ಪಿಯು ವಿದ್ಯಾರ್ಥಿಗಳೇ ನೀವೇ ಮೊದಲು ಫಲಿತಾಂಶ ನೋಡಬೇಕೆ..??

Written By:

ಇಂದು ರಾಜ್ಯದಲ್ಲಿ ಪಿಯು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ನಿರೀಕ್ಷಿಸುತ್ತಿದ್ದಂತ ದಿನವಾಗಿದ್ದು, ಅವರ ಭವಿಷ್ಯ ನಿರ್ಧರಿಸುವ ಫಲಿತಾಂಶ ಇಂದು ಮಧ್ಯಾಹ್ನ ಲಭ್ಯವಾಗಲಿದೆ ಈ ಹಿನ್ನಲೆಯಲ್ಲಿ ವೈಬ್‌ಸೈಟ್‌ಗಳಲ್ಲಿ ಮೊದಲಿಗೆ ಫಲಿತಾಂಶವು ದೊರೆಯಲಿದ್ದು, ಅದಕ್ಕಾಗಿ ಎಲ್ಲಿ ಹುಡುಕಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಪಿಯು ವಿದ್ಯಾರ್ಥಿಗಳೇ ನೀವೇ ಮೊದಲು ಫಲಿತಾಂಶ ನೋಡಬೇಕೆ..??


ರಾಜ್ಯದಲ್ಲ ಈ ಬಾರಿ ಸುಮಾರು 6.50 ಲಕ್ಷ ವಿದ್ಯಾರ್ಥಿಗಳು ಪಿಯು ಪರೀಕ್ಷೆಯನ್ನು ಬರೆದಿದ್ದು, ಅವರೆಲ್ಲರ ಮುಂದಿನ ಹಾದಿ ಏನೆಂಬುದು ಇಂದು ತಿಳಿಯಲಿದೆ. ಇಂದು ಫಲಿತಾಂಶ ಪ್ರಕಟಿಸುವುದಾಗಿ ಪಿಯು ಬೋರ್ಟ್ ತಿಳಿಸಿದೆ.


ಗುರುವಾರ ಮಧ್ಯಾಹ್ನ 3 ಗಂಟೆಗೆ ಮಲ್ಲೇಶ್ವರದ ಪಿಯು ಇಲಾಖೆಯ ಕಚೇರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ದ್ವಿತೀಯ ಪಿಯು ಫ‌ಲಿತಾಂಶ ಘೋಷಣೆ ಮಾಡಲಿದ್ದಾರೆ. ಅದಾದ ನಂತರವೇ ವೈಬ್‌ಸೈಟ್‌ಗಳಲ್ಲಿ ಫಲಿತಾಂಶ ಹೊರ ಬರಲಿದೆ.

ಪಿಯು ವಿದ್ಯಾರ್ಥಿಗಳೇ ನೀವೇ ಮೊದಲು ಫಲಿತಾಂಶ ನೋಡಬೇಕೆ..??


ವಿದ್ಯಾರ್ಥಿಗಳು ಪಿಯು ಇಲಾಖೆ ವೆಬ್‌ಸೈಟ್‌ http://www.pue.kar.nic.in ಅಥವಾ http://karresults.nic.in ನಲ್ಲಿ ಫ‌ಲಿತಾಂಶವನ್ನು ನೋಡಬಹುದಾಗಿದೆ.

ನಾಳೆ ಮುಂಜಾನೆ ವೇಳೆಗೆ ಕಾಲೇಜುಗಳಲ್ಲಿಯೇ ಫಲಿತಾಂಶವನ್ನು ನೀಡಲಾಗುವುದು. ಇದೇ ವೇಳೆ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

Read more about:
English summary
The Karnataka Pre-University Certificate Class 12th exam results (KSEEB) or PUC Examinations results 2017 will declared today to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot