ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App !

Posted By: Varun
ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App !

ಕನ್ನಡಿಗರಾದ ನಮಗೆ ನಮ್ಮ ಭಾಷೆಯ ಬಗ್ಗೆ ಎಷ್ಟು ಹೆಮ್ಮೆ, ಆಭಿಮಾನವಿದೆಯೋ ಅಷ್ಟೇ ಗೌರವ ನಮಗೆ ಸಂಸ್ಕೃತದಬಗ್ಗೆಯೂ ಇದೆ. ಹಾಗಾಗಿ ಅದರ ರಸಸ್ವಾದ ನಮ್ಮ ಜನರಿಗೂ ದಕ್ಕಲಿ ಎಂದೇ ಹಲವಾರು ಮಹನೀಯರು ಸಂಸೃತದಿಂದ ಕನ್ನಡಕ್ಕೆ ಬೃಹತ್ ಗ್ರಂಥಗಳಿಂದ ಹಿಡಿದು, ಭಗವದ್ಗೀತೆಯನ್ನೂ ಅನುವಾದಿಸಿ ಅದರ ರುಚಿಯನ್ನು ಉಣಬಡಿಸಿದ್ದಾರೆ.

ಈ ನಿಟ್ಟಿನಲ್ಲಿ ಹೊಸದೊಂದು ಪ್ರಯತ್ನ ನಡೆಸಿ ಸಂಸ್ಕೃತ ಸುಭಾಷಿತಗಳನ್ನು ಪದ್ಯಾನುವಾದ ಮಾಡಿರುವ ಹಂಸಾನಂದಿ ಕಾವ್ಯನಾಮಾಂಕಿತ ರಾಮಪ್ರಸಾದ್ ಕೆವಿ ರವರ ಖ್ಯಾತ ಪುಸ್ತಕ ಹಂಸನಾದ ದ ಆಂಡ್ರಾಯ್ಡ್ ಆಪ್ ಒಂದನ್ನು ಸಿದ್ದಪಡಿಸಿದೆ, ಸಾರಂಗ ಇನ್ಫೋಟೆಕ್.

ಆಕೃತಿ ಪ್ರಕಾಶನದ ಗುರುಪ್ರಸಾದ್ ಹೊರತಂದಿರುವ ಪುಸ್ತಕವನ್ನ ಸಾರಂಗ ಇನ್ಫೋಟೆಕ್ ಸಂಸ್ಥೆಯ ಹರಿಪ್ರಸಾದ್ ನಾಡಿಗ್ ಅವರು ಸಂಪದ ವೆಬ್ ತಾಣದ ಮೂಲಕ ಎಲ್ಲರಿಗೂ ಚಿರಪರಿಚಿತರು. ಈಗ ಈ ಪುಸ್ತಕದ ಆಂಡ್ರಾಯ್ಡ್ ಆಪ್ ಅನ್ನು ಹೊರತಂದಿದ್ದು, ಇದು ಪುಸ್ತಕವನ್ನು ಆಂಡ್ರಾಯ್ಡ್ ಆಪ್ ಆಗಿ ಮಾಡಿದ ಕನ್ನಡದಮೊದಲ ಸುಭಾಷಿತ ಆಪ್ ಆಗಿದೆ.

ಈ ಉಚಿತ ಆಪ್(App) ಮೂಲಕ ನೀವು ಪುಸ್ತಕದಲ್ಲಿರುವ ಸುಮಾರು 150ಕ್ಕೂ ಹೆಚ್ಚು ಸುಭಾಷಿತಗಳನ್ನು ಕನ್ನಡದಲ್ಲಿ ಓದುವುದಷ್ಟೇ ಅಲ್ಲದೆ, ನಿಮ್ಮ ಸ್ನೇಹಿತರಿಗೆ ಫೇಸ್ ಬುಕ್ ಹಾಗು ಟ್ವಿಟರ್ ಮೂಲಕ ಶೇರ್ ಕೂಡ ಮಾಡಬಹುದಾಗಿದೆ. ವಿಶೇಷವೇನೆಂದರೆ ಇದನ್ನು ಯೂನಿಕೋಡ್ ಬೆಂಬಲವಿಲ್ಲದ ಸಾಧನಗಳಲ್ಲೂ ಓದಬಹುದಾಗಿದೆ.

ಇದನ್ನು ಅಭಿವೃದ್ಧಿಪಡಿಸಿದ ಸಾರಂಗ ಇನ್ಫೋಟೆಕ್ ನ ಹರಿಪ್ರಸಾದ್ ನಾಡಿಗ್ ಹಾಗು ಪುಸ್ತಕದ ಲೇಖಕ ಹಂಸಾನಂದಿ ರವರಿಗೆ ನಮ್ಮ ಅಭಿನಂದನೆಗಳು.

ಇದನ್ನು ಗೂಗಲ್ ಪ್ಲೇ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಇಲ್ಲಿ ಕ್ಲಿಕ್ ಮಾಡುವ ಮೂಲಕ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot