Home
ಸುದ್ದಿಜಾಲ

ಏನಿದು ಜಿಯೋಮೋಟಿವ್‌ ಡಿವೈಸ್‌! ಇದರಿಂದ ಏನೆಲ್ಲಾ ಲಾಭವಾಗಲಿದೆ ಗೊತ್ತಾ?

ಜಿಯೋ ಕಂಪೆನಿ ತನ್ನ ಜಿಯೋಮೋಟಿವ್‌ ಡಿವೈಸ್‌ ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ಪ್ಲಗ್-ಎನ್-ಪ್ಲೇ ವೆಹಿಕಲ್ 4G GPS ಟ್ರ್ಯಾಕರ್ ಆಗಿದ್ದು, ಕಾರು ಮಾಲೀಕರಿಗೆ ಉಪಯೋಗಕ್ಕೆ ಬರಲಿದೆ. ಇದು ಕಾರಿನ OBD ಪೋರ್ಟ್‌ಗೆ ಕನೆಕ್ಟ್‌ ಆಗಲಿದ್ದು, Plug-n-Play ಡಿವೈಸ್‌ ಆಗಿ ಕಾರ್ಯನಿರ್ವಹಿಸಲಿದೆ.

ಹೌದು, ಜಿಯೋಮೋಟಿವ್‌ ಡಿವೈಸ್‌ ಭಾರತದಲ್ಲಿ ಲಾಂಚ್‌ ಆಗಿದೆ. ಕಾರು ಮಾಲೀಕರಿಗೆ ಲೊಕೇಶನ್‌ ಟ್ರ್ಯಾಕಿಂಗ್‌, ಜಿಯೋ ಮತ್ತು ಟೈಂ ಫೆನ್ಸಿಂಗ್‌ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ವೆಹಿಕಲ್‌ ಹೆಲ್ತ್‌, ಆಂಟಿ-ಟೋ ಮತ್ತು ಕಳ್ಳತನದ ಎಚ್ಚರಿಕೆಯನ್ನು ನೀಡುವ ಕೆಲಸವನ್ನು ಇದು ಮಾಡಲಿದೆ. ಹಾಗಾದ್ರೆ ಜಿಯೋಮೋಟಿವ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ಜಿಯೋಮೋಟಿವ್‌ ಡಿವೈಸ್‌! ಇದರಿಂದ ಏನೆಲ್ಲಾ ಲಾಭವಾಗಲಿದೆ ಗೊತ್ತಾ?

ಜಿಯೋಮೋಟಿವ್‌ (2023) ಫೀಚರ್ಸ್‌ ಹೇಗಿದೆ?
ಜಿಯೋಮೋಟಿವ್ ಎಂಬುದು ಪ್ಲಗ್-ಎನ್-ಪ್ಲೇ ಡಿವೈಸ್‌ ಆಗಿದೆ. ಇದನ್ನು ಯಾವುದೇ ಕಾರಿನ OBD-II ಪೋರ್ಟ್‌ಗೆ ಕನೆಕ್ಟ್‌ ಮಾಡಬಹುದಾಗಿದೆ. ಈ ಪೋರ್ಟ್ ಸ್ಟೀರಿಂಗ್ ವ್ಹೀಲ್‌ನ ಅಡಿಯಲ್ಲಿ ಎಲ್ಲಾ ಕಾರುಗಳಲ್ಲಿಯೂ ಲಭ್ಯವಿರಲಿದೆ. ಇನ್ನು ಈ ಸ್ಮಾರ್ಟ್‌ ಡಿವೈಸ್‌ ಅನ್ನು ಇನ್‌ಸ್ಟಾಲ್‌ ಮಾಡುವುದಕ್ಕೆ ನಿಮಗೆ ಯಾವುದೇ ತಂತ್ರಜ್ಞರ ಅಗತ್ಯವಿಲ್ಲ. ಇನ್ನು ಈ ಡಿವೈಸ್‌ ರಿಯಲ್‌ಟೈಮ್ ವೆಹಿಕಲ್ ಟ್ರ್ಯಾಕಿಂಗ್ ಆಗಿದೆ. ಇದಕ್ಕಾಗಿ JioThings ಅಪ್ಲಿಕೇಶನ್‌ನ ಸಹಾಯ ಪಡೆದುಕೊಳ್ಳಲಿದೆ.

ಇದಲ್ಲದೆ ಈ ಡಿವೈಸ್‌ ಜಿಯೋ-ಫೆನ್ಸಿಂಗ್ ಮತ್ತು ಟೈಮ್ ಫೆನ್ಸಿಂಗ್ ಕ್ರಿಯೆಟ್‌ ಮಾಡಲು ಅವಕಾಶ ನೀಡಲಿದೆ. ಇದರ ಮೂಲಕ ಎಕ್ಸಿಟ್‌ನಲ್ಲಿ ಎಮರ್ಜೆನ್ಸಿ ಆಲರ್ಟ್‌ಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ನೀಡಲಿದೆ. ಇನ್ನು ಜಿಯೋಮೋಟಿವ್‌ ಡಿವೈಸ್‌ Jio SIM ನೊಂದಿಗೆ ಮಾತ್ರ ಕಾರ್ಯನಿರ್ವಹಿಸಲಿದೆ. ಹಾಗಂತ ನೀವು ಇದಕ್ಕಾಗಿಯೇ ಹೆಚ್ಚುವರಿ ಜಿಯೋ ಸಿಮ್‌ ಪಡೆದುಕೊಳ್ಳಬೇಕಾದ ಅಗತ್ಯವಿಲ್ಲ. ಬದಲಿಗೆ ನಿಮ್ಮ ಪ್ರೈಮರಿ ಜಿಯೋ ಸ್ಮಾರ್ಟ್‌ಫೋನ್‌ ಪ್ಲಾನ್‌ ಅನ್ನು ಜಿಯೋಮೋಟಿವ್‌ಗೆ ಕೂಡ ವಿಸ್ತರಿಸಲ್ಪಡುತ್ತದೆ.

ಏನಿದು ಜಿಯೋಮೋಟಿವ್‌ ಡಿವೈಸ್‌! ಇದರಿಂದ ಏನೆಲ್ಲಾ ಲಾಭವಾಗಲಿದೆ ಗೊತ್ತಾ?

ಜಿಯೋಮೋಟಿವ್‌ ಡಿವೈಸ್‌ ಮೂಲಕ ವೆಹಿಕಲ್‌ಗಳನ್ನು ಮೇಲ್ವಿಚಾರಣೆ ಮಾಡಲಿದೆ. ಇದು 100s DTC ಆಲರ್ಟ್‌ಗಳೊಂದಿಗೆ ಕಾರಿನ ಹೆಲ್ತ್‌ ವಿವರಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್ಡೇಟ್‌ ಮಾಡಲಿದೆ. ಇದರೊಂದಿಗೆ ಕಾರು ಚಾಲನೆ ಮಾಡುವಾಗ ಡ್ರೈವರ್‌ನ ಡ್ರೈವಿಂಗ್ ಬಿಹೇವಿಯರ್ ಅನಾಲಿಸಿಸ್ ಅನ್ನು ಕೂಡ ಅಪ್ಲಿಕೇಶನ್‌ನಲ್ಲಿ ಅಪ್ಡೇಟ್‌ ಮಾಡಲಿದೆ. ಇದರಿಂದ ನಿಮ್ಮ ಕಾರನ್ನು ಚಲಾಯಿಸುತ್ತಿರುವ ಚಾಲಕ ಹೇಗೆ ನಿಮ್ಮ ಕಾರನ್ನು ಉಪಯೋಗಿಸುತ್ತಿದ್ದಾರೆ ಅನ್ನೊದನ್ನ ತಿಳಿದುಕೊಳ್ಳಬಹುದು.

ಇನ್ನು ಈ ಡಿವೈಸ್‌ ಇನ್-ಕಾರ್ ವೈ-ಫೈ, ಟೋವಿಂಗ್, ಟ್ಯಾಂಪರಿಂಗ್ ಮತ್ತು ಆಕ್ಸಿಡೆಂಟ್‌ ಆಲರ್ಟ್‌, ಸ್ಪೀಡ್‌ ಟ್ರ್ಯಾಕಿಂಗ್, 10-ಸೆಕೆಂಡ್ ಲೇಟೆನ್ಸಿಯಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಡಿವೈಸ್‌ ಒಂದು ವರ್ಷದವರೆಗೆ ಉಚಿತ ಚಂದಾದಾರಿಕೆಯನ್ನು ನೀಡಲಿದೆ. ನಂತರದ ದಿನಗಳಲ್ಲಿ ವರ್ಷಕ್ಕೆ 599ರೂ.ಬೆಲೆಯ ಚಂದಾದಾರಿಕೆಯನ್ನು ಪಾವತಿಸಬೇಕಾಗುತ್ತದೆ.

ಏನಿದು ಜಿಯೋಮೋಟಿವ್‌ ಡಿವೈಸ್‌! ಇದರಿಂದ ಏನೆಲ್ಲಾ ಲಾಭವಾಗಲಿದೆ ಗೊತ್ತಾ?

ಭಾರತದಲ್ಲಿ ಜಿಯೋಮೋಟಿವ್‌ (2023) ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಜಿಯೋಮೋಟಿವ್‌ 4,999ರೂ ಬೆಲೆಯನ್ನು ಹೊಂದಿದೆ. ಇದು ಅಮೆಜಾನ್‌ ಮತ್ತು ರಿಲಯನ್ಸ್‌ ಡಿಜಿಟಲ್‌ ಇ-ಕಾಮರ್ಸ್ ಸೈಟ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ. ಈ ಡಿವೈಸ್‌ Jio.com ಮತ್ತು ಇತರ ಔಟ್‌ಲೆಟ್‌ಗಳಲ್ಲಿಯೂ ಲಭ್ಯವಿರುತ್ತದೆ.

ಇನ್ನು ಇತ್ತೀಚಿಗೆ ಜಿಯೋ ಕಂಪೆನಿ ಭಾರತದಲ್ಲಿ ಹೊಸ ಜಿಯೋಫೋನ್‌ ಪ್ರೈಮಾ 4G ಫೀಚರ್‌ ಫೋನ್‌ ಪರಿಚಯಿಸಿದೆ. ಈ ಫೀಚರ್‌ ಫೋನ್‌ 2.4 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 320×240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ TFT ಡಿಸ್‌ಪ್ಲೇ ಅಗಿದೆ. ಇನ್ನು ಫೋನ್‌ ದುಂಡಾದ ವಿನ್ಯಾಸವನ್ನು ಹೊಂದಿದ್ದು, ಹಿಂಭಾಗದ ಪ್ಯಾನೆಲ್‌ನಲ್ಲಿ ಎರಡು ಕೇಂದ್ರೀಕೃತ ವಲಯಗಳ ಮಿತಿಯೊಳಗೆ ಜಿಯೋ ಲೋಗೋವನ್ನು ಇರಿಸಲಾಗಿದೆ. ಇದು ದುಂಡಾದ ಅಂಚಿನ ವಿನ್ಯಾಸದೊಂದಿಗೆ ಎಂಟ್ರಿ ನೀಡಿದೆ. ಈ ಫೋನ್‌ 4G ARM ಕಾರ್ಟೆಕ್ಸ್ A53 ಪ್ರೊಸೆಸರ್‌ ಹೊಂದಿದ್ದು, KaiOS ನಲ್ಲಿ ರನ್‌ ಆಗಲಿದೆ. ಮೆಮೊರಿ ಕಾರ್ಡ್‌ ಮೂಲಕ 128GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇನ್ನು ಫೋನ್‌ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಮುಂಬಾಗದ ಕ್ಯಾಮೆರಾ 0.3MP ಸೆನ್ಸಾರ್‌ ಪಡೆದಿದೆ.

Best Mobiles in India

English summary
JioMotive (2023) Plug-n-Play Vehicle 4G GPS Tracker Launched in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+