ರಾಜ್ಯ ಸರ್ಕಾರದಿಂದ ಹೊಸ ಆ್ಯಪ್ ಲಾಂಚ್! ನಿಮ್ಮ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!
ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಕ್ಕಾಗಿ ರಾಜ್ಯ ಸರ್ಕಾರ ಹೊಸ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಜನರ ಬಳಿಗೆ ಆಡಳಿತವನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಪ್ರಜಾಧ್ವನಿ ಎನ್ನುವ ಹೊಸ ಆ್ಯಪ್ ಅನ್ನು ಪರಿಚಯಿಸಿದೆ. ಈ ಆ್ಯಪ್ ಸಾರ್ವಜನಿಕರ ಸಮಸ್ಯೆಗಳಿಗೆ ಸರ್ಕಾರ ತ್ವರಿತವಾಗಿ ಸ್ಪಂದಿಸುವುದಕ್ಕೆ ಸಹಕಾರಿಯಾಗಲಿದೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಎಲ್ಲಾ ಸಚಿವರು ಜಿಲ್ಲಾಮಟ್ಟದಲ್ಲಿ ಜನತಾ ದರ್ಶನ ನಡೆಸಬೇಕೆಂದು ಸೂಚನೆ ಕೂಡ ನೀಡಿದ್ದಾರೆ. ಹೀಗೆ ಜನತಾ ದರ್ಶನದಲ್ಲಿ ಬರುವ ಅಹವಾಲುಗಳಿಗೆ ತ್ವರಿತ ಪರಿಹಾರ ನೀಡುವುದಕ್ಕಾಗಿಯೇ ಹೊಸ ಆ್ಯಪ್ ಸಿದ್ಧಪಡಿಸಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಮೂಲಕ ಜನರ ಬಳಿಗೆ ಸರ್ಕಾರದ ಪರಿಹಾರವನ್ನು ತೆಗೆದುಕೊಂಡುವ ಕೆಲಸಕ್ಕೆ ಮುಂದಾಗಿದೆ. ಹಾಗಾದ್ರೆ ಪ್ರಜಾಧ್ವನಿ ಆ್ಯಪ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ಪ್ರಜಾಧ್ವನಿ ಆ್ಯಪ್
ಸಾರ್ವಜನಿಕರ ಅಹವಾಲುಗಳಿಗೆ ತ್ವರಿತವಾಗಿ ಪರಿಹಾರ ನೀಡುವುದಕ್ಕಾಗಿ ಸರ್ಕಾರ ಪರಿಚಯಿಸುತ್ತಿರುವ ಹೊಸ ಆ್ಯಪ್ ಪ್ರಜಾಧ್ವನಿಯಾಗಿದೆ. ಈಗಾಗಲೇ ಸರ್ಕಾರದಲ್ಲಿ ಐಪಿಜಿಆರ್ಎಸ್ ಎಂಬ ಆಪ್ ಇದೆ. ಹಾಗೆಯೇ ಇ- ಆಫೀಸ್ ತಂತ್ರಾಂಶ ಪ್ರತ್ಯೇಕವಾಗಿ ಲಭ್ಯವಿದೆ. ಆದರೆ, ಪ್ರಜಾಧ್ವನಿ ಆಪ್ ಈ ಎರಡು ತಂತ್ರಾಂಶಗಳನ್ನು ಒಂದೆಡೆಯೆ ಹೊಂದಿರುವ ಹೈಬ್ರಿಡ್ ಸಿಸ್ಟಂ ಆಗಿದೆ.
ಜನತಾ ದರ್ಶಶಕ್ಕೆ ಪ್ರಜಾಧ್ವನಿ ಹೇಗೆ ಪರಿಹಾರವಾಗಲಿದೆ?
ಪ್ರಸ್ತುತ ಜನತಾ ದರ್ಶನದಲ್ಲಿ ಸಾರ್ವಜನಿಕರು ನೀಡುವ ಅರ್ಜಿಗಳನ್ನು ಪಡೆದು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಉತ್ತರ ನೀಡುವ ವ್ಯವಸ್ಥೆಯಿದೆ. ಆದರೆ ಈ ವ್ಯವಸ್ಥೆಯಲ್ಲಿ ಬಹುತೇಕ ಬರುವ ಅರ್ಜಿಗಳಿಗೆ ಉತ್ತರ ನೀಡುವುದಕ್ಕೆ ಇಲಾಖೆ ಅಧಿಕಾರಿಗಳು ಮುಂದಾಗುವುದೇ ಇಲ್ಲ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಜಾಧ್ವನಿ ಅಪ್ಲಿಕೇಶನ್ ಉಪಯುಕ್ತವಾಗಿದೆ. ಏಕೆಂದರೆ ಜನಾತ ದರ್ಶನದಲ್ಲಿ ಬರುವ ಅರ್ಜಿಗಳ ಮೇಲೆ ಕೈಗೊಂಡ ಕ್ರಮಗಳನ್ನು ಪ್ರಜಾಧ್ವನಿ ಅಪ್ಲಿಕೇಶನ್‌ನಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ. ಅರ್ಜಿದಾರರಿಗೆ ಮಾಹಿತಿ ನೀಡುವ ತನಕ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಜವಾಬ್ದಾರರಾಗಿರುತ್ತಾರೆ.
ಮುಖ್ಯಮಂತ್ರಿಗಳು ಹಾಗೂ ಸರ್ಕಾರಕ್ಕೆ ಬರುವ ಎಲ್ಲಾ ಅರ್ಜಿಗಗಳನ್ನು ಪ್ರಜಾಧ್ವನಿಯಲ್ಲಿ ಸೇರಿಸಲಾಗುತ್ತದೆ. ಈ ಅರ್ಜಿಗಳನ್ಗನು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು ನಿರಂತರವಾಗಿ ಮಾನಿಟರ್ ಮಾಡುತ್ತಿರುತ್ತಾರೆ. ಆದ್ದರಿಂದ ಸಂಬಂಧಪಟ್ಟ ಯಾವುದೇ ಅಧಿಕಾರಿ ಅರ್ಜಿಗಳಿಗೆ ಸೂಕ್ತ ಉತ್ತರ ನೀಡದೆ ಜಾರಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಈ ಮೂಲಕ ಜನಾತದರ್ಶನದಲ್ಲಿ ಬರುವ ಅರ್ಜಿದಾರರಿಗೆ ಸೂಕ್ತ ನ್ಯಾಯ ಸಿಗುವಂತೆ ಮಾಡುವುದು ಇದರ ಒಟ್ಟಾರೆ ಉದ್ದೇಶ ಎಂದು ಹೇಳಲಾಗಿದೆ.
ಪ್ರಜಾಧ್ವನಿಯಿಂದ ಬರಲಿದೆ ಎಸ್ಎಂಎಸ್
ಇನ್ನು ಜನತಾ ದರ್ಶನದಲ್ಲಿ ನೀಡಲಾಗುವ ಅರ್ಜಿ ಈಗ ಎಲ್ಲಿದೆ, ಇದರ ಬಗ್ಗೆ ಸರ್ಕಾರ ಇಲ್ಲಿಯ ತನಕ ಏನು ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಸಂದೇಶದ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಕೂಡ ಇರಲಿದೆ. ಒಂದು ವೇಳೆ ಅಗತ್ಯಬಿದ್ದರೆ ನಿಮ್ಮ ಅರ್ಜಿಗೆ ಸಂಬಂಧಿಸಿದಂತೆ ದಾಖಲೆಯ ಪೋಟೋವನ್ನೂ ಕಳುಹಿಸಲಾಗುತ್ತದೆ.
ಪ್ರಜಾಧ್ವನಿಯಿಂದ ಶಾಸಕರಿಗೂ ಸಿಗಲಿದೆ ದನಿ
ಇದಲ್ಲದೆ ರಾಜ್ಯ ಶಾಸಕರು ಮುಖ್ಯಮಂತ್ರಿಗಳಿಗೆ ಸರ್ಕಾರಕ್ಕೆ ಸಲ್ಲಿಸುವ ಸಾರ್ವಜನಿಕರ ಕುಂದುಕೊರತೆಯ ಅರ್ಜಿಗಳನ್ನು ಸಹ ಪ್ರಜಾಧ್ವನಿ ಆಪ್‌ನಲ್ಲಿ ಕಾಣಬಹುದು. ಪ್ರಜಾಧ್ವನಿ ಆಪ್ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿಗಳನ್ನು ಕಳುಹಿಸಲಾಗುತ್ತದೆ. ಈ ಮೂಲಕ ಶಾಸಕರು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂದಿಸಿದಂತೆ ಯಾವೆಲ್ಲಾ ಕ್ರಮ ಕೈಗೊಳ್ಳಲಿದೆ ಅನ್ನೊದನ್ನ ಸಹ ವಿಕ್ಷಿಸಬಹುದಾಗಿದೆ.
ಇನ್ನು ಪ್ರಜಾಧ್ವನಿ ಆ್ಯಪ್ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕೆ ಪ್ರತ್ಯೇಕ ಅಧಿಕಾರಿಯನ್ನು ಸಿಎಂ ಸಚಿವಾಲಯದಲ್ಲಿ ನೇಮಕ ಮಾಡಲಾಗಿದೆ. ಒಟ್ಟು ಇಬ್ಬರು ಅಧಿಕಾರಿಗಳು ಜನರಿಂದ ಹಾಗೂ ಶಾಸಕರಿಂದ ಬರುವ ಅರ್ಜಿಗಳಿಗೆ ಪರಿಹಾರ ನೀಡುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.


Click it and Unblock the Notifications