ಸರಣಿ ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಕೆಣಕಿದ ರಾಮ್‌ಗೋಪಾಲ್‌ ವರ್ಮ..!!!!

Written By:

ಸತ್ಯರಾಜ್ ವಿಚಾರದಲ್ಲಿ ಕನ್ನಡಗರು ನಡೆದುಕೊಂಡ ಬಗ್ಗೆ ಮುನಿಸಿಟ್ಟುಕೊಂಡಿರುವಂತೆ ಕಾಣುತ್ತಿರುವ ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಸರಣಿ ಟ್ವೀಟ್ ಮಾಡುವ ಮೂಲಕ ಮತ್ತೇ ಕನ್ನಡಿಗರ ಭಾಷಾಭಿಮಾನವನ್ನು ಕೆಣಕಿದ್ದಾರೆ.

ಸರಣಿ ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಕೆಣಕಿದ ರಾಮ್‌ಗೋಪಾಲ್‌ ವರ್ಮ..!!!!

'ಬಾಹುಬಲಿ 2' ಸಿನಿಮಾದ ಕರ್ನಾಟಕದಲ್ಲಿ ಹೆಚ್ಚಿನ ಯಶಸ್ಸು ಕಂಡಿದ್ದಕ್ಕೆ ಕನ್ನಡಿಗರನ್ನು ಅವಮಾನಿಸುವಂತೆ ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಮೂರು ಟ್ವೀಟ್ ಪೋಸ್ಟ್‌ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಕನ್ನಡದ ಬಗ್ಗೆ ಕನ್ನಡಿಗರಿಗೆ ಅಭಿಮಾನವಿಲ್ಲ:

ಬಾಹುಬಲಿ 2 ಸಿನಿಮಾ ಕರ್ನಾಟಕದಲ್ಲಿ ಯಶಸ್ಸು ಕಂಡಿದೆ. ಇಷ್ಟು ಪ್ರಮಾಣದಲ್ಲಿ ಕನ್ನಡ ಸಿನಿಮಾ ಹಿಟ್ ಆಗಿಲ್ಲ. ಹೀಗಾಗಿ ಕನ್ನಡದ ಬಗ್ಗೆ ಕನ್ನಡಿಗರಿಗೆ ಅಭಿಮಾನವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡಿಗರು ತಮ್ಮ ಭಾಷೆಯ ಸಿನಿಮಾಗಳು ನೋಡುವುದಿಲ್ಲ:

ಕನ್ನಡಿಗರು ತಮ್ಮ ಭಾಷೆಯ ಸಿನಿಮಾಗಳನ್ನು ಬಿಟ್ಟು. ತೆಲುಗು ಭಾಷೆಯ ಸಿನಿಮಾವೊಂದನ್ನು ಹಿಟ್ ಮಾಡಿರುವದಕ್ಕೆ ಕನ್ನಡಿಗರ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡಬೇಕು ಎಂದಿದ್ದಾರೆ.

ಕನ್ನಡಿಗರಿಗೆ ಭಾಷೆ ಮುಖ್ಯವಲ್ಲ:

‘ಕನ್ನಡಿಗರಿಗೆ ಭಾಷಾಭಿಮಾನ ಮುಖ್ಯವಲ್ಲ, ಅವರಿಗೆ ಒಳ್ಳೆಯ ಸಿನಿಮಾ ಬೇಕು ಎನ್ನುವುದನ್ನು ಈಗ ಸಾಬೀತಾಗಿದೆ. ಇದರಿಂದ ಡಬ್ಬಿಂಗ್ ವಿರುದ್ಧದ ಕನ್ನಡಿಗರ ಹೋರಾಟ ಛಿದ್ರಗೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ವರ್ಮ ವಿರುದ್ಧ ಆಕ್ರೋಶ:

ವರ್ಮ ವಿರುದ್ಧ ಆಕ್ರೋಶ:

ಸದ್ಯ ಯಾವುದೇ ಹಿಟ್ ಸಿನಿಮಾ ನೀಡದೆ ಕೈಕಟ್ಟಿ ಕುಳಿತುಕೊಂಡಿರುವ ವರ್ಮಗೆ ಮಾಡಲು ಏನಾದರು ಕೆಲಸ ಕೊಡಿ ಎಂದು ಹ್ಯಾಸ ಮಾಡುವ ಮೂಲಕ ವರ್ಮ ವಿರುದ್ಧ ಕನ್ನಡಿಗರು ತಿರುಗಿ ಬಿದಿದ್ದಾರೆ. ವರ್ಮ ತಲೆ ಸರಿಯಿಲ್ಲ ಎಂದು ಕೆಲವರು ಗೇಲಿ ಮಾಡಿದ್ದಾರೆ. ಇನ್ನು ಕೆಲವರು ಕನ್ನಡ ಚಿತ್ರಗಳ ಹಿಟ್ ಲಿಸ್ಟ್ ತೋರಿಸಿದ್ದಾರೆ.

ಜಗ್ಗೇಶ್ ಕೊಟ್ಟ ಉತ್ತರ ಹೀಗಿದೆ..!

ಟ್ವೀಟರ್ ನಲ್ಲಿ ಆಕ್ಟೀವ್ ಆಗಿರುವ ನಟ, ರಾಜಕಾರಣಿ ಜಗ್ಗೇಶ್ ಅವರು ವರ್ಮಾರ ಟ್ವೀಟ್ ಗೆ ತಮ್ಮದೇ ರೀತಿಯಲ್ಲಿ ಉತ್ತರವನ್ನು ನೀಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Ram Gopal Varma is at it again. The filmmaker, who has been relentlessly tweeting about SS Rajamouli's Baahubali 2: The Conclusion, took potshots at Kannadigas, saying that they have "no pride at all" to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot