Home
ಸುದ್ದಿಜಾಲ

ಭಾರತದಲ್ಲಿ JioPhone Next ಅಧಿಕೃತ ಬೆಲೆ ಎಷ್ಟು ಗೊತ್ತಾ?

ಬಹುನಿರೀಕ್ಷಿತ ಜಿಯೋಫೋನ್‌ ನೆಕ್ಸ್ಟ್‌ ಭಾರತದಲ್ಲಿ ಅಧಿಕೃತವಾಗಿದೆ. ರಿಲಯನ್ಸ್‌ ಜಿಯೋ ಮತ್ತು ಗೂಗಲ್‌ ಸಹಯೋಗದಲ್ಲಿ ಸಿದ್ದವಾಗಿರುವ ಈ ಸ್ಮಾರ್ಟ್‌ಫೋನ್‌ ದೀಪಾವಳಿಯಿಂದ ಖರೀದಿಗೆ ಲಭ್ಯವಾಗಲಿದೆ. ಸದ್ಯ ಭಾರತದಲ್ಲಿ ಜಿಯೋಫೋನ್‌ ನೆಕ್ಸ್ಟ್‌ ಸ್ಮಾರ್ಟ್‌ಫೋನ್‌ ಬೆಲೆ ಏನಿದೆ ಅನ್ನೊದು ಬಹಿರಂಗವಾಗಿದೆ. ಜೊತೆಗೆ JioPhone Next ಫೋನ್ ಖರೀದಿಸುವವರಿಗಾಗಿ ರಿಲಯನ್ಸ್ ಸುಲಭ EMI ಯೋಜನೆಗಳನ್ನು ಘೋಷಿಸಿದೆ. 6,499.ರೂ ಬೆಲೆ ಹೊಂದಿರುವ ಈ ಫೋನ್‌ ಅನ್ನು ಜಿಯೋ ಆಫರ್‌ ಮೂಲಕ ಕೇವಲ 1,999.ರೂ ಬೆಲೆಗೆ ಖರೀದಿಸಬಹುದಾಗಿದೆ.

ಜಿಯೋಫೋನ್‌ ನೆಕ್ಸ್ಟ್‌

ಹೌದು, ಜಿಯೋಫೋನ್‌ ನೆಕ್ಸ್ಟ್‌ ಭಾರತದಲ್ಲಿ ಅಧಿಕೃತವಾಗಿದ್ದು, ಬೆಲೆ ಬಹಿರಂಗವಾಗಿದೆ. ಜೊತೆಗೆ ಜಿಯೋಫೋನ್‌ನೆಕ್ಸ್ಟ್‌ಗಾಗಿ ಹಲವು EMI ಪ್ಲಾನ್‌ಗಳನ್ನು ಸಹ ಪರಿಚಯಿಸಿದೆ. ಇನ್ನು ಈ ಇಎಂಐ ಪ್ಲಾನ್‌ಗಳು ತಿಂಗಳಿಗೆ 300ರೂ.ಗಳಿಂದ ಶುರುವಾಗಲಿವೆ. ಇನ್ನು JioPhone Next ಪ್ರಗತಿOS ನಲ್ಲಿ ಕಾರ್ಯನಿರ್ವಹಿಸಲಿದೆ. ಇದು Android-ಆಧಾರಿತ ಸಾಫ್ಟ್‌ವೇರ್ ಅನ್ನು ವಿಶೇಷವಾಗಿ ಭಾರತೀಯ ಪ್ರೇಕ್ಷಕರಿಗಾಗಿ ತಯಾರಿಸಲಾಗಿದೆ. ಇನ್ನುಳಿದಂತೆ ಜಿಯೋಫೋನ್‌ನೆಕ್ಸ್ಟ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋಫೋನ್‌ ನೆಕ್ಸ್ಟ್‌

ಜಿಯೋಫೋನ್‌ ನೆಕ್ಸ್ಟ್‌ ಖರೀದಿಸುವ ಗ್ರಾಹಕರಿಗಾಗಿ ರಿಲಯನ್ಸ್‌ ಜಿಯೋ ಹಲವು ಇಎಂಐ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ EMI ಪ್ಲಾನ್‌ಗಳು 18 ತಿಂಗಳು ಮತ್ತು 24 ತಿಂಗಳುಗಳ ಅವಧಿಗೆ ಲಭ್ಯವಿವೆ. ಈ ಪ್ಲಾನ್‌ಗಳು ಜಿಯೋದಿಂದ ವಾಯ್ಸ್‌ ಮತ್ತು ಡೇಟಾ ಪ್ರಯೋಜನಗಳನ್ನು ಹೊಂದಿವೆ. ಆದ್ದರಿಂದ ಬಳಕೆದಾರರು ಈ ಕ್ಯಾರಿಯರ್ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಜಿಯೋ ಆಲ್‌ವೇಸ್‌ ಆನ್ ಪ್ಲಾನ್, XL ಪ್ಲಾನ್‌ ಮತ್ತು XXL ಪ್ಲಾನ್‌ ಅನ್ನು ಒಳಗೊಂಡಿದೆ.

ಪ್ಲಾನ್‌

ಆಲ್‌ವೇಸ್‌ ಆನ್ ಪ್ಲಾನ್‌: ಈ ಪ್ಲಾನ್‌ 24 ತಿಂಗಳ ಅವಧಿಯನ್ನು ಹೊಂದಿದೆ. ಇದರಲ್ಲಿ ತಿಂಗಳಿಗೆ 300ರೂ. ಅಥವಾ 18 ತಿಂಗಳ ಅವಧಿಯಲ್ಲಿ ತಿಂಗಳಿಗೆ 350 ರೂ. ಇಎಂಐ ಆಯ್ಕೆಯೊಂದಿಗೆ ಬರಲಿದೆ. JioPhone Next ನ EMI ಪಾವತಿಸುವುದರ ಜೊತೆಗೆ, ಬಳಕೆದಾರರು ತಿಂಗಳಿಗೆ 5GB ಡೇಟಾ ಮತ್ತು 100 ನಿಮಿಷಗಳ ಕರೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.
ಲಾರ್ಜ್‌ ಪ್ಲಾನ್‌: ಈ ಪ್ಲಾನ್‌ 24 ತಿಂಗಳ ಅವಧಿಯನ್ನು ಹೊಂದಿದ್ದು, ತಿಂಗಳಿಗೆ 450ರೂ ಅಥವಾ 18 ತಿಂಗಳ ಅವಧಿಗೆ ತೆಗೆದುಕೊಂಡರೆ ತಿಂಗಳಿಗೆ 500 ರೂ. ಇಎಂಐ ಆಯ್ಕೆ ಹೊಂದಿದೆ. ಇದು ದಿನಕ್ಕೆ 1.5GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುತ್ತದೆ.
XL ಪ್ಲಾನ್‌:ಈ ಪ್ಲಾನ್‌ 24 ತಿಂಗಳ ಅವಧಿಯಲ್ಲಿ ತಿಂಗಳಿಗೆ 500ರೂ ಹಾಗೂ 18 ತಿಂಗಳ ಅವಧಿಯಲ್ಲಿ ತಿಂಗಳಿಗೆ 550ರೂ ಬೆಲೆ ಹೊಂದಿದೆ. ಇದು ದಿನಕ್ಕೆ 2GB ಮತ್ತು ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡುತ್ತದೆ.
XXL ಪ್ಲಾನ್‌:ಈ ಪ್ಲಾನ್‌ 24 ತಿಂಗಳ ಆಯ್ಕೆಯಲ್ಲಿ ತಿಂಗಳಿಗೆ 550 ರೂ. ಹಾಗೂ 18 ತಿಂಗಳ ಆಯ್ಕೆಯಲ್ಲಿ ತಿಂಗಳಿಗೆ 600ರೂ.ಬೆಲೆ ಹೊಂದಿದೆ. ಇದು ದಿನಕ್ಕೆ 2.5GB ಮತ್ತು ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ನೀಡಲಿದೆ. ಇನ್ನು ಈ EMI ಪ್ಲಾನ್‌ಗಳನ್ನು ಪಡೆಯಲು ಗ್ರಾಹಕರು 501ರೂ.ಗಳ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಜಿಯೋಫೋನ್ ನೆಕ್ಸ್ಟ್ ಫೀಚರ್ಸ್‌

ಜಿಯೋಫೋನ್ ನೆಕ್ಸ್ಟ್ ಫೀಚರ್ಸ್‌

ಜಿಯೋಫೋನ್ ನೆಕ್ಸ್ಟ್ 720x1,440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 5.45-ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 3 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 215 ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು, ಪ್ರಗತಿ OS ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ನ ಆಪ್ಟಿಮೈಸ್ಡ್ ಆವೃತ್ತಿಯಾಗಿದ್ದು, ಭಾರತದಲ್ಲಿನ ಬಳಕೆದಾರರಿಗೆ ಲಭ್ಯವಾಗಲಿದೆ. ಜೊತೆಗೆ 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು 512GB ವರೆಗೆ ವಿಸ್ತರಿಸಬಹುದಾಗಿದೆ.

ಮೆಗಾಪಿಕ್ಸೆಲ್

ಈ ಫೋನ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ರಿಯರ್‌ ಕ್ಯಾಮೆರಾ ಫೀಚರ್ಸ್‌ನಲ್ಲಿ ಪೋರ್ಟ್ರೇಟ್ ಮೋಡ್, ನೈಟ್ ಮೋಡ್ ಮತ್ತು ಫ್ರೀ ಲೋಡ್ ಮಾಡಿದ ಕಸ್ಟಮ್ ಇಂಡಿಯಾ-ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಜೊತೆಗೆ ಈ ಫೋನ್ 3,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೋ-USB ಪೋರ್ಟ್, 3.5mm ಆಡಿಯೋ ಜ್ಯಾಕ್, ಬ್ಲೂಟೂತ್ v4.1, Wi-Fi ಯನ್ನು ಬೆಂಬಲಿಸಲಿದೆ.

ಜಿಯೋಫೋನ್

ಇದಲ್ಲದೆ ಜಿಯೋಫೋನ್ ನೆಕ್ಸ್ಟ್ ಗೂಗಲ್ ಅಸಿಸ್ಟೆಂಟ್ ಬೆಂಬಲದೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ "ಓಪನ್ ಅಪ್ಲಿಕೇಶನ್" ಮತ್ತು "ಸೆಟ್ಟಿಂಗ್‌ಗಳನ್ನು ನಿರ್ವಹಿಸಿ" ಸೂಚನೆಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಬಳಕೆದಾರರಿಗೆ ಆನ್-ಸ್ಕ್ರೀನ್ ವಿಷಯವನ್ನು ಓದಲು ಅನುವು ಮಾಡಿಕೊಡುವ 'ರೀಡ್‌ ಅಲೌಡ್‌' ಫೀಚರ್ಸ್‌ ಅನ್ನು ಕೂಡ ಒಳಗೊಂಡಿದೆ. ಇದು ಬಳಕೆದಾರರಿಗೆ ಅರ್ಥವಾಗುವ ಭಾಷೆಯಲ್ಲಿ ಕೇಳುವ ಮೂಲಕ ವಿಷಯವನ್ನು ಅರ್ಥ ಮಾಡಿಸುವುದಕ್ಕೆ ಅವಕಾಶ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೊಸ JioPhone Next ಭಾರತದಲ್ಲಿ 6,499.ರೂ ಬೆಲೆ ಹೊಂದಿದೆ. ನೀವು ರಿಲಯನ್ಸ್‌ ಜಿಯೋ ಪರಿಚಯಿಸಿರುವ ಇಎಂಐ ಆಯ್ಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ. EMI ಆಯ್ಕೆಯಿಲ್ಲದೆ ಖರೀದಿಸುವವರು ಮುಂಗಡವಾಗಿ ಖರೀದಿಸಬಹುದು. ಜಿಯೋಫೋನ್ ನೆಕ್ಸ್ಟ್ ದೀಪಾವಳಿಯಿಂದ ಅಂದರೆ ನವೆಂಬರ್ 4 ರಿಂದ ಖರೀದಿಸಬಹುದು ಎಂದು ರಿಲಯನ್ಸ್ ಜಿಯೋ ದೃಢಪಡಿಸಿದೆ. ಈ ಫೋನ್‌ ಖರೀದಿಸಲು ಬಳಕೆದಾರರು ಹತ್ತಿರದ ಜಿಯೋ ಮಾರ್ಟ್ ಡಿಜಿಟಲ್ ರಿಟೇಲರ್‌ಗೆ ಭೇಟಿ ನೀಡಬೇಕು ಅಥವಾ ವೆಬ್‌ಸೈಟ್‌ಗೆ ಹೋಗಿ ನೋಂದಾಯಿಸಿಕೊಳ್ಳಬೇಕು. WhatsApp ನಲ್ಲಿ ನೋಂದಣಿಯನ್ನು ಸಹ ಮಾಡಬಹುದು ಮತ್ತು ಪ್ರಕ್ರಿಯೆಯನ್ನು ಪ್ರಾರಂಭಿಸಲು ಬಳಕೆದಾರರು 7018270182 ಗೆ 'ಹಾಯ್' ಅನ್ನು ಕಳುಹಿಸಬೇಕಾಗುತ್ತದೆ. ನೋಂದಣಿ ಪೂರ್ಣಗೊಂಡ ನಂತರ, ಖರೀದಿದಾರರಿಗೆ ದೃಢೀಕರಣವನ್ನು ಕಳುಹಿಸಲಾಗುತ್ತದೆ ಎನ್ನಲಾಗಿದೆ.

Best Mobiles in India

English summary
JioPhone Next, the budgeted entry-level smartphone from Reliance and Google, has finally been launched in India.to know more visit to kannada.gizbot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+