Home
ಸುದ್ದಿಜಾಲ

ವೈರಲ್ ಆಗಿದೆ ಕರ್ನಾಟಕದ ವೋಟರ್ ಐಡಿ ಮದುವೆ ಆಮಂತ್ರಣ ಪತ್ರಿಕೆ...!

By Srinidhi

ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದು, ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಯಲಿರುವ ಮದುವೆಯೊಂದು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇದಕ್ಕೆ ಕಾರಣ ಮದುವೆಯ ಆಮಂತ್ರಣ ಪತ್ರಿಕೆಯನ್ನೇ ವೋಟರ್ ಐಡಿ ಮಾದರಿಯಲ್ಲಿ ಮುದ್ರಣ ಮಾಡಿಸಿದ್ದಾರೆ. ಇಷ್ಟು ದಿನ ಫೇಸ್‌ಬುಕ್-ವಾಟ್ಸ್‌ಆಪ್ ಮಾದರಿಯಲ್ಲಿ ಕಾಣಿಸಿಕೊಂಡಿದ್ದ ಆಮಂತ್ರಣ ಪ್ರತಿಕೆ ವೋಟರ್ ಐಡಿಯಾಗಿದೆ.

ವೈರಲ್ ಆಗಿದೆ ಕರ್ನಾಟಕದ ವೋಟರ್ ಐಡಿ ಮದುವೆ ಆಮಂತ್ರಣ ಪತ್ರಿಕೆ...!

ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲು ಚುನಾವಣಾ ಆಯೋಗ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಹಾವೇರಿ ಜೋಡಿ ತಮ್ಮ ಮದುವೆಯ ಮೂಲಕವು ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಲು ಮುಂದಾಗಿದ್ದು, ಇದಕ್ಕಾಗಿ ವಿಭಿನ್ನವಾಗಿ ಮದುವೆಯ ಆಮಂತ್ರಣ ಪತ್ರಿಕೆಯನ್ನೇ ವೋಟರ್ ಐಡಿ ಮಾದರಿ ವಿನ್ಯಾಸ ಮಾಡಿದ್ದಾರೆ.

ಏ.27ಕ್ಕೆ ಮದುವೆ

ಏ.27ಕ್ಕೆ ಮದುವೆ

ಸಿದ್ದಪ್ಪ ಜ್ಯೋತಿ ಜೋಡಿ ಇದೇ ಏ.27 ರಂದು ಹಸೆಮಣೆ ಎರಲಿದ್ದು, ತಮ್ಮ ವಿವಾಹದ ಮೂಲಕ ಮತದಾನದ ಜಾಗೃತಿಯನ್ನು ಮೂಡಿಸಬೇಕು ಎಂದು ಹೊಸ ಪ್ರಯತ್ನವನ್ನು ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪಣಸಿ ಗ್ರಾಮದಲ್ಲಿ ಮದುವೆ ನಡೆಯಲಿದೆ, ಇದಕ್ಕೆ ವಿಭಿನ್ನವಾಗಿ ಆಹ್ವಾನವನ್ನು ನೀಡಿದ್ದಾರೆ.

ಆಹ್ವಾನ ಪತ್ರಿಕೆ ಹೀಗಿದೆ:

ಆಹ್ವಾನ ಪತ್ರಿಕೆ ಹೀಗಿದೆ:

ವೋಟರ್ ಐಟಿ ಮಾದರಿಯ ಆಮಂತ್ರಣ ಪತ್ರಿಕೆಯಲ್ಲಿ ಚುನಾವಣಾ ಆಯೋಗದ ಹೆಸರಿನ ಬದಲಿಗೆ 'ದೊಡ್ಡಚಿಕ್ಕಣ್ಣನವರ ಬಂಧುಗಳ ಮದುವೆಯ ಸಂಭ್ರಮ' ಎಂಬ ಬರಹ ಹಾಕಿದ್ದಾರೆ. ಐಡಿ ಕಾರ್ಡ್ ನಂಬರ್ ಜಾನಗದಲ್ಲಿ 'ಎಸ್‌ಜೆಎಂಆರ್‌ಜಿ 27042018' ಎಂದು ಹಾಕಿದ್ದು, ಇದನ್ನು ಬಿಡಿಸಿದರೆ ಸಿದ್ದಪ್ಪ-ಜ್ಯೋತಿ ವಿವಾಹ 27-4-2018 ಎಂಬ ಅರ್ಥವನ್ನು ಕೊಡುತ್ತದೆ.

ಭಿನ್ನವಾಗಿದೆ

ಭಿನ್ನವಾಗಿದೆ

ಮತದಾರರ ಹೆಸರು ಬರುವ ಸ್ಥಳದಲ್ಲಿ ದಂಪತಿಗಳ ಹೆಸರು ಎಂದು ಹಾಕಿ ಚಿ.ಸಿದ್ದಪ್ಪ ಮತ್ತು ಚಿ.ಕು.ಸೌ.ಜ್ಯೋತಿ ಎಂದು ಮುದ್ರಿಸಿದ್ದಾರೆ. ಜನ್ಮ ದಿನಾಂಕದ ಬದಲಿಗೆ ಮದುವೆ ದಿನಾಂಕ ಎಂದು ಹಾಕಿದ್ದಾರೆ. 27-4-2018, ಜೊತೆಗೆ ಧಾರೆ ಮೂಹುರ್ತವನ್ನು ಸಮಯ 12.30 ನಮೂದಿಸಿದ್ದಾರೆ.

How to Check Your Voter ID Card Status (KANNADA)
ಆಗಮನ:

ಆಗಮನ:

ನಂತರದಲ್ಲಿ ಮದುವೆ ನಡೆಯುವ ಸ್ಥಳ ಹಾಗೂ ಕುಟುಂಬದ ಹೆಸರು ಮತ್ತು ತಮ್ಮ ಆಗಮನಾಭಿಲಾಷಿಗಳು ಎಂದು ನಮೂದಿಸಿದ್ದಾರೆ. ಮತ್ತೆ ಮದುವೆ ಎಲ್ಲಿಗೂ ಆಹ್ವಾನವನ್ನು ನೀಡಿದ್ದಾರೆ.

ಸಂದೇಶ:

ಸಂದೇಶ:

ಇದಲ್ಲದೇ ಜೀವ ಉಳಿಸಲು ರಕ್ತದಾನ, ದೇಶ ಕಟ್ಟಲು ಮತದಾನ. ಮತದಾನ ಮಹಾದಾನ, ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಕಾರಣ. ಮತವೆಂಬ ಅಸ್ತ್ರ ಬಳಸಿ, ಪ್ರಾಮಾಣಿಕರನ್ನು ಆರಿಸುವ ಪ್ರಭುದ್ಧರು ನಾವು. ಮದುವೆಗೆ ತಪ್ಪದೇ ಬನ್ನಿ, ಮತದಾನ ಕಡ್ಡಾಯವಾಗಿ ಮಾಡಿ ಎಂದು ಹೇಳಿದ್ದಾರೆ.

Best Mobiles in India

English summary
Karnataka Couple's Wedding Cards Look Like Voter IDs. Here's Why. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+