ಪರೀಕ್ಷೆಯಲ್ಲಿ PUBG ಆಟ ಆಡುವುದು ಹೇಗೆ ಎಂದು ಬರೆದ ವಿದ್ಯಾರ್ಥಿ ಫೇಲ್

By Gizbot Bureau
|

ಅತಿಯಾದ್ರೆ ಅಮೃತವೂ ವಿಷ ಅನ್ನೋ ಗಾದೆ ಮಾತೇ ಇದೆ. ಇದು ಈ ಮಾತಿಗೊಂದು ಸಾಕ್ಷಿ ಎಂದು ಹೇಳಬಹುದು. ಹೌದು ಪಿಯುಬಿಜಿ ಆಟ ಮಾಡುತ್ತಿರುವ ಸಮಸ್ಯೆಯೇ ಇದು. ಎಲ್ಲರಿಗೂ ತಿಳಿದಿರುವಂತೆ ಪಿಯುಬಿಜಿ (ಪ್ಲೇಯರ್ ಅನ್ ನೋನ್ಸ್ ಬ್ಯಾಟಲ್ ಗ್ರೌಂಡ್) ಆಟವು ಇದೀಗ ಸುದ್ದಿಯಲ್ಲಿರುವ ಆಟ. ಎಜುಕೇಷನಲ್ ಇನ್ಸಿಟ್ಯೂಟ್ ನಲ್ಲಿ ಪಿಯುಬಿಜಿ ಆಟ ಆಡಿದ ಕಾರಣದಿಂದಾಗಿ ಕೆಲವರು ಈಗಾಗಲೇ ಬ್ಯಾನ್ ಆಗಿದ್ದಾರೆ. ಇದನ್ನು ನಾವು ಈಗಾಗಲೇ ನೋಡಿದ್ದೇವೆ. ಆದರೆ ಈಗ ನಡೆದಿರುವ ಹೊಸ ಘಟನೆಯೊಂದು ಎಲ್ಲರಿಗೂ ಆಶ್ಚರ್ಯವೆನಿಸಿದೆ.ಪಿಯುಬಿಜಿ ಅದೆಷ್ಟು ಪ್ರಭಾವ ಬೀರಿದೆ ಎಂಬುದನ್ನು ಇದು ಸಾಕ್ಷೀಕರಿಸುತ್ತಿದೆ.

ಪರೀಕ್ಷೆಯಲ್ಲಿ ಪಿಯುಬಿಜಿ ಆಟದ ವಿವರಣೆ:

ಪರೀಕ್ಷೆಯಲ್ಲಿ ಪಿಯುಬಿಜಿ ಆಟದ ವಿವರಣೆ:

ಮೊದಲ ವರ್ಷದ ಪ್ರಿ-ಯುನಿವರ್ಸಿಟಿಯ ಎಕಾನಿಮಿಕ್ಸ್ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಒಬ್ಬ ಹುಡುಗ ಪಿಯುಬಿಜಿ ಆಟವನ್ನು ಹೇಗೆ ಆಡುವುದು ಎಂಬುದರ ಬಗ್ಗೆಯೇ ಸಂಪೂರ್ಣ ವಿವರಣೆ ನೀಡಿರುವ ಘಟನೆಯೊಂದು ನಡೆದಿದ್ದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿಯಾಗಿದೆ.

ಎಸ್ಎಸ್ಎಲ್ ಸಿ ಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ:

ಎಸ್ಎಸ್ಎಲ್ ಸಿ ಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ:

ಈ ಹುಡುಗ ಕಳೆದ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸ್ ಆಗಿದ್ದಾನೆ ಆದರೆ ಆತನ ಆಟದ ಹುಚ್ಚು ವಿದ್ಯಾಭ್ಯಾಸದ ಮೇಲಿನ ಗಮನವನ್ನು ಹಾಳು ಮಾಡಿದೆ.

ಪೋಷಕರಿಗೆ ಸುಳ್ಳು ಹೇಳಿದ:

ಪೋಷಕರಿಗೆ ಸುಳ್ಳು ಹೇಳಿದ:

ಆಟದ ಹುಚ್ಚಿನಿಂದಾಗಿ ಆತ ಪಿಯುಬಿಜಿಯಲ್ಲೇ ಆನ್ ಲೈನ್ ಆಗಿ ಕಾಲ ಕಳೆದಿದ್ದಾನೆ ಮತ್ತು ಆತನಿಗೆ ಪರೀಕ್ಷೆಯ ಬಗ್ಗೆ ಯಾವುದೇ ನೆನಪೂ ಇರಲಿಲ್ಲ. ತನ್ನ ಪೋಷಕರಿಗೂ ಸುಳ್ಳು ಹೇಳಿದ ವಿದ್ಯಾರ್ಥಿ, ತನ್ನ ಸ್ನೇಹಿತರ ಬಳಿ ಚಾಟ್ ಮಾಡುತ್ತಿರುವುದಾಗ ಪೋಷಕರನ್ನು ನಂಬಿಸಿದ್ದಾನೆ. ಅಂದ ಹಾಗೆ ಈ ವಿದ್ಯಾರ್ಥಿಯ ಹೆಸರು ವರುಣ್.

ವಿದ್ಯಾರ್ಥಿಯ ಹೇಳಿಕೆ:

ವಿದ್ಯಾರ್ಥಿಯ ಹೇಳಿಕೆ:

ನಾನು ಓದುವ ಅಭ್ಯಾಸವಿರುವವನೇ ಆಗಿದ್ದೆ. ಆದರೆ ಪಿಯುಬಿಜಿ ನನ್ನನ್ನ ಮನರಂಜಿಸಿತು ಮತ್ತು ಬೇಗನೆ ಅದು ನನಗೆ ಚಟವಾಗಿ ಪರಿಣಮಿಸಿತು.

ಹಾಗಾಗಿ ನಾನು ತರಗತಿಗಳಿಗೂ ಕೂಡ ಚಕ್ಕರ್ ಹೊಡೆದು ಆಟವಾಡುತ್ತಾ ಕುಳಿತಿರುತ್ತಿದ್ದೆ. ಹತ್ತಿರದ ಪಾರ್ಕಿನ ಗಾರ್ಡನ್ ನಲ್ಲಿ ಆಟವಾಡುತ್ತಾ ಮೈಮರೆತದ್ದೂ ಇದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ವರುಣ್ ಹೇಳಿಕೆ ನೀಡಿದ್ದಾನೆ

ಹಿಂದಿನ ದಿನ ರಾತ್ರಿ ಪರೀಕ್ಷೆಯ ಬಗ್ಗೆ ಗೊತ್ತಾಗಿದೆ:

ಹಿಂದಿನ ದಿನ ರಾತ್ರಿ ಪರೀಕ್ಷೆಯ ಬಗ್ಗೆ ಗೊತ್ತಾಗಿದೆ:

ವರುಣ್ ಗೆ ಪರೀಕ್ಷೆಯ ಹಿಂದಿನ ದಿನ ಪರೀಕ್ಷೆಯ ಬಗ್ಗೆ ಗೊತ್ತಾಗಿದೆ. ಆದರೆ ಅದಾಗಲೇ ಸಮಯ ಮೀರಿಯಾಗಿತ್ತು. ಒಂದು ಇಡೀ ವರ್ಷದ ಪಾಠವನ್ನು ಒಂದು ರಾತ್ರಿಯಲ್ಲಿ ಓದಿ ಯಾರಿಗೂ ಪಾಸ್ ಆಗುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಆತ ಪಿಯುಬಿಜಿ ಆಡುವುದನ್ನು ನಿಲ್ಲಿಸಲೇ ಇಲ್ಲ. ಪರೀಕ್ಷೆಯಲ್ಲೂ ಪಿಯುಬಿಜಿಯ ಬಗ್ಗೆಯೇ ಬರೆದಿದ್ದಾನೆ ಮತ್ತು ಪ್ರಿ-ಯುನಿವರ್ಸಿಟಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾನೆ. ಒಂದು ಚಟ ಸದ್ಯ ಅವನ ಭವಿಷ್ಯಕ್ಕೇ ಮಾರಕವಾಗಿದೆ.

Best Mobiles in India

Read more about:
English summary
Karnataka Boy Writes In Exam How To Play PUBG, Examiner Fails Him

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X