ಜಿಯೋ ನಡೆಗೆ ಮೊಬೈಲ್ ವಲಯವೇ ಕಂಗಾಲು! ಹೇಗಿದೆ ಗೊತ್ತಾ ಹೊಸ ಫೋನ್!
ಇಂಡಿಯನ್ ಮೊಬೈಲ್ ಕಾಂಗ್ರೆಸ್ 2023 ಸಮಾರಂಭದಲ್ಲಿ ರಿಲಯನ್ಸ್ ಜಿಯೋ ಹೊಸ ಜಿಯೋಫೋನ್ ಪ್ರೈಮಾ 4Gಫೀಚರ್ ಫೋನ್ ಲಾಂಚ್ ಮಾಡಿದೆ. ಇದು ಫೀಚರ್ ಫೋನ್ ಆಗಿದೆಯಾದರೂ ಇದರಲ್ಲಿ ಯುಟ್ಯೂಬ್ ಮತ್ತು ವಾಟ್ಸಾಪ್ ನಂತಹ ಹಲವು ಜನಪ್ರಿಯ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ. ಇದು 23 ಭಾಷೆಗಳಿಗೆ ಬೆಂಬಲವನ್ನು ನೀಡಲಿದೆ.
ಹೌದು, ಜಿಯೋ ಕಂಪೆನಿ ಹೊಸದಾಗಿ ಜಿಯೋಫೋನ್ ಪ್ರೈಮಾ 4G ಫೀಚರ್ ಫೋನ್ ಬಿಡುಗಡೆ ಮಾಡಿದೆ. ಈ ಫೋನ್ 4G ಫೋನ್ ಆಗಿದ್ದು, 1800mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಜೊತೆಗೆ ಫೋನ್ ಪ್ರೀಮಿಯಂ, ದುಂಡಾದ ವಿನ್ಯಾಸವನ್ನು ಹೊಂದಿದೆ. ಹಾಗಾದ್ರೆ ಈ ಫೀಚರ್ ಫೋನ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋಫೋನ್ ಪ್ರೈಮಾ 4G ಫೀಚರ್ಸ್ ಹೇಗಿದೆ?
ಜಿಯೋಫೋನ್ ಪ್ರೈಮಾ 4G ಫೀಚರ್ ಫೋನ್ 2.4 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 320×240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ TFT ಡಿಸ್‌ಪ್ಲೇ ಅಗಿದೆ. ಇನ್ನು ಫೋನ್ ದುಂಡಾದ ವಿನ್ಯಾಸವನ್ನು ಹೊಂದಿದ್ದು, ಹಿಂಭಾಗದ ಪ್ಯಾನೆಲ್‌ನಲ್ಲಿ ಎರಡು ಕೇಂದ್ರೀಕೃತ ವಲಯಗಳ ಮಿತಿಯೊಳಗೆ ಜಿಯೋ ಲೋಗೋವನ್ನು ಇರಿಸಲಾಗಿದೆ. ಇದು ದುಂಡಾದ ಅಂಚಿನ ವಿನ್ಯಾಸದೊಂದಿಗೆ ಎಂಟ್ರಿ ನೀಡಿದೆ.
ಈ ಫೋನ್ 4G ARM ಕಾರ್ಟೆಕ್ಸ್ A53 ಪ್ರೊಸೆಸರ್ ಹೊಂದಿದ್ದು, KaiOS ನಲ್ಲಿ ರನ್ ಆಗಲಿದೆ. ಮೆಮೊರಿ ಕಾರ್ಡ್ ಮೂಲಕ 128GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇನ್ನು ಫೋನ್ ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಮುಂಬಾಗದ ಕ್ಯಾಮೆರಾ 0.3MP ಸೆನ್ಸಾರ್ ಪಡೆದಿದೆ.

ಈ ಫೀಚರ್ ಫೋನ್ 1,800mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ ಆವೃತ್ತಿ 5.0, FM ರೇಡಿಯೊ ಮತ್ತು 3.5mm ಆಡಿಯೊ ಜ್ಯಾಕ್‌ಗೆ ಬೆಂಬಲವನ್ನು ಸಹ ನೀಡಲಿದೆ. ಜಿಯೋ ಕಂಪೆನಿ JioPhone Prima 4G ಮೇಲೆ ಒಂದು ವರ್ಷದ ವಾರಂಟಿಯನ್ನು ನೀಡುತ್ತಿದೆ.
ಇನ್ನು ಈ ಫೋನ್‌ನಲ್ಲಿ ಯುಟ್ಯೂಬ್, ಜಿಯೋ ಟಿವಿ, Jio ಸಿನಿಮಾ, JioSaavn ಮತ್ತು JioNews ನಂತಹ ಮನರಂಜನಾ ಅಪ್ಲಿಕೇಶನ್‌ಗಳಿಗೆ ಬೆಂಬಲವನ್ನು ಸಹ ನೀಡಲಾಗಿದೆ. ಜೊತೆಗೆ, ಬಳಕೆದಾರರು JioPhone Prima 4G ನಲ್ಲಿ ವಾಟ್ಸಾಪ್, ಜಿಯೋಚಾಟ್ ಮತ್ತು ಫೇಸ್‌ಬುಕ್‌ನಂತಹ ಸೊಶೀಯಲ್ ಮೀಡಿಯಾ ಅಪ್ಲಿಕೇಶನ್‌ಗಳಿಗೆ ಸಹ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಜಿಯೋಸಾವನ್, ಜಿಯೋ ಸಿನಿಮಾ ಮತ್ತು ಜಿಯೋಪೇ ಫೋನ್‌ನಲ್ಲಿ ಪ್ರೀ ಲೋಡ್ ಆಗಿರಲಿದೆ. ಒಟ್ಟಾರೆ ಈ ಫೋನ್ 1200 ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ
ಜಿಯೋಫೋನ್ ಪ್ರೈಮಾ 4G ಭಾರತದಲ್ಲಿ 2,599ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇದು JioMart ನಲ್ಲಿ ನೀಲಿ ಮತ್ತು ಹಳದಿ ರೂಪಾಂತರಗಳಲ್ಲಿ ಲಭ್ಯವಿದೆ. ಇದಲ್ಲದೆ ಈ ಫೋನ್ ಅನ್ನು ಖರೀದಿಸುವವರಿಗೆ ಕ್ಯಾಶ್‌ಬ್ಯಾಕ್ ಡೀಲ್‌ಗಳು, ಬ್ಯಾಂಕ್ ಕೊಡುಗೆಗಳು ಮತ್ತು ಕೂಪನ್‌ಗಳನ್ನು ನೀಡಲಾಗ್ತಿದೆ.
ಇನ್ನು ಜಿಯೋ ಕಂಪೆನಿ ಇತ್ತೀಚಿಗೆ ಜಿಯೋ ಭಾರತ್ B1 ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು 2.4 ಇಂಚಿನ ಸ್ಕ್ರೀನ್ ಹೊಂದಿದ್ದು, ಇದರೊಂದಿಗೆ 2000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನ ಹೊಂದಿರುವ ಪ್ಲಸ್ ಪಾಯಿಂಟ್ ಎನಿಸಿದೆ. ಅಂದಹಾಗೆ ಇದು ಜಿಯೋದ ಮತ್ತೊಂದು ಬಜೆಟ್ ಫೋನ್ ಆಗಿದ್ದು, ಈ ಫೋನ್ ಅನ್ನು ಸ್ವಲ್ಪ ಉತ್ತಮವಾದ ವಿಭಾಗದಲ್ಲಿ ಕಾಣಿಸಿಕೊಂಡಿದೆ. ನೂತನ ಜಿಯೋ ಭಾರತ್ B1 ಫೋನ್ ಈ ಹಿಂದಿನ ವೇರಿಯಂಟ್‌ಗಳಿಗೆ ಹೋಲಿಸಿದರೆ ಅದರ ಸ್ಕ್ರೀನ್ ಮತ್ತು ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯದಲ್ಲಿ ಕೆಲವು ಚಿಕ್ಕ ಪುಟ್ಟ ಅಪ್‌ಡೇಟ್‌ಗಳನ್ನು ಮಾತ್ರ ನೀಡುತ್ತದೆ ಮತ್ತು ಪ್ರಮುಖ ಬದಲಾವಣೆಗಳನ್ನು ಪರಿಚಯಿಸುವುದಿಲ್ಲ.


Click it and Unblock the Notifications








