2013 ರಿಂದ ರೋಮಿಂಗ್‌ ಚಾರ್ಜ್‌ಗಳಿಲ್ಲ: ಕಪಿಲ್‌ ಸಿಬಲ್‌

Posted By: Staff
2013 ರಿಂದ ರೋಮಿಂಗ್‌ ಚಾರ್ಜ್‌ಗಳಿಲ್ಲ: ಕಪಿಲ್‌ ಸಿಬಲ್‌

ರಾಜ್ಯದಿಂದ ರಾಜ್ಯಗಳಿಗೆ ಪದೇ ಪದೇ ಪ್ರಯಾಣ ಬೆಳೆಸುವವರಿಗೊಂದು ಸಿಹಿ ಸುದ್ಧಿ, 2013 ರ ನಂತರ ಭಾರತದಲ್ಲಿ ಯಾವುದೇ ಮೂಲೆಗಳಿಗೆ ತೆರಳಿದರೂ ರೋಮಿಂಗ್‌ ಚಾರ್ಜ್‌ಗಳನ್ನು ಭರಿಸುವಂತಿಲ್ಲ ಎಂದು ಭಾರತ ಸರ್ಕಾರ ಇಂದು ಖಚಿತಪಡಿಸಿದೆ.

2012 ರ ಆರಂಭದಲ್ಲಿ ಕೇಂದ್ರ ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್‌ ಸಿಬಲ್‌ "ಒನ್‌ ನೇಷನ್‌ ಫ್ರೀ ರೋಮಿಂಗ್‌" ಯೋಜನೆಯನ್ನು ಘೋಷಿಸಿದ್ದರು, ಇದೀಗ 2013 ರ ಬಳಿಕ ಮೊಬೈಲ್‌ ಗ್ರಾಹಕರು ಯಾವುದೇ ರೋಮಿಂಗ್‌ ಚಾರ್ಜ್‌ಗಳನ್ನು ಭರಿಸುವ ಹಾಗೀಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.

“ಕಾರ್ಯದರ್ಶಿಗಳು ಹೇಳಿರುವಂತೆ ಮುಂದಿನ ವರ್ಷದಿಂದ ಭಾರತ ರೋಮಿಂಗ್‌ ಮುಕ್ತವಾಗಿರುತ್ತದೆ” ಈ ರೋಮಿಂಗ್‌ ಚಾರ್ಜ್‌ ಗಳನ್ನು ತಗೆಯ ಬೇಕೆ ಅಥವ ಬೇಡವೇ ಎಂಬುದನ್ನು ನಿರ್ಧರಿಸುವ ಸಲುವಾಗಿ ರಾಷ್ಟ್ರೀಯ ಟೆಲಿಕಾಮ್‌ ನೀತಿಯು 2012 ರ ಅಡಿಯಲ್ಲಿ ವಿಚಾರಣೆಯನ್ನು ಕೈಗೊಳ್ಳಲಾಗಿತ್ತು. ಇದಾದನಂತರ ಮೇ 2012 ರಂದು ಎನ್‌ಟಿಪಿ ಯುತನ್ನಯ ವರದಿಯಲ್ಲಿ ಬಳಕೆದಾರರು ಭಾರತದಾದ್ಯಂತ ಒಂದೇ ಮೊಬೈಲ್ ಸಂಖ್ಯೆ ಬಳಸಲು ನೆರವಾಗುವಂತೆ ರೋಮಿಂಗ್‌ ಚಾರ್ಜ್‌ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಮ್ಮತಿ ಸೂಚಿಸಿದೆ ಎಂದು ಕಪಿಲ್‌ ಸಿಬಲ್‌ ತಿಳಿಸಿದ್ದಾರೆ.

ಅಂದಹಾಗೇ ಇದರ ಪರಿಣಾಮವು ಮೊಬೈಲ್‌ ಕರೆಗಳ ದರದ ಮೇಲೆ ಬೀಳುವ ಸಾಧ್ಯತೆಗಳಿದೆ.

Read In English...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot