Subscribe to Gizbot

ಕಾರ್ಬನ್‌ನ ಹೊಸ ಟ್ಯಾಬ್ಲೆಟ್ ರೂ 6,800 ಕ್ಕೆ

Written By:

ಭಾರತೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಾರ್ಬನ್ ಕಂಪೆನಿ ಇಂದು ಟ್ಯಾಬ್ಲೆಟ್ ಡಿವೈಸ್ ಅನ್ನು ಲಾಂಚ್ ಮಾಡಿದ್ದು ಆನ್‌ಲೈನ್ ತಾಣ ಸ್ನ್ಯಾಪ್‌ಡೀಲ್‌ನಲ್ಲಿ ರೂ 6,800 ಕ್ಕೆ ದೊರೆಯುತ್ತಿದೆ.

ಕಾರ್ಬನ್ ST72 ಹೆಸರಿನ ಈ ಟ್ಯಾಬ್ಲೆಟ್ ಬಿಳಿ, ಕಪ್ಪು ಮತ್ತು ಬೂದು ಬಣ್ಣದಲ್ಲಿ ಬಂದಿದ್ದು ಡ್ಯುಯಲ್ ಸಿಮ್ ಬೆಂಬಲ ಹಾಗೂ 3ಜಿ ಸಂಪರ್ಕವನ್ನು ಪಡೆದುಕೊಂಡಿದೆ. ಭಾರತದಲ್ಲಿ ಇದುವರೆಗೆ ಲಾಂಚ್ ಮಾಡಿರುವ ಅತ್ಯಂತ ಕಡಿಮೆ ದರದ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಚಾಲನೆಯುಳ್ಳ ಟ್ಯಾಬ್ಲೆಟ್ ಆಗಿ ಇದು ಹೊರಹೊಮ್ಮಿದೆ.

 ಕಾರ್ಬನ್ ST72 ಟ್ಯಾಬ್ಲೆಟ್‌ ಸ್ನ್ಯಾಪ್‌ಡೀಲ್‌ನಲ್ಲಿ!

ಕಾರ್ಬನ್ ST72 ವಿಶೇಷತೆಗಳು
ಕಾರ್ಬನ್ ST72, 7 ಇಂಚಿನ ಡಿಸ್‌ಪ್ಲೇಯನ್ನು ಒದಗಿಸುತ್ತಿದ್ದು ಇದರ ರೆಸಲ್ಯೂಶನ್ 1024 x 600 ಪಿಕ್ಸೆಲ್‌ಗಳಾಗಿವೆ. ಇದು 1.3 GHZ ಡ್ಯುಯಲ್ ಕೋರ್ ಪ್ರೊಸೆಸರ್‌ನೊಂದಿಗೆ ಬಂದಿದ್ದು 512 ಎಮ್‌ಬಿ RAM ಅನ್ನು ಫೋನ್ ಒಳಗೊಂಡಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ.

ಈ ಅತ್ಯಾಧುನಿಕ ಟ್ಯಾಬ್ಲೆಟ್ 4 ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಬಂದಿದ್ದು, ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್‌ಬೈಯಾಗಿರುವ ಈ ಡಿವೈಸ್ 3.2 ರಿಯರ್ ಕ್ಯಾಮೆರಾ ಮತ್ತು ಮುಂಭಾಗ ವಿಜಿಎ ಶೂಟರ್‌ ಜೊತೆಗೆ ಬಂದಿದೆ.

ಇನ್ನು ಡಿವೈಸ್‌ನ ಅಳತೆಯನ್ನು ಗಮನಿಸುವುದಾದರೆ 184.5x100x8.9mm ಮತ್ತು ತೂಕ 290 ಗ್ರಾಮ್‌ಗಳಾಗಿದೆ. ಇದು 3ಜಿ, ವೈಫೈ 802.11b/g/n, ಬ್ಲ್ಯೂಟೂತ್ ಮತ್ತು ಜಿಪಿಎಸ್ ಸಂಪರ್ಕವನ್ನು ಪಡೆದುಕೊಂಡಿದೆ. ಕಾರ್ಬನ್ ST72 ನಲ್ಲಿ 2800mAh ಬ್ಯಾಟರಿಯನ್ನು ಪಡೆದುಕೊಂಡಿದೆ.

ಈ ಹೊಸ ಡಿವೈಸ್ ವಾಯ್ಸ್ ಕರೆಗೆ ಬೆಂಬಲವನ್ನು ಒದಗಿಸುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಡಿವೈಸ್ ಜಾದೂವನ್ನು ಮಾಡಲಿದೆ ಎಂಬುದಂತೂ ಸತ್ಯ.

English summary
This article tells about Karbonn new tablet named as ST72 now available in India price of Rs. 6,800. It is supporting voice calling and 3G connection.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot