ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಕರ್ನಾಟಕ ನಂ.2

Posted By: Varun
ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಕರ್ನಾಟಕ ನಂ.2
ನಮ್ಮ ಬೆಂಗಳೂರು ಭಾರತದ ಐಟಿ ರಾಜಧಾನಿ ಎಂಬುದು ನಿಮಗೆ ಗೊತ್ತೇ ಇದೆ. ಹಲವಾರು ಪ್ರತಿಷ್ಟಿತ ಸಾಫ್ಟವೇರ್ ಕಂಪನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಒಬಾಮಾ ಕೂಡ ನಮ್ಮ ಬೆಂಗಳೂರಿನ ಬಗ್ಗೆ ಮಾತಾಡುವಷ್ಟು ಹೆಸರುವಾಸಿ. ಆದರೆ ಆತಂಕಕಾರೀ ಸುದ್ದಿ ಏನೆಂದರೆ ಸೈಬರ್ ಸಂಬಂಧೀ ಅಪರಾಧಗಳಲ್ಲಿ ನಮ್ಮ ಕರ್ನಾಟಕ, ಭಾರತದ ರಾಜ್ಯಗಳಲ್ಲೇ 2 ನೇ ಸ್ಥಾನದಲ್ಲಿ ಇದೆ ಎಂಬ ವಿಷಯ ಗೊತ್ತಾ?

ಹೌದು. ಕೇಂದ್ರದ ಮಾಹಿತಿ ಹಾಗು ತಂತ್ರಜ್ಞಾನ ಸಚಿವರಾದ ಕಪಿಲ್ ಸಿಬಲ್ ಪ್ರಶ್ನೋತ್ತರ ವೇಳೆಯಲ್ಲಿ ಲೋಕಸಭೆಗೆ ಈ ಅಂಶವನ್ನು ತಿಳಿಸಿದ್ದಾರೆ. 2010 ಐಟಿ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಸೈಬರ್ ಪ್ರಕರಣಗಳಲ್ಲಿ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದ್ದು 246 ಪರಕರಣಗಳು ದಾಖಲಾಗಿದ್ದು, ಕರ್ನಾಟಕದಲ್ಲಿ 176 ಕೇಸುಗಳು ಬುಕ್ ಆಗಿವೆಯಂತೆ. ದೇಶಾದ್ಯಂತ 966 ಕೇಸುಗಳು ದಾಖಲಾಗಿದ್ದು ಐಪಿಸಿ ಪ್ರಕಾರ 2010 ರಲ್ಲಿ 356 ಸೈಬರ್ ಅಪರಾಧಗಳು ಬುಕ್ ಆಗಿವೆಯಂತೆ.

ಇಂಟರ್ನೆಟ್ ನಲ್ಲಿ ಈ ರೀತಿಯ ಅಪರಾಧಗಳನ್ನು ಪತ್ತೆ ಹಚ್ಚಲು CERT ( ದಿ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ) ಎಂಬ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರ ಇದರ ಮೂಲಕ ಸೈಬರ್ ಅಪರಾಧವನ್ನು ತಡೆಗಟ್ಟಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಲೋಕ ಸಭೆಗೆ ತಿಳಿಸಿದ್ದಾರೆ.

ಅದಕ್ಕೆ ಇರಬೇಕು, ಕಪಿಲ್ ಸಿಬಲ್ ಸಾಹೇಬರು ಇಂಟರ್ನೆಟ್ ನ ಮಾಹಿತಿಯ ಮೇಲೆ ನಿರ್ಬಂಧ ಹೇರಿ ಅನ್ನುತ್ತಿರುವುದು.

Please Wait while comments are loading...
Opinion Poll

Social Counting