ಹಾಸ್ಯ ಚಕ್ರವರ್ತಿ ನರಸಿಂಹರಾಜು ವೆಬ್ಸೈಟ್ ನೋಡಿದ್ದೀರಾ?

Posted By: Varun
ಹಾಸ್ಯ ಚಕ್ರವರ್ತಿ ನರಸಿಂಹರಾಜು ವೆಬ್ಸೈಟ್ ನೋಡಿದ್ದೀರಾ?

ಕನ್ನಡ ಚಿತ್ರರಂಗದ ಚಾರ್ಲಿ ಚಾಪ್ಲಿನ್, ಹಾಸ್ಯ ಚಕ್ರವರ್ತಿ ಬಿರುದಾಂಕಿತ ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ ಟಿ.ಆರ್ ನರಸಿಂಹರಾಜು (24.07.1923 - 11.07.1979) ಅವರ ಬಣ್ಣದ ಬದುಕು ವಯಕ್ತಿಕ ಜೀವನ, ಮಾಡಿದ ಕಲಾಸೇವೆ, ಅವರ ನಟನೆಯಷ್ಟೇ ವರ್ಣರಂಜಿತ.

ಸುಮಾರು 5 ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದ ಸೇವೆಯಲ್ಲಿ ನಟನಾಗಿ, ನಿರ್ಮಾಪಕನಾಗಿ ತೊಡಗಿಸಿಕೊಂಡಿದ್ದ ನರಸಿಂಹರಾಜು ಇವತ್ತಿಗೂ ನಮ್ಮನ್ನು ತಮ್ಮ ಚಿತ್ರಗಳ ಮೂಲಕ ನಗಿಸುತ್ತಿದ್ದಾರೆ. ಇಂತಹ ಮಹಾನ್ ನಟ ನಮ್ಮನ್ನಗಲಿ 30 ವರ್ಷಗಳಾದರೂ ಅವರ ನೆನಪು ಮಾಸಿಲ್ಲ.

ಅವರ ನೆನಪಿನಲ್ಲಿ ಮೊನ್ನೆ, ಅವರ ಹುಟ್ಟಿದ ದಿನದಂದು ಆಂಗ್ಲ ವೆಬ್ಸೈಟ್ ಒಂದು ಬಿಡುಗಡೆಯಾಗಿದೆ. ಅತ್ಯಂತ ಸುಂದರವಾಗಿ ಅಚ್ಚುಕಟ್ಟಾಗಿ ಅವರ ಜೀವನ, ಸಿನಿಮಾ ಬದುಕಿನ ಬಗೆಗಿನ ಮಾಹಿತಿ ಇದರಲ್ಲಿ ಕೊಡಲಾಗಿದ್ದು, ಅವರ ಕೆಲವು ಅಪರೂಪದ ಚಿತ್ರಗಳೂ ಇದರಲ್ಲಿ ಇವೆ. ಅವರ ಬಗೆಗಿನ ಪ್ರಬಂಧ ಸ್ಪರ್ಧೆಯ ವಿವರಗಳೂ ಇದರಲ್ಲಿದ್ದು, ಹಾಸ್ಯ ನಟನ ಈ ಸುಂದರವಾದ ವೆಬ್ಸೈಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot