Home
ಸುದ್ದಿಜಾಲ

ಟ್ವಿಟರ್‌ಗೆ ಬಿಗ್‌ ಶಾಕ್‌ ಕೊಟ್ಟ ಕರ್ನಾಟಕ ಹೈಕೋರ್ಟ್‌!. 50ಲಕ್ಷ ರೂ. ದಂಡ ವಿಧಿಸಿದ್ದು ಯಾಕೆ?

ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದ ಟ್ವಿಟರ್‌ಗೆ ಕರ್ನಾಟಕ ಹೈಕೋರ್ಟ್‌ ಬಿಗ್‌ ಶಾಕ್‌ ನೀಡಿದೆ. ಅಷ್ಟೇ ಅಲ್ಲ ಸರ್ಕಾರದ ಆದೇಶವನ್ನು ಅನುಸರಿಸುವುದಕ್ಕೆ ವಿಳಂಬವಾಗಿರುವುದಕ್ಕೆ ಸೂಕ್ತ ಕಾರಣ ನೀಡಿದ ಟ್ವಿಟರ್‌ಗೆ 50 ಲಕ್ಷ ರೂ ದಂಡವನ್ನು ವಿಧಿಸಿ ಆಧೇಶ ನೀಡಿದೆ. ಜೊತೆಗೆ ಟ್ವಿಟರ್‌ ಕೇಂದ್ರ ಸರ್ಕಾರದ ವಿರುದ್ದ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದೆ.

ಹೌದು, ಟ್ವಟರ್‌ನಲ್ಲಿ ಅಕ್ಷೇಪಾರ್ಹ ಅಕೌಂಟ್‌ಗಳು ಮತ್ತು ಟ್ವೀಟ್‌ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಟ್ವಿಟರ್‌ಗೆ ಸೂಚನೆ ನೀಡಿತ್ತು. ಆದರೆ ಈ ಸೂಚನೆ ಪಾಲಿಸದ ಟ್ವಿಟರ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ದ ಮನವಿಯನ್ನು ಸಲ್ಲಿಸಿತ್ತು. ಇದೀಗ ಈ ಅರ್ಜಿಯನ್ನು ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್‌ ಟ್ವಿಟರ್‌ಗೆ ಛೀಮಾರಿ ಹಾಕಿದೆ. ಹಾಗಾದ್ರೆ ಕರ್ನಾಟಕಿ ಹೈಕೋರ್ಟ್‌ನಲ್ಲಿ ಟ್ವಿಟರ್‌ ಸಲ್ಲಿಸಿದ್ದ ಮನವಿ ಏನು? ಹೈಕೋರ್ಟ್‌ ಹೇಳಿದ್ದೇನು ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌ಗೆ ಬಿಗ್‌ ಶಾಕ್‌ ಕೊಟ್ಟ ಕರ್ನಾಟಕ ಹೈಕೋರ್ಟ್‌!. 50ಲಕ್ಷ ರೂ. ದಂಡ ಯಾಕೆ?

ಕೇಂದ್ರ ಸರ್ಕಾರ ಟ್ವಿಟರ್‌ ಪ್ಲಾಟ್‌ಫಾರ್ಮ್‌ನಲ್ಲಿರುವ ಆಕ್ಷೇಪಾರ್ಹ ಪೋಸ್ಟ್‌ಗಳು ಹಾಗೂ ಟ್ವಿಟ್‌ಗಳನ್ನು ತೆಗೆಯುವಂತೆ ಟ್ವಿಟರ್‌ಗೆ ಸೂಚನೆ ನೀಡಿತ್ತು. ಆದರೆ ಕೇಂದ್ರ ಸರ್ಕಾರದ ಸೂಚನೆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ತರುವಂತಿದೆ ಎಂದು ಹೇಳಿ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ ಹೈಕೋರ್ಟ್‌ ಟ್ವಿಟರ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ, ಅಷ್ಟೇ ಅಲ್ಲ ಆದೇಶ ಪಾಲಿಸಲು ವಿಳಂಬವಾಗಿರುವುದಕ್ಕೆ ಕಾರಣ ನೀಡಲು ವಿಫಲವಾಗಿರುವ ಟ್ವಿಟರ್‌ಗೆ 50ಲಕ್ಷ ರೂ. ದಂಡ ವಿಧಿಸಿದೆ.

ಇನ್ನು ಕೇಂದ್ರ ಸರ್ಕಾರ ನೀಡಿರುವ ಸೂಚನೆ ಪಾಲಿಸದಿದ್ದರೆ 7 ವರ್ಷ ಶಿಕ್ಷೆ ವಿಧಿಸುವ ನಿಯಮವಿದೆ. ಆದರೂ ಕೂಡ ಟ್ವಿಟರ್‌ ಸಂಸ್ಥೆ ಯಾವುದೇ ಸೂಚನೆಗಳನ್ನು ಪಾಲಿಸಿಲ್ಲ. ಕೇಂದ್ರ ಸರ್ಕಾರ ಸೂಚನೆ ನೀಡಿ ಒಂದು ವರ್ಷ ಕಳೆದ ನಂತರ ನೀವು ಕೋರ್ಟ್‌ಗೆ ಬಂದಿದ್ದೀರಿ, ಇಷ್ಟೊಂದು ವಿಳಂಬವಾಗಿ ಬರುವುದಕ್ಕೆ ನೀವೇನು ರೈತರಲ್ಲ, ನಿಮ್ಮದು ಶ್ರೀಮಂತ ಸಂಸ್ಥೆ ನೆನಪಿರಲಿ ಟ್ವಿಟರ್ ಸಂಸ್ಥೆಗೆ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಚಾಟಿ ಬೀಸಿದ್ದಾರೆ.

ಸದ್ಯ ಹೈಕೋರ್ಟ್‌ ವಿಧಿಸಿರುವ 50ಲಕ್ಷ ರೂ.ದಂಡವನ್ನು ಟ್ವಿಟರ್‌ 45 ದಿನಗಳ ಅವಧಿಗೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ ಕಂಪನಿಗೆ ದಿನಕ್ಕೆ 5,000 ರೂ. ಹೆಚ್ಚುವರಿ ದಂಡ ಬೀಳಲಿದೆ. ಇದಲ್ಲದೆ ಹೈಕಕೋರ್ಟ್‌ ವಿಧಿಸಿದ ದಂಡದ ಪ್ರಮಾಣವನ್ನು ಬದಲಾಯಿಸುವಂತೆ ನ್ಯಾಯಾಲಯದ ಮುಂದೆ ವಾದಿಸುವುದಕ್ಕೆ ಟ್ವಿಟರ್ ಮುಕ್ತವಾಗಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಟ್ವಿಟರ್‌ಗೆ ಬಿಗ್‌ ಶಾಕ್‌ ಕೊಟ್ಟ ಕರ್ನಾಟಕ ಹೈಕೋರ್ಟ್‌!. 50ಲಕ್ಷ ರೂ. ದಂಡ ಯಾಕೆ?

ಇನ್ನು ಈ ಪ್ರಕರಣದಲ್ಲಿ ಟ್ವಿಟರ್‌ ಸೊಶೀಯಲ್‌ ಮೀಡಿಯಾ ಖಾತೆಗಳನ್ನು ಬ್ಯಾನ್‌ ಮಾಡುವಂತೆ ಆದೇಶ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ ಎಂದು ವಾಧಿಸಿದೆ. ಅಲ್ಲದೆ ಸರ್ಕಾರವು ಅವರ ಖಾತೆಗಳನ್ನು ನಿರ್ಬಂಧಿಸಲು ಕಾರಣವನ್ನು ನಿರ್ದಿಷ್ಟಪಡಿಸುವ ಅಗತ್ಯವಿದೆ ಎಂದು ಸಹ ಹೇಳಿಕೊಂಡಿದೆ. ಇನ್ನು ಸರ್ಕಾರದ ಪರ ವಾದ ಮಾಡಿರುವ ವಕೀಲರು ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿ ಮತ್ತು ಗುಂಪು ಹಿಂಸಾಚಾರದ ಘಟನೆಗಳನ್ನು ತಡೆಗಟ್ಟಲು ಟ್ವಿಟರ್‌ಗೆ ಈ ಆದೇಶವನ್ನು ನೀಡಲಾಗಿದೆ ಎಂದು ವಾದ ಮಾಡಿದ್ದಾರೆ. ಇದೆಲ್ಲವನ್ನು ಆಲಿಸಿರುವ ನ್ಯಾಯಮೂರ್ತಿಗಳು ಅಂತಿಮವಾಗಿ ಟ್ವಿಟರ್‌ಗೆ ದಂಡ ವಿಧಿಸಿ ಟ್ವಿಟರ್‌ನ ಅರ್ಜಿ ವಜಾಗೊಳಿಸಿದ್ದಾರೆ.

ಫೆಬ್ರವರಿ 2021 ಮತ್ತು 2022 ರ ನಡುವೆ 39 URL ಗಳನ್ನು ತೆಗೆದುಹಾಕಲು ಟ್ವಿಟರ್‌ಗೆ ಕೇಂದ್ರ ಸರ್ಕಾರ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಈ ಆದೇಶದ ವಿರುದ್ದ ಟ್ವಿಟರ್‌ ಈ ಅರ್ಜಿಯನ್ನು ಸಲ್ಲಿಸಿತ್ತು ಅನ್ನೊದು ಇಲ್ಲಿ ಗಮನಾರ್ಹವಾಗಿದೆ. ಇದಲ್ಲದೆ ಇತ್ತೀಚೆಗೆ, ಟ್ವಿಟ್ಟರ್‌ನ ಎಲೋನ್ ಮಸ್ಕ್, ಭಾರತ ಸರ್ಕಾರ ವಿಧಿಸಿರುವ ನಿಯಮಗಳಿಗೆ ಬದ್ಧವಾಗಿರುವುದನ್ನು ಬಿಟ್ಟು ಟ್ವಿಟರ್‌ಗೆ ಬೇರೆ ದಾರಿಯಿಲ್ಲ, ಹಾಗೆ ಮಾಡಲು ವಿಫಲವಾದರೆ ಪ್ಲಾಟ್‌ಫಾರ್ಮ್ ಅನ್ನು ಮುಚ್ಚಬೇಕಾಗುತ್ತದೆ ಎಂದು ಹೇಳಿದ್ದರು ಅನ್ನೊದು ಕೂಡ ಮುಖ್ಯವಾಗಿದೆ.

Best Mobiles in India

English summary
Karnataka High Court has dismissed Twitter’s plea that challenged central government’s order
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+