ಜೆವಿಸಿಯಿಂದ 6 ಹೊಸ ಸ್ಮಾರ್ಟ್ ಎಲ್ ಇಡಿ ಟಿವಿ ಭಾರತೀಯ ಮಾರುಕಟ್ಟೆಯಲ್ಲಿ

By Gizbot Bureau
|

ಜಪಾನಿನ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಜೆವಿಸಿ ಆಡಿಯೋ ಮತ್ತು ಇನ್-ಕಾರ್ ಎಂಟರ್ಟೈನ್ಮೆಂಟ್ ಪ್ರೊಡಕ್ಟ್ ಗಳಿಗಾಗಿ ಪ್ರಸಿದ್ಧಿಯಾಗಿರುವ ಸಂಸ್ಥೆ. ಆದರೆ ಇದು ಈಗ ಟಿವಿ ಬ್ಯುಸಿನೆಸ್ ಗೂ ಕೂಡ ಕಾಲಿಟ್ಟಿದೆ. ಈ ಬ್ರ್ಯಾಂಡ್ ಇದೀಗ ಭಾರತೀಯ ಓಇಎಂ ವೀರಾ ಗ್ರೂಪ್ ಜೊತೆಗೆ ಕೈಗೂಡಿಸಿದ್ದು ಕಳೆದ ವರ್ಷದಿಂದ ಭಾರತದಲ್ಲೂ ಹಾಜರಾಗಿದೆ ಮತ್ತು ಹಲವು ರೇಂಜಿನ ಟಿವಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಆರು ಎಲ್ಇಡಿ ಟಿವಿಗಳು:

ಆರು ಎಲ್ಇಡಿ ಟಿವಿಗಳು:

ಇದೀಗ ಈ ಕಂಪೆನಿಯು ಹೊಸದಾಗಿ ಆರು ಸ್ಮಾರ್ಟ್ ಎಲ್ಇಡಿ ಟಿವಿಗಳನ್ನು ಜೆವಿಸಿ ಬ್ರ್ಯಾಂಡ್ ನ ಅಡಿಯಲ್ಲಿ ಪ್ರಕಟಿಸಿದೆ ಮತ್ತು ಅದರ ಆರಂಭಿಕ ಬೆಲೆ 16,999 ರುಪಾಯಿಗಳು. ಹೊಸ ಟಿವಿಗಳ ಸ್ಕ್ರೀನ್ ಸೈಜ್ 40 ರಿಂದ 55 ಇಂಚಿನವರೆಗೂ ಕೂಡ ಲಭ್ಯವಿದೆ.

ಎಪ್ರಿಲ್ 6 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಸೇಲ್:

ಎಪ್ರಿಲ್ 6 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಸೇಲ್:

ಎಪ್ರಿಲ್ 6 ರಿಂದ ಈ ಎಲ್ಲಾ ರೇಂಜಿನ ಟಿವಿಗಳು ಫ್ಲಿಪ್ ಕಾರ್ಟ್ ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ ಮತ್ತು ಇದರ ರೆಸಲ್ಯೂಷನ್ ಫುಲ್ ಹೆಚ್ ಡಿ ಅಥವಾ 4ಕೆ, ಇದು ಟಿವಿಯ ಸ್ಕ್ರೀನ್ ಸೈಜ್ ಮೇಲೆ ನಿರ್ಧರಿತವಾಗಿರುತ್ತದೆ.

ಬೇರೆ ಬೇರೆ ಸ್ಕ್ರೀನ್ ಸೈಜ್ ಮತ್ತು ಕನೆಕ್ಟಿವಿಟಿ ಆಯ್ಕೆಗಳು:

ಬೇರೆ ಬೇರೆ ಸ್ಕ್ರೀನ್ ಸೈಜ್ ಮತ್ತು ಕನೆಕ್ಟಿವಿಟಿ ಆಯ್ಕೆಗಳು:

ಒಟ್ಟು ನಾಲ್ಕು ಸ್ಕ್ರೀನ್ ಸೈಜ್ ಗಳು ಲಭ್ಯವಿದೆ- 40 ಇಂಚುಗಳು ,43 ಇಂಚುಗಳು, 49 ಇಂಚುಗಳು, ಮತ್ತು 55 ಇಂಚುಗಳು.ಎಲ್ಲಾ ಹೊಸ ರೇಂಜಿನ ಟಿವಿಗಳು ಸ್ಮಾರ್ಟ್ ಟಿವಿಗಳಾಗಿದ್ದು ಪ್ರಮುಖ ಆಪ್ ಗಳಿಗೆ ಬೆಂಬಲ ನೀಡುತ್ತದೆ ಉದಾಹರಣೆಗೆ ಹಾಟ್ ಸ್ಟಾರ್, ಅಮೇಜಾನ್ ಪ್ರೈಮ್ ವೀಡಿಯೋ, ನೆಟ್ ಫ್ಲಿಕ್ಸ್ ಮತ್ತು ಯುಟ್ಯೂಬ್.ಈ ಟಿವಿಯು ಮಿರಾಕಾಸ್ಟ್ ಮತ್ತು 2ಜಿಬಿ ಮೆಮೊರಿ, 16ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯೊಂದಿಗೆ ಲಭ್ಯವಾಗುತ್ತದೆ. ಕ್ವಾಡ್ ಕೋರ್ ಪ್ರೊಸೆಸರ್ ಗಳು ಮತ್ತು 50W ವರೆಗಿನ ಸೌಂಡ್ ಔಟ್ ಪುಟ್ 55 ಇಂಚಿನ ವೇರಿಯಂಟ್ ನಲ್ಲಿ ಲಭ್ಯವಿದೆ ಜೊತೆಗೆ ಸೌಂಡ್ ಟ್ಯೂನಿಂಗ್ ಗೆ ಡಾಲ್ಬೈ ಸರ್ಟಿಫಿಕೇಷನ್ ಇದೆ.

ಇತರೆ ಫೀಚರ್ ಗಳು:

ಇತರೆ ಫೀಚರ್ ಗಳು:

ಸ್ಮಾರ್ಟ್ ಟಿವಿಯಲ್ಲಿ ಸ್ಟ್ಯಾಂಡರ್ಡ್ ಕನೆಕ್ಟಿವಿಟಿ ಆಯ್ಕೆಗಳಿದ್ದು ಅದರಲ್ಲಿ ವೈಪೈ, ಆನ್ ಲೈನ್ ಸೇವೆಗಳಿಗಾಗಿ ಲ್ಯಾನ್, HDMI ಮತ್ತು ಸೋರ್ಸ್ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕೆ USB ಇದೆ.ಕಾರ್ ಆಡಿಯೋ ಔಟ್ ಪುಟ್ ನ ಸಾಮಗ್ರಿಗಳು, ಹೆಡ್ ಫೋನ್ ಮತ್ತು ಪ್ರೊಜೆಕ್ಟರ್ ಗಳಿಗಾಗಿ ಜೆವಿಸಿ ಬ್ರ್ಯಾಂಡ್ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಇದೀಗ ವಿಭಿನ್ನ ರೇಂಜಿನ ಟಿವಿಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಭಾರತದ ಮಾರ್ಕೆಟಿಂಗ್:

ಭಾರತದಲ್ಲಿ ಜೆವಿಸಿ ಟಿವಿಗಳನ್ನು ತಯಾರಿಸಿ ಮಾರ್ಕೆಟಿಂಗ್ ಮಾಡುವ ಜವಾಬ್ದಾರಿ ವೈಯರಾ ಗ್ರೂಪ್ ಗೆ ಇದೆ. ಇದು ನೊಬೆಲ್ ಸ್ಕಿಡಿಯೋ ಬ್ರ್ಯಾಂಡ್ ಅಡಿಯಲ್ಲಿ ತಯಾರಿಸಿ ಟಿವಿಗಳನ್ನು ಮಾರಾಟ ಮಾಡುತ್ತದೆ. ಈ ಕಂಪೆನಿಯು ಇತ್ತೀಚೆಗಷ್ಟೇ ಹೊಸ ರೇಂಜಿನ ಕೈಗೆಟುಕುವ ಬೆಲೆಯ ಸ್ಮಾರ್ಟ್ ಲೈಟ್ ಎಲ್ಇಡಿ ಟಿವಿಯನ್ನು ನೊಬೆಲ್ ಸ್ಕಿಡಿಯೋ ಬ್ರ್ಯಾಂಡ್ ನ ಅಡಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು ಮತ್ತು ಇದರ ಬೆಲೆ 6,999 ರುಪಾಯಿಯಿಂದ ಆರಂಭವಾಗುತ್ತದೆ.

Best Mobiles in India

Read more about:
English summary
JVC Launches 6 New Smart LED TVs in India, Prices Start at Rs. 16,999

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X