ಜಿಯೋಫೋನ್ ನೆಕ್ಸ್ಟ್ ಫೀಚರ್‌ಗಳ ಸೋರಿಕೆ..!
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ್ದ ರಿಲಾಯನ್ಸ್ ಇಂಡಸ್ಟ್ರೀಸ್ ಜಿಯೋಫೋನ್ ನೆಕ್ಸ್ಟ್ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಜೂನ್‌ನಲ್ಲಿ ನಡೆದ ರಿಲಾಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಮಹಾಸಭೆಯಲ್ಲಿ ಮುಖೇಶ್ ಅಂಬಾನಿ ಜಿಯೋಫೋನ್ ನೆಕ್ಸ್ಟ್ ಅನ್ನು ಪರಿಚಯಿಸಿದ್ದರು. ಆದರೆ, ಸ್ಮಾರ್ಟ್‌ಫೋನ್‌ನ ಫೀಚರ್‌ಗಳನ್ನು ಬಹಿರಂಗಪಡಿಸಿದ್ದಿಲ್ಲ. ಆದರೆ, ಅಧಿಕೃತ ಬಿಡುಗಡೆಗೂ ಮುನ್ನವೇ ಜಿಯೋಫೋನ್ ನೆಕ್ಸ್ಟ್ ಫೀಚರ್‌ಗಳು ಸೋರಿಕೆಯಾಗಿದ್ದು, ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಹಭಾಗಿತ್ವದಲ್ಲಿ ಜಿಯೋಫೋನ್ ನೆಕ್ಸ್ಟ್ ಅಭಿವೃದ್ಧಿಯಾಗಿದೆ.

ಎಕ್ಸ್‌ಡಿಎ ಡೆವಲಪರ್ಸ್‌ನ ಮುಖ್ಯ ಸಂಪಾದಕ ಮಿಶಾಲ್ ರೆಹಮಾನ್ ಜಿಯೋಫೋನ್ ನೆಕ್ಸ್ಟ್ ಫೀಚರ್‌ಗಳನ್ನು ಬಹಿರಂಗಪಡಿಸಿದ್ದು, ಅಗ್ಗದ ದರದ ಸ್ಮಾರ್ಟ್‌ಫೋನ್ ಹಲವು ವಿಶೇಷತೆಗಳನ್ನು ಹೊಂದಿದೆ. ಬೂಟ್ ಸ್ಕ್ರೀನ್‌ನ ಸ್ಕ್ರೀನ್‌ಶಾಟ್ ಅನ್ನು ರೆಹಮಾನ್ ಹಂಚಿಕೊಂಡಿದ್ದು, “ಜಿಯೋಫೋನ್ ನೆಕ್ಸ್ಟ್ ಕ್ರಿಯೆಟೆಡ್ ವಿತ್ ಗೂಗಲ್" ಎಂದು ಸ್ಕ್ರೀನ್‌ನಲ್ಲಿ ಬಂದಿದೆ. ಸಾಮಾನ್ಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಹೋಲಿಸಿದರೆ ಇದು ಸಂಪೂರ್ಣ ಭಿನ್ನವಾಗಿದ್ದು, ಆಂಡ್ರಾಯ್ಡ್ 11 ಗೋ ಆವೃತ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ.
ಜಿಯೋಫೋನ್ ನೆಕ್ಸ್ಟ್‌ನಲ್ಲಿ HD+ ಡಿಸ್‌ಪ್ಲೇಯನ್ನು ರಿಲಾಯನ್ಸ್ ಜಿಯೋ ನೀಡಲಿದೆ. ಸ್ಮಾರ್ಟ್‌ಫೋನ್ 64-ಬಿಟ್ ಕ್ವಾಡ್-ಕೋರ್ ಕ್ವಾಲ್‌ಕಾಮ್ QM215 ಚಿಪ್‌ಸೆಟ್ ಹೊಂದಿದ್ದು, ಕ್ವಾಲ್‌ಕಾಮ್ ಅಡ್ರಿನೋ 308 GPU ನೊಂದಿಗೆ ಜೋಡಿಸಲಾಗಿದೆ. ಅದಲ್ಲದೇ ಚಿಪ್ ಸಮಗ್ರ X5 LTE ಮೋಡೆಮ್‌ನೊಂದಿಗೆ ಬರುತ್ತದೆ.
ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಜಿಪಿಎಸ್, ಇಎಂಎಂಸಿ 4.5 ಸ್ಟೋರೇಜ್ ಮತ್ತು ಬ್ಲೂಟೂತ್ 4.2 ಹೊಂದಿದೆ. ಸಿಂಗಲ್ ಲೆನ್ಸ್ ಕ್ಯಾಮೆರಾ ಸೆಟಪ್‌ನೊಂದಿಗೆ ಜಿಯೋಫೋನ್ ನೆಕ್ಸ್ಟ್ ಗ್ರಾಹಕರ ಕೈ ಸೇರಲಿದ್ದು, ಸಿಂಗಲ್ ಲೆನ್ಸ್ 13 ಎಂಪಿ ಸೆನ್ಸಾರ್ ಹೊಂದಿದ್ದರೆ, ಸೆಲ್ಫಿ ಕ್ಯಾಮೆರಾ 8 ಎಂಪಿ ರೆಸಲ್ಯೂಶನ್ ಹೊಂದಿರುತ್ತದೆ. ಇದರ ಬೆಲೆಯನ್ನು ರಿಲಾಯನ್ಸ್ ಜಿಯೋ ಇದುವರೆಗೂ ಘೋಷಿಸಿಲ್ಲ. ಆದರೆ, ಸುಮಾರು 3,700 ರೂ.ಗೆ ದೊರೆಯಬಹುದು ಎನ್ನಲಾಗಿದೆ.


Click it and Unblock the Notifications








