ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಆನ್‌ಲೈನಿನಲ್ಲೇ ''ಆಸ್ತಿ ನೋಂದಣಿ'' ಮಾಡಿಸುವುದು ಹೇಗೆ?

|

ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ, ಅನಗತ್ಯ ವಿಳಂಬ ಮತ್ತು ಕಚೇರಿಗಳ ಅಲೆದಾಟದಿಮದ ಬೇಸತ್ತಿದ್ದ ಜನರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಸೂಕ್ತ ದಾಖಲೆ, ಅಗತ್ಯ ಮಾಹಿತಿಯಿದ್ದರೆ, ಆನ್‌ಲೈನ್‌ನಲ್ಲಿಯೇ ಪಾಸ್‌ಪೋರ್ಟ್‌ ಪಡೆಯುವ ಮಾದರಿಯಲ್ಲಿ ಆಸ್ತಿ ನೋಂದಣಿ ವ್ಯವಸ್ಥೆ ಮಾಡಿಸಿಕೊಳ್ಳಬಹುದು ಎಂದು ನೊಂದಣಿ ಮತ್ತು ಮುಂದ್ರಾಂಕ ಇಲಾಖೆ ತಿಳಿಸಿದೆ.

ಹೌದು, ಮಧ್ಯವರ್ತಿಗಳ ಹಾವಳಿ, ಅನಗತ್ಯ ವಿಳಂಬವನ್ನು ತಪ್ಪಿಸಲು ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು "ನೋಂದಣಿ ಪೂರ್ವ ಮಾಹಿತಿ ದಾಖಲೀಕರಣ' (ಪಿಆರ್‌ಡಿ) ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಪರಿಪೂರ್ಣ ವಿವರ ಸಲ್ಲಿಸಿ ಆಸ್ತಿ ನೊಂದಣಿ ಶುಲ್ಕ ಪಾವತಿಸಿದರೆ 48 ಗಂಟೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದಾದ ವ್ಯವಸ್ಥೆ ಇದಾಗಿದೆ.

 ಆನ್‌ಲೈನಿನಲ್ಲೇ ''ಆಸ್ತಿ ನೋಂದಣಿ'' ಮಾಡಿಸುವುದು ಹೇಗೆ?

ರಾಜ್ಯದಲ್ಲಿ ವಾರ್ಷಿಕ 20 ಲಕ್ಷಕ್ಕೂ ಹೆಚ್ಚು ಆಸ್ತಿ ನೋಂದಣಿಯಾಗುತ್ತಿದ್ದು, ಅದರಲ್ಲಿ, ಬೆಂಗಳೂರಿನಲ್ಲೇ ಶೇ.70ರಷ್ಟು ಆಸ್ತಿ ನೋಂದಣಿಯಾಗುತ್ತಿದೆ. ಹಾಗಾಗಿ, ಸದ್ಯದಲ್ಲೇ ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ವ್ಯವಸ್ಥೆ ವ್ಯವಸ್ಥೆಯನ್ನು ಜಾರಿಗೊಳಿಸಲು ಇಲಾಖೆ ನಿರ್ಧರಿಸಿದೆ. ಹಾಗಾದರೆ, ಇದರ ಕಾರ್ಯನಿರ್ವಹಣೆ ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಇನ್ಮುಂದೆ ಖುದ್ದಾಗಿ ಹಾಜರಾಗಬೇಕಿಲ್ಲ.!

ಇನ್ಮುಂದೆ ಖುದ್ದಾಗಿ ಹಾಜರಾಗಬೇಕಿಲ್ಲ.!

ಆಸ್ತಿ ನೋಂದಣಿಗಾಗಿ, ಅಗತ್ಯ ದಾಖಲೆ ಹೊಂದಿಸಿಕೊಳ್ಳುವುದು, ಆಸ್ತಿಯ ಪ್ರಸ್ತುತ ಮಾರ್ಗಸೂಚಿ ದರದ ಮಾಹಿತಿ ಪಡೆಯುವುದು, ನಿಗದಿತ ಶುಲ್ಕದ ವಿವರ ತಿಳಿದು ಡಿ.ಡಿ. ಪಡೆಯುವುದರ ಜತೆಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಇಡೀ ದಿನ ಖುದ್ದಾಗಿ ಹಾಜರಿದ್ದು ನೋಂದಾಯಿಸಿಕೊಳ್ಳಬೇಕಿದೆ. ಆದರೆ, ಇನ್ಮುಂದೆ ಈ ಕೆಲಸವೆಲ್ಲವೂ ಆನ್‌ಲೈನಿನಲ್ಲೇ ಆಗಲಿದೆ.

48 ಗಂಟೆಯಲ್ಲೇ ಕೆಲಸ ಆಗುತ್ತದೆ.!

48 ಗಂಟೆಯಲ್ಲೇ ಕೆಲಸ ಆಗುತ್ತದೆ.!

ಆನ್‌ಲೈನ್‌ನಲ್ಲಿ ಸಲ್ಲಿಸುವ ದಾಖಲೆಗಳು, ಶುಲ್ಕ ಪಾವತಿ ಸಮಪರ್ಕವಾಗಿದ್ದರೆ 48 ಗಂಟೆಯಲ್ಲೇ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿ ಪೂರ್ಣಗೊಳ್ಳಲಿದೆ. ಕೆಲವೇ ನಿಮಿಷಗಳಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳುವಂತಹ "ನೋಂದಣಿ ಪೂರ್ವ ಮಾಹಿತಿ ದಾಖಲೀಕರಣ' ವ್ಯವಸ್ಥೆ ಜಾರಿಗೆ ಬರಲಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ತಿಳಿಸಿದೆ.

ಕಾರ್ಯನಿರ್ವಹಣೆ ಹೇಗಿರಲಿದೆ?

ಕಾರ್ಯನಿರ್ವಹಣೆ ಹೇಗಿರಲಿದೆ?

ಸಾರ್ವಜನಿಕರು ಆನ್‌ಲೈನಿನಲ್ಲೇ ತಾವು ಖರೀದಿಸುವ ಆಸ್ತಿಯ ಅಳತೆ, ವಿಳಾಸ ವಿವರ ದಾಖಲಿಸಿ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.ಇದನ್ನು ಉಪನೋಂದಣಾಧಿಕಾರಿ ಸಮರ್ಪಕ ಎಂದು ದೃಢೀಕರಿಸಿದ ನಂತರ, ಆಸ್ತಿಗೆ ಸಂಬಂಧಿಸಿದ ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ತಾವು ಬಯಸುವ ದಿನದಂದು ನೊಂದಣಿ ಮಾಡಿಕೊಳ್ಳಲು ಸಮಯ ದಾಖಲಿಸಬೇಕಿರುತ್ತದೆ.

15 ನಿಮಿಷದಲ್ಲಿ ನೋಂದಣಿ

15 ನಿಮಿಷದಲ್ಲಿ ನೋಂದಣಿ

ಆನ್‌ಲೈನಿನಲ್ಲಿ ದಾಖಲಿಸಿದ ಮಾಹಿತಿಗಳನ್ನು ಕೇವಲ 24 ಗಂಟೆಯೊಳಗೆ ಸಂಬಂಧಪಟ್ಟ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲಿಸಲಾಗುತ್ತದೆ. ನಂತರ, ಖರೀದಿದಾರ ವಿವರ, ದಾಖಲೆ, ಶುಲ್ಕ ಮೊತ್ತ ಸಮರ್ಪಕವಾ ಗಿದ್ದರೆ ಮುಂದಿನ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ವಿವರಗಳು ಸಮರ್ಪಕವಾಗಿದ್ದರೆ, 5 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಗೊಂದಲಕ್ಕೂ ಇದೆ ಪರಿಹಾರ!

ಗೊಂದಲಕ್ಕೂ ಇದೆ ಪರಿಹಾರ!

ಆನ್‌ಲೈನಿನಲ್ಲಿ ದಾಖಲಿಸಿದ ಮಾಹಿತಿಗಳಲ್ಲಿ ಸಾರ್ವಜನಿಕರಿಗೆ ಇರುವ ಗೊಂದಲ, ಮಾರ್ಗಸೂಚಿ ದರದಲ್ಲಿ ವ್ಯತ್ಯಯ ಲೋಪಗಳಿದ್ದರೆ ಆ ಬಗ್ಗೆ ಅಧಿಕಾರಿಗಳು ಆನ್‌ಲೈನ್‌ನಲ್ಲೇ ಮಾಹಿತಿ ನೀಡಲಿಲಿದ್ದಾರೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ. ಸಲ್ಲಿಸಿರುವ ಮಾಹಿತಿಯಲ್ಲಿ ಲೋಪಗಳಿದ್ದರೆ, ಸರಿಪಡಿಸಿ ಸಲ್ಲಿಸುವ ಆಯ್ಕೆ ಕೂಡ ಸಾರ್ವಜನಿಕರಿಗೆ ಸಿಗಲಿದೆ.

ಪ್ರಾಯೋಗಿಕವಾಗಿ ಜಾರಿಯಾಗಲಿದೆ.!

ಪ್ರಾಯೋಗಿಕವಾಗಿ ಜಾರಿಯಾಗಲಿದೆ.!

ಆನ್‌ಲೈನಿನಲ್ಲೇ 'ಆಸ್ತಿ ನೋಂದಣಿ ಮಾಡಿಸುವ ಪ್ರಕ್ರಿಯೆ ಬೆಂಗಳೂರಿನಲ್ಲಿ ಪ್ರಾಯೋಗಿಕ ಜಾರಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ. ನಗರದ 43 ಉಪನೋಂದಣಾಧಿಕಾರಿ ಕಚೇರಿಗಳಲ್ಲಿಯೂ ನೂತನ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರ ಕಾರ್ಯನಿರ್ವಹಣೆಯನ್ನು ಗಮನಿಸಿ ಮುಂದೆ ರಾಜ್ಯಾದ್ಯಂತ ವಿಸ್ತರಿಸುವುದಾಗಿ ತಿಳಿಸಿದ್ದಾರೆ.

ದಲ್ಲಾಳಿಗಳಿಗೆ ಬ್ರೇಕ್ ಬೀಳಲಿದೆಯಾ?

ದಲ್ಲಾಳಿಗಳಿಗೆ ಬ್ರೇಕ್ ಬೀಳಲಿದೆಯಾ?

ಮಧ್ಯವರ್ತಿಗಳ ಹಾವಳಿ, ಇತರರ ನೆರವು ಪಡೆಯದೆ ಖರೀದಿದಾರರೇ ನೇರವಾಗಿ ಆಸ್ತಿ ಖರೀದಿಸಿ ನೋಂದಣಿ ಮಾಡಿಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಈಗ ಇದೆ. ಹಾಗಾಗಿ, ಆನ್‌ಲೈನಿನಲ್ಲೇ ಆಸ್ತಿ ನೋಂದಣಿ ವ್ಯವಸ್ಥೆ ದಲ್ಲಾಳಿಗಳಿಗೆ ಬ್ರೇಕ್ ಹಾಕುವ ಆಸೆಯನ್ನು ಮೂಡಿಸಿದೆ. ಆದರೆ, ಇದು ಸಾಧ್ಯವಾಗುವುದು ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ಮಾತ್ರ.

Best Mobiles in India

English summary
the news process of resale property registration in Bangalore. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X