Home
ಸುದ್ದಿಜಾಲ

ಭರ್ಜರಿ ಸಿಹಿಸುದ್ದಿ: BSNL ನ ಅತ್ಯಂತ ಜನಪ್ರಿಯ ₹1 ರೂ. ಯೋಜನೆ ಮರುಪರಿಚಯ!

ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ (BSNL) ಮತ್ತೆ ತನ್ನ ಅತ್ಯಂತ ಜನಪ್ರಿಯ ಆಫರ್‌ಗಳಲ್ಲಿ ಒಂದಾದ ₹1 ರೂ. ಯೋಜನೆಯನ್ನು ಮರು ಪರಿಚಯಿಸಿದೆ. ಕೇವಲ ₹1ಕ್ಕೆ ಸಿಮ್ ನೀಡುವ ಯೋಜನೆಗೆ ಗ್ರಾಹಕರಿಂದ ಭಾರಿ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಬಿಎಸ್‌ಎನ್‌ಎಲ್ ಈ ನಿರ್ಧಾರವನ್ನು ಕೈಗೊಂಡಿದ್ದು, ವಿಶೇಷವಾಗಿ ಕಡಿಮೆ ವೆಚ್ಚದಲ್ಲಿ ಎರಡನೇ ಮೊಬೈಲ್ ಸಂಖ್ಯೆ ಬೇಕಿರುವವರು ಅಥವಾ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಅನ್ನು ಪರೀಕ್ಷಿಸಲು ಬಯಸುವವರಿಗೆ ಈ ಆಫರ್ ಆಕರ್ಷಕವಾಗಿ ಕಾಣುತ್ತಿದೆ.ಎಸ್‌ಎನ್‌ಎಲ್ ತನ್ನ ಅಧಿಕೃತ ಎಕ್ಸ್ (X) ಖಾತೆಯ ಮೂಲಕ ತಿಳಿಸಿರುಂತೆ, ನಿರ್ದಿಷ್ಟ ಅವಧಿಗೆ ಮಾತ್ರ ಈ ₹1 ಸಿಮ್ ಲಭ್ಯವಿರಲಿದೆ. ಈ ಕುರಿತ ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.

₹1 ಬಿಎಸ್‌ಎನ್‌ಎಲ್ ಸಿಮ್‌ನಲ್ಲಿ ಏನು ಸೌಲಭ್ಯ?
₹1 ಬೆಲೆಯಲ್ಲಿ ಬಿಎಸ್‌ಎನ್‌ಎಲ್ ಮೊದಲ 30 ದಿನಗಳ ಕಾಲ ಸಂಪೂರ್ಣ ಪ್ರಿಪೇಯ್ಡ್ ಪ್ಲಾನ್‌ನಂತೆಯೇ ಸೌಲಭ್ಯಗಳನ್ನು ನೀಡುತ್ತಿದೆ. ಸಿಮ್ ಸಕ್ರಿಯಗೊಂಡ ಕೂಡಲೇ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಲಭ್ಯವಾಗುತ್ತದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಉಚಿತವಾಗಿ ಬಳಸಬಹುದು. ಡೇಟಾ ವಿಷಯದಲ್ಲಿಯೂ ಈ ಪ್ಲಾನ್ ಉತ್ತಮವಾಗಿದೆ. ಪ್ರತಿದಿನ 2GB ಹೈ-ಸ್ಪೀಡ್ ಡೇಟಾವನ್ನು ಬಿಎಸ್‌ಎನ್‌ಎಲ್ ನೀಡುತ್ತಿದೆ. ಇದು ಸಾಮಾನ್ಯ ಬ್ರೌಸಿಂಗ್, ವಾಟ್ಸಾಪ್, ಸಾಮಾಜಿಕ ಜಾಲತಾಣ ಬಳಕೆ ಹಾಗೂ ಸಣ್ಣ ಮಟ್ಟದ ವೀಡಿಯೊ ವೀಕ್ಷಣೆಗೆ ಸಾಕಾಗುತ್ತದೆ. ಈ ಎಲ್ಲಾ ಸೌಲಭ್ಯಗಳು ಸಿಮ್ ಆಕ್ಟಿವೇಶನ್‌ನ ದಿನದಿಂದ 30 ದಿನಗಳವರೆಗೆ ಮಾನ್ಯವಾಗಿರುತ್ತವೆ.

ಭರ್ಜರಿ ಸಿಹಿಸುದ್ದಿ: BSNL ನ ಅತ್ಯಂತ ಜನಪ್ರಿಯ ₹1 ರೂ. ಯೋಜನೆ ಮರುಪರಿಚಯ!

₹1 ಸಿಮ್ ಪಡೆಯುವುದು ಹೇಗೆ?
ಈ ಆಫರ್ ಪಡೆಯಲು ಆನ್‌ಲೈನ್ ಆಯ್ಕೆಯಿಲ್ಲ ಎಂಬುದನ್ನು ಗಮನಿಸಬೇಕು. ಗ್ರಾಹಕರು ತಮ್ಮ ಸಮೀಪದ ಬಿಎಸ್‌ಎನ್‌ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಅಥವಾ ಅಧಿಕೃತ ರಿಟೇಲರ್ ಅಂಗಡಿಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ಅಗತ್ಯ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ₹1ಕ್ಕೆ ಸಿಮ್ ನೀಡಲಾಗುತ್ತದೆ. ಸಿಮ್ ಸಕ್ರಿಯಗೊಂಡ ತಕ್ಷಣವೇ ಕರೆ, ಡೇಟಾ ಮತ್ತು ಎಸ್‌ಎಂಎಸ್ ಸೌಲಭ್ಯಗಳು ಕಾರ್ಯಾರಂಭ ಮಾಡುತ್ತವೆ. ಆನ್‌ಲೈನ್ ಮೂಲಕ ಈ ಆಫರ್ ಲಭ್ಯವಿಲ್ಲದ ಕಾರಣ, ಹತ್ತಿರದ ಸರ್ವಿಸ್ ಸೆಂಟರ್ ಅಥವಾ ಅಧಿಕೃತ ರಿಟೇಲರ್ ಅಂಗಡಿಗೆ ಹೋಗುವುದು ಕಡ್ಡಾಯವಾಗಿದೆ.

ಕೊನೆಯ ದಿನಾಂಕ ಮಿಸ್ ಮಾಡಿಕೊಳ್ಳಬೇಡಿ
ಬಿಎಸ್‌ಎನ್‌ಎಲ್ ತಿಳಿಸಿರುವಂತೆ, ಈ ₹1 ಸಿಮ್ ಆಫರ್ ಜನವರಿ 31, 2026ರವರೆಗೆ ಮಾತ್ರ ಲಭ್ಯವಿರುತ್ತದೆ. ಆ ಬಳಿಕ ಈ ಯೋಜನೆಯನ್ನು ವಾಪಸ್ ಪಡೆಯುವ ಸಾಧ್ಯತೆ ಕಡಿಮೆ. ಸಿಮ್ ಖರೀದಿಸಿದ ದಿನದಿಂದಲ್ಲ, ಸಕ್ರಿಯಗೊಂಡ ದಿನದಿಂದ 30 ದಿನಗಳ ಮಾನ್ಯತೆ ಆರಂಭವಾಗುತ್ತದೆ. ಆದರೂ ತಡವಾದರೆ ಈ ಅವಕಾಶ ಕೈ ತಪ್ಪುವ ಸಾಧ್ಯತೆ ಇರುವುದರಿಂದ, ಆಸಕ್ತರು ಬೇಗ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಈ ಬಿಎಸ್‌ಎನ್‌ಎಲ್ ಆಫರ್ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಳಕೆದಾರರಿಗೆ ವಿಶೇಷವಾಗಿ ಉಪಯುಕ್ತವಾಗಲಿದೆ. ಏನಂತೀರಾ?

Best Mobiles in India

English summary
BSNL has reintroduced its popular ₹1 SIM offer for a limited period following strong customer demand. The deal is ideal for users looking for a low-cost second number or those who want to try the BSNL network at minimal cost.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+