ಇಂಟರ್‌ನೆಟ್‌ನಲ್ಲಿ ಚುನಾವಣಾ ಅಖಾಡ

By Ashwath
|

ಕರ್ನಾಟಕ ಚುನಾವಣಾ ಅಖಾಡ ದಿನೇ ದಿನೇ ರಂಗೇರುತ್ತಿದೆ. ಬಂಟಿಂಗ್ಸ್‌,ಬ್ಯಾನರ್‌,ಕರಪತ್ರಗಳ ಹಂಚುವುದರ ಜೊತೆಗೆ ಪಕ್ಷದ ನಾಯಕರು ವೆಬ್‌ಸೈಟ್‌ ಮೂಲಕವೂ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಶಾಸಕರುಗಳ ವೆಬ್‌ಸೈಟ್‌ಗಳು ಅಪಡೇಟ್‌ ಆಗುತ್ತಿವೆ. ಅಷ್ಟೇ ಅಲ್ಲದೇ ಖರ್ಚಿಲ್ಲದೇ ಪ್ರಚಾರ ಸಿಗುವ ಫೇಸ್‌ಬುಕ್‌,ಟ್ವೀಟರ್‌ನಲ್ಲಿ ತಮ್ಮ ಮತ ಭೇಟೆ ಆರಂಭಿಸಿದ್ದಾರೆ.ಅಭ್ಯರ್ಥಿಯ ಬೆಂಬಲಿಗರು ನಿಗದಿತ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ತಯಾರಾಗಿದ್ದಾರೆ. ಜೊತೆಗೆ ಮೊಬೈಲ್‌ನಲ್ಲೂ ಅಭ್ಯರ್ಥಿಗಳು ತಮ್ಮ ಕ್ಯಾನ್‌ವಾಸ್‌ ಆರಂಭಿಸಿದ್ದಾರೆ.

ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಗ್ಯತೆಯಿಲ್ಲ ಎನ್ನುವ ನೆಪ ಹೇಳಿ ವಿದ್ಯಾವಂತ ಮತದಾರರು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎನ್ನುವ ಒಂದು ಮಾತಿದೆ. ಈ ಮಾತನ್ನು ಈ ಭಾರಿ ಸುಳ್ಳು ಮಾಡಿ ಇವರನ್ನು ತಮ್ಮತ್ತ ಸೆಳೆಯಲು ರಾಜಕೀಯ ನಾಯಕರು ಆನ್‌ಲೈನ್‌ಲ್ಲಿ ಕಸರತ್ತು ಆರಂಭಿಸಿದ್ದಾರೆ.ಅದಕ್ಕಾಗಿಯೇ ಶಾಸಕರು ಈ ಚುನಾವಣೆಯಲ್ಲಿ ತಮ್ಮ ಯೋಗ್ಯತೆ,ಸಾಧನೆಯನ್ನು ಬಿಂಬಿಸಿ ವಿದ್ಯಾವಂತ ಮತದಾರರನ್ನು ಸೆಳೆಯುವತ್ತ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಇಲ್ಲಿ ಕರ್ನಾಟಕದ ಪ್ರಮುಖ ಪಕ್ಷಗಳ ವೆಬ್‌ಸೈಟ್‌ ಮತ್ತು ನಿಮ್ಮ ಕ್ಷೇತ್ರದ ಶಾಸಕರುಗಳ,ಸಂಸದರ ವೆಬ್‌ಸೈಟ್‌ಗಳ ಮಾಹಿತಿ ಇದೆ. ಒಂದೊಂದೆ ಪುಟವನ್ನು ನೋಡಿಕೊಂಡು ಎಲ್ಲಾ ಪಕ್ಷದ ಅಭ್ಯರ್ಥಿಗಳು,ಅವರ ಪ್ರಣಾಳಿಕೆ ಜೊತೆಗೆ ಶಾಸಕರ ಸಾಧನೆಗಳನ್ನು ತಿಳಿದುಕೊಂಡು ಹೋಗಿ..

ಲೋಕಸತ್ತಾ ಪಕ್ಷ

ಲೋಕಸತ್ತಾ ಪಕ್ಷ

ಈ ಭಾರಿಯ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಪಕ್ಷಗಳಿಗೆ ಬಿಸಿ ಮುಟ್ಟಿಸಲಿರುವ ಲೋಕಸತ್ತಾ ಪಕ್ಷದ ಪ್ರಚಾರ ಕಾರ್ಯ ಜೋರಾಗಿದೆ. ರಾಜ್ಯಾಧ್ಯಕ್ಷರಾದ ಡಾ. ಅಶ್ವಿನ್ ಮಹೇಶ್ ನೇತೃತ್ವದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದೆ. ಮೌಲ್ಯಧಾರಿತ ರಾಜಕಾರಣಕ್ಕಾಗಿ ಎನ್ನುವ ಅಡಿಬರಹದೊಂದೊಗೆ ಕಣಕ್ಕೆ ಅಭ್ಯರ್ಥಿಗಳನ್ನು ಇಳಿಸಿರುವ ಲೋಕಸತ್ತಾ ಪಕ್ಷದ ವೆಬ್‌ಸೈಟ್, ಮತ್ತು ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಸಿದ್ದಗೊಂಡಿದೆ.
ಲೋಕಸತ್ತಾ ಪಕ್ಷದ ವೆಬ್‌ ವಿಳಾಸ

ಬಿಜೆಪಿ

ಬಿಜೆಪಿ

ಡಿಜಿಟಲ್ ಮೀಡಿಯಾದಲ್ಲಿ ಅತ್ಯಂತ ಚಟುವಟಿಕೆಯಿಂದಿರುವ ಬಿಜೆಪಿ ಆನ್ ಲೈನ್ ಮೂಲಕ ಮತದಾರರನ್ನು ಸೆಳೆಯಲು ಎಲ್ಲ ಪ್ರಯತ್ನಗಳನ್ನು ನಡೆಸಿದೆ. ನಿರಂತರವಾಗಿ ಟ್ವೀಟ್ ಮಾಡುತ್ತಿರುವ ಪಕ್ಷಗಳಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ.

ಬಿಜೆಪಿ ವೆಬ್ ವಿಳಾಸ
ಕಾಂಗ್ರೆಸ್‌

ಕಾಂಗ್ರೆಸ್‌

ಈ ಬಾರಿ ಸರಕಾರ ರಚಿಸುತ್ತೇನೆಂಬ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಪಕ್ಷ ಡಿಜಿಟಲ್ ಮೀಡಿಯಾದಲ್ಲಿ ಇನ್ನೂ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ. ಅದರ ವೆಬ್ ಸೈಟ್ ಅಪ್ಡೇಟ್ ಆಗುವುದು ಬಲು ಅಪರೂಪ.

ಕಾಂಗ್ರೆಸ್‌ ವೆಬ್ ವಿಳಾಸ

ಜೆಡಿಎಸ್‌

ಜೆಡಿಎಸ್‌

ಈ ಬಾರಿ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಎಚ್ ಡಿ ಕುಮಾರಸ್ವಾಮಿ ಆನ್ ಲೈನ್ ನಲ್ಲಿ ಭರ್ಜರಿಯಾಗಿ ತಮ್ಮ ಪಕ್ಷವನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತಿದ್ದಾರೆ. ಈ ವರ್ಷ ರೂಪಿಸಿರುವ ಐಟಿ ಸೆಲ್ ಭಾರೀ ಹುರುಪಿನಿಂದ ಕಾರ್ಯ ನಿರ್ವಹಿಸುತ್ತಿದೆ.

ಜೆಡಿಎಸ್‌ ವೆಬ್ ಸೈಟ್

ಬಿಎಸ್‌ಆರ್‌

ಬಿಎಸ್‌ಆರ್‌

ಈ ಬಿಜೆಪಿ ಹೊರ ನಡೆದು ಸ್ವಾಭಿಮಾನಿ ಶ್ರೀರಾಮುಲು ಕಟ್ಟಿದ ಚುನಾವಣಾ ಪಾರ್ಟಿ. ಬಿಎಸ್‌ಆರ್‌ ಕಾಂಗ್ರೆಸ್‌ ಪ್ರಣಾಳಿಕೆ,ಅಭ್ಯರ್ಥಿಗಳ ಪಟ್ಟಿ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಬಿಎಸ್‌ಆರ್ ಕಾಂಗ್ರೆಸ್‌ ವೆಬ್‌ಸೈಟ್‌

ಕೆಜೆಪಿ

ಕೆಜೆಪಿ

ಬಿಜೆಪಿಯ ಪ್ರಪ್ರಥಮ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಈಗ ಕೆಜಿಪಿ ಪಕ್ಷವನ್ನು ಸ್ಫಾಪಿಸುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉತ್ಸಾಹದಲ್ಲಿದ್ದಾರೆ.ಕೆಜೆಪಿ ಪ್ರಣಾಳಿಕೆ,ಅಭ್ಯರ್ಥಿಗಳ ಪಟ್ಟಿ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಕೆಜೆಪಿ ವೆಬ್‌ಸೈಟ್‌

ಜಗದೀಶ್‌ ಶೆಟ್ಟರ್‌

ಜಗದೀಶ್‌ ಶೆಟ್ಟರ್‌

ಬಿಜೆಪಿಯ ಮುಖ್ಯಮಂತ್ರಿಯೆಂದೇ ಬಿಂಬಿತವಾದ ಜಗದೀಶ್‌ ಶೆಟ್ಟರ್ ತಮ್ಮ ಸಾಧನೆಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಜಗದೀಶ್‌ ಶೆಟ್ಟರ್‌ ವೆಬ್‌ಸೈಟ್‌ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಜಗದೀಶ್‌ ಶೆಟ್ಟರ್ ವೆಬ್‌ಸೈಟ್‌

ಎಚ್‌.ಡಿ. ಕುಮಾರಸ್ವಾಮಿ

ಎಚ್‌.ಡಿ. ಕುಮಾರಸ್ವಾಮಿ

ಜೆಡಿಎಸ್‌ನ ಮುಂದಿನ ಮುಖ್ಯಮಂತ್ರಿಯೆಂದೇ ಬಿಂಬಿತವಾದ ಎಚ್‌ಡಿ ಕುಮಾರ ಸ್ವಾಮಿಯವರು ಈಗಾಗ್ಲೇ ವೆಬ್‌ಸೈಟ್‌ನಲ್ಲಿ ತಮ್ಮ ಎಲ್ಲಾ ಸಾಧನೆಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ವೆಬ್‌ಸೈಟ್‌ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಎಚ್‌.ಡಿ.ಕುಮಾರಸ್ವಾಮಿ ವೆಬ್‌ಸೈಟ್‌

ಬಿ ಶ್ರೀರಾಮುಲು

ಬಿ ಶ್ರೀರಾಮುಲು

ಈ ಬಿಜೆಪಿ ಹೊರ ನಡೆದು ಸ್ವಾಭಿಮಾನಿ ಶ್ರೀರಾಮುಲು ಕಟ್ಟಿದ ಚುನಾವಣಾ ಪಾರ್ಟಿ. ತನ್ನ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಬಿ. ಶ್ರೀರಾಮುಲು ಸ್ಫರ್ಧಿಸುತ್ತಿದ್ದಾರೆ.ಬಿಎಸ್‌ ಶ್ರೀರಾಮುಲು ವೆಬ್‌ಸೈಟ್‌ಗಾಗಿ ಇಲ್ಲಿ ಭೇಟಿ ನೀಡಿ.
ಬಿಎಸ್‌ ಶ್ರೀರಾಮುಲು ವೆಬ್‌ಸೈಟ್

ಯಡಿಯೂರಪ್ಪ

ಯಡಿಯೂರಪ್ಪ

ಬಿಜೆಪಿಯ ಪ್ರಪ್ರಥಮ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಈಗ ಕೆಜಿಪಿ ಪಕ್ಷವನ್ನು ಸ್ಫಾಪಿಸುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉತ್ಸಾಹದಲ್ಲಿದ್ದಾರೆ. ಯಡಿಯೂರಪ್ಪ ಸಾಧನೆ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಯಡಿಯೂರಪ್ಪ ವೆಬ್‌ಸೈಟ್‌

ಸುರೇಶ್‌ ಕುಮಾರ್‌

ಸುರೇಶ್‌ ಕುಮಾರ್‌

ಬಿಜೆಪಿ ಸರಕಾರದ ಕಾನೂನು ಮಂತ್ರಿ, ಈ ಭಾರೀ ಬೆಂಗಳೂರಿನ ರಾಜಾಜಿನಗರದಿಂದ ಸ್ಪರ್ಧಿಸುತ್ತಿದ್ದಾರೆ.ಇವರ ಸಾಧನೆ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಸುರೇಶ್‌ ಕುಮಾರ್ ವೆಬ್‌ಸೈಟ್‌

ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ

ಬಿಜೆಪಿಯಿಂದ ಹೊರ ನಡೆದು ಕೆಜೆಪಿ ಸೇರಿ ಬಿಜೆಪಿಯ ಸುರೇಶ್‌ ಕುಮಾರ್‌ ಸೋಲಿಸಿ ರಾಜಾಜಿನಗರದ ಪಟ್ಟವನ್ನು ಏರುವ ಕನಸು ಕಾಣುವ ಆಭ್ಯರ್ಥಿ ಶೋಭಾ ಕರಂದ್ಲಾಜೆ. ಕಳೆದ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಶೋಭಾ ಕರಂದ್ಲಾಜೆ ವೆಬ್‌ಸೈಟ್‌ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಶೋಭಾ ಕರಂದ್ಲಾಜೆ ವೆಬ್‌ಸೈಟ್‌

ಅನಂತ್ ಕುಮಾರ್

ಅನಂತ್ ಕುಮಾರ್

ಭಾರತದ 15 ನೇ ಲೋಕಸಭೆ ಬಿಜೆಪಿ ಸದಸ್ಯ.ಕರ್ನಾಟಕ ಬಿಜೆಪಿಯ ಪ್ರಭಾವಿ ಮುಖಂಡ. ವೆಬ್‌ಸೈಟ್‌ ಮತ್ತು ಸೋಶಿಯಲ್‌ ನೆಟ್‌ವರ್ಕ್‌ಗಳನ್ನು ಸಕ್ರಿಯವಾಗಿ ಬಳಸುವ ರಾಜಕಾರಣಿ.

ಅನಂತ್‌ ಕುಮಾರ್‌ ವೆಬ್‌ ವಿಳಾಸ

ದಿನೇಶ್‌ ಗುಂಡುರಾವ್‌

ದಿನೇಶ್‌ ಗುಂಡುರಾವ್‌

ಕಾಂಗ್ರೆಸ್‌ನ ಯುವನಾಯಕ ದಿನೇಶ್‌ ಗುಂಡುರಾವ್‌. ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಮೂರು ಸಲ ಆಯ್ಕೆಗೊಂಡಿದ್ದಾರೆ. ಗುಂಡುರಾವ್‌ ಸಾಧನೆ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ದಿನೇಶ್‌ ಗುಂಡುರಾವ್‌ ವೆಬ್‌ಸೈಟ್‌

ರೋಷನ್‌ ಬೇಗ್‌

ರೋಷನ್‌ ಬೇಗ್‌

ಕಾಂಗ್ರೆಸ್‌ ಪ್ರಭಾವಿ ಅಲ್ಪಸಂಖ್ಯಾತ ನಾಯಕ. ಶಿವಾಜಿನಗರ ಕ್ಷೇತ್ರದಿಂದ ಈ ಭಾರೀ ಸ್ಪರ್ಧಿಸುತ್ತಿದ್ದಾರೆ. ರೋಷನ್‌ ಬೇಗ್‌ ಸಾಧನೆ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ರೋಷನ್‌ಬೇಗ್‌ ವೆಬ್‌ಸೈಟ್‌

ಅಶ್ವಥನಾರಾಯಣ್‌

ಅಶ್ವಥನಾರಾಯಣ್‌

ಕಳೆದ ಭಾರೀ ಮಲ್ಲೇಶ್ವರಂ ಕ್ಷೇತ್ರದಲ್ಲಿ ವಿಜಯಿಯಾದ ಬಿಜೆಪಿಯ ಶಾಸಕ ಅಶ್ವಥನಾರಾಯಣ್‌ ಎರಡನೇ ಭಾರಿ ಮಲ್ಲೇಶ್ವರಂ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಶ್ವಥನಾರಾಯಣ್‌ ಸಾಧನೆ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಅಶ್ವಥನಾರಾಯಣ್‌ ವೆಬ್‌ಸೈಟ್‌

ಸತೀಶ್‌ ರೆಡ್ಡಿ

ಸತೀಶ್‌ ರೆಡ್ಡಿ

ಬಿಜೆಪಿಯ ಸತೀಷ್‌ ರೆಡ್ಡಿ ಕಳೆದ ಸಲದ ಚುನಾವಣೆಯಲ್ಲಿ ಜಯಗಳಿಸಿದ ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಶಾಸಕ ಸತೀಷ್‌ ರೆಡ್ಡಿ ವೆಬ್‌ಸೈಟ್‌ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಸತೀಷ್‌ ರೆಡ್ಡಿ ವೆಬ್‌ಸೈಟ್‌

ಪ್ರಿಯಾಕೃಷ್ಣ

ಪ್ರಿಯಾಕೃಷ್ಣ

ಕಾಂಗ್ರೆಸ್‌ನ ಯುವ ನಾಯಕ ಪ್ರಿಯಾ ಕೃಷ್ಣ ಕಳೆದ ಭಾರಿ ಜಯಗಳಿಸಿದ ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ವೆಬ್‌ಸೈಟ್‌ನಲ್ಲಿ ತನ್ನ ಸಾಧನೆಗಳನ್ನು ಬಿಂಬಿಸಿದ್ದಾರೆ.ಪ್ರಿಯಾ ಕೃಷ್ಣಾ ವೆಬ್‌ಸೈಟ್‌ ವೀಕ್ಷಿಸಲು ಇಲ್ಲಿ ಭೇಟಿ ನೀಡಿ.
ಪ್ರಿಯಾ ಕೃಷ್ಣಾ ವೆಬ್‌ಸೈಟ್‌

ರವಿ ಸುಬ್ರಹ್ಮಣ್ಯ

ರವಿ ಸುಬ್ರಹ್ಮಣ್ಯ

ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ಈ ಭಾರಿ ಅಖಾಡದಲ್ಲಿದ್ದು,ಕಳೆದ ಭಾರಿ ಜಯಗಳಿಸಿದ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಶಾಸಕ ರವಿಸುಬ್ರಹ್ಮಣ್ಯ ವೆಬ್‌ಸೈಟ್‌ಗಾಗಿ ಇಲ್ಲಿ ಭೇಟಿ ನೀಡಿ.
ರವಿ ಸುಬ್ರಹ್ಮಣ್ಯ ವೆಬ್‌ಸೈಟ್‌

ಕೃಷ್ಣಾ ಬೈರೇಗೌಡ

ಕೃಷ್ಣಾ ಬೈರೇಗೌಡ

ಕಾಂಗ್ರೆಸ್‌ ಯುವ ನಾಯಕ, ಎರಡು ಭಾರಿ ಕೋಲಾರದ ವೆಮ್‌ಗಾಲ್‌ನಿಂದ ಆಯ್ಕೆಯಾಗಿದ್ದ ಶಾಸಕ ಕೃಷ್ಣ ಬೈರೇಗೌಡರು ಕಳೆದ ಭಾರಿ ಜಯಗಳಿಸಿದ ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕೃಷ್ಣಾ ಬೈರೇಗೌಡರ ಸಾಧನೆಯ ವೆಬ್‌ಸೈಟ್‌ಗಾಗಿ ಇಲ್ಲಿ ಭೇಟಿ ನೀಡಿ.
ಕೃಷ್ಣಾ ಬೈರೇಗೌಡ ವೆಬ್‌ಸೈಟ್

 ಶ್ರೀನಿವಾಸ್‌

ಶ್ರೀನಿವಾಸ್‌

ಬಿಜೆಪಿಯ ಶಾಸಕ ಎಂ ಶ್ರೀನಿವಾಸ್ ಕಳೆದ ಭಾರಿ ಜಯಗಳಸಿದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪಧಿಸುತ್ತಿದ್ದಾರೆ, ಶಾಸಕ ಶ್ರೀನಿವಾಸ್‌ ಸಾಧನೆಗಳನ್ನು ನೋಡಲು ಇಲ್ಲಿ ಭೇಟಿ ನೀಡಿ.

ಶ್ರೀನಿವಾಸ್‌ ವೆಬ್‌ಸೈಟ್

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಬೊಮ್ಮನಹಳ್ಳಿ, ಲೋಕಸತ್ತಾ ಪಕ್ಷದ ಅಭ್ಯರ್ಥಿ
ಅಂತರಿಕ್ಷ ವಿಜ್ಞಾನಿ, ನಗರಾಭಿವೃದ್ಧಿ ತಂತ್ರಜ್ಞ, ಪತ್ರಕರ್ತ

ಡಾ.ಅಶ್ವಿನ್ ಮಹೇಶ್ ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಮಲ್ಲೇಶ್ವರಂ ,ಲೋಕಸತ್ತಾ ಪಕ್ಷದ ಅಭ್ಯರ್ಥಿ
ಸ್ತ್ರೀರೋಗ ವೈದ್ಯೆ ಮತ್ತು ಬಂಜೆತನ ನಿವಾರಣೆ ತಜ್ಞೆ
ಡಾ.ಮೀನಾಕ್ಷಿ ಭರತ್ ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಬಸವನಗುಡಿ, ಲೋಕಸತ್ತಾ ಪಕ್ಷದ ಅಭ್ಯರ್ಥಿ
ಸಾಫ್ಟವೇರ್ ಉದ್ಯೋಗಿ
ಶಾಂತಲಾ ದಾಮ್ಲೆ ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಬಿಟಿಎಮ್ ಲೇಔಟ್,ಲೋಕಸತ್ತಾ ಪಕ್ಷದ ಅಭ್ಯರ್ಥಿ
ಬರಹಗಾರ, ಸಾಫ್ಟವೇರ್ ಉದ್ಯೋಗಿ, ಸಾಮಾಜಿಕ ಕಾರ್ಯಕರ್ತ
ರವಿ ಕೃಷ್ಣಾರೆಡ್ಡಿ ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಬ್ಯಾಟರಾಯನಪುರ,ಲೋಕಸತ್ತಾ ಪಕ್ಷದ ಅಭ್ಯರ್ಥಿ
ಮಾಜಿ ಯೋಧ (IAF), ಮಾನವ ಸಂಪನ್ಮೂಲ ಸಲಹೆಗಾರ
ಯೋಗಯ್ಯವಿ.ಸಿ. ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಹೆಬ್ಬಾಳ,ಲೋಕಸತ್ತಾ ಪಕ್ಷದ ಅಭ್ಯರ್ಥಿ
ಸಾಫ್ಟವೇರ್ ಉದ್ಯೋಗಿ, COO, ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ
ಶ್ರೀಧರ್ ಪಬ್ಬಿಸೆಟ್ಟಿ ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಪದ್ಮನಾಭ ನಗರ,ಲೋಕಸತ್ತಾ ಪಕ್ಷದ ಅಭ್ಯರ್ಥಿ
ಮಹಿಳಾ ಉದ್ಯಮಿ
ಸುಮಿತ್ರಾ ಅಯ್ಯಂಗಾರ್ ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ರಾಜಾಜಿನಗರ, ಲೋಕಸತ್ತಾ ಪಕ್ಷದ ಅಭ್ಯರ್ಥಿ
ಫಾರ್ಮಾಸಿಸ್ಟ
ರೂಪಾ ರಾಣಿ ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಕೃಷ್ಣರಾಜ ನಗರ,ಮೈಸೂರು ,ಲೋಕಸತ್ತಾ ಪಕ್ಷದ ಅಭ್ಯರ್ಥಿ
ವ್ಯವಸ್ಥಾಪಕ ನಿರ್ದೇಶಕ, ಕರ್ತವ್ಯ ಐಟಿ ಸೊಲ್ಯೂಷನ್ಸ, ಮೈಸೂರು
ನವೀನಸಿ.ಕೆ ವೆಬ್‌ಸೈಟ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಮಹಾಲಕ್ಷ್ಮೀ ಲೇಔಟ್, ಲೋಕಸತ್ತಾ ಪಕ್ಷದ ಅಭ್ಯರ್ಥಿ
ಮಾರ್ಕೆಟಿಂಗ್ ಮ್ಯಾನೇಜರ್
ರಾಜಶ್ರೀ ಮುರಳೀಧರ ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಬೀದರ್ ದಕ್ಷಿಣ,ಲೋಕಸತ್ತಾ ಪಕ್ಷದ ಅಭ್ಯರ್ಥಿ
ದಂತ ವೈದ್ಯ
ಡಾ.ಅಬ್ದುಲ್ ಕರೀಮ್ ಫೇಸ್‌ಬುಕ್‌ ಪೇಜ್‌

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಫೇಸ್‌ಬುಕ್‌ನಲ್ಲಿ ಚುನಾವಣಾ ಅಖಾಡ

ಬೆಳಗಾವಿ ಉತ್ತರ, ಲೋಕಸತ್ತಾ ಪಕ್ಷದ ಅಭ್ಯರ್ಥಿ
ಸಾಫ್ಟವೇರ್ ಉದ್ಯೋಗಿ
ನಾಗೇಶ ವಿಲಾಸ ಸಾಖರೆ ಫೇಸ್‌ಬುಕ್‌ ಪೇಜ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X