ಸ್ಮಾರ್ಟ್‌ಫೋನ್ ಮೇಲಿನ ಅವಲಂಬಿನಿಯಿಂದ ದಡ್ಡರಾಗುತ್ತಿದ್ದಾರಂತೆ!

|

ತನಗೆ ಅರಿವಿಲ್ಲದೇ ಅನಗತ್ಯ ಸಂದರ್ಭಗಳಲ್ಲೂ ಮೊಬೈಲ್ ಫೋನ್ ತನ್ನೊಂದಿಗೆ ಇರಬೇಕೆಂದು ಬಯಸುವ ಸ್ಮಾರ್ಟ್‌ಫೋನ್ ಮೇಲಿನ ವಿಪರೀತ ಅವಲಂಬನೆ ಕೂಡ ಅರಿವಿನ ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಸ್ಮಾರ್ಟ್‌ಫೋನ್‌ ಮೇಲೆ ಅಷ್ಟಾಗಿ ಅವಲಂಬಿತ ಆಗದವರಿಗಿಂತ ಹೆಚ್ಚು ಅರಿವಿನ ಶಕ್ತಿಯ ಕೊರತೆಯು ಸ್ಮಾರ್ಟ್‌ಫೋನ್ ಮೇಲೆ ವಿಪರೀತ ಅವಲಂಬನೆ ಹೊಂದಿರುವವರಲ್ಲಿ ಕಂಡುಬಂದಿದೆ ಎಂದು ಅಮೆರಿಕಾದ ಸಂಶೋಧಕ ತಂಡವೊಂದು ಹೇಳಿದೆ.

ಸ್ಮಾರ್ಟ್ ಫೋನ್‍ಗಳ ಮೇಲೆ ಅವಲಂಬಿಸುವುದರಿಂದ ಅವರ ಸೋಮಾರಿಯಾಗುತ್ತಾರೆ. ಜೊತೆಗೆ ಮೆದುಳಿಗೆ ಕೆಲಸ ಕೊಡುವ ಅಗತ್ಯವೂ ಕಡಿಮೆಯಾಗಿ ಅದು ಸಹಜವಾಗಿ ಅರಿವು ಮತ್ತು ಜ್ಞಾನದ ಕೊರತೆಗೆ ಎಡೆ ಮಾಡಿಕೊಡುತ್ತದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ. ಸಣ್ಣಪುಟ್ಟ ಲೆಕ್ಕಗಳನ್ನು ಮಾಡಲು, ತಮಗೆ ಗೊತ್ತಿರುವ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಸ್ಮಾರ್ಟ್ ಫೋನ್‍ಗಳ ಮೇಲೆ ಅವಲಂಬಿಸುವುದರಿಂದ ಅವರಿಗೆ ಅರಿವಿನ ಕೊರತೆ ಮೂಡಬಹುದು ಎಂದು ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

ಸ್ಮಾರ್ಟ್‌ಫೋನ್ ಮೇಲಿನ ಅವಲಂಬಿನಿಯಿಂದ ದಡ್ಡರಾಗುತ್ತಿದ್ದಾರಂತೆ!

ಸ್ಮಾರ್ಟ್‌ಫೋನ್‌ಗಳ ಅಗಾಧ ಸಾಮರ್ಥ್ಯದೊಂದಿಗೆ ಮಾನವರಿಗೆ ಬಹು ಉಪಯೋಗಿ ಎಂಬುದಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ಮಿತಿಮೀರಿ ಬಳಸುತ್ತಿರುವುದರಿಂದ ಸಾಕಷ್ಟು ಅನಾನುಕೂಲಗಳೂ ಆಗುತ್ತವೆ. ಅನಗತ್ಯ ಸಂದರ್ಭಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಳಸದೇ ಇರುವುದರಿಂದ ಮಾನವರಲ್ಲಿನ ಅರಿವು ಮತ್ತು ಜ್ಞಾನದ ಸಾಮಥ್ರ್ಯವನ್ನು ಹೆಚ್ಚಿಸಬಹುದಾಗಿದೆ ಎನ್ನುತ್ತಾರೆ ಸಂಶೋಧಕರು. ಆದರೆ, ವಿದ್ಯಾರ್ಥಿಗಳ ವಿಷಯದಲ್ಲಿ ಅವರು ಸ್ವಲ್ಪ ಬದಲಾವಣೆಯನ್ನು ಗುರುತಿಸಿದ್ದಾರೆ.

ಮೊಬೈಲ್ ಬಳಸುವ ವಯಸ್ಕರಿಗಿಂತ ಮೊಬೈಲ್ ಬಳ ಶಾಲಾ ವಿದ್ಯಾರ್ಥಿಗಳು ಕೆಲವೊಂದು ವಿಷಯಗಳಲ್ಲಿ ಅತ್ಯಂತ ಚುರುಕಾಗಿರುತ್ತಾರೆ. ಏಕೆಂದರೆ ಅವರ ಮೆದುಳು ಸ್ಮಾರ್ಟ್‌ಫೋನ್ ಬಳಸುವಾಗ ಕ್ರಿಯಾಶೀಲವಾಗಿರುತ್ತದೆ. ಸ್ಮಾರ್ಟ್ ಫೋನನ್ನು ಅವಲಂಬಿಸಿದರೂ ಅದರ ಬಗ್ಗೆ ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ಇದರಿಂದ ಅವರ ಅರಿವು ಮತ್ತು ಜ್ಞಾನದ ಸಾಮಥ್ರ್ಯ ಸ್ವಲ್ಪ ಹೆಚ್ಚಾದಂತೆ ಕಂಡುಬಂದರೂ, ಬರುಬರುತ್ತಾ ಅವರಲ್ಲಿ ಆ ಕ್ರಿಯಾಶೀಲತೆ ಮಾಯವಾಗುತ್ತದೆ. ಇದು ಅಪಾಯಕಾರಿ ಎಂದು ಹೇಳಿದ್ದಾರೆ.

ಸ್ಮಾರ್ಟ್‌ಫೋನ್ ಮೇಲಿನ ಅವಲಂಬಿನಿಯಿಂದ ದಡ್ಡರಾಗುತ್ತಿದ್ದಾರಂತೆ!

ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟೆರ್ನೆಟ್ ದೊರೆಯುತ್ತ ಮೂಲಕ ಜಗತ್ತಿನ ಎಲ್ಲ ಸಂಗತಿವಿದ್ಯಮಾನಗಳನ್ನು ಬೆರಳತುದಿಯಲ್ಲಿ ಪಡೆಯಲು ಸಾಧ್ಯ. ಹೀಗಿರುವಾಗ ಮನುಷ್ಯರ ಮೆದುಳಿನ ಕಸರತ್ತು ಕಡಿಮೆಯಾಗಿದೆ ಎನ್ನಬಹುದು. ಇದು ದೇಹಾಲಸ್ಯದೊಂದಿಗೆ ಮಾನಸಿಕ ಜಡತ್ವಕ್ಕೂ ಕಾರಣವಾಗುತ್ತದೆ. ಹಾಗಾಗಿ, ಮೊಬೈಲ್ ಫೋನ್ ತನ್ನೊಂದಿಗೆ ಇರಬೇಕೆಂದು ಬಯಸುವುದು ಮಾತ್ರವಲ್ಲ, ಸ್ಮಾರ್ಟ್‌ಫೋನ್ ಮೇಲಿನ ವಿಪರೀತ ಅವಲಂಬನೆ ಅತ್ಯಂತ ಅಪಾಯಕಾರಿ ಎಂದು ವರದಿಯ ಮೂಲಕ ಎಚ್ಚರಿಕೆ ನೀಡಲಾಗಿದೆ.

ಓದಿರಿ: 1999ರ ಮೊದಲು ಹುಟ್ಟಿದವರು ಮಾತ್ರ ಈ ಮೀಮ್ಸ್ ನೋಡಿ!..ಬೇರೆಯವರಿಗೆ ಇವು ಅರ್ಥವಾಗಲ್ಲ!!

Best Mobiles in India

English summary
New research indicates that our cognitive capacity is reduced whenever our phones are within reach—whether it’s turned on or off. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X