Home
ಸುದ್ದಿಜಾಲ

ಜಿಯೋದಿಂದ ಮೌನದ ಉಡುಗೊರೆ: ಕೆಲ ಗ್ರಾಹಕರಿಗೆ ದೊರೆತಿದೆ ಬಂಪರ್ ಆಫರ್!

ಭಾರತದ ನಂ.1 ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ತನ್ನ ಕೆಲ ಆಯ್ದ ಗ್ರಾಹಕರಿಗೆ ಯಾವುದೇ ಮುಂಚಿತ ಘೋಷಣೆ ಇಲ್ಲದೆ ಹೊಸ ಕೊಡುಗೆಯೊಂದನ್ನು ನೀಡುತ್ತಿರುವುದು ಇದೀಗ ಚರ್ಚೆಯ ವಿಷಯವಾಗಿದೆ. ಕೆಲವು ಜಿಯೋ ಬಳಕೆದಾರರ JioHotstar ಖಾತೆಗಳು ಸ್ವಯಂಚಾಲಿತವಾಗಿ ಪ್ರೀಮಿಯಂಗೆ ಅಪ್‌ಗ್ರೇಡ್ ಆಗಿದ್ದು, ಮೂರು ತಿಂಗಳ ಕಾಲ ಉಚಿತವಾಗಿ ಪ್ರೀಮಿಯಂ ವಿಷಯವನ್ನು ವೀಕ್ಷಿಸುವ ಅವಕಾಶ ದೊರೆಯುತ್ತಿದೆ.! ಈ ಬದಲಾವಣೆ ಸಂಪೂರ್ಣವಾಗಿ "ಸೈಲೆಂಟ್ ರೋಲೌಟ್" ರೂಪದಲ್ಲಿ ನಡೆಯುತ್ತಿದ್ದು, ಕಂಪನಿಯಿಂದ ಅಧಿಕೃತ ಪ್ರಕಟಣೆ ಇನ್ನೂ ಬಂದಿಲ್ಲ.

ಹೌದು, ಬಹುಶಃ ಹೊಸ ವರ್ಷದ ಪ್ರಚಾರದ ಭಾಗವಾಗಿ ರಿಲಯನ್ಸ್ ಜಿಯೋ ಇಂತಹದೊಂದು ಕೊಡುಗೆಯನ್ನು ನೀಡುತ್ತಿರಬಹುದು. ಈ ಪ್ರಚಾರದ ಭಾಗವಾಗಿರುವ ಬಳಕೆದಾರರು ಹೇಳುವಂತೆ, ಜಿಯೋಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಯಿಂದ JioHotstar ಆಪ್‌ಗೆ ಲಾಗಿನ್ ಮಾಡಿದ ತಕ್ಷಣವೇ ಖಾತೆಯಲ್ಲಿ "Premium" ಬ್ಯಾಡ್ಜ್ ಕಾಣಿಸುತ್ತಿದೆ. ಇದಕ್ಕಾಗಿ ಯಾವುದೇ ವಿಶೇಷ ರೀಚಾರ್ಜ್ ಪ್ಲಾನ್, ಕೂಪನ್ ಕೋಡ್ ಅಥವಾ ಕೈಯಾರೆ ಸಕ್ರಿಯಗೊಳಿಸುವ ಪ್ರಕ್ರಿಯೆಯ ಅಗತ್ಯವಿಲ್ಲ. ಎಲ್ಲವೂ ಸ್ವಯಂಚಾಲಿತವಾಗಿ ಸಕ್ರಿಯವಾಗುತ್ತಿರುವುದು ಬಳಕೆದಾರರಿಗೆ ಅಚ್ಚರಿ ಮೂಡಿಸಿದೆ.

ಉಚಿತವಾಗಿ ಸಿಗುತ್ತಿರುವ ಈ JioHotstar ಪ್ರೀಮಿಯಂ ಪ್ರವೇಶವು ಮೂರು ತಿಂಗಳ ಕಾಲ ಮಾನ್ಯವಾಗಿದ್ದು, ಸಾಮಾನ್ಯ ಪಾವತಿಸಿದ ಚಂದಾದಾರಿಕೆಯಲ್ಲಿ ದೊರೆಯುವ ಎಲ್ಲ ಪ್ರಮುಖ ಸೌಲಭ್ಯಗಳನ್ನೇ ಒಳಗೊಂಡಿದೆ. ಜಾಹೀರಾತು ರಹಿತ ವೀಕ್ಷಣೆ, ಅಂತರರಾಷ್ಟ್ರೀಯ ಚಲನಚಿತ್ರಗಳು ಮತ್ತು ಟಿವಿ ಶೋಗಳ ಪ್ರವೇಶ, ಲೈವ್ ಕ್ರೀಡಾ ಪಂದ್ಯಗಳ ಸ್ಟ್ರೀಮಿಂಗ್ ಹಾಗೂ ಉತ್ತಮ ವಿಡಿಯೋ ಮತ್ತು ಆಡಿಯೋ ಗುಣಮಟ್ಟದ ಆಯ್ಕೆಗಳು ಇದರಲ್ಲಿವೆ. ಮುಖ್ಯವಾಗಿ, ಈ ಅವಧಿಯಲ್ಲಿ ಯಾವುದೇ ಶುಲ್ಕವನ್ನು ಬಳಕೆದಾರರಿಂದ ಪಡೆಯುತ್ತಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ.

ಜಿಯೋದಿಂದ ಮೌನದ ಉಡುಗೊರೆ: ಕೆಲ ಗ್ರಾಹಕರಿಗೆ ದೊರೆತಿದೆ ಬಂಪರ್ ಆಫರ್!

ನಿಮಗೂ ಲಭ್ಯವಿದೆಯೇ ಎಂಬುದನ್ನು ಚೆಕ್ ಮಾಡಿ.
ಉಚಿತವಾಗಿ ಸಿಗುತ್ತಿರುವ ಈ JioHotstar ಪ್ರೀಮಿಯಂ ಪ್ರವೇಶವು ನಿಮಗೂ ಸಹ ಲಭ್ಯವಿರಬಹುದು. ನಿಮಗೂ ಈ ಪ್ರೀಮಿಯಂ ಅಪ್‌ಗ್ರೇಡ್ ಲಭ್ಯವಿದೆಯೇ ಎಂಬುದನ್ನು ತಿಳಿಯಲು, JioHotstar ಆಪ್ ತೆರಳಿ ನಿಮ್ಮ ನೋಂದಾಯಿತ ಜಿಯೋ ಮೊಬೈಲ್ ಸಂಖ್ಯೆಯಿಂದ ಲಾಗಿನ್ ಮಾಡುವುದು ಸಾಕು. ಖಾತೆಯಲ್ಲಿ ಪ್ರೀಮಿಯಂ ಸಕ್ರಿಯವಾಗಿದ್ದರೆ ಪ್ರೊಫೈಲ್ ವಿಭಾಗದಲ್ಲಿ "Premium" ಎಂಬ ಗುರುತು ಸ್ಪಷ್ಟವಾಗಿ ಕಾಣಿಸುತ್ತದೆ. ಅದು ಕಾಣಿಸದಿದ್ದರೆ, ಈ ಹಂತದಲ್ಲಿ ನಿಮ್ಮ ಖಾತೆ ಈ ಪ್ರಚಾರಕ್ಕೆ ಆಯ್ಕೆಯಾಗಿಲ್ಲ ಎಂದು ತಿಳಿದುಕೊಳ್ಳಬಹುದು. ಇನ್ನು ಈ ಉಚಿತ ಪ್ರೀಮಿಯಂ ಸೌಲಭ್ಯಕ್ಕೆ ಯಾರು ಅರ್ಹರು, ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಮತ್ತು ಇದು ಎಷ್ಟು ದಿನಗಳವರೆಗೆ ಮುಂದುವರಿಯಲಿದೆ ಎಂಬ ಬಗ್ಗೆ ರಿಲಯನ್ಸ್ ಜಿಯೋ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಇದು ಸೀಮಿತ ಬಳಕೆದಾರರಿಗೆ ಮಾತ್ರ ನೀಡಲಾಗುತ್ತಿರುವ ವಿಶೇಷ ಪ್ರಚಾರವಾಗಿರಬಹುದು.

ಗಮನಿಸುವುದಾದರೆ, ಜಿಯೋ ಈಗಾಗಲೇ ಕೆಲವು ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ಗಳಲ್ಲಿ JioHotstar ಚಂದಾದಾರಿಕೆಯನ್ನು ಸೇರಿಸಿ ನೀಡುತ್ತಿದೆ. ₹949 ಮತ್ತು ₹1,029 ಮೌಲ್ಯದ ಪ್ಲಾನ್‌ಗಳಲ್ಲಿ ಮೂರು ತಿಂಗಳ JioHotstar ಪ್ರವೇಶ ಲಭ್ಯವಿದೆ. ಅದೇ ರೀತಿ, ₹3,599 ಪ್ಲಾನ್‌ನಲ್ಲಿ ಮೂರು ತಿಂಗಳು ಮತ್ತು ₹3,999 ಪ್ಲಾನ್‌ನಲ್ಲಿ ಒಂದು ವರ್ಷದ ಪೂರ್ಣ JioHotstar ಚಂದಾದಾರಿಕೆಯನ್ನು ಜಿಯೋ ನೀಡುತ್ತಿದೆ. ಒಟ್ಟಾರೆಯಾಗಿ, ಭಾರತೀಯ ಬಳಕೆದಾರರ ಡಿಜಿಟಲ್ ಮನರಂಜನಾ ಅನುಭವವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಜಿಯೋ ಮತ್ತಷ್ಟು ಕಾರ್ಯನಿರ್ವಹಿಸುತ್ತಿರುವ ನಿರೀಕ್ಷೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ಮತ್ತು ಈಗಾಗಲೇ ನಿಮಗೂ ಈ ಕೊಡುಗೆ ಲಭ್ಯವಾಗಿದ್ದರೆ ಹೌದು ಎಂದು ಕಾಮೆಂಟ್ ಮಾಡಿ.

Best Mobiles in India

English summary
Reliance Jio has silently rolled out a free offer for select users, automatically upgrading their JioHotstar accounts to premium and giving access to paid content for three months without any official announcement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+