Home
ಸುದ್ದಿಜಾಲ

ಜಿಯೋ ಸಂಸ್ಥೆಯಿಂದ ಮತ್ತೊಂದು ಹೊಸ ಫೋನ್‌ ಲಾಂಚ್‌!..23 ಭಾಷೆಗಳಿಗೆ ಬೆಂಬಲ!

ಜಿಯೋ ಕಂಪೆನಿ ಭಾರತದಲ್ಲಿ ಈಗಾಗಲೇ ಅತಿ ಕಡಿಮೆ ಬೆಲೆಯಲ್ಲಿ ಹಲವು 4G ಫೋನ್‌ಗಳನ್ನು ಪರಿಚಯಿಸಿದೆ. ಅದರಲ್ಲೂ ಜಿಯೋ 4G ಫೀಚರ್‌ ಫೋನ್‌ಗಳು 2G ಮುಕ್ತ ಭಾರತ ಮಾಡುವ ಉದ್ದೇಶವನಿಟ್ಟುಕೊಂಡಿವೆ. ಇದೇ ಹಾದಿಯಲ್ಲಿ ಜಿಯೋ ಮತ್ತೊಂದು 4G ಫೋನ್‌ ಜಿಯೋಫೋನ್‌ ಪ್ರೈಮಾ 4G ಅನ್ನು ಬಿಡುಗಡೆ ಮಾಡಿದೆ.

ಹೌದು, ಜಿಯೋಫೋನ್‌ ಪ್ರೈಮಾ 4G ಫೀಚರ್‌ ಫೋನ್‌ ಭಾರತದಲ್ಲಿ ಲಾಂಚ್‌ ಆಗಿದೆ. ಇದು ಬಾರ್ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದ್ದು, ವಾಟ್ಸಾಪ್‌, ಯುಟ್ಯೂಬ್‌, ಗೂಗಲ್‌ ಸರ್ಚ್‌ ಮತ್ತು ಫೇಸ್‌ಬುಕ್‌ ಸೇರಿದಂತೆ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ. ಇದಲ್ಲದೆ ಈ ಫೀಚರ್‌ ಫೋನ್‌ 23 ಭಾಷೆಗಳನ್ನು ಸಹ ಬೆಂಬಲಿಸಲಿದೆ. ಹಾಗಾದ್ರೆ ಈ ಫೋನ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಸಂಸ್ಥೆಯಿಂದ ಮತ್ತೊಂದು ಹೊಸ ಫೋನ್‌ ಲಾಂಚ್‌!..23 ಭಾಷೆಗಳಿಗೆ ಬೆಂಬಲ!

ಜಿಯೋಫೋನ್‌ ಪ್ರೈಮಾ 4G ಫೀಚರ್ಸ್‌ ಹೇಗಿದೆ?
ಜಿಯೋಫೋನ್‌ ಪ್ರೈಮಾ 4G ಫೀಚರ್‌ ಫೋನ್‌ 2.4-ಇಂಚಿನ TFT ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240x320 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ ARM ಕಾರ್ಟೆಕ್ಸ್ TM A53 ಪ್ರೊಸೆಸರ್‌ ಬಲವನ್ನು ಹೊಂದಿದ್ದು, KaiOS ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 512MB RAM ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 128GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ಇನ್ನು ಈ ಫೀಚರ್‌ ಫೋನ್‌ ಹಿಂಭಾಗದಲ್ಲಿ 0.3-ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್‌ ಅನ್ನು ಹೊಂದಿದೆ. ಇದರಲ್ಲಿ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿಲ್ಲ. ಇದು FM ರೇಡಿಯೋ ಮತ್ತು ಟಾರ್ಚ್ ಅನ್ನು ಒಳಗೊಂಡಿದ್ದು, 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ. ಜೊತೆಗೆ ಈ ಫೋನ್‌ ಬ್ಲೂಟೂತ್ 5 ಸಂಪರ್ಕವನ್ನು ನೀಡಲಿದ್ದು, 23 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ.

ಜಿಯೋ ಸಂಸ್ಥೆಯಿಂದ ಮತ್ತೊಂದು ಹೊಸ ಫೋನ್‌ ಲಾಂಚ್‌!..23 ಭಾಷೆಗಳಿಗೆ ಬೆಂಬಲ!

ಜಿಯೋಫೋನ್‌ ಪ್ರೈಮಾ 4G ಫೀಚರ್ ಫೋನ್ 1,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಫೋನ್‌ ಯುಟ್ಯೂಬ್‌, ಫೇಸ್‌ಬುಕ್‌, ವಾಟ್ಸಾಪ್‌ ಮತ್ತು ಗೂಗಲ್‌ ವಾಯ್ಸ್‌ ಅಸಿಸ್ಟೆಂಟ್‌ ನಂತಹ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ. ಅಲ್ಲದೆ ಜಿಯೋದ ಜಿಯೋಟಿವಿ, ಜಿಯೋಸಿನಿಮಾ ಮತ್ತು ಜಿಯೋಸಾವನ್‌ ಜೊತೆಗೆ ಲೋಡ್ ಆಗಿದೆ. ಇದಲ್ಲದೆ JioPay ಅಪ್ಲಿಕೇಶನ್ ಮೂಲಕ ಬಳಕೆದಾರರು UPI ಪಾವತಿಗಳನ್ನು ಸಹ ಮಾಡಬಹುದಾಗಿದೆ.

ಜಿಯೋ ಸಂಸ್ಥೆಯಿಂದ ಮತ್ತೊಂದು ಹೊಸ ಫೋನ್‌ ಲಾಂಚ್‌!..23 ಭಾಷೆಗಳಿಗೆ ಬೆಂಬಲ!

ಭಾರತದಲ್ಲಿ JioPhone Prima 4G ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಜಿಯೋಫೋನ್‌ ಪ್ರೈಮಾ 4G ಫೀಚರ್‌ ಫೋನ್‌ 2,599ರೂ ಬೆಲೆಯನ್ನು ಹೊಂದಿದೆ. ಇದು ಕೇವಲ ನೀಲಿ ಬಣ್ಣದ ಆಯ್ಕೆಯಲ್ಲಿ ಬರಲಿದೆ. ಇದು ಪ್ರಸ್ತುತ ಅಮೆಜಾನ್‌, ಜಿಯೋಮಾರ್ಟ್‌ ಮತ್ತು ರಿಲಯನ್ಸ್‌ ಡಿಜಿಟಲ್‌ ಮೂಲಕ ಖರೀದಿಗೆ ಲಭ್ಯವಿದೆ. ಈ ಫೀಚರ್‌ ಫೋನ್‌ ಅನ್ನು ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ ಮೊಬೈಲ್ ಕಾಂಗ್ರೆಸ್ 2023 (IMC) ನಲ್ಲಿ ಜಿಯೋ ಕಂಪೆನಿ ಅನಾವರಣಗೊಳಿಸಿದ್ದು ಗಮನಿಸಬೇಕಾದ ವಿಚಾರ.

ಇನ್ನು ಜಿಯೋ ಸಂಸ್ಥೆ ಮುಂಬರುವ ಜಿಯೋಭಾರತ್‌ 4G ಫೀಚರ್‌ ಫೋನ್‌ಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡುವ ಸೂಚನೆ ನೀಡಿದೆ. ಏಕೆಂದರೆ ಈ ಫೋನ್‌ಗಳ ತಯಾರಿಕೆಗಾಗಿ ಐಟೆಲ್‌, ಲಾವಾ ಮತ್ತು ನೋಕಿಯಾದೊಂದಿಗೆ ಕೈ ಜೋಡಿಸಿದೆ ಎಂದು ಹೇಳಲಾಗಿದೆ. ಈ ಮೂಲಕ ದೇಶದಲ್ಲಿ 2G ಬಳಕೆದಾರರು 4G ಆವೃತ್ತಿಗೆ ಬದಲಾಗಲು ಸಾಧ್ಯವಾಗಲಿದೆ ಎನ್ನಲಾಗಿದೆ. ಈ ಮೂಲಕ ಸರಿಸುಮಾರು 250 ಮಿಲಿಯನ್ 2G ಬಳಕೆದಾರರನ್ನು 4Gಗೆ ಬದಲಾಯಿಸುವ ಗುರಿ ಹೊಂದಿದೆ ಎಂದು ಹೇಳಲಾಗಿದೆ. ಈ ಫೋನ್‌ ಯುಪಿಐ ಪಾವತಿ ಹಾಗೂ ವಾಟ್ಸಾಪ್‌ ಮತ್ತು ಲೈವ್‌ಟಿವಿ ಸ್ಟ್ರೀಮಿಂಗ್‌ಗೆ ಬೆಂಬಲಿಸಲಿದೆ. ಇದರ ಬೆಲೆ ಕೇವಲ 999ರೂ ಇರಲಿದೆ ಎಂದು ವರದಿಯಾಗಿದೆ.

Best Mobiles in India

English summary
JioPhone Prima 4G Feature Phone Launched in India: Price and Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+