ವೋಟ್ ಕೌಂಟಿಂಗ್ ಹೇಗೆ ನಡೆಯಲಿದೆ? EVMನಲ್ಲಿರುವ ಮತಗಳನ್ನು ಎಣಿಕೆ ಮಾಡೋದು ಹೇಗೆ?
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ (ಮೇ 13) ನಡೆಯಲಿದೆ. ಈಗಾಗಲೇ ಮತದಾನೋತ್ತರ ಸಮೀಕ್ಷೆಗಳ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ನಡುವೆ ನಾಳಿನ ಮತ ಎಣಿ ಕಾರ್ಯ ಹೇಗೆ ನಡೆಯಲಿದೆ. ಇವಿಎಂಗಳಲ್ಲಿ ಮತ ಎಣಿಕೆಯನ್ನು ಹೇಗೆ ಮಾಡಲಾಗುತ್ತದೆ ಅನ್ನೊ ಕುತೂಹಲ ಇದ್ದೆ ಇರುತ್ತದೆ.
ಹೌದು, ನಾಳೆ ನಡೆಯಲಿರುವ ಮತ ಎಣಿಕೆ ಕಾರ್ಯದ ಬಗ್ಗೆ ಎಲ್ಲರಿಗೂ ಕೂಲಹಲವಿದೆ. ಅದರಂತೆ EVMಗಳಲ್ಲಿ ವೋಟ್ ಕೌಂಟಿಂಗ್ ಹೇಗೆ ನಡೆಯಲಿದೆ ಅನ್ನೊದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗಾದ್ರೆ EVM ನಲ್ಲಿ ವೋಟ್ ಕೌಂಟಿಂಗ್ ಹೇಗೆ ನಡೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಚುನಾವಣೆ ಪ್ರಕ್ರಿಯೆಯಲ್ಲಿ ಮತ ಎಣಿಕೆ ಕಾರ್ಯ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಮತದಾರರ ನಿರ್ಧಾರವನ್ನು ನಿರ್ಧರಿಸುವ ಈ ಮತ ಎಣಿಕೆ ಕಾರ್ಯವನ್ನು ಸಾಕಷ್ಟು ಎಚ್ಚರಿಕೆ ಹಾಗೂ ಜಾಗ್ರತೆಯಿಂದ ನಡೆಸಲಾಗುತ್ತದೆ. ಇನ್ನು ಒಂದು ಕ್ಷೇತ್ರದ ಚುನಾವಣೆಯನ್ನು ನಡೆಸುವ ಜವಾಬ್ದಾರಿ ಹೊಂದಿರುವ ಚುನಾವಣಾಧಿಕಾರಿ (RO)ಯೇ ಮತ ಎಣಿಕೆ ಕಾರ್ಯದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇನ್ನು RO ಒಬ್ಬ ಸರ್ಕಾರಿ ಅಧಿಕಾರಿ ಅಥವಾ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಪ್ರತಿ ಕ್ಷೇತ್ರಕ್ಕೆ ECI ನಿಂದ ನಾಮನಿರ್ದೇಶನಗೊಂಡವರು ಇರುತ್ತಾರೆ.
ಮತ ಎಣಿಕೆ ಕಾರ್ಯ ಹೇಗೆ ನಡೆಯಲಿದೆ?
EVM ನಲ್ಲಿ ವೋಟ್ ಕೌಂಟಿಂಗ್ ಹೇಗೆ ಮಾಡುತ್ತಾರೆ ಅನ್ನೊ ಕುತೂಹಲ ಎಲ್ಲರಲ್ಲೂ ಇದೆ. EVM ನಲ್ಲಿ ವೋಟ್ ಕೌಂಟಿಂಗ್ ಮಾಡುವ ಜವಾಬ್ದಾರಿಯನ್ನು ಚುನಾವಣಾಧಿಕಾರಿ (RO) ಹೊಂದಿರುತ್ತಾರೆ. ಯಾವ ಕ್ಷೇತ್ರಕ್ಕೆ ಎಲ್ಲಿ ಮತಗಳನ್ನು ಎಣಿಸಬೇಕು ಎಂಬುದನ್ನು RO ನಿರ್ದಾರ ಮಾಡುತ್ತಾರೆ. ಅಷ್ಟೇ ಅಲ್ಲ ಮತ ಎಣಿಕೆಯ ದಿನಾಂಕ ಮತ್ತು ಸಮಯವನ್ನು ಚುನಾವಣಾ ಆಯೋಗವು ನಿಗದಿಪಡಿಸುತ್ತದೆ. ಸಾಮಾನ್ಯವಾಗಿ ಒಂದು ಕ್ಷೇತ್ರದ ಮತಗಳ ಎಣಿಕೆಯನ್ನು ಒಂದೇ ಸ್ಥಳದಲ್ಲಿ ಮಾಡಲಾಗುತ್ತದೆ. ಇದನ್ನು RO ನ ನೇರ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಅನ್ನೊ ನಿಯಮವಿದೆ.

EVM ನಲ್ಲಿ ವೋಟ್ ಕೌಂಟಿಂಗ್ ಹೇಗೆ?
ಈಗಾಗಲೇ ಮತದಾರರು ಬರೆದಿರುವ ಭವಿಷ್ಯ EVMನಲ್ಲಿ ಭದ್ರವಾಗಿದೆ. ಮತ ಎಣಿಕೆ ನಡೆಯುವ ಕೇಂದ್ರಗಳಲ್ಲಿ EVM ಗಳನ್ನು ಡಿ ಮಾಸ್ಟರಿಂಗ್ ಮಾಡಲಾಗಿದೆ. ನಾಳೆ ನಡೆಯಲಿರುವ ಮತ ಎಣಿಕೆ ಕಾರ್ಯವನ್ನು ಚುನಾವಣಾಧಿಕಾರ ನೇತೃತ್ವದಲ್ಲಿ ನಡೆಯಲಿದೆ. ಅದರಂತೆ ಪ್ರತಿ ಸುತ್ತಿನ ಮತ ಎಣಿಕೆಯಲ್ಲಿ 14EVMಗಳ ಮತಗಳನ್ನು ಕೌಂಟ್ ಮಾಡಲಾಗುತ್ತದೆ. ಅದರಂತೆ ಮತಗಳ ಎಣಿಕೆಯು ಎಲೆಕ್ಟ್ರಾನಿಕ್ ಟ್ರಾನ್ಸ್ಮಿಟೆಡ್ ಪೋಸ್ಟಲ್ ಬ್ಯಾಲೆಟ್ (ಇಟಿಪಿಬಿ) ಮತ್ತು ಪೋಸ್ಟಲ್ ಬ್ಯಾಲೆಟ್ (PB) ನೊಂದಿಗೆ ಪ್ರಾರಂಭವಾಗಲಿದೆ.

ಮತ ಎಣಿಕೆಯಲ್ಲಿ VVPAT ಸ್ಲಿಪ್‌ಗಳ ಪಾತ್ರವೇನು?
EVM ವೋಟ್ ಕೌಂಟಿಂಗ್ ಸಮಯದಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳ ನಡುವೆ ಹೊಂದಾಣಿಕೆ ಮಾಡಲಾಗುತ್ತದೆ. ವಿವಿಪ್ಯಾಟ್ ಸ್ಲಿಪ್ ಹಾಗೂ ಇವಿಎಂ ಕೌಂಟಿಂಗ್ ನಡುವೆ ವ್ಯತ್ಯಾಸ ಕಂಡುಬಂದರೆ ವಿವಿಪ್ಯಾಟ್ ಸ್ಲಿಪ್ ಕೌಂಟಿಂಗ್ ಪಲಿತಾಂಶವೇ ಅಂತಿಮವಾಗಿರುತ್ತದೆ ಎನ್ನಲಾಗಿದೆ. ಆದರೆ ಈ ವಿಚಾರದ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಚುನಾವಣೆ ಆಯೋಗ ಹೊಂದಿಲ್ಲ.

EVM ನಲ್ಲಿ ಮತ ಹಾಕುವುದು ಹೇಗೆ ?
EVM ನಲ್ಲಿ ಮತದಾರರಿಗೆ ತಮ್ಮ ಅಭ್ಯರ್ಥಿಗಳ ಪ್ರತಿ ಆಯ್ಕೆಗೆ ಒಂದು ಬಟನ್ ಅನ್ನು ನೀಡಲಾಗಿರುತ್ತದೆ. ಅಲ್ಲದೆ EVM ಅನ್ನು ಕೇಬಲ್ ಮೂಲಕ ಕನೆಕ್ಟಿವಿಟಿ ಮಾಡಲಾಗಿರುತ್ತದೆ. ಅಂದರೆ EVM ಎರಡು ಯೂನಿಟ್‌ಗಳನ್ನು ಒಳಗೊಂಡಿರುತ್ತದೆ. ಒಂದು ಕಂಟ್ರೂಲ್ ಯೂನಿಟ್ ಮತ್ತು ವೋಟಿಂಗ್ ಯೂನಿಟ್ ಈ ಎರಡು ಯೂನಿಟ್‌ಗಳನ್ನು ಕೇಬಲ್ ಮೂಲಕ ಕನೆಕ್ಟ್ ಮಾಡಲಾಗಿರುತ್ತದೆ. ಇದರಿಂದ ಮತದಾರ ತನ್ನ ಮತ ಚಲಾಯಿಸುವಾಗ ಗುಂಡಿಯನ್ನು ಟ್ಯಾಪ್ ಮಾಡಿದರೆ ವೋಟ್ ತಾನೇ ಲಾಕ್ ಆಗಲಿದೆ. ಈ ಮೂಲಕ ಒಬ್ಬ ವ್ಯಕ್ತಿಯು ಒಮ್ಮೆ ಮಾತ್ರ ಮತ ಚಲಾಯಿಸುವುದನ್ನು ಖಚಿತಪಡಿಸಲಿದೆ.


Click it and Unblock the Notifications








