Home
ಸುದ್ದಿಜಾಲ

ವಿಶ್ವದ ನಂಬರ್ 1 ಕಿಯೋಸ್ 4ಜಿ ಸ್ಮಾರ್ಟ್ ಫೀಚರ್ ಫೋನ್ ಜಿಯೋ

By Gizbot Bureau

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಬದಲಾಗಿ ಕಡಿಮೆ ಬೆಲೆಯ ಬಜೆಟ್ ಸ್ಮಾರ್ಟ್ ಫೋನ್ ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಫೀಚರ್ ಗಳಿರುವ ಫೋನ್ ಗಳನ್ನು ಹೊರತರಲಾಗುತ್ತಿದೆ. ಫೀಚರ್ ಫೋನ್ ಖರೀದಿದಾರರಿಗೆ ಅನುಕೂಲವಾಗುವಂತಹ ಬಜೆಟ್ ನಲ್ಲಿ ಸ್ಮಾರ್ಟ್ ಫೀಚರ್ ಗಳನ್ನು ಇದು ಆಫರ್ ಮಾಡುತ್ತದೆ.

ವಿಶ್ವದ ನಂಬರ್ 1 ಕಿಯೋಸ್ 4ಜಿ ಸ್ಮಾರ್ಟ್ ಫೀಚರ್ ಫೋನ್ ಜಿಯೋ

2017 ರಲ್ಲಿ ಜಿಯೋ ಫೋನ್ ಸ್ಮಾರ್ಟ್ KaiOS ಸಾಫ್ಟ್ ವೇರ್ ನ್ನು ಬಳಸಿ ಹೊರತಂದ ಈ ಫೋನ್ ಗಳು ಅಗತ್ಯ ಫೀಚರ್ ಗಳನ್ನು ಒಳಗೊಂಡಿದೆ. ಜಿಯೋ ಸ್ಮಾರ್ಟ್ ಫೋನ್ ಗಳೇ ಜಗತ್ತಿನಾದ್ಯಂತ ಸ್ಮಾರ್ಟ್ ಫೀಚರ್ ಹೊಂದಿರುವ ಅತೀ ಹೆಚ್ಚು ಫೋನ್ ಗಳು ಮಾರಾಟವಾಗಿರುವುದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಕೌಂಟರ್ ಪಾಯಿಂಟ್ ವರದಿ:

ಕೌಂಟರ್ ಪಾಯಿಂಟ್ ವರದಿ:

ಕೌಂಟರ್ ಪಾಯಿಂಟ್ ನ ನೂತನ ಅಧ್ಯಯನವೊಂದರ ಪ್ರಕಾರ ರಿಲಯನ್ಸ್ ಜಿಯೋ 2017 ರಲ್ಲಿ ಮಾರುಕಟ್ಟೆಗೆ ಬಂದ ನಂತರ ಸುಮಾರು 5 ಕೋಟಿ ಯುನಿಟ್ಸ್ ಗಳನ್ನು ಮಾರಾಟ ಮಾಡುವುದರಲ್ಲಿ ಯಶಸ್ವಿಯಾಗಿದೆ. ತನ್ನದೇ ಸ್ವಂತ ಆಪ್ ಸ್ಟೋರ್ ಜೊತೆಗೆ ಸ್ಮಾರ್ಟ್ ಕಿಯೋಸ್ ಆಪರೇಟಿಂಗ್ ಸಿಸ್ಟಮ್ ಬಳಕೆದಾರರಿಗೆ ಸ್ಮಾರ್ಟ್ ಫೋನಿನಂತಹ ಅನುಭವವನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ.

ಪ್ರಸಿದ್ಧತೆಗೆ ಕಾರಣ:

ಪ್ರಸಿದ್ಧತೆಗೆ ಕಾರಣ:

ವಾಟ್ಸ್ ಆಪ್, ಫೇಸ್ ಬುಕ್ ಮತ್ತು ಗೂಗಲ್ ಅಸಿಸ್ಟೆಂಟ್ ಬಳಕೆಗೂ ಕೂಡ ಈ ಜಿಯೋಫೋನ್ ಗಳು ಅವಕಾಶ ನೀಡಿದ್ದು ಇದರ ಪರಿಣಾಮವಾಗಿ ಪ್ರಸಿದ್ಧತೆ ಅಧಿಕಗೊಂಡಿದೆ. ವರದಿಯು ಹೇಳುವ ಪ್ರಕಾರ ಜಿಯೋಫೋನ್ 2ಜಿ ಫೀಚರ್ ಫೋನ್ ಸೆಗ್ಮೆಂಟ್ ಇದೀಗ 4G VoLTE ನೆಟ್ ವರ್ಕ್ ನೆಡೆಗೆ ಜಿಯೋ ದಾಪುಗಾಲಿಟ್ಟು ಮುನ್ನಡೆಯಲು ಹೆಚ್ಚಿನ ಅನುಕೂಲತೆಯನ್ನು ಸೃಷ್ಟಿಸಿದೆ.

ಮಾರುಕಟ್ಟೆಯಲ್ಲಿ ಟಾಪ್ 1 :

ಮಾರುಕಟ್ಟೆಯಲ್ಲಿ ಟಾಪ್ 1 :

ಜಿಯೋ ಸಂಸ್ಥೆಯ ಜಿಯೋ ಫೋನ್ ವಿಶ್ವದ ಪ್ರಮುಖ ವೊಲ್ಟ್ ಬೆಂಬಲಿತ ಕಿಯೋಸ್ ಆಧಾರಿತ ಸ್ಮಾರ್ಟ್ ಫೀಚರ್ ಫೋನ್ ಆಗಿದೆ. 20 ಡಾಲರ್ ಗೆ ಇದನ್ನು ಬಿಡುಗಡೆಗೊಳಿಸಲಾಯಿತು ಮತ್ತು ಸ್ಮಾರ್ಟ್ ಫೀಚರ್ ಫೋನ್ ನ ಮೊತ್ತವು ಜಗತ್ತಿನಾದ್ಯಂತ ಕೈಗೆಟುಕುವಂತಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. 2017 ರಲ್ಲಿ ರಿಲಯನ್ಸ್ ಜಿಯೋ ಫೋನ್ ಮಾರುಕಟ್ಟೆಗೆ ಬಂದ ನಂತರದ ದಿನಗಳಲ್ಲಿ ಸುಮಾರು 100 ಮಿಲಿಯನ್ ಚಂದಾದಾರರು ಇದಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಕೌಂಟರ್ ಪಾಯಿಂಟ್ ನ ವರದಿಯು ತಿಳಿಸುತ್ತಿದೆ.

ಆದಾಯ ಹೆಚ್ಚಳ:

ಆದಾಯ ಹೆಚ್ಚಳ:

ಮುಂದಿನ ಮೂರು ವರ್ಷಗಳಲ್ಲಿ ಫೀಚರ್ ಫೋನಿನ ಒಟ್ಟಾರೆ ಆದಾಯವು 28 ಬಿಲಿಯನ್ ಅಧಿಕಗೊಳ್ಳುವ ನಿರೀಕ್ಷೆ ಇದೆ. 2021ರ ವೇಳೆಗೆ ಜಗತ್ತಿನಾದ್ಯಂತ ಸುಮಾರು 300 ಮಿಲಿಯನ್ ಮಂದಿ ಫೀಚರ್ ಫೋನ್ ಬಳಕೆಯನ್ನು ಆರಂಭಿಸಲಿದ್ದಾರೆ. ಸಾಫ್ಟ್ ವೇರ್ ಮತ್ತು ಸೇವೆ ಮಾತ್ರವೇ ಸುಮಾರು 71% ಆದಾಯವನ್ನು ನೀಡುತ್ತದೆ ಅಂದರೆ ಸುಮಾರು 20 ಬಿಲಿಯನ್ ಆದಾಯ ಇದರಲ್ಲಿ ಬರುವ ಸಾಧ್ಯತೆ ಇದೆ ಎಂದು ಕೌಂಟರ್ ಪಾಯಿಂಟ್ ನ ಡೈರೆಕ್ಟರ್ ಆಗಿರುವ ನೀಲ್ ಶಾ ತಿಳಿಸಿದ್ದಾರೆ.

ಭಾರತ ಅತ್ಯಂತ ದೊಡ್ಡ ಮಾರುಕಟ್ಟೆ:

ಭಾರತ ಅತ್ಯಂತ ದೊಡ್ಡ ಮಾರುಕಟ್ಟೆ:

ಸುಮಾರು 252 % ಬೇಡಿಕೆಯು 2018 ರಲ್ಲಿ ಸ್ಮಾರ್ಟ್ ಫೀಚರ್ ಫೋನ್ ಗೆ ಜಗತ್ತಿನಾದ್ಯಂತ ಹೆಚ್ಚಿದೆ. ಅಂದರೆ ಒಟ್ಟು 16% ಒಟ್ಟು ಫೀಚರ್ ಫೋನ್ ವಾಲ್ಯೂಮ್ ನ್ನು ಹೆಚ್ಚಿಸುತ್ತದೆ. ಅದರಲ್ಲಿ ಭಾರತವು ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದ್ದರೆ ಯುಎಸ್, ಯುಕೆ, ಸೌತ್ ಈಸ್ಟ್ ಏಷಿಯಾ ಮತ್ತು ಆಫ್ರಿಕಾ ದೇಶಗಳಲ್ಲೂ ಕೂಡ ಫೀಚರ್ ಫೋನ್ ಗೆ ಬಹುದೊಡ್ಡ ಮಾರುಕಟ್ಟೆ ಇದೆ. 2021 ರ ವೇಳೆಗೆ ವಿಶ್ವದ ಒಟ್ಟಾರೆ ಸ್ಮಾರ್ಟ್ ಫೀಚರ್ ಫೋನ್ ಮೊತ್ತವು ಅರ್ಧಕ್ಕಿಂತಲೂ ಹೆಚ್ಚು ಉತ್ಪಾದನೆಯಾಗುವ ನಿರೀಕ್ಷೆ ಇದೆ.

Best Mobiles in India

English summary
JioPhone tops out as best KaiOS 4G smart feature phone globally
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+