ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಿಗೆ ಉಚಿತ ಇಂಟರ್‌ನೆಟ್! ಎಷ್ಟು? ಯಾವಾಗಿನಿಂದ?

Written By:

ಗ್ರಾಮೀಣ ಪ್ರದೇಶಗಳೂ ಸಹ ಇಂಟರ್‌ನೆಟ್‌ನಿಂದ ವಂಚಿತವಾಗಬಾರದು ಎಂದು ಸರ್ಕಾರಿ ಟೆಲಿಕಾಂ ಕಂಪೆನಿ ಬಿಎಸ್ಎನ್ಎಲ್ ಜೊತೆ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ವೈ-ಫೈ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.!! ಹೌದು, ಹಲವು ಭಾಗ್ಯಗಳ ನಂತರ ಇದೀಗ ಇಂಟರ್ನೆಟ್ ಭಾಗ್ಯವೂ ರಾಜ್ಯದ ಜನರಿಗೆ ದೊರೆಯಲಿದೆ.!!

ಈ ಬಗ್ಗೆ ಸಚಿವ ಟಿಬಿ ಜಯಚಂದ್ರ ಅವರು ಮಾತನಾಡಿ, ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ವೈ-ಫೈ ಸೇವೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಗ್ರಾಮೀಣ ಭಾಗದಲ್ಲಿಯೂ ಜನರು ಮುಖ್ಯವಾಹಿನಿಗೆ ಬರಬೇಕು ಎಂಬುದು ರಾಜ್ಯ ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದ್ದಾರೆ

ಹಾಗಾಗಿ, ಇದೇ ಮೊದಲ ಸಾರಿ ರಾಜ್ಯ ಸರ್ಕಾರವೊಂದು ಗ್ರಾಮೀಣ ಪ್ರದೇಶದ ಎಲ್ಲರಿಗೂ ಉಚಿತ ವೈ-ಫೈ ನೀಡಲು ಮುಂದಾಗಿದ್ದು, ರಾಜ್ಯ ಸರ್ಕಾರದಿಂದ ಗ್ರಾಮೀಣ ಪ್ರದೇಶದ ಜನರು ಉಚಿತವಾಗಿ ಎಷ್ಟು ಇಂಟರ್‌ನೆಟ್ ಪಡೆಯಬಹುದು. ಕಾಲಾವದಿ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರು ವರ್ಷ ಉಚಿತ ಇಂಟರ್‌ನೆಟ್.!!

ಮೂರು ವರ್ಷ ಉಚಿತ ಇಂಟರ್‌ನೆಟ್.!!

ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮಿಣ ಪ್ರದೇಶದ ಜನರಿಗೂ ಮೂರು ವರ್ಷಗಳ ಕಾಲ ಉಚಿತ ಇಂಟರ್‌ನೆಟ್ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ.!.ಜನರಿಗೆ ಉಚಿತ ವೈ-ಫೈ ನೀಡುವ ಮೂಲಕ ಸರ್ಕಾರಿ ಟೆಲಿಕಾಂ ಬಿಎಸ್ಎನ್ಎಲ್ಗೂ ಚದೈತನ್ಯ ನೀಡುವಲ್ಲಿ ರಾಜ್ಯಸರ್ಕಾರ ಮುಂದಾಗಿದೆ.!!

ಎಷ್ಟು ಇಂಟರ್ನೆಟ್ ಉಚಿತವಾಗಿರಲಿದೆ.!!

ಎಷ್ಟು ಇಂಟರ್ನೆಟ್ ಉಚಿತವಾಗಿರಲಿದೆ.!!

ಸರ್ಕಾರವೂ ಬಿಎಸ್ಎನ್ಎಲ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಪ್ರತಿದಿನ( ಒಂದು ಡಿವೈಸ್) ಪ್ರತಿದಿವಸ ಒಬ್ಬರಿಗೆ 200MB ಡೇಟಾವನ್ನು ನೀಡಲು ಮುಂದಾಗಿದೆ. 20೦MB ಬಳಕೆಯಾದ ನಂತರವೂ ಇಂಟರ್‌ನೆಟ್ ಬಳಕೆ ಮಾಡಲು ಸ್ವಲ್ಪಮಟ್ಟದ ಶುಲ್ಕ ಅನ್ವಯವಾಗಲಿದೆ.!!

79.50 ಕೋಟಿ ಹಣ ಬಿಡುಗಡೆ!

79.50 ಕೋಟಿ ಹಣ ಬಿಡುಗಡೆ!

ಗ್ರಾಮಿಣ ಪ್ರದೇಶಗಳಲ್ಲಿ ವೈ-ಫೈ ಸೇವೆ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಈಗಾಗಲೇ 79.50 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.!! ನಂತರದ ದಿವಸಗಳಲ್ಲಿ ಮತ್ತಷ್ಟು ವೆಚ್ಚವಾಗಬಹುದು ಎಂದು ಅಂದಾಜು ಮಾಡಲಾಗಿದೆ.!!

ಉಚಿತ ಇಂಟರ್‌ನೆಟ್ ಸೇವೆ ಶುರು ಯಾವಾಗ??

ಉಚಿತ ಇಂಟರ್‌ನೆಟ್ ಸೇವೆ ಶುರು ಯಾವಾಗ??

2017-2020ರರ ಅವಧಿಗೆ ಉಚಿತ ವೈ-ಫೈ ಸೇವೆ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿದ್ದು, ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಿನಲ್ಲಿ ರಾಜ್ಯಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸುವ ನಿರೀಕ್ಷೆ ಇದೆ. ಆದಷ್ಟು ಬೇಗ ಶುರುಮಾಡುವ ಆಲೋಚನೆಯಲ್ಲಿ ರಾಜ್ಯಸರ್ಕಾರವಿದೆ.!!

ಓದಿರಿ:ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ?..ಮಾಡಲೇಬೇಕು ಏಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
The Karnataka cabinet approved a scheme to provide free Wi-Fi to rural areas in the state on Wednesday. to
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot