50 ಕೋಟಿ ಅನುದಾನ! AI ಕ್ಷೇತ್ರದಲ್ಲಿ ಕರ್ನಾಟಕ ನಂ.1.. ಹೊಸ CATS ಸ್ಥಾಪನೆ.. ಸಿಎಂ ಸಿದ್ದರಾಮಯ್ಯ ಘೋಷಣೆ
Karnataka Budget 2025: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಇದು ಸಿದ್ದರಾಮಯ್ಯ ಅವರ ದಾಖಲೆ 16ನೇ ಬಜೆಟ್ ಆಗಿದೆ. ರಾಜ್ಯದ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ತಂತ್ರಜ್ಞಾನ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಅದರಂತೆ, ಎಐ (AI) ಕ್ಷೇತ್ರದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇದರೊಂದಿಗೆ ಹೊಸದಾಗಿ CATS ಸ್ಥಾಪನೆ ಮತ್ತು ಬಜೆಟ್‌ನಲ್ಲಿ 50 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವ ಬಜೆಟ್ ಗಾತ್ರ 4,09,549 ಕೋಟಿ ರೂ. ಇದೆ. 'ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ.. ರಾಜ್ಯದ ಏಳುಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದರಂತೆ, ಬಜೆಟ್‌ನಲ್ಲಿ ತಂತ್ರಜ್ಞಾನ, ಕೃಷಿ, ತೋಟಗಾರಿಕೆ, ಸಿನಿಮಾ ಕ್ಷೇತ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಹೆಚ್ಚು ಅನುದಾನ ಘೋಷಿಸಿದ್ದಾರೆ. ಬನ್ನಿ, ತಂತ್ರಜ್ಞಾನ ಕ್ಷೇತ್ರಕ್ಕೆ ಏನೆಲ್ಲಾ ಘೋಷಣೆ ಮಾಡಿದ್ದಾರೆ ತೀಳಿಯೋಣ.

AI ಕ್ಷೇತ್ರದಲ್ಲಿ ಕರ್ನಾಟಕವನ್ನು ಮುಂಚೂಣಿಗೆ ತರುತ್ತೇನೆ
ಕರ್ನಾಟಕ ರಾಜ್ಯವನ್ನು ಕೃತಕ ಬುದ್ಧಿಮತ್ತೆ (AI) ಆಧಾರಿತ ಕೇತ್ರದಲ್ಲಿ ಮುಂಚೂಣಿಗೆ ತರಲು ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಐ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಮುಂದಿನ ಐದು ವರ್ಷಗಳಲ್ಲಿ 50 ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಇದರೊಂದಿಗೆ ಸೆಂಟರ್ ಫಾರ್ ಅಪ್ಲೈಡ್ ಅಲ್ ಫಾರ್ ಟೆಕ್ ಸೊಲ್ಯೂಷನ್ಸ್ (Centre for Applied Al for Tech Solutions) ಸ್ಥಾಪಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.
ಸಿದ್ದರಾಮಯ್ಯ ಬಜೆಟ್ ಲೆಕ್ಕ
ಬಜೆಟ್ ಗಾತ್ರ = 4,09,549 ಕೋಟಿ
ಬಂಡವಾಳ ವೆಚ್ಚ = 26,474 ಕೋಟಿ
ರಾಜಸ್ವ ವೆಚ್ಚ = 71,336 ಕೋಟಿ
ರಾಜಸ್ವ ಕೊರತೆ = 19,262 ಕೋಟಿ
ಸಾಲ = 1,16,000 ಕೋಟಿ ಸಾಲದ ಮೊರೆ
ಒಟ್ಟು ರಾಜಸ್ವ ಸ್ವೀಕೃತಿ ಅಂದಾಜು = 2,92,477 ಕೋಟಿ
ಸ್ವಂತ ತೆರಿಗೆ ರಾಜಸ್ವ = 2,08,100 ಕೋಟಿ
ಸಿದ್ದರಾಮಯ್ಯನವರ 16ನೇ ಬಜೆಟ್ ಮುಖ್ಯಾಂಶಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ದಾಖಲೆಯ 16ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ವಿವಿಧ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ರಾಜ್ಯ ಬಜೆಟ್ ಮುಖ್ಯಾಂಶಗಳು ಈ ಕೆಳಗಿನಂತಿವೆ.
* ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಗೌರವಧನ ಹೆಚ್ಚಳ.
* ಸಹಾಯಕರಿಗೆ 750 ರೂ. ಸಹಾಯಧನ ಹೆಚ್ಚಳ.
* 12 ಸಾವಿರ ಕೃಷಿ ಹೊಂಡಗಳ ನಿರ್ಮಾಣ.
* ಶಕ್ತಿ ಯೋಜನೆಗೆ 530 ಕೋಟಿ ರೂ. ಅನುದಾನ.
* ಶಿಕ್ಷಣ ಇಲಾಖೆಗೆ 45,286 ಕೋಟಿ ರೂ. ಅನುದಾನ.
* ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ 2500 ಕೋಟಿ ರೂ.
* ವಿಶ್ವ ಬ್ಯಾಂಕ್ ನೆರವಿನೊಂದಿಗೆ 2500 ಕೋಟಿ ರೂ. ಯೋಜನೆ.
* ಅತಿಥಿ ಶಿಕ್ಷಕರ ಗೌರವ ಧನ 2000 ರೂ. ಹೆಚ್ಚಳ.
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,933 ಕೋಟಿ ಅನುದಾನ.
* ಇಂಧನ ಇಲಾಖೆಗೆ 26,896 ಕೋಟಿ ಅನುದಾನ.
* ಬೆಂಗಳೂರು ವಿವಿಗೆ ಮರುನಾಮಕರಣ - ಡಾ.ಮನಮೋಹನ್ ಸಿಂಗ್ ವಿವಿ ಎಂದು ನಾಮಕರಣ.
* ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನ ಯೋಜನೆ: 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಅನ್ವಯ.
* ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ಒಟಿಟಿ ಯೋಜನೆ: ಮಲ್ಟಿಪ್ಲೆಕ್ಸ್ ಗಳಲ್ಲಿ ಏಕರೂಪ ಟಿಕೆಟ್ ನಿಗದಿ, 200 ರೂ. ಟಿಕೆಟ್ ದರ ನಿಗದಿ ಮಾಡಿದ ಸರ್ಕಾರ.
* ಬೆಂಗಳೂರಿನಲ್ಲಿ ಟನಲ್ ಯೋಜನೆಗೆ40 ಸಾವಿರ ಕೋಟಿ ರೂ ಅನುದಾನ.
* ಬೆಂಗಳೂರಿನಲ್ಲಿ 11 ಪೊಲೀಸ್ ವಿಭಾಗ ಸ್ಥಾಪನೆ.
* ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ.
* ಬ್ರಾಡ್ ಬೆಂಗಳೂರಿಗೆ 1800 ಕೋಟಿ ರೂ. ಮೀಸಲು. ಬ್ರಾಡ್ ಬೆಂಗಳೂರು ನಿರ್ಮಾಣಕ್ಕೆ 21 ಯೋಜನೆ.
* ಮೆಜೆಸ್ಟಿಕ್ ಬಸ್ ನಿಲ್ದಾಣ ಮೇಲ್ದರ್ಜೆಗೆ.
* ಮೈಸೂರಿನಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ.
* ದಕ್ಷಿಣ ಕನ್ನಡದ ಪಿಲಿಕುಳದಲ್ಲಿ ಅಂತಾರಾಷ್ಟ್ರೀಯ ಯುವಕರ ತರಬೇತಿ ಕೇಂದ್ರ ಸ್ಥಾಪನೆ.
* ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ.
* ಮೈಸೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಯ ಘೋಷಣೆ.


Click it and Unblock the Notifications








