Home
ಸುದ್ದಿಜಾಲ

ಮತಗಟ್ಟೆಯಲ್ಲಿ ಸರದಿ ಸಾಲು ತಪ್ಪಿಸಲು ಚುನಾವಣೆ ಆಯೋಗದಿಂದ ಹೊಸ ಪ್ಲಾನ್‌!

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಮತದಾನ ದಿನಕ್ಕೆ ಎರಡು ದಿನಗಳಷ್ಟೇ ಬಾಕಿ ಉಳಿದಿದೆ. ಭಾರತದ ಚುನಾವಣಾ ಆಯೋಗವು ಕೂಡ ಮತದಾನ ಪ್ರಕ್ರಿಯೆಗಾಗಿ ಸಿದ್ಧತೆಯನ್ನು ನಡೆಸುತ್ತಿದೆ. ಅದರಂತೆ ಇದೇ ಮೊದಲ ಭಾರಿಗೆ ರಾಜ್ಯದ ಒಂದು ಮತಕ್ಷೇತ್ರದಲ್ಲಿ ಹೊಸದೊಂದು ಪ್ರಕ್ರಿಯೆಗೆ ಮುಂದಾಗಿದೆ.

ಹೌದು, ಚುನಾವಣಾ ಆಯೋಗವು ಮತದಾನ ದಿನದಂದು ಬೆಂಗಳೂರಿನ ಮತಗಟ್ಟೆಯಲ್ಲಿ ಫೇಸ್‌ ರೆಕಗ್ನಿಷನ್ ಸಿಸ್ಟಂ ಅನ್ನು ಬಳಸಲು ಮುಂದಾಗಿದೆ. ಇದರಿಂದ ಮತದಾರರು ಮತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ ಎನ್ನಲಾಗಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮತಗಟ್ಟೆಯಲ್ಲಿ ಸರದಿ ಸಾಲು ತಪ್ಪಿಸಲು ಚುನಾವಣೆ ಆಯೋಗದಿಂದ ಹೊಸ ಪ್ಲಾನ್‌!

ಕಾರ್ನಟಕ ರಾಜ್ಯ ವಿಧಾನಸಭೆ ಚುನಾವಣೆ ಹಲವು ಹೊಸ ವಿಚಾರಗಳಿಗೆ ಸಾಕ್ಷಿಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಭಾರತದ ಚುನಾವಣೆ ಆಯೋಗವು ಕೂಡ ಹಲವು ಹೊಸ ಕ್ರಮಗಳನ್ನು ಜಾರಿಗೆ ತಂದಿದೆ. ಅದರಂತೆ ಇದೇ ಮೊದಲ ಭಾರಿಗೆ ಮತದಾನದ ದಿನದಂದು ಬೆಂಗಳೂರಿನ ಮತಗಟ್ಟೆಯೊಂದರಲ್ಲಿ ಫೇಸಿಯಲ್ ರೆಕಗ್ನಿಷನ್ ಪರಿಚಯಿಸಲಿದೆ. ಇದರ ಮೂಲಕ ಮತದಾರರು ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ ಎಂದು ಹೇಳಲಾಗಿದೆ. ಆದರೆ ಇದಕ್ಕಾಗಿ ನೀವು ಚುನಾವಣಾ ಆಯೋಗದ ಅಧಿಕೃತ ಅಪ್ಲಿಕೇಶನ್‌ಗೆ ನಿಮ್ಮ ಸೆಲ್ಫಿಯನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ.

ಎಲೆಕ್ಷನ್‌ ಕಮಿಷನ್‌ ಹೇಳಿರುವ ಅಧಿಕೃತ ಅಪ್ಲಿಕೇಶನ್‌ಗೆ ನಿಮ್ಮ ಸೆಲ್ಫಿಯನ್ನು ಅಪ್ಲೋಡ್‌ ಮಾಡಬೇಕು, ಇದು ನಿಮ್ಮ ಫೇಸಿಯಲ್‌ ರೆಕಗ್ನಿಷನ್‌ ಮಾಡಲಿದೆ. ಇದರಲ್ಲಿ ಸ್ಕ್ಯಾನ್‌ ಯಶಸ್ವಿಯಾದರೆ ನೀವು ಕ್ಯೂ ನಲ್ಲಿ ನಿಲ್ಲದೆ ನೇರವಾಗಿ ಮತ ಚಲಾಯಿಸಲು ಹೋಗಬಹುದಾಗಿದೆ. ಅಂದರೆ ಈ ಹೊಸ ಸೇವೆಯು ಕೇಂದ್ರ ಸರ್ಕಾರದ ಇತ್ತೀಚೆಗಷ್ಟೇ ಪ್ರಾರಂಭಿಸಲಾದ ಡಿಜಿಯಾತ್ರಾ ಸೇವೆಯಂತೆಯೇ ಇದೆ.

ಮತಗಟ್ಟೆಯಲ್ಲಿ ಸರದಿ ಸಾಲು ತಪ್ಪಿಸಲು ಚುನಾವಣೆ ಆಯೋಗದಿಂದ ಹೊಸ ಪ್ಲಾನ್‌!

ಕರ್ನಾಟಕ ಚುನಾವಣೆಯಲ್ಲಿ ಫೇಸಿಯಲ್‌ ರೆಕಗ್ನಿಷನ್‌ ಸಿಸ್ಟಂ ಹೇಗೆ ಕಾರ್ಯನಿರ್ವಹಿಸಲಿದೆ?

ಭಾರತದ ಚುನಾವಣಾ ಆಯೋಗವು ಇದೇ ಮೊದಲ ಭಾರಿಗೆ ಮತದಾರರಿಗೆ ಫೇಸಿಯಲ್‌ ರೆಕಗ್ನಿಷನ್‌ (ಮುಖ ಗುರುತಿಸಿವಿಕೆ ತಂತ್ರಜ್ಞಾನ) ಅನ್ನು ಬೆಂಗಳೂರಿನ ಒಂದು ಮತಗಟ್ಟೆಯಲ್ಲಿ ಮಾತ್ರ ಬಳಸುತ್ತಿದೆ. ಇದನ್ನು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಳಿಯಿರುವ ಅರಮನೆ ರಸ್ತೆಯ ಸರ್ಕಾರಿ ರಾಮನಾರಾಯಣ ಚೆಲ್ಲರಾಂ ಕಾಲೇಜ್ ಮತಗಟ್ಟೆಯಲ್ಲಿ ಬಳಸಲಿದೆ ಎನ್ನಲಾಗಿದೆ. ಈ ಮತಗಟ್ಟೆಯಲ್ಲಿರುವ ಎರಡು ಕೊಠಡಿಗಳಲ್ಲಿ ಮಾತ್ರ ಈ ತಂಗತ್ರಜ್ಞಾನವನ್ನು ಬಳಸಲಾಗುವುದು ಎಂದು ವರದಿಯಾಗಿದೆ.

ಸಾಮಾನ್ಯವಾಗಿ ಮತದಾನ ಮಾಡುವುದಕ್ಕಾಗಿ ಮತದಾರರು ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಮತದಾನ ಮಾಡುವುದಕ್ಕೂ ಮೊದಲು ಮತಗಟ್ಟೆಯ ಅಧಿಕಾರಿಗಳ ಬಳಿ ತಮ್ಮ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ಇದೆಲ್ಲವೂ ಹಸ್ತಚಾಲಿತವಾಗಿರುವುದರಿಂದ ನೀವು ಸಾಕಷ್ಟು ಸಮಯ ಸರದಿ ಸಾಲಲ್ಲಿ ನಿಲ್ಲುವುದು ಅನಿವಾರ್ಯವಾಗಲಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಫೇಸಿಯಲ್‌ ರೆಕಗ್ನಿಷನ್‌ ಸಿಸ್ಟಂ ಬಳಸಲು ಮುಂದಾಗಿದೆ. ಇದಕ್ಕಾಗಿ ನೀವು ಅಧಿಕೃತ ಅಪ್ಲಿಕೇಶನ್‌ ಅಲ್ಲಿ ನಿಮ್ಮ ಸೆಲ್ಫಿ ಫೋಟೋ ಅಪ್ಲೋಡ್‌ ಮಾಡಿದರೆ ಅದು ನಿಮ್ಮ ದಾಖಲೆಗಳನ್ನು ಸ್ಕ್ಯಾನ್‌ ಮಾಡಲಿದೆ. ಇದೆಲ್ಲವೂ ಯಶಸ್ವಿಯಾದರೆ ನೀವು ಸರದಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತದಾನ ಮಾಡಲು ಹೋಗಬಹುದಾಗಿದೆ.

ಮತಗಟ್ಟೆಯಲ್ಲಿ ಸರದಿ ಸಾಲು ತಪ್ಪಿಸಲು ಚುನಾವಣೆ ಆಯೋಗದಿಂದ ಹೊಸ ಪ್ಲಾನ್‌!

ನಿಮ್ಮ ಸೆಲ್ಫಿಯಲ್ಲಿರುವ ಚಿತ್ರವು ನಿಮಗೆ ಮುಖ ಗುರುತಿಸುವಿಕೆ ವ್ಯವಸ್ಥೆಯಲ್ಲಿ ಹೊಂದಿಕೆಯಾದ ನಂತರ, ನೀವು ಮತದಾನ ಮಾಡಲು ಅವಕಾಶ ಸಿಗಲಿದೆ. ಈ ಹೊಸ ವ್ಯವಸ್ಥೆಯು ಮತದಾನವನ್ನು ವೇಗವಾಗಿ ಮಾಡಲು ಮತ್ತು ನಕಲಿ ಮತದಾನವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇನ್ನು ಈ ಸಿಸ್ಟಂ ಅನ್ನು ಬೆಂಗಳೂರಿನ
ಸರ್ಕಾರಿ ರಾಮನಾರಾಯಣ ಚೆಲ್ಲರಾಂ ಕಾಲೇಜಿನ ಪ್ರಾಯೋಗಿಕ ಬೂತ್‌ನಲ್ಲಿ ಮಾತ್ರ ಬಳಸಲಾಗುತ್ತದೆ. ಇದಕ್ಕಾಗಿ ನೀವು ಅಧಿಕೃತ ಚುನಾವಣಾ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಹೊಂದಿರುವುದು ಅವಶ್ಯಕವಾಗಿದೆ.

ಮತಗಟ್ಟೆಯಲ್ಲಿ ಸರದಿ ಸಾಲು ತಪ್ಪಿಸಲು ಚುನಾವಣೆ ಆಯೋಗದಿಂದ ಹೊಸ ಪ್ಲಾನ್‌!

ಫೇಸಿಯಲ್‌ ರೆಕಗ್ನಿಷನ್‌ ಮೂಲಕ ಮತದಾನಕ್ಕೆ ಅವಕಾಶ ಪಡೆಯುವುದು ಹೇಗೆ?

ಇನ್ನು ಈ ಅಪ್ಲಿಕೇಶನ್‌ನಲ್ಲಿ ನೀವು ನಿಮ್ಮ EPIC ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಫೀಡ್‌ ಮಾಡಬೇಕಿದೆ. ಅಲ್ಲದೆ ನಿಮ್ಮ ಸಂಖ್ಯೆಗೆ ಬರುವ ಒಟಿಪಿ ಮೂಲಕ ದೃಡೀಕರಿಸಬೇಕಾಗುತ್ತದೆ. ಇದಾದ ನಂತರ ಸೆಲ್ಫಿ ಕ್ಲಿಕ್ ಮಾಡಿ ಮತ್ತು ಅದನ್ನು ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿ. ನಂತರ ನೀವು ಮತಗಟ್ಟೆಯಲ್ಲಿ ಮುಖ ಗುರುತಿಸುವಿಕೆಯ ಸೆಟಪ್ ಅನ್ನು ಬಳಸಬಹುದು. ಸಿಸ್ಟಂ ನಿಮ್ಮನ್ನು ಗುರುತಿಸಿದರೆ ಮಾತ್ರ ನಿಮ್ಮ ಗುರುತನ್ನು ಪರಿಶೀಲಿಸಲು ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ.

Best Mobiles in India

English summary
Karnataka election 2023: Election Commission of India will use facial recognition in a polling booth in Bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+