ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಗೆ ಎಂಟ್ರಿ ನೀಡಿದ ಕಾರ್ಬನ್‌ ಸಂಸ್ಥೆ!

|

ಫೀಚರ್‌ ಫೋನ್‌ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸೌಂಡ್‌ ಮಾಡಿದ್ದ ಕಾರ್ಬನ್‌ ಕಂಪೆನಿ ಇದೀಗ ಭಾರತದಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್‌ ಬೆಲೆಯಲ್ಲಿ ಪರಿಚಯಿಸಿ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ಮೇಡ್‌ ಇನ್‌ ಇಂಡಿಯಾ, ಮೇಡ್‌ ಫಾರ್‌ ಇಂಡಿಯಾ ಶ್ರೇಣಿಯಲ್ಲಿ ಹೊಸ ಸ್ಮಾರ್ಟ್‌ಟಿವಿ ಮತ್ತು ಎಲ್‌ಇಡಿ ಟಿವಿಗಳನ್ನು ಪರಿಚಯಿಸಿದೆ.

ಕಾರ್ಬನ್‌

ಹೌದು, ಜನಪ್ರಿಯ ಕಾರ್ಬನ್‌ ಕಂಪೆನಿ ಭಾರತದ ಟಿವಿ ಮಾರುಕಟ್ಟೆಗೆ ಕಾಲಿಟ್ಟಿದೆ. ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸ್ಮಾರ್ಟ್ LED ಟಿವಿಗಳನ್ನು ಪರಿಚಯಿಸಿದೆ. ಕಂಪನಿಯು ತನ್ನ ಹೊಸ 'ಮೇಡ್ ಇನ್ ಇಂಡಿಯಾ', 'ಮೇಡ್ ಫಾರ್ ಇಂಡಿಯಾ' ಶ್ರೇಣಿಯ ಸ್ಮಾರ್ಟ್ ಟಿವಿಗಳು ಮತ್ತು ಎಲ್‌ಇಡಿ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ಜೊತೆಗೆ ಕಂಪನಿಯು ತಮ್ಮ ಹೊಸ ಶ್ರೇಣಿಯ ಸ್ಮಾರ್ಟ್ ಟಿವಿಗಳ ಮಾರಾಟಕ್ಕಾಗಿ ರಿಲಯನ್ಸ್ ಡಿಜಿಟಲ್ ಜೊತೆ ಪಾಲುದಾರಿಕೆ ಹೊಂದಿದೆ. ಹಾಗಾದ್ರೆ ಕಾರ್ಬನ್‌ ಕಂಪೆನಿಯ ಹೊಸ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್

ಭಾರತದಲ್ಲಿ ಹೊಸ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುವುದರ ಬಗ್ಗೆ ಕಾರ್ಬನ್ ಎಂಡಿ ಪರ್ದೀಪ್ ಜೈನ್ ಮಾಹಿತಿ ಹಂಚಿಕೊಂಡಿದ್ದಾರೆ. ಡಿಜಿಟಲ್ ಇಂಡಿಯಾದ ಸಹಯೋಗದಲ್ಲಿ ಈ ಹೊಸ ಸ್ಮಾರ್ಟ್‌ಟಿವಿಗಳು ಹೊಸ ಸಂಚಲನ ಸೃಷ್ಟಿಸಲಿವೆ ಎನ್ನುವ ಮಾತನ್ನು ಹೇಳಿದ್ದಾರೆ. ನಮ್ಮ ಹೊಸ ಶ್ರೇಣಿಯ ಸ್ಮಾರ್ಟ್ ಎಲ್‌ಇಡಿ ಟಿವಿಗಳು ಮತ್ತು ಎಲ್‌ಇಡಿ ಟಿವಿಗಳು ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್ ಕ್ರಾಂತಿಯ ಟಾರ್ಚ್-ಬೇರರ್‌ಗಳಲ್ಲಿ ಒಂದಾಗಿರುವ ಕಾರ್ಬನ್ ಸ್ಮಾರ್ಟ್‌ಟಿವಿ ವಲಯದಲ್ಲೂ ದಾಖಲೆ ಬರೆಯುವ ಸೂಚನೆ ನೀಡಿದೆ.

ಸ್ಮಾರ್ಟ್‌ಟಿವಿ

ಇನ್ನು ಕಾರ್ಬನ್ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಟಿವಿಗಳನ್ನು ವಿವಿಧ ಗಾತ್ರದ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಅದರಲ್ಲೂ ಸ್ಮಾರ್ಟ್ LED ಟಿವಿ ಶ್ರೇಣಿಯು KJW39SKHD, KJW32SKHD (Bezel-ಲೆಸ್ ಡಿಸೈನ್) & KJWY32SKHD, ಎಂಬ ಮೂರು ಮಾದರಿಗಳನ್ನು ಒಳಗೊಂಡಿದೆ. ಜೊತೆಗೆ ಎಲ್ಇಡಿ ಟಿವಿ ಶ್ರೇಣಿಯು ಗ್ರಾಹಕರ ಮನರಂಜನಾ ಅನುಭವವನ್ನು ವರ್ಧಿಸಲು KJW24NSHD ಮತ್ತು KJW32NSHD ಮಾದರಿಗಳನ್ನು ಹೊಂದಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು 7,990ರೂ.ಗಳಿಂದ ಪ್ರಾರಂಭವಾಗುತ್ತವೆ ಎಂದು ಬಹಿರಂಗಪಡಿಸಿದೆ.

ಸ್ಮಾರ್ಟ್

ಇದಲ್ಲದೆ ಸ್ಮಾರ್ಟ್ LED ಟಿವಿ ಶ್ರೇಣಿಯು ಹೊಸ ಆಡಿಯೊ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ. ಮನೆಯಲ್ಲಿ ಥಿಯೇಟರ್ ಅನುಭವ ನೀಡುವುದಕ್ಕಾಗಿ ಈ ಸ್ಮಾರ್ಟ್ಟಿವಿಗಳಲ್ಲಿ ವಿಶಾಲವಾದ ವೀಕ್ಷಣಾ ಕೋನ, ಸುಂದರವಾದ HD ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಈ ಸ್ಮಾರ್ಟ್‌ಟಿವಿಯೊಂದಿಗೆ ಸ್ಥಾಪಿಸಲಾದ ಮೂವಿ ಬಾಕ್ಸ್‌ನೊಂದಿಗೆ ಬರಲಿದೆ. ಇದರ ಮೂಲಕ ಬಳಕೆದಾರರು ಅನಿಯಮಿತ ಮನರಂಜನೆಗಾಗಿ ಸಾಕಷ್ಟು ಚಲನಚಿತ್ರಗಳನ್ನು ಆನಂದಿಸಬಹುದು. ತಡೆರಹಿತ ಸಂಪರ್ಕವನ್ನು ನೀಡುವುದರಿಂದ, ಸ್ಮಾರ್ಟ್ ಟಿವಿಯನ್ನು ಬಹು ಸಾಧನಗಳೊಂದಿಗೆ ತ್ವರಿತವಾಗಿ ಸಂಪರ್ಕಿಸಬಹುದು. KJW24NSHD ಮತ್ತು KJW32NSHD LED TV ಶ್ರೇಣಿಯ HD-ಸಿದ್ಧ ಪ್ರದರ್ಶನವು ದೃಶ್ಯಗಳನ್ನು ಜೀವಂತವಾಗಿಸುತ್ತದೆ. ಇದರಲ್ಲಿರುವ ವಿಶಿಷ್ಟ ಮತ್ತು ಗಮನಾರ್ಹ ವಿನ್ಯಾಸವು ಗಮನಾರ್ಹ ಪ್ರಭಾವವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಕಾರ್ಬನ್‌

ಸದ್ಯ ಕಾರ್ಬನ್‌ ಸಂಸ್ಥೆ ಭಾರತದಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕ ಹಾಗೂ ಭಾರತದ ಮಧ್ಯಮವರ್ಗದವರನ್ನು ಗುರಿಯಾಗಿರಿಸಿಕೊಂಡಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ವಲಯದಲ್ಲಿ ಕ್ರಾಂತಿ ಬರೆದಿದ್ದ ಕಾರ್ಬನ್‌ ಸ್ಮಾರ್ಟ್‌ಟಿವಿವಲಯದಲ್ಲೂ ಸಂಚಲನ ಮೂಡಿಸಿದೆ. ಈ ಎಲ್ಲಾ ಸ್ಮಾರ್ಟ್ ಟಿವಿಗಳು ಪವರ್‌ಫುಲ್‌ ಸೌಂಡ್‌ ಸಿಸ್ಟಂನೊಂದಿಗೆ ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿರಲಿವೆ ಎನ್ನಲಾಗಿದೆ. ಈ ಸ್ಮಾರ್ಟ್‌ಟಿವಿಗಳು 7,990ರೂ.ಗಳಿಂದ ಪ್ರಾರಂಭವಾಗುತ್ತವೆ ಎನ್ನಲಾಗಿದೆ, ಆದರೆ ಪೂರ್ಣ ಪ್ರಮಾಣದಲ್ಲಿ ಇವುಗಳ ಬೆಲೆ ಎಷ್ಟಿರಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

Best Mobiles in India

English summary
Karbonn is all set to venture into the TV market in India.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X