Home
ಸುದ್ದಿಜಾಲ

ಶೀಘ್ರದಲ್ಲೇ ಬೆಂಗಳೂರಿನ ಜನರಿಗೆ ಈ ಸೇವೆ ಸಂರ್ಪೂಣ ಉಚಿತವಾಗಿ ಸಿಗಲಿದೆ!

ಬೆಂಗಳೂರಿನ ಮಹಾಜನತೆ ಖುಷಿ ಪಡುವ ಸುದ್ದಿಯೊಂದು ಹೊರಬಿದ್ದಿದೆ. ಇಂಟರ್‌ನೆಟ್‌ ಇಲ್ಲ ಅಂತಾ ಪರದಾಡುವ ಮಂದಿಗೆ ಇನ್ಮುಂದೆ ಯಾವುದೇ ತಾಪತ್ರಯವಿಲ್ಲದೆ ಉಚಿತ ವೈಫೈ ಇಂಟರ್‌ನೆಟ್‌ ಅನ್ನು ಬಳಸುವುದಕ್ಕೆ ಸಾದ್ಯವಾಗಲಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ 5,000ಕ್ಕೂ ಹೆಚ್ಚು ಪಬ್ಲಿಕ್‌ ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು ಪ್ಲಾನ್‌ ಮಾಡಿದೆ.

ಹೌದು, ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ನಗರದಾದ್ಯಂತ 5,000 ಕ್ಕೂ ಹೆಚ್ಚು ಪಬ್ಲಿಕ್‌ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಒದಗಿಸಲು ಪ್ಲಾನ್‌ ರೂಪಿಸುತ್ತಿದೆ. ಈ ಮೂಲಕ ಇಡೀ ಭಾರತ ದೇಶದಲ್ಲಿ ಅತಿ ಹೆಚ್ಚು ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಹೊಂದಿರುವ ನಗರವೆಂಬ ಖ್ಯಾತಿಗೆ ಪಾತ್ರವಾಗಲು ಮುಂದಾಗಿದೆ. ಅಷ್ಟಕ್ಕೂ ರಾಜ್ಯ ಸರ್ಕಾರ ಈ ಪ್ರಮಾಣದಲ್ಲಿ ಪಬ್ಲಿಕ್‌ ವೈಫೈ ಹಾಟ್‌ಸ್ಪಾಟ್‌ಗಳನ್ನು ನಿರ್ಮಿಸುವುದಕ್ಕೆ ಮುಂದಾಗಿರುವುದೇಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೀಘ್ರದಲ್ಲೇ ಬೆಂಗಳೂರಿನ ಜನರಿಗೆ ಈ ಸೇವೆ ಸಂರ್ಪೂಣ ಉಚಿತವಾಗಿ ಸಿಗಲಿದೆ!

ಬ್ರ್ಯಾಂಡ್‌ ಬೆಂಗಳೂರು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೇ ಹಾದಿಯಲ್ಲಿ ಇದೀಗ ರಾಜ್ಯ ಸರ್ಕಾರದ ಮುಂದೆ ಹೊಸ ಪ್ಲಾನ್‌ ಒಂದು ಸಿದ್ಧವಾಗಿದೆ. ಅದೆನೆಂದರೆ ಬೆಂಗಳೂರಿನ ನಾಗರಿಕರಿಗೆ ಉಚಿತವಾಗಿ ಉತ್ತಮ ಇಂಟರ್‌ನೆಟ್‌ ಸಂಪರ್ಕ ಮತ್ತು ಸೇವೆಗಳನ್ನು ನೀಡುವುದಕ್ಕೆ ರಾಜ್ಯ ಸರ್ಕಾರ ಪ್ಲಾನ್‌ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ಮಾತ್ರವಲ್ಲ, ಕಾರ್ಪೊರೇಷನ್‌ಗಳಿಗೂ ಕೂಡ ಹೆಚ್ಚಿನ ಲಾಭವಾಗಲಿದೆ ಎನ್ನಲಾಗಿದೆ.

ಸದ್ಯ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ 5,000 ಕ್ಕೂ ಹೆಚ್ಚು ಸ್ಥಳಗಳಲ್ಲಿ ಉಚಿತ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಉಚಿತ ವೈ-ಫೈ ಹಾಟ್‌ಸ್ಪಾಟ್‌ಗಳಿಗಾಗಿ ಸುಮಾರು 3,000 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಪ್ಲಾನ್‌ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರದ ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಸಾರ್ವಜನಿಕ ಹಾಟ್‌ಸ್ಪಾಟ್‌ಗಳನ್ನು ಯಾವಾಗ ಸ್ಥಾಪಿಸಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಆದರೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಅಂಗಳದಲ್ಲಿ ಹೊಸ ಪ್ರಸ್ತಾವನೆಯೊಂದು ಹರಿದಾಡುತ್ತಿರುವುದು ಸತ್ಯ. ಇನ್ನು ಈ ಪ್ರಸ್ತಾವನೆಯನ್ನು ತಮ್ಮ ಸರ್ಕಾರದ ಹಿಂದಿನ ಅಧಿಕಾರಾವಧಿಯಲ್ಲಿಯೂ ಚರ್ಚಿಸಲಾಗಿತ್ತು ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಅಲ್ಲದೆ ಈ ಸೇವೆ ನೀಡುವುದಕ್ಕಾಗಿ ಟೆಲಿಕಾಂ ಪೂರೈಕೆದಾರರಿಂದ ಪ್ರಸ್ತಾಪವನ್ನು ಸ್ವೀಕರಿಸಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ ACT ಫೈಬರ್‌ನೆಟ್‌ನೊಂದಿಗೆ ಮಲ್ಲೇಶ್ವರಂನಲ್ಲಿ 100 ಸ್ಥಳಗಳಲ್ಲಿ ಪಬ್ಲಿಕ್‌ ವೈ-ಫೈ ಹಾಟ್‌ಸ್ಪಾಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಸ್ಥಳಗಳಲ್ಲಿ ವೈ-ಫೈ ಬಳಸಲು, ಬಳಕೆದಾರರು ತಮ್ಮ ಫೋನ್ ಸಂಖ್ಯೆಗಳನ್ನು ನಮೂದಿಸಬೇಕು ಮತ್ತು OTP ಯೊಂದಿಗೆ ತಮ್ಮನ್ನು ತಾವು ಪರಿಶೀಲಿಸಿಕೊಳ್ಳಬೇಕಾಗುತ್ತದೆ. ಜೊತೆಗೆ ಈ ಪಬ್ಲಿಕ್‌ ವೈಫೈ 45 ನಿಮಿಷಗಳ ಅವಧಿಗೆ 1GB ಯ ಮಿತಿಯೊಂದಿಗೆ 25Mbps ನಲ್ಲಿ ಬಳಸುವುದಕ್ಕೆ ಅವಕಾಶ ಸಿಗಲಿದೆ. ಇನ್ನು ಈ ಹಾಟ್‌ಸ್ಪಾಟ್‌ಗಳಲ್ಲಿ ಹೆಚ್ಚಿನವು ಮೆಟ್ರೋ ನಿಲ್ದಾಣಗಳು, ಬಸ್ ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು, ಮಾಲ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿವೆ.

ನಗರ ಪ್ರದೇಶಗಳಲ್ಲಿ ಉಚಿತವಾಗಿ ವೈಫೈ ನೆಟ್‌ವರ್ಕ್‌ ಅನ್ನು ಒದಗಿಸುವುದರಿಂದ ವ್ಯಾಪಾರ ಮತ್ತು ಇತರೆ ಸೇವೆಗಳಿಗೆ ವೇಗ ಸಿಗಲಿದೆ. ಇದರಿಂದ ಹಲವು ಉದ್ದಿಮೆಗಳಿಗೂ ಕೂಡ ಸಹಾಯವಾಗಲಿದೆ ಅನ್ನೋದು ಸದ್ಯ ಚರ್ಚೆಯಲ್ಲಿರುವ ವಿಚಾರವಾಗಿದೆ. ಜೊತೆಗೆ ಉಚಿತವಾಗಿ ವೈಫೈ ದೊರೆಯುವುದರಿಂದ ವಿದ್ಯಾರ್ಥಿಗಳು, ಶ್ರಮಿಕರು ಹಾಗೂ ಎಲ್ಲಾ ವಲಯದ ಜನರಿಗೆ ಇಂಟರ್‌ನೆಟ್‌ ಬ್ರೌಸ್‌ ಮಾಡಲು ಸಾದ್ಯವಾಗಲಿದೆ. ನೆಟ್‌ವರ್ಕ್‌ ಸೇವೆಯಲ್ಲಿ ಮಹತ್ವದ ಬದಲಾವಣೆ ಕೂಡ ಆಗಬಹುದು ಎಂಬ ನಿರೀಕ್ಷೆಯಿದೆ.

ಇನ್ನು ಬ್ರ್ಯಾಂಡ್‌ ಬೆಂಗಳೂರು ಎಂಬ ಹೊಸ ಸೂತ್ರದಡಿ ಮುಂದಡಿ ಇಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ ಅವರ ಕನಸ್ಸಿಗೆ ಇದು ಮೆಟ್ಟಿಲಾಗುವ ಸಾಧ್ಯತೆಯಿದೆ. ಅದರಂತೆ ಸಿಲಿಕಾನ್‌ ಸಿಟಿಯಲ್ಲಿ ಹಲವು ಪ್ರಮುಖ ಸರ್ಕಲ್‌ಗಳು, ಸ್ಥಳಗಳಲ್ಲಿ ನೀವು ಉಚಿತವಾಗಿ ವೈಫೈ ಇಂಟರ್‌ನೆಟ್‌ ಅನ್ನು ಬಳಸಿಕೊಳ್ಳಬಹುದಾಗಿದೆ.

Best Mobiles in India

English summary
Karnataka Government plans to implement Over 5,000 Public Wi-Fi Hotspots across Bengaluru soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+