ಜಿಯೋದಿಂದ ಇಂಟರ್‌ನೆಟ್ ಸಂಪರ್ಕವಿಲ್ಲದ ಹ್ಯಾಂಡ್‌ಸೆಟ್!
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಈಗಾಗ್ಲೆ ದೂಳೆಬ್ಬಿಸಿರೋ ಜಿಯೋ ಮಧ್ಯಮ ವರ್ಗದವರಿಗಾಗಿ ಜಿಯೋ ಪೋನ್ ಬಿಡುಗಡೆ ಮಾಡಿದ್ದು ನಿಮಗೆಲ್ಲಾ ಗೊತ್ತೆ ಇದೆ. ಇದೀಗ ರಿಲಾಯನ್ಸ್ ಜಿಯೋ ಕಂಪೆನಿ ಹೊಸ ಮಾದರಿಯ ಜಿಯೋ ಫೋನ್ ಅನ್ನ ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದ್ದು, ಈ ಹೊಸ ಪೋನ್‌ನಲ್ಲಿ ನೂತನ ಫೀಚರ್ಸ್‌ಗಳನ್ನ ಜಿಯೋ ಪರಿಚಯಿಸಲಿದೆ. ಅಷ್ಟೇ ಅಲ್ಲ ಇಂಟರ್‌ನೆಟ್ ಸಂಪರ್ಕವಿಲ್ಲದ ಮೊದಲ ಜಿಯೋ ಪೋನ್ ಇದಾಗಿರಲಿದೆ.

ಹೌದು, ರಿಲಾಯನ್ಸ್ ಜಿಯೋ ಕಂಪೆನಿ ತನ್ನ ಹೊಸ ಮಾದರಿಯ ಜಿಯೋ ಫೋನ್‌ಲೈಟ್ ಹ್ಯಾಡ್‌ಸೆಟ್ ಅನ್ನ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಇಂಟರ್‌ನೆಟ್ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುವ ಮೊದಲ ಜಿಯೋ ಹ್ಯಾಡ್‌ಸೆಟ್ ಆಗಿದ್ದು, ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಈ ಮೊಬೈಲ್ ದೊರಕಿಲಿದೆ ಎಂದು ಜಿಯೋ ಈಗಾಗ್ಲೆ ಹೇಳಿಕೊಂಡಿದೆ. ಕಡಿಮೆ ಬೆಲೆಯ ನೂತನ ಮಾದರಿಯ ಹೊಸ ಪೋನ್ ಇದಾಗಿರಲಿದ್ದು ಇನ್ನೂ ಹೆಚ್ಚಿನ ಬಳಕೆದಾರರನ್ನ ಪಡೆಯಲು ಜಿಯೋಗೆ ಸಾಧ್ಯವಾಗಲಿದೆ ಎಂದು ಹೇಳಲಾಗ್ತಿದೆ.

ಇನ್ನು ಈ ಜಿಯೋ ಫೋನ್ ಲೈಟ್ ಆಲ್ಫಾನ್ಯೂಮರಿಕ್ ಕೀಪ್ಯಾಡ್ ಮತ್ತು ಸ್ಮಾಲ್ ಡಿಸ್‌ಪ್ಲೇಯನ್ನ ಹೊಂದಿರಲಿದ್ದು, ಇದರ ಬೆಲೆ ಸುಮಾರು 400 ರೂ.ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಜಿಯೋ ಮತ್ತು ಲ್ಯಾಂಡ್‌ಲೈನ್ ಸಂಖ್ಯೆಗಳಿಗೆ ಅನಿಯಮಿತ ಉಚಿತ ಕರೆಗಳನ್ನು ಒದಗಿಸುತ್ತದೆ ಮತ್ತು ಇತರ ನೆಟ್‌ವರ್ಕ್‌ಗಳ ಜೊತೆ ಕರೆ ಸಂಪರ್ಕ ಪಡೆಯಲು ಕರೆದರವನ್ನ ನಿಗದಿ ಪಡಿಸಲಾಗುತ್ತೆ.

ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಿರೋ ಜಿಯೋ ಈ ಫೋನ್ ಮೂಲಕ ಇನ್ನಷ್ಟು ಪ್ರಾಬಲ್ಯ ಸಾಧಿಸೊದ್ರಲ್ಲಿ ಅನುಮಾಣವೇ ಇಲ್ಲ ಎನ್ನಲಾಗ್ತಿದೆ. ಅಷ್ಟೇ ಅಲ್ಲ ದೇಶದಲ್ಲಿ 4ಜಿ ನೆಟ್‌ವರ್ಕ ಕಾರ್ಯಾಚರಣೆ ನಡೆಸುತ್ತಿದ್ದರೂ ಸಹ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ 2ಜಿ ನೆಟ್‌ವರ್ಕ್ ಲಭ್ಯವಾಗ್ತಿದೆ. ಈ ಕಾರಣದಿಂದ ಸಧ್ಯವಾದಷ್ಟು ಇನ್ನೂ ಹೆಚ್ಚಿನ ಗ್ರಾಮೀಣ ಟೆಲಿಕಾಂ ಚಂದಾದಾರರನ್ನು ತಲುಪಲು ಜಿಯೋ ಕಂಪನಿಯು 4ಜಿ ನೆಟ್‌ವರ್ಕ್ ಬೆಂಬಲಿಸೋ ಜಿಯೋ ಫೋನ್ ಬಿಡುಗಡೆ ಮಾಡಿತ್ತು. ಇದೀಗ ಅದರ ಆಪ್‌ಡೇಟ್ ವರ್ಷನ್ ಬಿಡುಗಡೆ ಮಾಡಲಿದೆ.

ಇನ್ನು ಜಿಯೋ ಕಂಪೆನಿ ನಂತರ ಇತರೆ ಮೊಬೈಲ್ ಕಂಪೆನಿಗಳು ಕೂಡ ಕಡಿಮೆ ಬೆಲೆಯ ಹ್ಯಾಡ್‌ಸೆಟ್‌ಗಳ ಪರಿಚಯಿಸಿದರೂ ಸಹ ಜಿಯೋ ಪೋನ್‌ನಲ್ಲಿ ಇರುವಷ್ಟು ಫೀಚರ್ಸ್‌ಗಳು ಲಭ್ಯವಿರಲಿಲ್ಲ ಅನ್ನೊದು ಗೊತ್ತೆ ಇದೆ. ಇದೀಗ ಜಿಯೋ ಫೋನ್ ಲೈಟ್‌ನೊಂದಿಗೆ, ಇಂಟರ್ನೆಟ್ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸೋ ಹೊಸ ಫೀಚರ್ ಫೋನ್ ಅನ್ನು ಗ್ರಾಹಕರಿಗೆ ಜಿಯೋ ಪರಿಚಯಿಸಲಿದೆ.


Click it and Unblock the Notifications








