ಕರ್ನಾಟಕದಲ್ಲಿ ಆನ್‌ಲೈನ್‌ ಗ್ಯಾಬ್ಲಿಂಗ್‌ ಬ್ಯಾನ್‌ ಮಾಡಲು ನಿರ್ಧಾರ!

|

ಆನ್‌ಲೈನ್‌ ಗ್ಯಾಬ್ಲಿಂಗ್‌ ಪ್ರಿಯರಿಗೆ ಕರ್ನಾಟಕ ಸರ್ಕಾರ ಶಾಕ್‌ ನೀಡಿದೆ. ಇಂದು ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಕರ್ನಾಟಕದಲ್ಲಿ ಆನ್‌ಲೈನ್ ಗ್ಯಾಬ್ಲಿಂಗ್‌ ಅಥವಾ ಬೆಟ್ಟಿಂಗ್ ಅನ್ನು ಬ್ಯಾನ್‌ ಮಾಡಲು ನಿರ್ಧಾರ ತೆಗೆದುಕೊಂಡಿದೆ. ಹೈಕೋರ್ಟ್ ನೀಡಿರುವ ನಿರ್ದೇಶನಗಳ ಆಧಾರ ಮೇಲೆ ಆನ್‌ಲೈನ್‌ ಜೂಜಾಟವನ್ನು ಬ್ಯಾನ್‌ ಮಾಡುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಯುವ ಜನತೆಗೆ ಮಾರಕವಾಗಿರುವ ಆನ್‌ಲೈನ್ ಜೂಜಾಟವನ್ನು ಬ್ಯಾನ್‌ ಮಾಡುವುದಕ್ಕಾಗಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದೇವೆ ಅನ್ನೊದನ್ನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.

ಕ್ಯಾಬಿನೆಟ್‌

ಹೌದು, ಕರ್ನಾಟಕ ಸರ್ಕಾರ ಇಂದು ನಡೆದ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸೌಂಡ್‌ ಮಾಡ್ತಿದ್ದ ಆನ್‌ಲೈನ್‌ ಜೂಜಾಟವನ್ನು ಬ್ಯಾನ್‌ ಮಾಡಿದೆ. ಇದಕ್ಕಾಗಿ ಕ್ಯಾಬಿನೆಟ್‌ ಮೀಟಿಂಗ್‌ ಪೋಲಿಸ್‌ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಅಂಗೀಕರಿಸಿದೆ. ಇನ್ನು ಈ ತಿದ್ದುಪಡಿಗಳನ್ನು ವಿಧಾನಸಭೆಯ ಮುಂದೆ ಇಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ. ಹಾಗಾದ್ರೆ ಕರ್ನಾಕಟದಲ್ಲಿ ಆನ್‌ಲೈನ್‌ ಗ್ಯಾಬ್ಲಿಂಗ್‌ ಅನ್ನು ಬ್ಯಾನ್‌ ಮಾಡಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗ್ಯಾಬ್ಲಿಂಗ್‌

ಆನ್‌ಲೈನ್‌ ಗ್ಯಾಬ್ಲಿಂಗ್‌ ಕರ್ನಾಟಕ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯಗಳಲ್ಲೂ ಇದು ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಾ ಇದೆ. ಆನ್‌ಲೈನ್‌ ಜೂಜಾಟದಲ್ಲಿ ಸಾಕಷ್ಟು ಜನ ಮೋಸ ಹೋಗುತ್ತಿರೋದು ಸುದ್ದಿಯಾಗುತ್ತಲೇ ಇದೆ. ಅಷ್ಟೇ ಅಲ್ಲ ಆನ್‌ಲೈನ್‌ ಜೂಜಾಟ ಒಂದು ರೀತಿಯ ವ್ಯಸನವಾಗಿ ಬದಲಾಗುತ್ತಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಆನ್‌ಲೈನ್‌ ಗ್ಯಾಬ್ಲಿಂಗ್‌ ಬ್ಯಾನ್‌ ಮಾಡಲು ನಿರ್ಧಾರ ಮಾಡಿದೆ.

ಆನ್‌ಲೈನ್

ಇನ್ನು ಆನ್‌ಲೈನ್ ಗ್ಯಾಬ್ಲಿಂಗ್‌ ಬ್ಯಾನ್‌ ಮಸೂದೆಯಲ್ಲಿ ಎಲ್ಲಾ ರೀತಿಯ ವೇಜಿಂಗ್ ಅಥವಾ ಬೆಟ್ಟಿಂಗ್‌ಗಳನ್ನು ಒಳಗೊಂಡಿರುವ ಆಟಗಳು ಸೇರಿವೆ. ಟೋಕನ್‌ಗಳ ರೂಪದಲ್ಲಿ ಅಥವಾ ಇಲೆಕ್ಟ್ರಾನಿಕ್ ವಿಧಾನಗಳು ಮತ್ತು ವರ್ಚುವಲ್ ಕರೆನ್ಸಿ ರೂಪದ ಎಲ್ಲಾ ಗೇಮ್‌ಗಳು ಕೂಡ ಬ್ಯಾನ್‌ ಆಗಲಿವೆ. ಆದರೆ ಇದು ರಾಜ್ಯದ ಒಳಗೆ ಅಥವಾ ಹೊರಗಿನ ಯಾವುದೇ ರೇಸ್ ಕೋರ್ಸ್‌ನಲ್ಲಿ ನಡೆಯುವ ಲಾಟರಿಗಳು ಅಥವಾ ಬೆಟ್ಟಿಂಗ್ ಅಥವಾ ಕುದುರೆ ರೇಸ್‌ಗಳಿಗೆ ಬೆಟ್ಟಿಂಗ್ ಒಳಗೊಂಡಿಲ್ಲ ಅನ್ನೊದನ್ನ ಸರ್ಕಾರ ಸ್ಪಷ್ಟಪಡಿಸಿದೆ.

ಜೂಜಾಟ

ಆನ್‌ಲೈನ್‌ ಜೂಜಾಟ ಬ್ಯಾನ್‌ ನಿರ್ಧಾರ ಮಾಡಿರುವ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲೇನಲ್ಲ. ಈಗಾಗಲೇ ಕಳೆದ ವರ್ಷ ನವೆಂಬರ್‌ನಲ್ಲಿ ತಮಿಳುನಾಡು ಸರ್ಕಾರ ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಸುಗ್ರೀವಾಜ್ಞೆಯನ್ನು ಪ್ರಕಟಿಸಿತ್ತು. ಅಲ್ಲದೆ ಈ ವರ್ಷದ ಆರಂಭದಲ್ಲಿಯೇ ಕೇರಳ ರಾಜ್ಯ ಕೂಡ ಆನ್‌ಲೈನ್ ರಮ್ಮಿ ಆಟಗಳ ಮೇಲೆ ಬ್ಯಾನ್‌ ಆದೇಶ ಹೇರಿದೆ.

Best Mobiles in India

English summary
The cabinet has approved the amendments, it will be placed before the assembly.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X