Home
ಸುದ್ದಿಜಾಲ

ಜಿಯೋ ಟಿವಿಗೆ ಪ್ರತಿಷ್ಠಿತ ಐಪಿಟಿವಿ ಇನ್ನೋವೇಶನ್ ಪ್ರಶಸ್ತಿ!

ಭಾರತದ ಲಕ್ಷಾಂತರ ಮೊಬೈಲ್ ಫೋನ್ ಬಳಕೆದಾರರು ಆನಂದಿಸುತ್ತಿರುವ ಅತ್ಯಂತ ಜನಪ್ರಿಯ ಟಿವಿ ಅಪ್ಲಿಕೇಶನ್ ಜಿಯೋ ಟಿವಿಗೆ ಲಂಡನ್‌ನಲ್ಲಿ ನಡೆದ ವಿಶ್ವ ಸಂವಹನ ಪ್ರಶಸ್ತಿ 2019 ರಲ್ಲಿ 'ಐಪಿಟಿವಿ ಇನ್ನೋವೇಶನ್ ಪ್ರಶಸ್ತಿ' ಲಭ್ಯವಾಗಿದೆ. ಟೋಟಲ್ ಟೆಲಿಕಾಂ 1999 ರಲ್ಲಿ ಪ್ರಾರಂಭಿಸಿದ ವಿಶ್ವ ಸಂವಹನ ಪ್ರಶಸ್ತಿಗಳು ಜಾಗತಿಕ ಟೆಲಿಕಾಂ ಆಪರೇಟರ್‌ಗಳು ಮತ್ತು ವ್ಯಕ್ತಿಗಳಲ್ಲಿ ಶ್ರೇಷ್ಠತೆಯನ್ನು ಗುರುತಿಸುತ್ತವೆ. ಇದರಲ್ಲಿ ಜಿಯೋ ಟಿವಿಗೆ ಪ್ರತಿಷ್ಠಿತ ಐಪಿಟಿವಿ ಇನ್ನೋವೇಶನ್ ಪ್ರಶಸ್ತಿಯು ಒಲಿದುಬಂದಿದೆ.

ಇನ್ನೋವೇಶನ್ ಪ್ರಶಸ್ತಿ

ವಿಶ್ವ ಇನ್ನೋವೇಶನ್ ಪ್ರಶಸ್ತಿಗಳು ಜಾಗತಿಕ ಟೆಲಿಕಾಂ ಆಪರೇಟರ್‌ಗಳು ಮತ್ತು ವ್ಯಕ್ತಿಗಳಲ್ಲಿ ಶ್ರೇಷ್ಠತೆಯನ್ನು ಗುರುತಿಸುತ್ತವೆ ಮತ್ತು ತಜ್ಞರ ಸಮಿತಿಯು 25 ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತದೆ. ಇವುಗಳಲ್ಲಿ ರಿಲಯನ್ಸ್ ಜಿಯೋನ ಡಿಜಿಟಲ್ ಕೊಡುಗೆಗಳನ್ನು 4 ವಿಭಾಗಗಳಲ್ಲಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಉದಯೋನ್ಮುಖ ಮಾರುಕಟ್ಟೆಯಲ್ಲಿ ಅತ್ಯುತ್ತಮ ಆಪರೇಟರ್, ಸಾಮಾಜಿಕ ಕೊಡುಗೆ ಪ್ರಶಸ್ತಿ, ದಿ ಇನ್ನೋವೇಶನ್ ಪ್ರಶಸ್ತಿ - ಆಪರೇಟರ್ ಮತ್ತು ಐಪಿಟಿವಿ ಇನ್ನೋವೇಶನ್ ಪ್ರಶಸ್ತಿಗಳು ಜಿಯೋಗೆ ಸಿಕ್ಕಿವೆ.

ಟೆಲಿಕಾಂ ಕಂಪನಿ

ವಿಶ್ವದಾದ್ಯಂತ ಟೆಲಿಕಾಂ ಕಂಪನಿಗಳು ಕೇವಲ ಟೆಲಿಕಾಂ ಸೇವೆಯನ್ನು ಮಾತ್ರ ನೀಡುವುದಲ್ಲದೇ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ವಿಡಿಯೋ ಕಂಟೆಂಟ್ ಗಳನ್ನು ಬಳಕೆದಾರರಿಗೆ ಕೊಡುಗೆಗಳಾಗಿ ನೀಡುವುದು ನಿರ್ಣಾಯಕ ಮತ್ತು ಮುಖ್ಯವಾಗುತ್ತಿದೆ. ಹಾಗಾಗಿ ಈ ವರ್ಗದಲ್ಲಿ ಅನ್‌ಲೈನ್ ಟಿವಿ ಕೊಡುಗೆಯಲ್ಲಿ ಮುಂಚೂಣಿಯಲ್ಲಿರುವ ಹಲವಾರು ಟೆಲಿಕಾಂ ಪೂರೈಕೆದಾರರಿಂದ ತೀವ್ರ ಸ್ಪರ್ಧೆ ಇತ್ತು, ಕೊನೆಯಲ್ಲಿ ಪ್ರಶಸ್ತಿಗೆ ಪಾತ್ರವಾದ ಜಿಯೋಟಿವಿ ಗೇಮ್ ಚೇಂಜರ್ ಆಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.

ಐಪಿಟಿವಿ ಇನ್ನೋವೇಶನ್‌

ಜಿಯೋ ಟಿವಿಗೆ ಈ ಐಪಿಟಿವಿ ಇನ್ನೋವೇಶನ್‌ ಪ್ರಶಸ್ತಿಯನ್ನು ಪ್ರದಾನ ಮಾಡಿದ ಹೋಮ್‌ಗ್ರೀಡ್ ಫೋರಂನ ಮಾರ್ಕೆಟಿಂಗ್ ಚೇರ್ ಮತ್ತು ಬೋರ್ಡ್ ಸದಸ್ಯೆ ಲಿವಿಯಾ ರೋಸು ಮತ್ತು ಬಿಬಿಸಿಯ ವಿಶ್ವ ವ್ಯವಹಾರಗಳ ಸಂಪಾದಕ ಜಾನ್ ಸಿಂಪ್ಸನ್ ಅವರು, ಅನ್‌ಲೈನ್ ಟಿವಿ ಕಕೊಡುಗೆಯಲ್ಲಿ ಜಿಯೋಟಿವಿ ಸಮಗ್ರ ವ್ಯಾಪಕವಾದ, ವೈಶಿಷ್ಟ್ಯಪೂರ್ಣ ಶ್ರೀಮಂತ ಮತ್ತು ನವೀನ ಸೇವೆಗಳನ್ನು ಪ್ರದರ್ಶಿಸುತ್ತಿದ್ದು. ಲಕ್ಷಾಂತರ ಚಂದಾದಾರರಿಗೆ ನಿಜವಾದ ಗೇಮ್ ಚೇಂಜರ್ ಆಗಿದೆ ಎಂದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಕೊಡುಗೆ

ಜಿಯೋ ಟಿವಿಗೆ ಸಾಮಾಜಿಕ ಕೊಡುಗೆ ಪ್ರಶಸ್ತಿಯಾಗಿ ದಿ ಇನ್ನೋವೇಶನ್ ಪ್ರಶಸ್ತಿ ದೊರೆತಿದೆ. ಇದಲ್ಲದೇ ಜಿಯೋ ಆಪರೇಟರ್ ಐಪಿಟಿವಿ ಇನ್ನೋವೇಶನ್ ಪ್ರಶಸ್ತಿ ಸೇರಿದಂತೆ 4 ವಿಭಾಗಗಳಲ್ಲಿ ನಾಮ ನಿರ್ದೇಶಗೊಂಡಿರುವುದು ಕೂಡ ಜಿಯೋಗೆ ಹೆಗ್ಗಳಿಕೆಯಾಗಿದ್ದು, ಜಿಯೋ ಫೋನ್ ಮತ್ತು ಜಿಯೋ ಇಂಟೆರಾಕ್ಟ್ ಅನ್ನು ಕ್ರಮವಾಗಿ ದಿ ಸೋಷಿಯಲ್ ಕಾಂಟ್ರಿಬ್ಯೂಷನ್ ಅವಾರ್ಡ್ ಮತ್ತು ದಿ ಇನ್ನೋವೇಶನ್ ಅವಾರ್ಡ್ - ಆಪರೇಟರ್ ವಿಭಾಗಗಳ ಅಡಿಯಲ್ಲಿ ಪ್ರಸಂಶೆಗೆ ಪಾತ್ರವಾಯಿಗಿರುವುದನ್ನು ಸಹ ಜಿಯೋ ತಿಳಿಸಿದೆ.

Best Mobiles in India

English summary
JioTV wins IPTV Innovation Award at World Communication Awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+