Just In
- 7 hrs ago Smartphones: ಈ ವರ್ಷ ಲಾಂಚ್ ಆದ 25 ಸಾವಿರದೊಳಗಿರುವ ಅತ್ಯುತ್ತಮ ಕ್ಯಾಮೆರಾ ಫೋನ್ಗಳಿವು! ಸಖತ್ ಫೀಚರ್ಸ್
- 8 hrs ago ವಿವೋದ ಈ ಹಳೆಯ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ನೀವು ಖರೀದಿಸ್ತೀರಾ?
- 9 hrs ago Xiaomi: ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ ಲಾಂಚ್! ಏರ್ ಕಂಡಕ್ಷನ್ ತಂತ್ರಜ್ಞಾನ.. ಬೆಲೆ ಎಷ್ಟು?
- 10 hrs ago ಹೊಸ ಸ್ಯಾಮ್ಸಂಗ್ ಫೋನ್ ಖರೀದಿಸಬೇಕೆ?..ಖರೀದಿಸುವ ಮುನ್ನ ಇಲ್ಲಿ ಗಮನಿಸಿ!
Don't Miss
- Sports IPL 2024: ಪಂಜಾಬ್ ಮಣಿಸಿದ ಆರ್ಸಿಬಿ ಗೆಲುವಿನ ಆರಂಭ: ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಿದ ವಿರಾಟ್ ಕೊಹ್ಲಿ
- News ಕಾಸು ಇಲ್ವಾ ಫೋನ್ ಪೇ ಮಾಡಿ ಎಂದ ಭಿಕ್ಷುಕ, ಬಾಲಕಿ ಕೆನ್ನೆ ಕಚ್ಚಿದ ಸೈಕೋ- ವಿಡಿಯೋ ವೈರಲ್
- Movies Sanya Iyer: ಕಾಲಿವುಡ್ ನಟನ ಜೊತೆ ನಟಿ ಸಾನ್ಯಾ ಐಯ್ಯರ್; ತಮಿಳು ಸಿನಿಮಾ ಮಾಡ್ತಿದ್ದಾರ?
- Lifestyle ಗರಿಗರಿಯಾದ ಚಕ್ಲಿ ಮನೆಯಲ್ಲೇ ಮಾಡಬಹುದು..! ಇಲ್ಲಿದೆ ಸಿಂಪಲ್ ರೆಸಿಪಿ
- Automobiles ಬಡ ಸೆಕ್ಯುರಿಟಿ ಗಾರ್ಡ್ ಜೀವನದ ಬಹುದೊಡ್ಡ ಕನಸು ನನಸು ಮಾಡಿದ ಹೃದಯವಂತ ಯೂಟ್ಯೂಬರ್
- Finance ಬ್ಯಾನ್ ಆಗಲಿದ್ಯಾ 100 ರೂ. ಹಳೆ ನೋಟು ?! ಆರ್ಬಿಐ ಕೊಟ್ಟ ಸೂಚನೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಓಲಾ ಬ್ಯಾನ್ ಆಗಿದ್ದೇಕೆ?
ಭಾರತದಲ್ಲಿ ಮೊದಲ ಬಾರಿಗ ಮೊಬೈಲ್ ಆಪ್ ಆಧಾರಿತ ಟ್ಯಾಕ್ಸಿ ಸೇವೆ ತಂದ ಓಲಾ ಕರ್ನಾಟಕ ಸರ್ಕಾರದಿಂದ ಬ್ಯಾನ್ ಆಗಿದೆ. ಓಲಾ ಕ್ಯಾಬ್ ಸಂಸ್ಥೆಗೆ ನೀಡಿದ್ದ ಪರವಾನಿಗೆಯನ್ನು ರಾಜ್ಯ ಸರಕಾರ ರದ್ದು ಮಾಡಿದ್ದು, ಸಾರಿಗೆ ಇಲಾಖೆ ನೀಡಿದ ಪರವಾನಿಗೆಯನ್ನು ದುರ್ಬಳಕೆ ಮಾಡಿದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಓಲಾ ಲೈಸೆನ್ಸನ್ನು ಅಮಾನತು ಮಾಡಲಾಗಿದೆ.
ರಾಜ್ಯ ರಾಜಧಾನಿಯಲ್ಲಿ ಅಕ್ರಮವಾಗಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿದ್ದ 'ಓಲಾ' ಕಂಪನಿಗೆ ಚಾಟಿ ಬೀಸಿರುವ ಸಾರಿಗೆ ಇಲಾಖೆ, ಟ್ಯಾಕ್ಸಿ ಸೇವೆ ನೀಡಲು ರಾಜ್ಯ ಸಾರಿಗೆ ಪ್ರಾಧಿಕಾರದಿಂದ( ಆರ್‌ಟಿಒ) ಪಡೆದಿದ್ದ ಅಗ್ರಿಗೇಟರ್ಸ್ ಪರವಾನಗಿಯನ್ನು ಆರು ತಿಂಗಳ ಕಾಲ ಅಮಾನುತುಗೊಳಿಸಿದೆ. ಹೀಗಾಗಿ ಇಂದಿನಿಂದಲೇ ರಾಜ್ಯಾದ್ಯಂತ ಓಲಾ ಕ್ಯಾಬ್ ಆಟೋ ಸೇವೆ ಬಂದ್ ಆಗಿದೆ.
ಆಪ್ ಆಧಾರಿತಸೇವೆ ನೀಡುವ ಓಲಾಗೆ ಪರವಾನಿಗೆ ನೀಡುವ ವೇಳೆ ವಿಧಿಸಲಾಗಿದ್ದ ನಿಯಮಗಳ ಉಲ್ಲಂಘನೆಯಾಗಿರುವುದು ಖಚಿತವಾಗಿದೆ. ಇನ್ನು ನಿಗದಿಗಿಂತ ದುಪ್ಪಟ್ಟು ದರ ಸುಲಿಗೆ ಮಾಡುವುದೂ ಸೇರಿದಂತೆ ಅನೇಕ ದೂರುಗಳು ಓಲಾ ಸಂಸ್ಥೆ ವಿರುದ್ಧ ಕೇಳಿಬಂದಿದ್ದವು. ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಓಲಾದಿಂದ ಸಾರಿಗೆ ನಿಯಮಗಳ ಉಲ್ಲಂಘನೆಯಾಗಿತ್ತು. ಈ ಸಂಬಂಧ ಒಂದು ವಾರದೊಳಗೆ ವಿವರಣೆ ನೀಡಬೇಕೆಂದು ಸಾರಿಗೆ ಇಲಾಖೆ ಫೆ. 15ರಂದು ನೋಟೀಸ್ ಕೂಡ ನೀಡಿತ್ತು. ಇದಕ್ಕೆ ಸಂಸ್ಥೆ ನೀಡಿದ ವಿವರಣೆ ಸಮಪರ್ಕವಾಗಿಲ್ಲವೆಂದು ಪರಿಗಣಿಸಿದ ಸರಕಾರ ಓಲಾಗೆ ನೀಡಿದ್ದ ಪರವಾನಿಗೆಯನ್ನು ರದ್ದುಗೊಳಿಸಿ ಟ್ಯಾಕ್ಸಿ ಸೇವೆಯನ್ನು ತತ್ಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ.
ಇನ್ನು ಆರು ತಿಂಗಳು ಕ್ಯಾಬ್ ಸೇವೆ ಸ್ಥಗಿತಗೊಳಿಸದರೆ ಚಾಲಕರು ಏನು ಮಾಡಬೇಕು ಎಂಬುದು ಪ್ರಶ್ನೆಯಾಗಿದೆ. ಇನ್ನು ಮೂರು ದಿನಗಳ ವರೆಗೆ ಕಾದು ನೋಡುತ್ತೇವೆ. ಅಷ್ಟರಲ್ಲಿ ಓಲಾ ಸಂಸ್ಥೆ ಏನು ಕ್ರಮ ಕೈಗೊಳ್ಳಲಿದೆ ಎಂಬುದು ಗೊತ್ತಾಗುತ್ತದೆ. ನಂತರ ಚಾಲಕರ ಮುಂದಿನ ನಡೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಓಲಾ ಚಾಲಕರ ಸಂಘದ ಅಧ್ಯಕ್ಷ ಚಂದ್ರು ಅವರು ಹೇಳಿದ್ದಾರೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999