Subscribe to Gizbot

ಜಿಯೋ ಫೋನ್ ಅಧಿಕೃತ ಬುಕಿಂಗ್ ಶುರು.!

Written By: Lekhaka

ಆಗಸ್ಟ್ 24 ರಂದು ಜಿಯೋ ಫೋನ್ ಬುಕಿಂಗ್ ಅಧಿಕೃತವಾಗಿ ಶುರುವಾಗಲಿದೆ ಎನ್ನುವ ಮಾಹಿತಿಯೂ ಎಲ್ಲಾರಿಗೂ ದೊರೆತಿದ್ದು, ಆದರೆ ಕೆಲವು ಅಧಿಕೃತ ಸ್ಟೋರ್ ಗಳಲ್ಲಿ ಈಗಾಗಲೇ ಬುಕ್ಕಿಂಗ್ ಶುರುವಾಗಿದೆ ಎನ್ನಲಾಗಿದೆ.

ಜಿಯೋ ಫೋನ್ ಅಧಿಕೃತ ಬುಕಿಂಗ್ ಶುರು.!

ದೆಹಲಿಯ ಕೆಲವು ಮಳಿಗೆಗಳಲ್ಲಿ ಈಗಾಗಲೇ ಜಿಯೋ ಫೋನ್ ಬುಕಿಂಗ್ ಅಧಿಕೃತವಾಗಿ ಶುರುವಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ಫೋನ್ ಗ್ರಾಹಕರಿಗೆ ದೊರೆಯಲಿದೆ. ಈ ಹಿನ್ನಲೆಯಲ್ಲಿ ನೀವು ಈ ಪೋನ್ ಅನ್ನು ಆನ್ ಲೈನ್ ಮತ್ತು ಆಫ್ ಲೈನಿನಲ್ಲಿ ಬುಕ್ ಮಾಡಬಹುದಾಗಿದೆ.

ಈ ಫೋನ್ ಬುಕ್ ಮಾಡಲು ಆಧಾರ್ ಕಾರ್ಡ್ ಬೇಕಾಗಿದೆ. ಇದಲ್ಲದೇ ಒಂದಕ್ಕಿಂತ ಹೆಚ್ಚಿನ ಫೋನ್ ಬುಕ್ ಮಾಡಲು ಪ್ಯಾನ್ ಕಾರ್ಡ್ ಅವಶ್ಯಕತೆ ಇದೆ ಎನ್ನಲಾಗಿದೆ.

ಆಫ್ ಲೈನ್ ನಲ್ಲಿ ಜಿಯೋ ಫೋನ್ ಬುಕ್ ಮಾಡುವುದು ಹೇಗೆ..?

ಜಿಯೋ ಫೋನ್ ಅನ್ನು ಆಫ್ ಲೈನ್ ಮಾರುಕಟ್ಟೆಯಲ್ಲಿ ಬುಕ್ ಮಾಡಲು ನಿಮ್ಮ ಆಧಾರ್ ಕಾರ್ಡ್ ಕಾಪಿಯೂ ಬೇಕಾಗಿದೆ. ಆಧಾರ್ ಕಾರ್ಡ್ ನಂಬರ್ ನೀಡಿ ಜಿಯೋ ಫೋನ್ ಬುಕ್ ಮಾಡಬಹುದಾಗಿದೆ. ಜಿಯೋ ಸ್ಟೋರ್ ನಲ್ಲಿ ಬುಕ್ ಮಾಡಬೇಕು. ನೀವು ರೂ.1500 ನೀಡಿ ಜಿಯೋ ಫೋನ್ ಕೊಂಡುಕೊಳ್ಳಬೇಕಾಗಿದ್ದು, ಇದನ್ನುಮೂರು ವರ್ಷದ ನಂತರ ಹಿಂಪಡೆಯಬಹುದಾಗಿದೆ.

ಆನ್ ಲೈನ್ ನಲ್ಲಿ ಜಿಯೋ ಫೋನ್ ಬುಕ್ ಮಾಡುವುದು ಹೇಗೆ.?

ಆನ್ ಲೈನಿನಲ್ಲಿ ಜಿಯೋ ಫೋನ್ ಅನ್ನು ಆಗಸ್ಟ್ 24 ರಿಂದ ಬುಕ್ ಮಾಡಬಹುದಾಗಿದೆ. ಅಲ್ಲದೇ ಈಗಲೇ ನೀವು ಬುಕ್ ಮಾಡಲು ರಿಜಿಸ್ಟರ್ ಆಗಬಹುದು.

ನೀವು ಜಿಯೋ ಅಧಿಕೃತ ವೈಬ್ ಸೈಟ್ ಮತ್ತು ಮೈ ಜಿಯೋ ಆಪ್ ನಲ್ಲಿ ಫೋನ್ ಅನ್ನು ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ನಿಮ್ಮ ಫೋನ್ ನಂಬರ್, ಆಧಾರ್ ಕಾರ್ಡ್ ನಂಬರ್ ಮತ್ತು ಇಮೇಲ್ ಐಡಿಯನ್ನು ನೀಡುವ ಅವಶ್ಯಕತೆ ಇದೆ.

ಹೊಸ ಜಿಯೋ ಸಿಮ್​ ಖರೀದಿಸಿದರೆ ಭಾರಿ ಆಫರ್...ಮತ್ತೆ ಕ್ಯಾಶ್‌ಬ್ಯಾಕ್!!

English summary
JioPhone bookings have started in select retail stores in Delhi NCR region a week before the scheduled date.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot