್ರೀಮ್ ಮಾಡಲು ಅವಕಾಶ.
ಸೂಪರ್ ಪ್ಲಾನ್: ₹299 (3 ತಿಂಗಳು) / ₹899 (1 ವರ್ಷ) ಎರಡು ಸಾಧನಗಳಲ್ಲಿ ಒಟ್ಟಿಗೆ ಸ್ಟ್ರೀಮ್ ಮಾಡಲು ಅವಕಾಶ.
ಈ ಪ್ಲಾನ್‌ಗಳ ಬೆಲೆಗಳ ಏರಿಕೆ ಕುರಿತು ಪ್ರಸ್ತುತ ಮಾಹಿತಿ ಇಲ್ಲ. ಆದರೆ, ಈ ಬೆಲೆಗಳು ಸಹ ಈಗಿನಂತೆಯೇ ಮುಂದುವರಿಯುವ ಸಾಧ್ಯತೆ ಕಡಿಮೆ ಇರಬಹುದು.
ಬೆಲೆ ಏರಿಕೆಯ ಹಿಂದಿನ ಕಾರಣ ಏನು?
JioHotstar ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟ್ ಸ್ಟ್ರೀಮಿಂಗ್, ಚಲನಚಿತ್ರ ಪ್ರೀಮಿಯರ್‌ಗಳು, ಮತ್ತು ಒರಿಜಿನಲ್ ಶೋಗಳು ಮೂಲಕ ತನ್ನ ಪಾದಾರ್ಪಣೆ ಬಲಪಡಿಸಿದೆ. ಇದಕ್ಕಾಗಿ ಬಾರೀ ಬಂಡವಾಳವನ್ನೇ ಹೂಡಿ ಗ್ರಾಹಕರನ್ನು ಆಕರ್ಷಿಸಿದೆ. ಇದೀಗ ಹೊಸ ಬೆಲೆ ಏರಿಕೆ ಮೂಲಕ ಕಂಪನಿ ಪ್ರೀಮಿಯಂ ಗ್ರಾಹಕರಿಂದ ಹೆಚ್ಚು ಆದಾಯ ಗಳಿಸಲು ಪ್ರಯತ್ನಿಸುತ್ತಿರಬಹುದು. ಒಂದು ವೇಳೆ ಬೆಲೆ ಹೆಚ್ಚಳಗೊಂಡರೆ, ಈ ಪ್ರಯತ್ನವು JioHotstar ಪೇಯ್ಡ್ ಸಬ್ಸ್ಕ್ರೈಬರ್‌ಗಳ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಕಾದುನೋಡಬೇಕು.

ಗಮನಿಸಿ: ಈ ಮೇಲೆ ತಿಳಿಸಿದ ಈ ದರ ಏರಿಕೆ ಮಾಹಿತಿಯ ಕುರಿತು JioHotstar ನಿಂದ ಯಾವುದೇ ಅಧಿಕೃತ ಘೋಷಣೆ ಇನ್ನೂ ಬಂದಿಲ್ಲ. ಆದರೂ, Redditನಲ್ಲಿ ಹಂಚಿದ ಸ್ಕ್ರೀನ್‌ಶಾಟ್ ಪ್ರಕಾರ ಹೊಸ ದರಗಳು ಶೀಘ್ರದಲ್ಲೇ ಅನ್ವಯವಾಗಬಹುದು. ನೀವು ಪ್ರೀಮಿಯಂ ಸಬ್ಸ್ಕ್ರಿಪ್ಶನ್ ನವೀಕರಿಸುವ ಮೊದಲು ಈ ಹೊಸ ದರಗಳನ್ನು ಪರಿಶೀಲಿಸುವುದು ಸೂಕ್ತವಾಗಿರಬಹುದು. ಅಂದರೆ ಇದನ್ನು ನೀವು ಸ್ವಲ್ಪ ಎಚ್ಚರಿಕೆಯ ವದಂತಿಯ ಸುದ್ದಿಯಾಗಿಯೂ ಸಹ ನೋಡಬಹುದು. ಅಲ್ಲವೆ?


Click it and Unblock the Notifications








