Home
ಸುದ್ದಿಜಾಲ

200 ಯೂನಿಟ್‌ ಉಚಿತ ವಿದ್ಯುತ್‌ಗೆ ಅರ್ಜಿ ಸಲ್ಲಿಸಲು ಇದು ಕಡ್ಡಾಯ!

ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರ ತನ್ನ ಐದು ಗ್ಯಾರಂಟಿಗಳಿಗೂ ಕೂಡ ಅನುಮೋದನೆ ನೀಡಿದೆ. ಇದರಲ್ಲಿ ಮೊದಲನೇ ಗ್ಯಾರಂಟಿಯಾದ ಗೃಹಜ್ಯೋತಿ ಯೋಜನೆಗಾಗಿಯೇ ಹೊಸ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸುವುದಾಗಿ ರಾಜ್ಯ ಇಂಧನ ಸಚಿವ ಕೆ.ಜೆ ಜಾರ್ಜ್‌ ಹೇಳಿದ್ದಾರೆ.

ಹೌದು, ರಾಜ್ಯದ ಜನರಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ (Gruhajyothi) ಯೋಜನೆಗಾಗಿ ಹೊಸ ಆ್ಯಪ್‌ ಪರಿಚಯಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಯೋಜನೆಯ ಲಾಭ ಪಡೆಯಲು ರಾಜ್ಯದ ಜನರು ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದ್ರೆ ಗೃಹಜ್ಯೋತಿ ಆ್ಯಪ್‌ ಮೂಲಕ ನಿಮಗೆ ಏನೆಲ್ಲಾ ಸೇವೆ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

200 ಯೂನಿಟ್‌ ಉಚಿತ ವಿದ್ಯುತ್‌ಗೆ ಅರ್ಜಿ ಸಲ್ಲಿಸಲು ಇದು ಕಡ್ಡಾಯ!

ಗೃಹಜ್ಯೋತಿ ಆ್ಯಪ್‌ ಬಳಸುವುದು ಹೇಗೆ?
ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಗೃಹಜ್ಯೋತಿ ಯೋಜನೆಯ ಸೇವೆಯನ್ನು ನೀಡುವುದಕ್ಕಾಗಿ ಗೃಹಜ್ಯೋತಿ ಆ್ಯಪ್‌ ಪರಿಚಯಿಸಲು ಮುಂದಾಗಿದೆ. ಈಗಾಗಲೇ ಈ ಆ್ಯಪ್‌ ಅಭಿವೃದ್ದಿಯ ಹಂತದಲ್ಲಿದ್ದು, ಸದ್ಯದಲ್ಲೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಲಿದೆ. ಇನ್ನು ಈ ಅಪ್ಲಿಕೇಶನ್‌ ಮೂಲಕ ಬಾಡಿಗೆ ಮನೆಯಲ್ಲಿರುವವರು 200 ಯೂನಿಟ್‌ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಅಪ್ಲಿಕೇಶನ್‌ ಸಲ್ಲಿಸಬಹುದಾಗಿದೆ.

ಎಲ್ಲಾ ಆ್ಯಪ್‌ಗಳ ಮಾದರಿಯಲ್ಲಿಯೇ ಗೃಹಜ್ಯೋತಿ ಆ್ಯಪ್‌ ಕೂಡ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಲಿದೆ. ಈ ಆ್ಯಪ್‌ ಮುಂದಿನ ಹದಿನೈದು ದಿನಗಳಲ್ಲಿ ಸೇವೆಗೆ ಲಭ್ಯವಾಗಲಿದೆ. ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಅರ್ಜಿ ಸಲ್ಲಿಸುವಾಗ ಕನಿಷ್ಟ ಮೂರು ಪ್ರಮುಖ ಗುರುತಿನ ದಾಖಲೆಗಳು ಇರಲೇಬೇಕು ಎಂದು ಸರ್ಕಾರ ಹೇಳಿದೆ. ಬಾಡಿಗೆದಾರರು 200 ಯೂನಿಟ್‌ ಉಚಿತ ವಿದ್ಯುತ್‌ ಪಡೆಯುವುದಕ್ಕಾಗಿ ಆಧಾರ್‌ ಕಾರ್ಡ್‌, ಬಾಡಿಗೆ ಕರಾರು ಪತ್ರ ಮತ್ತು ಆರ್‌ಆರ್‌ ನಂಬರ್‌ ಐಡಿ ಇರುವ ಕರೆಂಟ್‌ ಬಿಲ್‌ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.

200 ಯೂನಿಟ್‌ ಉಚಿತ ವಿದ್ಯುತ್‌ಗೆ ಅರ್ಜಿ ಸಲ್ಲಿಸಲು ಇದು ಕಡ್ಡಾಯ!

ಗೃಹಜ್ಯೋತಿ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಗೃಹಜ್ಯೋತಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ಲಾಗ್‌ಇನ್‌ ಆಗುವುದು ಕಡ್ಡಾಯ. ನೀವು ಅಪ್ಲಿಕೇಶನ್‌ಗೆ ಲಾಗಿನ್‌ ಆದ ನಂತರ Opt in ಆಯ್ಕೆಯನ್ನು ಟ್ಯಾಪ್‌ ಮಾಡಬೇಕಾಗುತ್ತದೆ. ಇದರಲ್ಲಿ ಕೇಳಾಗುವ ದಾಖಲೆಗಳನ್ನು ನೀಡು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಇದಲ್ಲದೆ ನೀವು ಪ್ರಸ್ತುತ ಇರುವ ಬಾಡಿಗೆ ಮನೆಯನ್ನು ಖಾಲಿ ಮಾಡಿದ ನಂತರ Opt out ಮಾಡಬೇಕಾಗುತ್ತದೆ. ಅಲ್ಲದೆ ನೀವು ಹೊಸದಾಗಿ ಹೋಗುವ ಬಾಡಿಗೆ ಮನೆ ವಿವರವನ್ನು ಸಲ್ಲಿಸಿ ಮತ್ತೊಮ್ಮೆ ಅಪ್ಲಿಕೇಶನ್‌ನಲ್ಲಿ Opt in ಮೂಲಕ ಲಾಗಿನ್‌ ಆಗಬೇಕಾಗುತ್ತದೆ.

ಸರ್ಕಾರ ನೀಡಿರುವ ಮಾಹಿತಿಯಂತೆ ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಗೃಹಜ್ಯೋತಿ ಹೆಸರಿನ ಆಯಪ್ ಮೂಲಕ ಜೂನ್ 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಇನ್ನು ಈ ಸೇವೆ ಪಡೆಯಲು ನೀವು ಬಳಸುತ್ತಿರುವ ಮನೆಗೆ ನಿಗದಿಯಾಗಿರುವ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆ 200 ಯೂನಿಟ್ ಗಿಂತ ಕಡಿಮೆ ಇದ್ದರೆ ಮಾತ್ರ ಯೋಜನೆ ಲಾಭ ಸಿಗುತ್ತದೆ. 200 ಯೂನಿಟ್ ಗಿಂತ ಹೆಚ್ಚಿದ್ದರೆ ನೀವು ಸಂಪೂರ್ಣ ವಿದ್ಯುತ್‌ ಬಳಕೆಯ ಬಿಲ್‌ ಅನ್ನು ಪಾವತಿಸಬೇಕಾಗುತ್ತದೆ.

200 ಯೂನಿಟ್‌ ಉಚಿತ ವಿದ್ಯುತ್‌ಗೆ ಅರ್ಜಿ ಸಲ್ಲಿಸಲು ಇದು ಕಡ್ಡಾಯ!

ಇನ್ನು ಇದೇ ಸಮಯದಲ್ಲಿ ರಾಜ್ಯದ ಜನರು ನಕಲಿ ಆ್ಯಪ್‌ಗಳ ಬಗ್ಗೆ ಕೂಡ ಎಚ್ಚರಿಕೆ ವಹಿಸುವುದು ಸೂಕ್ತ. ಯಾಕೆಂದರೆ ಈಗಾಗಲೇ ಸರ್ಕಾರ ಗೃಹಜ್ಯೋತಿ ಆ್ಯಪ್‌ ಪರಿಚಯಿಸುವುದಾಗಿ ಹೇಳಿದೆ. ಆದರೆ ವಂಚಕರು ಇದನ್ನೇ ಆಧಾರವಾಗಿಸಿಕೊಂಡು ನಿಮಗೆ ನಕಲಿ ಆ್ಯಪ್‌ ಲಿಂಕ್‌ಗಳನ್ನು ಶೇರ್‌ ಮಾಡುವ ಮೂಲಕ ನಿಮ್ಮ ದಾರಿ ತಪ್ಪಿಸುವ ಸಾಧ್ಯತೆ ಇರಲಿದೆ. ಆದರಿಂದ ಅಧಿಕೃತ ಪ್ಲೇ ಸ್ಟೋರ್‌ ಮೂಲಕ ಮಾತ್ರವೇ ಗೃಹಜ್ಯೋತಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಸೂಕ್ತ.

Best Mobiles in India

English summary
Karnataka govt anounced will be developed Gruhajyothi app for getting free electricity
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+