Home
ಸುದ್ದಿಜಾಲ

ಜಿಯೋ ನಡೆಗೆ ಆಪಲ್‌ ಕಂಪೆನಿ ದಂಗು! ಕೈ ಗೆಟಕುವ ಬೆಲೆಯಲ್ಲಿ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಜಿಯೋಟ್ಯಾಗ್‌!

ಬಹುದಿನಗಳಿಂದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಜಿಯೋಟ್ಯಾಗ್‌ ಇದೀಗ ಭಾರತದಲ್ಲಿ ಬಿಡುಗಡೆಯಾಗಿದೆ. ಜಿಯೋ ಸಂಸ್ಥೆಯ ಈ ಬ್ಲೂಟೂತ್‌ ಟ್ರ್ಯಾಕರ್‌ (JioTag) ಆಪಲ್‌ನ ಏರ್‌ಟ್ಯಾಗ್‌ಗೆ ಟಕ್ಕರ್‌ ನೀಡಲಿದೆ. ವಿನ್ಯಾಸದ ದೃಷ್ಟಿಯಿಂದ ಮಾತ್ರವಲ್ಲದೆ ಬೆಲೆ ವಿಚಾರದಲ್ಲಿಯು ಕೂಡ ಜಿಯೋಟ್ಯಾಗ್‌ ಆಪಲ್‌ ಸಂಸ್ಥೆಗೆ ಸೆಡ್ಡು ಹೊಡೆದಿದೆ.

ಹೌದು, ಜಿಯೋ ಕಂಪೆನಿ ಹೊಸ ಜಿಯೋ ಟ್ಯಾಗ್‌ ಅನ್ನು ಭಾರತದಲ್ಲಿ ಅನಾವರಣಗೊಳಸಿದೆ. ಜಿಯೋ ಕಂಪೆನಿ ತನ್ನ ಬ್ಲೂಟೂತ್ ಟ್ರ್ಯಾಕರ್ ಅನ್ನು 1,000ರೂ.ಗಿಂ ಕಡಿಮೆ ಬೆಲೆಗೆ ನೀಡುತ್ತಿರುವುದು ಇಂಟ್ರೆಸ್ಟಿಂಗ್‌ ವಿಚಾರವಾಗಿದೆ. ಹಾಗಾದ್ರೆ ಜಿಯೋ ಸಂಸ್ಥೆಯ ಬ್ಲೂಟೂತ್‌ ಟ್ರ್ಯಾಕರ್‌ ಜಿಯೋಟ್ಯಾಗ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ನಡೆಗೆ ಆಪಲ್‌ ಕಂಪೆನಿ ದಂಗು!  ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಜಿಯೋಟ್ಯಾಗ್‌!

ಏನಿದು ಜಿಯೋ ಟ್ಯಾಗ್‌?

ಜಿಯೋಟ್ಯಾಗ್‌ ಡಿವೈಸ್‌ಗಳು ಮತ್ತು ಪರಿಕರಗಳನ್ನು ಟ್ರ್ಯಾಕ್‌ ಮಾಡುವ ಬ್ಲೂಟೂತ್‌ ಟ್ರ್ಯಾಕರ್‌ ಆಗಿದೆ. ಇದು ಆಪಲ್‌ಏರ್‌ಟ್ಯಾಗ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಅಂದರೆ ಸ್ಮಾರ್ಟ್‌ಫೋನ್‌ ಬಳಕೆದಾರರು ಜಿಯೋಥಿಂಗ್ಸ್‌ ಅಪ್ಲಿಕೇಶನ್‌ ಮೂಲಕ ಜಿಯೋಟ್ಯಾಗ್‌ ಅನ್ನು ಕನೆಕ್ಟ್‌ ಮಾಡಬಹುದು. ಅಲ್ಲದೆ ನಿಮ್ಮ ಡಿವೈಸ್‌ಗಳನ್ನು ಎಲ್ಲಿ ಇರಿಸಿದ್ದೀರಾ ಅನ್ನೊದನ್ನ ಟ್ರ್ಯಾಕ್‌ ಮಾಡಬಹುದಾಗಿದೆ. ಅವುಗಳನ್ನು ಟ್ರ್ಯಾಕ್ ಮಾಡಲು ಅವರ ವ್ಯಾಲೆಟ್, ಹ್ಯಾಂಡ್‌ಬ್ಯಾಗ್ ಮೇಲೆ ಜಿಯೋಟ್ಯಾಗ್‌ ಅನ್ನು ಲಗತ್ತಿಸಬಹುದಾಗಿದೆ.

ಇಂದಿನ ದಿನಗಳಲ್ಲಿ ಟ್ರ್ಯಾಕಿಂಗ್‌ ಟ್ಯಾಗ್‌ಗಳಿಗೆ ಭಾರಿ ಬೇಡಿಕೆಯಿದೆ. ಇವುಗಳ ಮೂಲಕ ತಮ್ಮ ಕಳೆದುಹೋದ ಕೀಗಳು, ಡಿವೈಸ್‌ಗಳನ್ನು ಸುಲಭವಾಗಿ ಪತ್ತೆ ಹಚ್ಚುವುದಕ್ಕೆ ಸಾಧ್ಯವಿದೆ. ಇದೇ ಕಾರಣಕ್ಕೆ ಸ್ಮಾರ್ಟ್‌ ಡಿವೈಸ್‌ಗಳ ಜೊತೆಗೊಂದು ಟ್ರ್ಯಾಕಿಂಗ್‌ ಟ್ಯಾಗ್‌ ಹೊಂದುವುದಕ್ಕೆ ಬಯಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿರುವ ಆಪಲ್‌ ಏರ್‌ ಟ್ಯಾಗ್‌ ಬೆಲೆ ದುಬಾರಿಯಾಗಿದೆ. ಆಪಲ್‌ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಜಿಯೋ ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಜಿಯೋಟ್ಯಾಗ್‌ ಅನ್ನು ಪರಿಚಯಿಸಿದೆ.

ಜಿಯೋ ನಡೆಗೆ ಆಪಲ್‌ ಕಂಪೆನಿ ದಂಗು!  ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಜಿಯೋಟ್ಯಾಗ್‌!

ಹೇಗಿದೆ ಜಿಯೋಟ್ಯಾಗ್‌?

ಇನ್ನು ಜಿಯೋಟ್ಯಾಗ್‌ ಬಾಕ್ಸ್‌ನಲ್ಲಿ ಹೆಚ್ಚುವರಿ ಬ್ಯಾಟರಿ ಮತ್ತು ಲ್ಯಾನ್ಯಾರ್ಡ್ ಕೇಬಲ್ ಅನ್ನು ನೀಡಲಾಗಿದೆ. ಇದರಲ್ಲಿ ಲ್ಯಾನ್ಯಾರ್ಡ್ ಬಳಕೆದಾರರು ತಮ್ಮ ವಸ್ತುಗಳಿಗೆ JioTag ಅನ್ನು ಸುಲಭವಾಗಿ ಲಗತ್ತಿಸಬಹುದಾಗಿದೆ. ಸದ್ಯ ಜಿಯೋ ವೆಬ್‌ಸೈಟ್‌ನಲ್ಲಿ ತಿಳಿಸಿರುವ ಮಾಹಿತಿಯಂತೆ ಜಿಯೋಟ್ಯಾಗ್‌ CR2032 ಬ್ಯಾಟರಿಯನ್ನು ಒಳಗೊಂಡಿದೆ. ಜೊತೆಗೆ ಜಿಯೋಟ್ಯಾಗ್ ಒಳಾಂಗಣದಲ್ಲಿ 20 ಮೀಟರ್ ಮತ್ತು ಹೊರಾಂಗಣದಲ್ಲಿ 50 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದನ್ನು ನೀವು ಬ್ಲೂಟೂತ್ 5.1 ಕನೆಕ್ಟಿವಿಟಿ ಆಯ್ಕೆಯ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡಬಹುದು.

ಜಿಯೋಟ್ಯಾಗ್‌ ಹೇಗೆ ಕಾರ್ಯನಿರ್ವಹಿಸಲಿದೆ?

ಜಿಯೋ ಟ್ಯಾಗ್‌ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪತ್ತೆ ಹಚ್ಚಬಹುದು. ನಿಮ್ಮ ಫೋನ್‌ ಸೈಲೆಂಟ್‌ ಮೋಡ್‌ನಲ್ಲಿದ್ದರೂ ಕೂಡ ಫೋನ್‌ ರಿಂಗ್‌ ಮಾಡುವುದಕ್ಕೆ ಜಿಯೋ ಟ್ಯಾಗ್‌ ಬಳಸಬಹುದಾಗಿದೆ. ಇದಕ್ಕಾಗಿ ಜಿಯೋ ಟ್ಯಾಗ್‌ ಅನ್ನು ಎರಡು ಬಾರಿ ಟ್ಯಾಪ್‌ ಮಾಡಿದರೆ ಸಾಕು ನಿಮ್ಮ ಮೊಬೈಲ್‌ ರಿಂಗ್‌ ಆಗಲಿದೆ. ಇದಲ್ಲದೆ ನಿಮ್ಮ ವ್ಯಾಲೆಟ್‌ಗಳು, ಕೀಗಳು ಮತ್ತು ಬೇರೆ ಯಾವುದೇ ಪರಿಕರಗಳನ್ನು ಬಿಟ್ಟು ಬಂದರೆ ಅವುಗಳಿರುವ ನಿಖರವಾದ ಸ್ಥಳದೊಂದಿಗೆ ಆಲರ್ಟ್‌ ಸಂದೇಶವನ್ನು ಸಹ ಜಿಯೋಟ್ಯಾಗ್‌ ನೀಡಲಿದೆ.

ಜಿಯೋ ನಡೆಗೆ ಆಪಲ್‌ ಕಂಪೆನಿ ದಂಗು!  ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಜಿಯೋಟ್ಯಾಗ್‌!

ಜಿಯೋಟ್ಯಾಗ್‌ನ ವಿಶೇಷತೆ ಏನು?

ಜಿಯೋಟ್ಯಾಗ್‌ನ ಪ್ರಮುಖ ವಿಶೇಷತೆ ಏನೆಂದರೆ ನೀವು ಡಿವೈಸ್‌ ಅನ್ನು ಕಳೆದುಕೊಂಡ ಕೊನೆ ಸ್ಥಳದಲ್ಲಿ ಸಹ ಡಿವೈಸ್‌ ಸಿಗದೆ ಹೋದಾಗ ಜಿಯೋಥಿಂಗ್ಸ್‌ ಅಪ್ಲಿಕೇಶನ್‌ ಮೂಲಕ ಹುಡುಕುವುದಕ್ಕೆ ಸಹಾಯ ಮಾಡಲಿದೆ. ಅಂದರೆ ನಿಮ್ಮ ಮೊಬೈಲ್‌ನ ಕೊನೆಯ ಸಂಪರ್ಕ ಕಡಿತಗೊಂಡ ಸ್ಥಳದಲ್ಲೂ ಬಳಕೆದಾರರು ತಮ್ಮ ವಸ್ತುಗಳನ್ನು ಹುಡುಕಲು ಸಾಧ್ಯವಾಗದಿದ್ದಾಗ, ಜಿಯೋಥಿಂಗ್ಸ್‌ ಅಪ್ಲಿಕೇಶನ್‌ನಲ್ಲಿ ಜಿಯೋಟ್ಯಾಗ್‌ ಕಳೆದಹೋಗಿದೆ ಅಂತಾ ಗುರುತಿಸಬಹುದಾಗಿದೆ.

ಭಾರತದಲ್ಲಿ ಜಿಯೋಟ್ಯಾಗ್‌ ಬೆಲೆ ಮತ್ತು ಲಭ್ಯತೆ

ಜಿಯೋ ಟ್ಯಾಗ್‌ ಅಧಿಕೃತವಾಗಿ ಜಿಯೋ ವೆಬ್‌ಸೈಟ್‌ ಮೂಲಕ ಮಾರಾಟಕ್ಕೆ ಲಭ್ಯವಿದೆ. ಅದರಂತೆ ಇದರ ಬೆಲೆ 2,199ರೂ. ಆಗಿದೆ ಆದರೂ ಇದು ಪ್ರಸ್ತುತ 749ರೂ, ಬೆಲೆಗೆ ಲಭ್ಯವಿದೆ. ಸದ್ಯ ಜಿಯೋ ಕೆಲವು ಪಿನ್ ಕೋಡ್‌ಗಳಲ್ಲಿ ಕ್ಯಾಶ್ ಆನ್ ಡೆಲಿವರಿ ನೀಡುತ್ತದೆ, ಆದರೆ ಆಸಕ್ತ ಖರೀದಿದಾರರು ಪ್ರಿಪೇಯ್ಡ್ ಆರ್ಡರ್‌ಗಳನ್ನು ನೀಡುವ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
JioTag Bluetooth Tracker Launched in India: Specs and Price details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+