ಶುಂಠಿ ಬೆಳೆಗಾಗಿ ಹೊಸ ಬೀಜ ತಂತ್ರಗಾರಿಕೆಯ ಅಭಿವೃದ್ಧಿ

By Gizbot Bureau
|

ಗುಣಮಟ್ಟದ ಶುಂಠಿ ಬೀಜಗಳ ರೈಜೋಮ್ ಗಳ ಕೊರತೆಯನ್ನು ನೀಗಿಸುವ ಸಲುವಾಗಿ ಕೇರಳ ಕೃಷಿ ವಿಶ್ವವಿದ್ಯಾಲಯ(ಕೆಎಯು) ಹೊಸ ರೀತಿಯ ಬೀಜ ಉತ್ಪಾದನಾ ತಂತ್ರಗಾರಿಕೆಯನ್ನು ಅಭಿವೃದ್ಧಿ ಪಡಿಸಿದೆ.

ಶುಂಠಿ ರೈತರ ಸಮಸ್ಯೆಗೆ ಪರಿಹಾರ:

ಶುಂಠಿ ರೈತರ ಸಮಸ್ಯೆಗೆ ಪರಿಹಾರ:

ಬೀಜ ಸಾಮಗ್ರಿಗಳ ಅಧಿಕ ಬೆಲೆ ಮತ್ತು ಲಭ್ಯತೆಯು ಕೇರಳ ಮತ್ತು ನೆರೆಯ ರಾಜ್ಯಗಳು ಅಂದರೆ ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳಲ್ಲಿ ಶುಂಠಿ ಉತ್ಪಾದನೆಗೆ ಅಡ್ಡಿಯಾಗುತ್ತಿದೆ. ಹಾಗಾಗಿ ವೆಲ್ಲನಿಕಾರ ತೋಟಗಾರಿಕಾ ಕಾಲೇಜಿನ ಸೆಂಟರ್ ಫಾರ್ ಪ್ಲಾಂಟ್ ಬಯೋಟೆಕ್ನಾಲಜಿ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಪಿಬಿಎಂಬಿ) ಯಲ್ಲಿ ಪ್ರಾರಂಭಿಸಲಾದ ಇನ್-ವಿಟ್ರೊ ಮೈಕ್ರೋ ರೈಜೋಮ್ ತಂತ್ರಜ್ಞಾನವು ಶುಂಠಿ ರೈತರು ಎದುರಿಸುತ್ತಿರುವ ಸಮಸ್ಯೆಗೆ ವಾಸ್ತವಿಕ ಪರಿಹಾರವನ್ನು ನೀಡುತ್ತದೆ.

ಉತ್ತಮ ಗುಣಮಟ್ಟದ ಭರವಸೆ:

ಉತ್ತಮ ಗುಣಮಟ್ಟದ ಭರವಸೆ:

ಶುಂಠಿಯ ಪ್ರಸರಣ ಕ್ರಿಯೆಯು ಅದರ ಬೀಜಗಳ ರೈಜೋಮ್ ಗಳ ಮೂಲಕ ಮಾತ್ರವೇ ನಡೆಯುವುದರಿಂದಾಗಿ,ಗುಣಮಟ್ಟದ ಭರವಸೆ ಮತ್ತು ರೋಗ ಮುಕ್ತ ಬೀಜಗಳ ಲಭ್ಯತೆಯ ಕೊರತೆಯು ಶುಂಠಿ ಕೃಷಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದೆ ಎಂದು ಕೆಎಯುನ ಉಪಕುಲಪತಿಯಾಗಿರುವ ಆರ್ ಚಂದ್ರಬಾಬು ಅಭಿಪ್ರಾಯ ಪಟ್ಟಿದ್ದಾರೆ.

ರೋಗ ಮುಕ್ತ ಬೀಜ ಸಾಮಗ್ರಿಗಳು:

ರೋಗ ಮುಕ್ತ ಬೀಜ ಸಾಮಗ್ರಿಗಳು:

ಇನ್-ವಿಟ್ರೊ ಮೈಕ್ರೋ ರೈಜೋಮ್ ತಂತ್ರಗಾರಿಯು ರೋಗ ಮುಕ್ತ ಬೀಜ ಸಾಮಗ್ರಿಯನ್ನು ಮತ್ತು ಬೀಜ ಉತ್ಪಾದನೆಯಲ್ಲಿ ಕ್ವಾಂಟಮ್ ಜಿಗಿತವನ್ನು ಖಚಿತಪಡಿಸುತ್ತದೆ ಎಂಬುದಾಗಿ ಪ್ರಾಥಮಿಕ ಅಧ್ಯಯನಗಳು ಖಚಿತಪಡಿಸುತ್ತಿವೆ. ಕೆಎಯುನಲ್ಲಿ ಮೈಕ್ರೊ ರೈಜೋಮ್‌ಗಳನ್ನು ಪ್ರಚೋದಿಸುವ ಪ್ರಯತ್ನಗಳು ರೈಜೋಮ್ ಮೊಳಕೆಗಳಿಂದ ಅನೇಕ ಚಿಗುರು ಸಂಸ್ಕೃತಿಗಳನ್ನು ಉತ್ಪಾದಿಸುವ ಮೂಲಕ ಅಥಿರಾ, ಕಾರ್ತಿಕಾ ಮತ್ತು ಅಶ್ವತಿಯಂತಹ ವಿವಿಧ ರೀತಿಯ ಶುಂಠಿಯ ಉತ್ಪಾದನೆ ಸಾಧ್ಯವಾಗಿದೆ ಎಂದು ಉಪಕುಲಪತಿಗಳು ವಿವರಣೆ ನೀಡಿದ್ದಾರೆ.

ಒಂದೇ ಸೀಸನ್ ನಲ್ಲಿ ಬಿತ್ತನೆ ಮತ್ತು ಕೊಯಿಲು:

ಒಂದೇ ಸೀಸನ್ ನಲ್ಲಿ ಬಿತ್ತನೆ ಮತ್ತು ಕೊಯಿಲು:

ಸಂಶೋಧನಾ ಯೋಜನೆಯ ಅಡಿಯಲ್ಲಿ ಕೆಎಯುನಲ್ಲಿ ಸಿಪಿಬಿಎಂಪಿಯಲ್ಲಿ ಈ ಇನ್-ವಿಟ್ರೋ ಮೈಕ್ರೋ ರೈಜೋಮ್ ಗಳ ತಂತ್ರಗಾರಿಕೆಯ ಅಧ್ಯಯನವನ್ನು ಪ್ರಾರಂಭಿಸಲಾಯಿತು. ಈ ತಂತ್ರಗಾರಿಕೆಯ ಪ್ರಮುಖ ಲಾಭವೇನೆಂದರೆ, ಒಂದೇ ಸೀಸನ್ ನಲ್ಲಿ ನೀವು ಬಿತ್ತನೆ ಮಾಡಿ ಕೊಯಿಲು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹಳೆಯ ಸಾಂಪ್ರದಾಯಿಕ ಪದ್ದತಿಯಲ್ಲಾದರೆ ಕೊಯಿಲಿಗೆ ಒಂದಕ್ಕಿಂತ ಹೆಚ್ಚು ಸೀಸನ್ ನ ಅಗತ್ಯತೆ ಇರುತ್ತದೆ. ಈ ಹೊಸ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುವುದರಿಂದಾಗಿ ಒಟ್ಟಾರೆ ಶುಂಠಿ ಉತ್ಪಾದನೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವುದಕ್ಕೆ ರೈತರಿಗೆ ನೆರವಾಗುತ್ತದೆ ಎಂಬುದಾಗಿ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿರುವ ಎಂಆರ್ ಶೈಲಜಾ ತಿಳಿಸಿದ್ದಾರೆ.

ಶುದ್ಧ ಶುಂಠಿಯ ಉತ್ಪಾದನೆ:

ಶುದ್ಧ ಶುಂಠಿಯ ಉತ್ಪಾದನೆ:

ಈ ವಿಧಾನದಿಂದಾಗಿ ಶುಂಠಿ ಬೀಜ ಸಾಮಗ್ರಿಗಳ ಬೆಲೆಯನ್ನು ಕಡಿಮೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಜೊತೆಗೆ ಯಾವುದೇ ಕೀಟನಾಶಗಳ ಬಳಕೆ ಇಲ್ಲದೆಯೇ ಗುಣಮಟ್ಟದ ರೈಜೋಮ್ ಗಳ ಅಂದರೆ ಶುದ್ಧ ಶುಂಠಿಯ ಉತ್ಪಾದನೆ ಇದರಿಂದ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಈ ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸಿ ಅಳವಡಿಸುವ ನಿಟ್ಟಿನಲ್ಲಿ ಹೆಜ್ಜೆಯನ್ನು ಕೈಗೊಳ್ಳಲಾಗುತ್ತದೆ ಎಂದು ಸಿಓಹೆಚ್ ನ ಅಸೋಸಿಯೇಟ್ ಸಿ ನಾರಾಯಣನ್ ಕುಟ್ಟಿ ತಿಳಿಸಿದ್ದಾರೆ. ಶುಂಠಿ ಕೃಷಿಯಲ್ಲಿ ಉತ್ತಮ ಕೃಷಿ ಪದ್ದತಿಯ ಅಳವಡಿಕೆಯ ಅಗತ್ಯತೆಯನ್ನು ಜನಪ್ರಿಯಗೊಳಿಸಲಾಗುತ್ತದೆ.

Best Mobiles in India

Read more about:
English summary
KAU Develops New Seed Production Technology Using Rhizomes

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X