ವಾವ್..!! Jio ಮತ್ತು Hotstar ಸಮ್ಮಿಲನ; ಇನ್ಮುಂದೆ ಒಂದೇ ಕಡೆ ಲಭ್ಯ.. ಅಗ್ಗದ ಬೆಲೆಗೆ ಹೊಸ ಪ್ಲಾನ್ಸ್
JioHotstar Launched in India: ಭಾರತದಲ್ಲಿ ಕೊನೆಗೂ ಜಿಯೋಹಾಟ್‌ಸ್ಟಾರ್ (JioHotstar) ಅಧಿಕೃತವಾಗಿ ಬಿಡುಗಡೆಯಾಗಿದೆ! ಈ ಮೂಲಕ ಜಿಯೋ ಸಿನಿಮಾ (JioCinema) ಮತ್ತು ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar) ವಿಲೀನಗೊಂಡಿವೆ. ಹೌದು, ಜಿಯೋ ಸಿನಿಮಾ ಮತ್ತು ಡಿಸ್ನಿ ಹಾಟ್‌ಸ್ಟಾರ್ ಎರಡು ವಿಲೀನಗೊಂಡು, ಹೊಸ ಜಿಯೋಹಾಟ್‌ಸ್ಟಾರ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನಾವರಣಗೊಂಡಿದೆ. ಈ ಬಗ್ಗೆ ಜಿಯೋ ಟ್ವಿಟ್ಟರ್ ಮೂಲಕ ಮಾಹಿತಿ ಪ್ರಕಟಿಸಿದೆ. ಈ ಹೊಸ ಆಪ್ ಯಾವ ಫೀಚರ್ ಒಳಗೊಂಡಿದೆ, ಹೊಸ ಪ್ಲಾನ್ ಬೆಲೆ ಮತ್ತು ಪ್ರಯೋಜನಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು, ಪ್ರಸ್ತುತ ಒಟಿಟಿ (OTT) ವೇಗವಾಗಿ ಬೆಳೆಯುತ್ತಿದೆ. ಈ ಡಿಜಿಟಲ್ ದುನಿಯಾಕ್ಕೆ ಇಂದಿನಿಂದ ಜಿಯೋಹಾಟ್‌ಸ್ಟಾರ್ (JioHotstar) ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಎಂಟ್ರಿ ಕೊಟ್ಟಿದೆ. ಇತ್ತೀಚೆಗೆ ವಯಾಕಾಮ್18 ಮತ್ತು ಸ್ಟಾರ್ ಇಂಡಿಯಾ ವಿಲೀನದೊಂದಿಗೆ ರೂಪುಗೊಂಡ ಜಿಯೋಸ್ಟಾರ್, ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಒಟ್ಟುಗೂಡಿಸಿ 'ಜಿಯೋಹಾಟ್‌ಸ್ಟಾರ್' ಎಂದು ಹೆಸರಿಸಲಾಗಿದೆ. ಈ ಮೂಲಕ ರಿಲಯನ್ಸ್ ಒಡೆತನದ ವಯಾಕಾಮ್18 ಮತ್ತು ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವಿನ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಇದೀಗ ಎರಡೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಜಿಯೋ ಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಒಂದೇ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿವೆ.

500 ಮಿಲಿಯನ್‌ಗಿಂತ ಅಧಿಕ ಬಳಕೆದಾರರು!
ಪ್ರಸ್ತುತ ಲಭ್ಯವಿರುವ ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರು ಈ ಹೊಸ ಸೇವೆಗಳ ಪ್ರಯೋಜನೆಗಳ್ನು ಮುಂದುವರಿಸಬಹುದು. ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸಹ ಆಯ್ಕೆ ಮಾಡಬಹುದು. ಇದೀಗ, 3 ಲಕ್ಷ ಗಂಟೆಗಳ ಮನರಂಜನೆ, ಲೈವ್ ಸ್ಪೋರ್ಟ್ಸ್ ಕವರೇಜ್ ಮತ್ತು 500 ಮಿಲಿಯನ್‌ಗಿಂತ ಅಧಿಕ ಬಳಕೆದಾರರೊಂದಿಗೆ ಜಿಯೋಹಾಟ್‌ಸ್ಟಾರ್ ಗ್ರಾಹಕರಿಗೆ ಹೊಸ ರೀತಿಯಲ್ಲಿ ಮನರಂಜನೆ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
149 ರೂ.ಗಳ ಸೂಪರ್ ಪ್ಲಾನ್
ಜಿಯೋಹಾಟ್‌ಸ್ಟಾರ್ ಸಿಂಗಲ್ ಡಿವೈಸ್ ಬೆಂಬಲದೊಂದಿಗೆ ಎರಡು ಯೋಜನೆಗಳನ್ನು ಪರಿಚಯಿಸಿದೆ. ಈ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಾಗಿ ಚಂದಾದಾರಿಕೆ ಪ್ಲಾನ್‌ಗಳು 149 ರೂ.ನೀಂದ ಪ್ರಾರಂಭವಾಗುತ್ತವೆ. ಈ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆ ಪ್ಲಾನ್‌ಗಳ ಮಾಹಿತಿ ಇಲ್ಲಿದೆ ನೋಡಿ.
149 ರೂ. ಚಂದಾದಾರಿಕೆ ಪ್ಲಾನ್
ಈ ಮೊಬೈಲ್ ಪ್ಲಾನ್ ಆರಂಭಿಕ ಬೆಲೆ 149 ರೂ. ಆಗಿದೆ. ಇದು 3 ತಿಂಗಳ ವ್ಯಾಲಿಡಿಟಿ ಹೊಂದಿದೆ. ಬಳಕೆದಾರರು ಜಿಯೋಹಾಟ್‌ಸ್ಟಾರ್ ವೀಕ್ಷಿಸುವಾಗ ಮಧ್ಯದಲ್ಲಿ ಜಾಹೀರಾತು ಸಹ ಬರುತ್ತವೆ. ಇದು ಆಡ್ ಸಪೋರ್ಟ್ಡ್ ಪ್ಲಾನ್ ಆಗಿದೆ. ಜೊತೆಗೆ ಈ ಯೋಜನೆಯ ಮೂಲಕ ಕೇವಲ ಒಂದೇ ಫೋನಿನಲ್ಲಿ ಮಾತ್ರವೇ ಸ್ಟ್ರೀಮಿಂಗ್ ಮಾಡಬಹುದು.
499 ರೂ. ಚಂದಾದಾರಿಕೆ ಯೋಜನೆ
ಈ ಪ್ಲಾನ್ ಬೆಲೆ 499 ರೂ. ಆಗಿದೆ. ಇದು ಒಂದು ವರ್ಷದ ವ್ಯಾಲಿಡಿಟಿಯೊಮದಿಗೆ ಬರುತ್ತದೆ. ಇದು ಆಡ್ ಸಪೋರ್ಟ್ಡ್ ಪ್ಲಾನ್ ಆಗಿದೆ. ನೀವು ಕಂಟೆಂಟ್ ಅನ್ನು ಮೊಬೈಲ್ ಒಂದರಲ್ಲಿ ಮಾತ್ರ ವೀಕ್ಷಿಸಬಹುದು.
ಟೂ ಡಿವೈಸೆಸ್ ಸಪೋರ್ಟ್ಡ್ ಯೋಜನೆ
ಕಂಪನಿಯು ಟೂ ಡಿವೈಸಸ್ ಸಪೋರ್ಟ್ ಮಾಡುವ ಎರಡು ಸೂಪರ್ ಯೋಜನೆಗಳನ್ನು ಪರಿಚಯಿಸಿದೆ. ಮೊದಲ ಪ್ಲಾನ್ ಬೆಲೆ 299 ರೂ. ಆಗಿದೆ. ಈ ಯೋಜನೆಯು 3 ತಿಂಗಳ ವ್ಯಾಲಿಡಿಟಿ ಹೊಂದಿದೆ. ನೀವು ಈ ಯೋಜನೆಯೊಂದಿಗೆ ವಿಷಯವನ್ನು ವೀಕ್ಷಿಸುವಾಗ ಜಾಹೀರಾತು ಬರುತ್ತವೆ. ಹಾಗೆಗೇ 899 ರೂ. ಚಂದಾದಾರಿಕೆ ಪ್ಲಾನ್. ಎರಡು ಮೊಬೈಲ್‌ಗಳಿಗೆ ಸಪೋರ್ಟ್ ಮಾಡುವ ಈ ಯೋಜನೆಯ ಬೆಲೆ 899 ರೂ. ಆಗಿದೆ. ಇದು ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದು ಆಡ್ ಸಪೋರ್ಟ್ಡ್ ಪ್ಲಾನ್ ಆಗಿದೆ.
ಇದರೊಂದಿಗೆ, ಜಿಯೋಹಾಟ್‌ಸ್ಟಾರ್ ಜಾಹೀರಾತು ಮುಕ್ತ ವಿಷಯಕ್ಕಾಗಿ 3 ಪ್ರೀಮಿಯಂ ಪ್ಲಾನ್‌ಗಳನ್ನು ಒದಗಿಸಿದೆ. ಈ ಯೋಜನೆಯ ಬೆಲೆ 299 ರೂ.ನಿಂದ ಪ್ರಾರಂಭವಾಗುತ್ತದೆ. ಇದು ಒಂದು ತಿಂಗಳ ವ್ಯಾಲಿಡಿಟಿ ಹೊಂದಿದೆ. ಮೂರು ತಿಂಗಳ ಪ್ರೀಮಿಯಂ ಪ್ಲಾನ್ ಬೆಲೆ 499 ರೂ. ಆಗಿದೆ. ಹಾಗೆಯೇ ಒಂದು ವರ್ಷದ ವ್ಯಾಲಿಡಿಟಿ ಪ್ಲಾನ್ ಬೆಲೆ 1,499 ರೂ. ಆಗಿದೆ. ನೀವು, ಈ ಯೋಜನೆಯ ಅಡಿಯಲ್ಲಿ ನಾಲ್ಕು ಸಾಧನಗಳಲ್ಲಿ ಕಂಟೆಂಟ್ ವೀಕ್ಷಿಸಬಹುದು.


Click it and Unblock the Notifications








