ಕರ್ನಾಟಕ ಪೊಲೀಸರಿಂದ 'ನ್ಯೂಸ್‌ ಬಸ್ಟಿಂಗ್‌' ವೆಬ್‌ಸೈಟ್‌ ಲಾಂಚ್‌!

|

ಹೌದು, ಕೊರೊನಾ ವೈರಸ್‌ ಭೀತಿಯಲ್ಲಿ ನಕಲಿ ಸುದ್ದಿಗಳು ವ್ಯಾಪಾಕವಾಗಿ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತಿಚಿಗೆ ನಡೆದಿದ್ದ ಅನ್ಯದರ್ಮದ ಸಮಾವೇಶ ಹಾಗೂ ಅಲ್ಲಿ ನಡೆದ ಕಾರ್ಯಕ್ರಮ ವಿಚಾರ ಕುರಿತು ಸುಳ್ಳು ಮಾಹಿತಿಯನ್ನ ಹರಿಬಿಡಲಾಗ್ತಿದೆ. ಇದು ಹೀಗೆ ಮುಂದುವರೆದರೆ ಸಂಕಷ್ಟ ಗ್ಯಾರಂಟಿ ಎಂದು ಅರಿತಿರುವ ಕರ್ನಾಟಕ ಪೊಲೀಸರು ನಕಲಿ ಸುದ್ದಿ ಪತ್ತೆ ಹಚ್ಚುವ ವೆಬ್‌ಸೈಟ್‌ ಒಂದನ್ನ ಲಾಂಚ್‌ ಮಾಡಿದ್ದಾರೆ.

ಹೌದು

ಹೌದು, ಕೊರೊನಾ ವೈರಸ್‌ ಭೀತಿಯಲ್ಲಿ ನಕಲಿ ಸುದ್ದಿಗಳು ವ್ಯಾಪಾಕವಾಗಿ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತಿಚಿಗೆ ನಡೆದಿದ್ದ ಅನ್ಯದರ್ಮದ ಸಮಾವೇಶ ಹಾಗೂ ಅಲ್ಲಿ ನಡೆದ ಕಾರ್ಯಕ್ರಮ ವಿಚಾರ ಕುರಿತು ಸುಳ್ಳು ಮಾಹಿತಿಯನ್ನ ಹರಿಬಿಡಲಾಗ್ತಿದೆ. ಇದು ಹೀಗೆ ಮುಂದುವರೆದರೆ ಸಂಕಷ್ಟ ಗ್ಯಾರಂಟಿ ಎಂದು ಅರಿತಿರುವ ಕರ್ನಾಟಕ ಪೊಲೀಸರು ನಕಲಿ ಸುದ್ದಿ ಪತ್ತೆ ಹಚ್ಚುವ ವೆಬ್‌ಸೈಟ್‌ ಒಂದನ್ನ ಲಾಂಚ್‌ ಮಾಡಿದ್ದಾರೆ.

ಕರ್ನಾಟಕ

ಕರ್ನಾಟಕ ಪೊಲೀಸ್‌ ಇಲಾಖೆ ನಕಲಿ ಸುದ್ದಿಗಳನ್ನ ಪತ್ತೆಹಚ್ಚಲು ನ್ಯೂಸ್‌ ಬಸ್ಟಿಂಗ್‌ ವೆಬ್‌ಸೈಟ್‌ ಅನ್ನು ಪ್ರಾರಂಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಫ್ಯಾಕ್ಟ್‌ಚೆಕ್ - ನಕಲಿ ಸುದ್ದಿಗಳಿಗೆ ಮರುಳಾಗಬೇಡಿ, ಸುದ್ದಿಯ ನಿಜಾಂಶಕ್ಕೆ factcheck.ksp.gov.in" ಅನ್ನು ಗಮನಿಸಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ. ಇನ್ನು ಈ ಟ್ವೀಟ್‌ಗೆ ಸಾಕಷ್ಟು ಟ್ವೀಟ್‌ಗಳು ಬಂದಿದ್ದು, ನಕಲಿ ಸುದ್ದಿಗಳ ಕಂಡು ಹಿಡಿದು ನಿಜಾಂಶ ತಿಳಿಸಿರುವುದಕ್ಕೆ ದನ್ಯವಾದಗಳನ್ನ ಅರ್ಪಿಸಿದ್ದಾರೆ.

ಈಗಾಗಲೇ

ಇನ್ನು ಈಗಾಗಲೇ ಈ ವೆಬ್‌ಸೈಟ್‌ನಲ್ಲಿ ನಕಲಿ ಸುದ್ದಿಗಳ ಗುಂಪನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಈ ಹಿಂದೆ ಕರೆನ್ಸಿ ಸಂಬಂದ ಹಾಗೂ ಇತರೆ ವಿಚಾರಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದ್ದವರನ್ನ ನಾವಿಲ್ಲಿ ಗಮನಿಸಬಹುದಾಗಿದೆ. ಇದಲ್ಲದೆ ಈ ವೆಬ್‌ಸೈಟ್‌ ಮೂಲಕ ಕರೋನವೈರಸ್ ಹರಡಲು ದೆಹಲಿಯ ಧಾರ್ಮಿಕ ಸಬೆಯಲ್ಲಿ ಅನ್ಯದರ್ಮಿಯರು ಉದ್ದೇಶಪೂರ್ವಕವಾಗಿ ಸೀನುತ್ತಿದ್ದಾರೆ ಎಂದು ಹೇಳಿರುವ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ನಕಲಿ ವಿಡಿಯೋ ಅನ್ನೊದನ್ನ ಕರ್ನಾಟಕ ಪೊಲೀಸರು ರುಜುವಾತು ಮಾಡಿದ್ದಾರೆ.

ವೆಬ್‌ಸೈಟ್‌

ಸದ್ಯ ವೆಬ್‌ಸೈಟ್‌ ಪ್ರಾರಂಭವಾಗ್ತಿದ್ದ ಹಾಗೇ ಕರ್ನಾಟಕ ಪೊಲೀಸರು ಒಂಬತ್ತು ನಕಲಿ ಸುದ್ದಿಗಳನ್ನು ಪತ್ತೆಹಚ್ಚಿ ಅದನ್ನ ಟ್ವಿಟ್‌ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಸುದ್ದಿಗಲಿಗೆ ಸಂಬಂಧಿಸಿದ ಸತ್ಯಾಂಶವನ್ನ ವಿವರಿಸಿದ್ದಾರೆ. ಇನ್ನುಕೊರೊನಾವೈರಸ್ ಕುರಿತು ಇರುವ ಏಕಾಏಕಿ ನಕಲಿ ವದಂತಿಗಳನ್ನು ಎದುರಿಸಲು ಕರ್ನಾಟಕ ರಾಜ್ಯ ಪೊಲೀಸರು ಚೆಕ್ 4 ಸ್ಪ್ಯಾಮ್ ಸಹಯೋಗದೊಂದಿಗೆ ಈ ಪ್ರಯತ್ನವನ್ನು ಕೈಗೊಂಡಿದ್ದಾರೆ. ಯಾವುದೇ ಶಂಕಿತ ಸುದ್ದಿಗಳನ್ನು ಪರಿಶೀಲಿಸಲು ನಾಗರಿಕರು ಈ ಪೋರ್ಟಲ್ ಅನ್ನು ಬಳಸಿಕೊಳ್ಳಬಹುದು ಮತ್ತು ಅದರ ಪರಿಶೀಲನೆ ಮತ್ತು ಸ್ಪಷ್ಟೀಕರಣಕ್ಕಾಗಿ ವಿಷಯವನ್ನು ಅಪ್‌ಲೋಡ್ ಮಾಡಬಹುದು "ಎಂದುಕನಾರ್ಟಕ ಪೊಲೀಸ್‌ ಇಲಾಖೆ ಹೇಳಿದೆ.

Best Mobiles in India

English summary
The verifying platform has listed a bunch of fake news which recently gained currency and refuted them with detailed explanations.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X