Subscribe to Gizbot

ಮೋಡಬಿತ್ತನೆ ಕಾರ್ಯ ಹೇಗಿರುತ್ತದೆ?..ಇಲ್ಲಿದೆ ಸಂಪೂರ್ಣ ಮಾಹಿತಿ!!

Written By:

ರಾಜ್ಯದಲ್ಲಿ ಇಂದಿನಿಂದ ಆರಂಭವಾಗುತ್ತಿರುವ ಮೋಡಬಿತ್ತನೆ ಕಾರ್ಯಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದೆ. ಒಟ್ಟು 60 ದಿನಗಳ ಕಾಲ ಎರಡು ವಿಮಾನಗಳ ಮೂಲಕ ಮೋಡ ಬಿತ್ತನೆ ಮಾಡಲು ಸರ್ಕಾರ ಮುಂದಾಗಿದ್ದು, ತಂತ್ರಜ್ಞಾನ ಸಹಾಯದಿಂದ ಪರಿಸರಕ್ಕೆ ಸವಾಲಾಗಿ ಮಳೆಯನ್ನು ಸುರಿಸುವ ಯತ್ನಕ್ಕೆ ರಾಜ್ಯ ಸರ್ಕಾರ ಕಾಲಿಟ್ಟಿದೆ.!!

ಇನ್ನು ರಾಜ್ಯಾಧ್ಯಂತ ಮೋಡಬಿತ್ತನೆ ಕಾರ್ಯದ ಬಗ್ಗೆ ಜನರೆಲ್ಲರೂ ಕುತೋಹಲ ಹೊಂದಿದ್ದು, ಹಾಗಾದರೆ, ಈ ಮೋಡ ಬಿತ್ತನೆ ಎಂದರೆ ಏನು? ಸರ್ಕಾರ ಮೋಡಬಿತ್ತನೆ ಯನ್ನು ಹೇಗೆ ಮಾಡುತ್ತದೆ? ಇದರ ಹಿಂದಿರುವ ತಂತ್ರಜ್ಞಾನ ಮತ್ತು ವಿಜ್ಞಾನ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಮೋಡಬಿತ್ತನೆ?

ಏನಿದು ಮೋಡಬಿತ್ತನೆ?

ಎಲ್ಲೆಲ್ಲಿ ಮಳೆ ಸುರಿಸಬಲ್ಲ ಮೋಡಗಳಿವೆ ಎಂಬುದನ್ನು ಪತ್ತೆಹಚ್ಚಿ ಅವುಗಳು ಆ ಪ್ರದೇಶಗಳಲ್ಲಿಯೇ ಮಳೆಸುರಿಸುವಂತೆ ಮಾಡುವ ವೈಜ್ಞಾನಿಕ ತಂತ್ರಜ್ಞಾನವನ್ನು ಮೋಡಬಿತ್ತನೆ ಎಂದು ಕರೆಯಬಹುದು. ಕೆಮಿಕಲ್ ಬಳಸಿ ಪ್ರಕೃತಿಗೆ ವಿರುದ್ದವಾದ ಈ ಕಾರ್ಯಕ್ಕೆ ವಿಶ್ವದೆಲ್ಲೆಡೆ ಅಸಮದಾನವಿದೆ.!!

ಮೋಡ ಬಿತ್ತನೆ ಹೇಗೆ?

ಮೋಡ ಬಿತ್ತನೆ ಹೇಗೆ?

ರೇಡಾರ್‌ಗಳ ಮೂಲಕ ಎಲ್ಲೆಲ್ಲಿ ಮಳೆ ಸುರಿಸಬಲ್ಲ ಮೋಡಗಳಿವೆ ಎಂಬುದನ್ನು ಪತ್ತೆ ಮಾಡಿ. ಅವುಗಳ ಮೇಲೆ ಸಿಲ್ವರ್‌ ಅಯೋಡೈಡ್ ಸಿಂಪಡಿಸಿ ಮೋಡ ಬಿತ್ತನೆ ಮಾಡಲಾಗುತ್ತದೆ. 200 ಕಿ.ಮೀ ದೂರದ ತೀವ್ರತೆ ಮತ್ತು ಮಳೆ ತರಿಸುವ ಮೋಡಗಳಿಗೆ ಮೋಡ ಬಿತ್ತುವ ಕೆಲಸ ಆಗುತ್ತದೆ.!!

ಏನಿದು ಸಿಲ್ವರ್‌ ಅಯೋಡೈಡ್?

ಏನಿದು ಸಿಲ್ವರ್‌ ಅಯೋಡೈಡ್?

ಮಳೆ ತರಿಸಬಲ್ಲ ಮೋಡಗಳ ಮೇಲೆ‌ಸಿಲ್ವರ್‌ ಅಯೋಡೈಡ್ ಸಿಂಪಡಿಸಿ ಒಂದರಿಂದ ಹತ್ತು ಮೈಕ್ರಾನ್‌ ಗಾತ್ರದ ಹನಿ‌ಗಳನ್ನು 50 ಮೈಕ್ರಾನ್‌ ಗಾತ್ರಕ್ಕೆ ಹೆಚ್ಚಿಸಲಾಗುತ್ತದೆ .ಇದರಿಂದ ಸಣ್ಣಪುಟ್ಟ ಗಾತ್ರದ ನೀರಿನ ಹನಿಗಳು ಗಾಳಿಯಿಂದ ಚೆದುರಿ ಹೋಗುವುದಿಲ್ಲ. ನಂತರ ಮೋಡಗಳಲ್ಲಿನ ತೇವಾಂಶ ಮಳೆಯಾಗಿ ಪರಿವರ್ತನೆಯಾಗುತ್ತದೆ..!!

ಮೋಡಬಿತ್ತನೆ ಬಗ್ಗೆ ಅಧ್ಯಯನ ಏನು ಹೇಳಿದೆ?

ಮೋಡಬಿತ್ತನೆ ಬಗ್ಗೆ ಅಧ್ಯಯನ ಏನು ಹೇಳಿದೆ?

ಮೋಡಬಿತ್ತನೆ ಬಗ್ಗೆ ಅಮೆರಿಕದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಸೂಕ್ತ ವಾತಾವರಣದಲ್ಲಿ ಪರ್ವತ ಪ್ರದೇಶದಲ್ಲಿನ ಮೋಡಗಳ ಮೇಲೆ ಸಿಲ್ವರ್‌ ಅಯೋಡೈಡ್‌ ಬಿತ್ತನೆ ಮಾಡಿದಾಗ ಶೇ 5 ರಿಂದ 10 ರಷ್ಟು ಅಧಿಕ ಮಳೆ ಆಗಿದೆ' ಎನ್ನುವ ಅಭಿಪ್ರಾಯ ಕೆಲ ವಿಜ್ಞಾನಗಳಿಂದ ವ್ಯಕ್ತವಾಗಿದೆ.!!

WhatsApp Tips
ಮಳೆ ಎಲ್ಲಿ ಬರುತ್ತದೆ ಹೇಳಲು ಸಾಧ್ಯವಿಲ್ಲಾ!!

ಮಳೆ ಎಲ್ಲಿ ಬರುತ್ತದೆ ಹೇಳಲು ಸಾಧ್ಯವಿಲ್ಲಾ!!

ಮೋಡ ಬಿತ್ತನೆಯಿಂದ ಮಳೆ ಪ್ರಮಾಣ ಹೆಚ್ಚಾಗಿದೆ ಎಂದು ಹೇಳುವುದೇ ಕಷ್ಟ. ಅದರಲ್ಲಿಯೂ ಮೋಡ ಬಿತ್ತನೆ ಮಾಡುವುದರಿಂದ ಎಷ್ಟು ಮಳೆ ಎಲ್ಲಿ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲಾ. ಹಾಗಾಗಿ, ಮೋಡ ಬಿತ್ತನೆ ಯಶಸ್ವಿ ಆಗಿಲ್ಲ ಎಂದು ವಿಶ್ವದ ಬಹಳಷ್ಟು ವಿಜ್ಞಾನಿಗಳು ಹೇಳಿದ್ದಾರೆ.!!

ಓದಿರಿ:ಕನ್ನಡದಲ್ಲಿ ಗೂಗಲ್ ವಾಯ್ಸ್ ಸರ್ಚ್ ಮಾಡುವುದು ಹೇಗೆ?..ಏಕೆ ಉಪಯೋಗಿಸಲೇಬೇಕು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Faced with unprecedented water scarcity and failure of monsoon.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot