ಶೀಘ್ರದಲ್ಲೇ ಅಗ್ಗದ ಬೆಲೆಯ ಜಿಯೋ-ಗೂಗಲ್‌ 5G ಸ್ಮಾರ್ಟ್‌ಫೋನ್ ಬಿಡುಗಡೆ!

|

ಭಾರತದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ರಿಲಯನ್ಸ್‌ ಜಿಯೋ ಸಂಸ್ಥೆಯ ರಿಲಯನ್ಸ್‌ನ ವಾರ್ಷಿಕ ಸಾಮಾನ್ಯ ಸಭೆ (AGM) 2021 ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ 44 ನೇ ಎಜಿಎಂ ಅನ್ನು ಈ ತಿಂಗಳ ಕೊನೆಯಲ್ಲಿ ಜೂನ್ 24 ರಂದು ಮಧ್ಯಾಹ್ನ 2ಗಂಟೆಗೆ ಆಯೋಜಿಸಿದೆ. ಇನ್ನು ಈ ಸಭೆಯಲ್ಲಿ ಹಲವು ಮಹತ್ತರ ತಿರ್ಮಾನಗಳು ಹೊರ ಬೀಳೂವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಕೈಗೆಟುಕುವ ಬೆಲೆಯಲ್ಲಿ ಜಿಯೋಫೋನ್ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ರಿಲಯನ್ಸನ

ಹೌದು, ಈ ವರ್ಷದ ರಿಲಯನ್ಸನ ವಾರ್ಷಿಕ ಸಾಮಾನ್ಯ ಸಭೆಗೆ ದಿನಾಂಕ ನಿಗಧಿಯಾಗಿದೆ. ಇನ್ನು ಈ ಸಭೆಯಲ್ಲಿ ಜಿಯೋ-ಗೂಗಲ್ 5G ಸ್ಮಾರ್ಟ್‌ಫೋನ್, ಜಿಯೋ ಲ್ಯಾಪ್ಟಾಪ್, ಜಿಯೋ 5G ರೋಲ್ ಔಟ್‌ ಟೈಮ್ಲೈನ್, ಮತ್ತು ಟೆಲ್ಕೊ 5G ಸಂಬಂಧಿತ ಸೇವೆಗಳ ಪ್ರಕಟಣೆಗಲ ಬಗ್ಗೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಎಜಿಎಂ 2021 ರಲ್ಲಿ ಷೇರುದಾರರನ್ನು ಮತ್ತು ಇತರರನ್ನು ಉದ್ದೇಶಿಸಿ ಮಾತನಾಡಬಹುದು. ಇನ್ನು ಈ ಆನ್‌ಲೈನ್ ಈವೆಂಟ್ ರಿಲಯನ್ಸ್‌ನ ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಪ್ರಸಾರವಾಗುವ ನಿರೀಕ್ಷೆಯಿದೆ. ಹಾಗಾದ್ರೆ ಈ ಸಭೆಯಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋಫೋನ್ 5G, ಜಿಯೋಬುಕ್ ಲಾಂಚ್ ಸಾಧ್ಯತೆ

ಜಿಯೋಫೋನ್ 5G, ಜಿಯೋಬುಕ್ ಲಾಂಚ್ ಸಾಧ್ಯತೆ

ವಾರ್ಷಿಕ ಸಭೆಯಲ್ಲಿ, ಅಂಬಾನಿ ಜಿಯೋ 5G ಯ ಉಡಾವಣಾ ದಿನಾಂಕ / ರೋಲ್ ಔಟ್ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಕಳೆದ 2020 ರ ಡಿಸೆಂಬರ್‌ನಲ್ಲಿ ಕಂಪನಿಯು 2021 ರ ಮಧ್ಯಭಾಗದಲ್ಲಿ ಜಿಯೋ 5G ಸೇವೆಗಳು ಹೊರಹೊಮ್ಮಲಿವೆ ಎಂದು ಘೋಷಿಸಿತು. ಸದ್ಯ ಇದೀಗ ರಿಲಯನ್ಸ್ ಎಜಿಎಂ 2021 ಅನ್ನು ಆಯೋಜಿಸುತ್ತದೆ. ಈ ಸಮ್ಮೇಳನದಲ್ಲಿಯೇ 5G ಲಭ್ಯತೆ ಬಗ್ಗೆ ಘೋಷಣೆ ಆಗಲಿದೆಯಾ ಅನ್ನೊ ನಿರೀಕ್ಷೆ ಇದೆ. ರಿಲಯನ್ಸ್ ಜಿಯೋ ಈಗಾಗಲೇ ತನ್ನ 5 ಜಿ ಪ್ರಯೋಗಗಳಲ್ಲಿ 1 ಜಿಬಿಪಿಎಸ್ ವೇಗವನ್ನು ಸಾಧಿಸಿದೆ.

5G

ಇನ್ನು ರಿಲಯನ್ಸ್‌ ಎಜಿಎಂ 2021 ರ ಅತಿದೊಡ್ಡ ಪ್ರಕಟಣೆಗಳಲ್ಲಿ ಜಿಯೋ ಮತ್ತು ಗೂಗಲ್ ಒಟ್ಟಾಗಿ ವಿನ್ಯಾಸಗೊಳಿಸಿದ 5G ಸ್ಮಾರ್ಟ್‌ಫೋನ್ ಕೂಡ ಒಂದಾಗಿದೆ. ಕೈಗೆಟುಕುವ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್ ಅಭಿವೃದ್ಧಿಪಡಿಸಲು ಟೆಕ್ ದೈತ್ಯ ರಿಲಯನ್ಸ್ ಜಿಯೋ ಜೊತೆ ಗೂಗಲ್‌ ಕೂಡ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಅದು ಈ ವರ್ಷದ ಸಭೆಯಲ್ಲಿ ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ರಿಲಯನ್ಸ್

ಇದಲ್ಲದೆ ರಿಲಯನ್ಸ್ ಈ ವರ್ಷ ತನ್ನ ಎಜಿಎಂನಲ್ಲಿ ಕೈಗೆಟುಕುವ ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಕೈಗೆಟುಕುವ ಲ್ಯಾಪ್‌ಟಾಪ್ ಅನ್ನು ಜಿಯೋಬುಕ್ ಎಂದು ಕರೆಯಲಾಗುತ್ತದೆ. ಈ ವರ್ಷದ ಆರಂಭದಲ್ಲಿ, ಜಿಯೋ ಬುಕ್‌ಗೆ ಕಡಿಮೆ ವೆಚ್ಚದ ಲ್ಯಾಪ್‌ಪಾಪ್‌ಗೆ ಸಂಬಂಧಿಸಿದ ಕೆಲವು ವಿವರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಇನ್ನು ಈ ಜಿಯೋಬುಕ್ ಕಸ್ಟಮ್ ಆಂಡ್ರಾಯ್ಡ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಅಲ್ಲದೆ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 ಪ್ರೊಸೆಸರ್‌ ಹೊಂದಿರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಜಿಯೋ ವಾರ್ಷಿಕ ಸಭೆಯ ದಿನಾಂಕ ನಿಗದಿ ಆದ ನಂತರ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.

Most Read Articles
Best Mobiles in India

English summary
Reliance Annual General Meeting (AGM) 2021 date has been officially announced. Reliance will host its 44th AGM later this month on June 24 at 2PM IST.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X