ಓಲಾ, ಊಬರ್ ದರಗಳನ್ನು ಫಿಕ್ಸ್ ಮಾಡಲು ಹೊರಟಿದೆ ಕರ್ನಾಟಕ ಸರ್ಕಾರ!!..ಉತ್ತಮ ನಿರ್ಧಾರವೇ?
ನಗರದಲ್ಲಿ ಟ್ಯಾಕ್ಸಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಟ್ಯಾಕ್ಸಿ ಸೇವಾ ಕಂಪನಿಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು.
ಸಮಯ ಆಧಾರಿತ ಟ್ಯಾಕ್ಸಿ ದರಗಳನ್ನು ಏರಿಸುತ್ತಿದ್ದ ಆಪ್ ಆಧಾರಿತ ಸೇವಾ ಕಂಪೆನಿಗಳಿಗೆ ಸರ್ಕಾರ ಶಾಕ್ ನೀಡಿದೆ.! ನಗರದಲ್ಲಿ ಸಂಚರಿಸುವ ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಊಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿಗಳಿಗೆ ಸಾರಿಗೆ ಇಲಾಖೆ ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರ ನಿಗದಿ ಮಾಡಲಿದೆ.!!
ನಗರದಲ್ಲಿ ಟ್ಯಾಕ್ಸಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಟ್ಯಾಕ್ಸಿ ಸೇವಾ ಕಂಪನಿಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು. ಅಂತೆಯೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.!! ಹಾಗಾದರೆ, ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರ ನಿಗದಿಯಿಂದ ಗ್ರಾಹಕರಿಗೆ ಲಾಭವೇನು? ಕ್ಯಾಬ್ ಸೇವೆಗೆ ಇದು ಪೂರಕವೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಹೆಚ್ಚಿನ ದರ ವಸೂಲಿ!!
ಟ್ಯಾಕ್ಸಿ ಸೇವಾ ಕಂಪನಿಗಳು ಸಮಯಕ್ಕನುಗುಣವಾಗಿ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿವೆ. ಹಾಗೆಯೇ, ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರಿಗೂ ಕಡಿಮೆ ಕಮಿಷನ್ ನೀಡುತ್ತಿವೆ ಎಂದು ಓಲಾ ಮತ್ತು ಊಬರ್ ಕಂಪೆನಿಗಳ ವಿರುದ್ದ ಎಲ್ಲರೂ ದೂರುತ್ತಿದ್ದಾರೆ.!!

ಸೇವೆಯಲ್ಲಿ ವ್ಯತ್ಯಾಸ?
ನಗರದಲ್ಲಿ ಕ್ಯಾಬ್ ಸೇವೆಗಳಿಗೆ ಪೈಪೋಟಿ ಇರುವುದರಿಂದ ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರ ನಿಗದಿ ಮಾಡುವುದು ಕ್ಯಾಬ್ ಸೇವೆಯಲ್ಲಿ ವ್ಯತ್ಯಾಸ ಆಗಬಹುದು ಎಂದು ಹೇಳಲಾಗಿದೆ. ಈಗಾಗಲೇ ಕ್ಯಾಬ್ ಕಂಪೆನಿಗಳ ನಡುವೆ ಪೈಪೋಟಿ ಏರ್ಪಟ್ಟಿರುವುದರಿಂದ ಸರ್ಕಾರದಿಂದ ದರ ನಿಗದಿ ಮಾಡುವುದು ತಪ್ಪು ಎಂದು ಹಲವರ ಅಭಿಪ್ರಾಯ.!!

ಪ್ರಯಾಣಿಕರಿಗೆ ಏನು ಲಾಭ?
ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರ ನಿಗದಿಯಾದರೆ ಟ್ಯಾಕ್ಸಿ ಕಂಪನಿಗಳು ಮೂರರಿಂದ ನಾಲ್ಕರಷ್ಟು ಹಣಕ್ಕೆ ಬೇಡಿಕೆ ಇಡುವಂತಿಲ್ಲ. ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರಿಗೆ ಸಹಾಯವಾಗುವಂತೆ ಒಂದು ನಿರ್ದಿಷ್ಟ ಹಣವನ್ನು ಮಾತ್ರ ನಿಗದಿ ಮಾಡಬಹುದು.!!

ನಿಗದಿ ದರ ಎಷ್ಟಿರಬಹುದು?
ಕರ್ನಾಟಕ ಸಾರಿಗೆ ಇಲಾಖೆಯ ಆದೇಶದಂತೆ ನಗರದಲ್ಲಿ ಸಂಚರಿಸುವ ಏರ್ ಕಂಡೀಷನಿಂಗ್ ಕ್ಯಾಬ್‌ಗಳಿಗೆ 19.50 ರೂ. ಮತ್ತು ಏರ್ ಕಂಡೀಷನಿಂಗ್ ಇಲ್ಲದೆ ಕ್ಯಾಬ್‌ಗಳಿಗೆ 14.50 ರೂ. ದರನಿಗದಿಯಾಗಲಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಈ ವರೆಗೂ ಸ್ಪಷ್ಟ ಮಾಹಿತಿ ಇಲ್ಲ.!!


ಶೀಘ್ರದಲ್ಲೇ ದರ ಪ್ರಕಟ!!
ಪ್ರಯಾಣಿಕರ ಮತ್ತು ಟ್ಯಾಕ್ಸಿ ಚಾಲಕರ ದೃಷ್ಟಿಯಿಂದ ಶೀಘ್ರದಲ್ಲೇ ಸರ್ಕಾರ ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರವನ್ನು ಪ್ರಕಟಿಸುವ ಸಾದ್ಯತೆ ಇದೆ.! ಈಗ ಪ್ರಕಟವಾಗುವ ದರ ಸಾಮಾನ್ಯರಿಗೆ ಹೆಚ್ಚು ಉಪಯೋಗವಾಗದಿದ್ದರೂ ಸಮಯಕ್ಕನುಗುಣವಾಗಿ ಪ್ರಯಾಣಿಕರಿಂದ ಹಣವನ್ನು ಪೀಕುವ ಕಂಪೆನಿಗಳಿಗೆ ಹೊಡೆತ ಬೀಳಲಿದೆ.!!


Click it and Unblock the Notifications








